ಬಲಪಂಥೀಯ ಸಂಘಟನೆಯಾಗಿರುವ ಹೆಚ್‌ಜೆಎಸ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಭಾಷಣಗಾರರ ವಿರುದ್ದ ಕ್ರಮಕೈಗೊಳ್ಳುವಂತೆ ಸಂಜಯ ನಗರ ಪೊಲೀಸ್ ಠಾಣೆಗೆ ಮತ್ತು ಬೆಂಗಳೂರು ನಗರ ಕಮೀಷನರ್‌ಗೆ ದೂರು ಸಲ್ಲಿಸಲಾಗಿದೆ.
ಮೇ 8ರ ಭಾನುವಾರದಂದು ರಾಜಾಜಿ ನಗರದ ಬಿಬಿಎಂಪಿ ಕನ್ವೆಂಷ್ಷನ್ ಹಾಲ್‌ನಲ್ಲಿ ನಡೆದಿದ್ದ “ಹಿಂದೂ ರಾಷ್ಟ್ರ ಅಧಿವೇಶನ’’ದಲ್ಲಿ ದುಷ್ಕರ್ಮಿಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ವಿರುದ್ದ ದ್ವೇಷ ಭಾಷಣ ಮಾಡಿದ್ದರು. ಸಭೆಯಲ್ಲಿ ಮಾತನಾಡಿದ್ದ ಹೆಚ್‌ಜೆಎಸ್ ನಾಯಕ, “ಮುಸ್ಲಿಮರು ಕುಷ್ಠರೋಗಿಗಳು ಮತ್ತು ಕ್ರಿಶ್ಚಿಯನ್ನರು ಕ್ಯಾನ್ಸರ್” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದನು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮುಸ್ಲಿಮರು ಕುಷ್ಠರೋಗಿಗಳಾಗಿದ್ದು ಅವರು ಆಕ್ರಮಣ ಮಾಡುವುದು ಕಣ್ಣಿಗೆ ಕಾಣುತ್ತದೆ. ಕ್ರಿಶ್ಚಿಯನ್ನರು ಕ್ಯಾನ್ಸರ್ ಕಾಯಿಲೆ ಹರಡಿಸುವಂತವರು, ಅವರು ಒಳಗೊಳಗೆಯೆ ಕೆಲಸ ಮಾಡುತ್ತಾರೆ. ನಾವು ವೇದಾಂತವನ್ನು ಕೇಳಿಕೊಂಡು, ‘ಈಶ್ವರ ಅಲ್ಲಾ ತೇರೆ ನಾಮ್’ ಎಂದು ಹೇಳಿಕೊಂಡು, ಕೆಲಸಕ್ಕೆ ಬರದೇ ಇರುವ ಗಾಂಧಿ ತತ್ವವನ್ನು ಪಾಲಿಸಿಕೊಂಡು ಹೋದರೆ, ಹಿಂದೂ ಸಮಾಜ ಬಹಳ ಅಪಾಯಕ್ಕೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ, ಈಗಾಗಲೆ ಎದುರಾಗಿದೆ” ಎಂದು ಹೇಳಿದ್ದನು.
"#Muslims & #Christians are like cancer. They slowly take over the workings, economy, & properties of an area. & then spread over the whole city & do the same for a country."
– #SBhaskaran, Chief, #VSP at #HinduRashtra Convention organized by #HinduJanaJagruti in #Bengaluru. pic.twitter.com/lOt9kZibLN— Hate Detector 🔍 (@HateDetectors) May 11, 2022
ಇದೀಗ ಹೆಚ್‌ಜೆಎಸ್ ಕಾರ್ಯಕ್ರಮ ಆಯೋಜಕರ ವಿರುದ್ದ ಬೆಂಗಳೂರು ನಗರ ಕಮೀಷನರ್ ಮತ್ತು ಸಂಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: ಹನಿ ಟ್ರ್ಯಾಪ್‌ಗೆ ಸಿಲುಕಿ ಜೀವ ಕಳೆದುಕೊಂಡ ಬೆಂಗಳೂರು BJP ಮುಖಂಡ ಅನಂತರಾಜು: ಪೊಲೀಸ್
ದೂರಿನಲ್ಲಿ, “ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಹಲವಾರು ಭಾಷಣಗಾರರು, ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದು, ಸೌಹಾರ್ದತೆ ಹಾಳು ಮಾಡುವ ಕೃತ್ಯಗಳನ್ನು ಎಸಗಿದೆ” ಎಂದು ಆರೋಪಿಸಲಾಗಿದೆ.



ಹಾಗಾದರೆ ಹಿಂದೂಗಳೂ ವಿದೇಶಗಳಲ್ಲಿ ಕ್ಯಾನ್ಸರ್ ಪೀಡೆಯನ್ನು ಸೃಷ್ಟಿಸುತ್ತಾರೆಯೆ? ಅಲ್ಲಿ,ಇಲ್ಲಿ, ಎಲ್ಲೆಲ್ಲಿ ದೇವಸ್ಥಾನಗಳನ್ನು ಕಟ್ಟಿ ವಿದೇಶಿಯರನ್ನು ಆಕರ್ಷಿಸಿ ಧರ್ಮ ಪ್ರಸಾರ ಮಾಡುತ್ತಾರಲ್ಲಾ ಇದಕ್ಕೇನು ಹೇಳ್ತೀರಾ ಮಹಾಷಯರೇ??
Ninu yaru ads Rogi
Cancer hospital galalli maximum patients yaru hidhare hogi nodo gube.