Homeಮುಖಪುಟಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

ಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

- Advertisement -
- Advertisement -

ಜನರಿಂದ ಭಾರೀ ಮೆಚ್ಚುಗೆ ಪಡೆದ ‘ಜೈ ಭೀಮ್‌’ ಸಿನಿಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿವೆ. ಆದರೆ ಸಿನಿಮಾ ಕುರಿತು ಎತ್ತಲಾಗಿದ್ದ ಆಕ್ಷೇಪಕ್ಕೆ ಸಂಬಂಧಿಸಿದಂತೆ ಚೆನ್ನೈನ ನ್ಯಾಯಾಲಯ ಈಗ ಪ್ರತಿಕ್ರಿಯೆ ನೀಡಿದ್ದು, ಜೈ ಭೀಮ್‌ನಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಸೂರ್ಯ, ನಿರ್ದೇಶಕ ಟಿ.ಜೆ.ಜ್ಞಾನವೇಲ್, ನಿರ್ಮಾಪಕಿ ಜ್ಯೋತಿಕಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ವನ್ನಿಯಾರ್‌ ಸಮುದಾಯಕ್ಕೆ ಜೈ ಭೀಮ್‌ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ ಎಂಬ ಆರೋಪ ಬಂದಿತ್ತು. ಅದರ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ರುದ್ರ ವನ್ನಿಯಾರ್ ಸೇನೆ ಎಂಬ ವನ್ನಿಯಾರ್ ಗುಂಪು ಅರ್ಜಿ ಸಲ್ಲಿಸಿದ್ದು, ಸಿನಿಮಾದಲ್ಲಿ ಸಮುದಾಯದ ಜನರನ್ನು ಅತ್ಯಂತ ಕಳಪೆಯಾಗಿ ತೋರಿಸಲಾಗಿದೆ ಎಂದು ಆಕ್ಷೇಪ ಎತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅರ್ಜಿದಾರರು ನವೆಂಬರ್ 2021ರಲ್ಲಿ ಚೆನ್ನೈ ಸೈದಾಪೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸುವಂತೆ ಕೋರಲಾಗಿತ್ತು. “ಸಿನಿಮಾದಲ್ಲಿನ ಹಲವಾರು ದೃಶ್ಯಗಳು, ನೆಗೆಟಿವ್‌ ಪಾತ್ರಗಳ ಹೆಸರುಗಳು ನಮ್ಮ ಸಮುದಾಯವನ್ನು ಉಲ್ಲೇಖಿಸುತ್ತವೆ. ಈ ಚಲನಚಿತ್ರದಲ್ಲಿ ‘ವನ್ನಿಯಾರ್ ಫೋಬಿಯಾ’ವಿದೆ. ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವಿದೆ” ಎಂದು ದೂರಿದ್ದಾರೆ.

ಅರ್ಜಿಯು ಏಪ್ರಿಲ್ 29, 2022 ರಂದು ವಿಚಾರಣೆಗೆ ಬಂದಿತು. ನಟ ಸೂರ್ಯ, ಜ್ಯೋತಿಕಾ ಹಾಗೂ ಜ್ಞಾನವೇಲ್ ಯಾರೊಬ್ಬರೂ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ‘ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸುವುದಕ್ಕಾಗಿಯೇ ಸಿನಿಮಾದ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ’ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅರ್ಜಿದಾರರ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ, ಆರೋಪಿಗಳೆಂದು ಹೆಸರಿಸಲಾದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚೆನ್ನೈ ಪೊಲೀಸರಿಗೆ ಸೂಚಿಸಿದೆ. ದೂರಿನಲ್ಲಿ “ಕೆಲವು ಗುರುತಿಸಬಹುದಾದ ಅಪರಾಧವನ್ನು ಬಹಿರಂಗಪಡಿಸಲಾಗಿದೆ” ಎಂದು ನ್ಯಾಯಾಲಯವು ಗಮನಿಸಿದೆ. ಕಾನೂನಿನ ಪ್ರಕಾರ ಎಫ್‌ಐಆರ್ ದಾಖಲಿಸಿ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯವು ವೇಲಾಚೇರಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ದೂರನ್ನು ರವಾನಿಸಲಾಗಿದೆ. ಮೇ 20ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಕಳೆದ ವರ್ಷ ಜೈ ಭೀಮ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ)ಯ ಅನ್ಬುಮಣಿ ರಾಮದಾಸ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ವನ್ನಿಯಾರ್‌ ಸಂಘದ ಅಧ್ಯಕ್ಷ ಲೀಗಲ್‌ ನೋಟೀಸ್ ಕೂಡ ಕಳುಹಿಸಿದ್ದರು.

ಜೈ ಭೀಮ್‌ ಸಿನಿಮಾ ನಿಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಇರುಳಿಗ ಸಮುದಾಯದ ವ್ಯಕ್ತಿ ರಾಜಾಕಣ್ಣು ಪೊಲೀಸ್‌ ಬಂಧನದಲ್ಲಿದ್ದಾಗ ಕೊಲೆಯಾಗಿದ್ದರ ಕುರಿತು ಚಿತ್ರಿಸಲಾಗಿದ್ದು, ವಿಶ್ಯಾದ್ಯಾಂತ ಅಪಾರ ಜನಮನ್ನಣೆಗೆ ‘ಜೈಭೀಮ್‌’ ಪಾತ್ರವಾಗಿದೆ. ಜಸ್ಟೀಸ್‌ ಕೆ.ಚಂದ್ರು ಅವರು 1993ರಲ್ಲಿ ವಕೀಲರಾಗಿದ್ದಾಗ ಹೋರಾಡಿದ ಕಥನವನ್ನು ಈ ಸಿನಿಮಾ ತೆರೆದಿಟ್ಟಿದೆ.

ಚಿತ್ರವು ನೈಜ ಕಥೆಯನ್ನು ಆಧರಿಸಿದ್ದರೂ ಕೊಲೆಯಾದ ವ್ಯಕ್ತಿ ರಾಜಾಕಣ್ಣುಗೆ ಚಿತ್ರಹಿಂಸೆ ನೀಡುವ ಪೊಲೀಸ್ ಪಾತ್ರವನ್ನು ಉದ್ದೇಶಪೂರ್ವಕವಾಗಿ ವನ್ನಿಯಾರ್ ಜಾತಿಗೆ ಸೇರಿದವನೆಂದು ಚಿತ್ರಿಸಲಾಗಿದೆ ಎಂದು ವನ್ನಿಯಾರ್ ಸಂಘಮ್‌ ಅಧ್ಯಕ್ಷ ಪು.ತಾ.ಅರುಲ್ಮೋಳಿ ದೂರಿದ್ದರು.

ಇದನ್ನೂ ಓದಿರಿ: ಜೈಭೀಮ್ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ

“ನೈಜ ಘಟನೆಯಲ್ಲಿನ ನಿಜವಾದ ಹೆಸರುಗಳನ್ನೇ ಉಳಿಸಿಕೊಂಡಿರುವುದಾಗಿ ಹೇಳಲಾಗುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಸಬ್ ಇನ್‌ಸ್ಪೆಕ್ಟರ್ ಹೆಸರನ್ನು ಬದಲಾಯಿಸಲಾಗಿದೆ. ನೈಜ ಕಥೆಯಲ್ಲಿ ರಾಜಾಕಣ್ಣು ಸಾವಿಗೆ ಕಾರಣವಾಗುವ ಸಬ್-ಇನ್‌ಸ್ಪೆಕ್ಟರ್ ಹೆಸರು ಆಂಥೋನಿಸಾಮಿ ಎಂಬುದಾಗಿದೆ. ಆದರೆ ಇಲ್ಲಿ ತಿರುಚಲಾಗಿದೆ” ಎಂದು ನೋಟೀಸ್ ಉಲ್ಲೇಖಿಸಲಾಗಿತ್ತು.

ಚಿತ್ರ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಜಾತಿಯನ್ನು ಉಲ್ಲೇಖಿಸಲು ಯತ್ನಿಸಿದ್ದಾರೆ. ವನ್ನಿಯಾರ್‌ ಸಮುದಾಯವನ್ನು ಪ್ರತಿನಿಧಿಸುವ “ಅಗ್ನಿ ಕುಡಮ್” ಚಿಹ್ನೆಯನ್ನು ಕ್ಯಾಲೆಂಡರ್‌ನೊಂದಿಗೆ ತೋರಿಸಲಾಗಿದೆ ಎಂದು ಸಂಗಮ್ ಅಧ್ಯಕ್ಷರು ಆರೋಪಿಸಿದ್ದರು.

ನಟ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ಅವರು ಚಲನಚಿತ್ರದ ನಿರ್ಮಾಪಕರಾಗಿದ್ದು, 2D ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ಸಿನಿಮಾವನ್ನು ನಿರ್ಮಿಸಿದೆ. ಈ ಸಂಸ್ಥೆಯನ್ನು ಸೂರ್ಯ ಮತ್ತು ಜ್ಯೋತಿಕಾ ನಡೆಸುತ್ತಿದ್ದಾರೆ. ಜೈ ಭೀಮ್‌ ಸಿನಿಮಾವು ಅಮೇಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...