ಟಿ. ಜೆ. ಜ್ಞಾನವೇಳ್ ನಿರ್ದೇಶಿಸಿದ, ತಮಿಳಿನ ಸೂಪರ್ ಸ್ಟಾರ್ ಸೂರಿಯಾ ಅವರು ಪ್ರಧಾನ ಪಾತ್ರದಲ್ಲಿರುವ ‘ಜೈಭೀಮ್’ ಚಿತ್ರವು ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ ಜಯಿಸಿದೆ.
‘ಇರುಳ’ ಆದಿವಾಸಿ ಬುಡಕಟ್ಟು ಸಮುದಾಯದ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಕಾನೂನಾತ್ಮಕವಾಗಿ ನಡೆದ ಹೋರಾಟದ ಎಳೆ ಇರುವ ಈ ಚಿತ್ರಕ್ಕೆ ಪ್ರಪಂಚಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಜೈಭೀಮ್ ಚಿತ್ರದಲ್ಲಿ ರಾಸಕಣ್ಣು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಮಣಿಕಂದನ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ ಎಂದು ಸೂರಿಯಾರವರ 2ಡಿ ಎಂಟರ್ಟೈನ್ಮೆಂಟ್ ಸಂಸ್ಥೆ ತಿಳಿಸಿದೆ.
#JaiBhim wins the Best Film & Best Supporting Actor awards at the #DadaSahebPhalkeFilmFestival
Thank you @dadasahebfest for the honour!
Congratulations #Manikandan on winning the Best Supporting actor
➡️https://t.co/8pwZaoeO17@Suriya_offl #Jyotika @tjgnan @rajsekarpandian
— 2D Entertainment (@2D_ENTPVTLTD) May 3, 2022
ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ. ಚಂದ್ರು ಅವರು ವಕೀಲನಾಗಿ ಕಮ್ಯುನಿಷ್ಟ್ ಚಳುವಳಿಯನ್ನು ಮುನ್ನಡೆಸುತ್ತಿದ್ದಾಗ ನಡೆಸಿದ ‘ಒಂದು’ ಹೋರಾಟದ ನೈಜ ಕತೆಯಾಗಿದೆ ಈ ಸಿನಿಮಾ.
ಇದನ್ನೂ ಓದಿ: ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ
ಜೈಭೀಮ್ ಚಿತ್ರ ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುವ ಮೂಲಕ ಅತಿ ದೊಡ್ಡ ಗೌರವಕ್ಕೆ ಪಾತ್ರವಾಗಿತ್ತು. ಅಲ್ಲದೆ ಗ್ಲೋಬಲ್ ಕಮ್ಯುನಿಟಿ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.