ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ನಡೆದ ವಿಡಿಯೊ ಸಮೀಕ್ಷೆ ವೇಳೆ ಕಂಡು ಬಂದ ‘ಕಾರಂಜಿ’ಯನ್ನು ‘ಶಿವಲಿಂಗ’ ಎಂದು ಪ್ರತಿಪಾದಿಸಲಾಗಿತ್ತು. ಇದರ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಲೇಖನಗಳ ಮೂಲಕ ವೈರಲ್ ಚಿತ್ರಗಳ ವಾಸ್ತವ ಏನೆಂದು ತಿಳಿದುಕೊಳ್ಳೋಣ.
ಮೊದಲಿಗೆ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಯಾವ ಯಾವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಗಮನಿಸೋಣ.
1ನೇ ಚಿತ್ರ – ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರಿನಲ್ಲಿ ಪೋಸ್ಟ್
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು ಮಾಡಿದ್ದು ಅದರಲ್ಲಿ “ಜ್ಞಾನವಾಪಿ ಮಸೀದಿಯಲ್ಲಿ ತ್ರೈಲೋಕ್ಯಮಹಾದೇವ ನಂದಿ ಹಾಗೂ ಶಿವಲಿಂಗ ವಿಗ್ರಹ ಪತ್ತೆಯಾಗಿರುವುದು ಬಚ್ಚಿಟ್ಟ ಕ್ರೌರ್ಯದ ಇತಿಹಾಸವನ್ನ ತೆರೆದಿಟ್ಟಿದೆ. ದೇಶದಲ್ಲಿರುವ ಎಲ್ಲ ಪುರಾತನ ಮಸೀದಿಗಳನ್ನು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿಯೇ ಕಟ್ಟಲಾಗಿದೆ ಹೊರತು ದೈವಭಕ್ತಿಯಿಂದ ಕಟ್ಟಿದ್ದಲ್ಲ. ದೋಷವಿರುವುದು ಮುಸಲ್ಮಾನರಲ್ಲಿ ಅಲ್ಲ ಮುಸಲ್ಮಾನರ ಧರ್ಮಗ್ರಂಥದಲ್ಲಿ” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

2ನೇ ಚಿತ್ರ – 350 ವರ್ಷಗಳ ಕುತಂತ್ರದಾಟಕ್ಕೆ ತೆರೆ!

ಮಸೀದಿಯ ವಿಡಿಯೊ ಚಿತ್ರೀಕರಣ ದಾಖಲೀಕರಣದ ಸಮಯದಲ್ಲಿ ಮಸೀದಿಯ ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಅರ್ಜಿದಾರ ವಕೀಲರೊಬ್ಬರು ನ್ಯಾಯಾಲಯದಲ್ಲಿ ಹೇಳಿದ್ದರಿಂದ, ನ್ಯಾಯಾಲಯವು ಮಸೀದಿ ಆವರಣದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡುವಂತೆ ಆದೇಶಿಸಿತ್ತು.
ಮಸೀದಿ ಸಮಿತಿ ಹೇಳುವಂತೆ ಅದು ಮಸೀದಿ ಕೊಳದಲ್ಲಿ ಇರುವ ಕಾರಂಜಿಯಾಗಿದೆ. ಅಲ್ಲದೆ ಅದು ಯಾವುದೆ ರೀತಿಯಲ್ಲೂ ಶಿವಲಿಂಗದ ಮಾದರಿಯಲ್ಲಿ ಇಲ್ಲ. ಕೆಳಗಿನ ವಿಡಿಯೊದಲ್ಲಿ ಅದರ ದೃಶ್ಯಗಳನ್ನು ಓದುಗರು ನೋಡಬಹುದಾಗಿದೆ.
The petitioners claimed that a Shivling was found inside Wazookhana.
An advocate of the Anjuman Intezamia Masjid Committee that manages the #Gyanvapi Masjid said, “The structure, which the petitioners are claiming to be a Shivling is a fountain inside"
Watch it till the end. pic.twitter.com/85n7sNlskW— Mohammed Zubair (@zoo_bear) May 16, 2022
ಹಾಗಾದರೆ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆಯೇ? ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಶಿವಲಿಂಗದ ಹಲವು ವಿಡಿಯೊ ಮತ್ತು ಫೋಟೋಗಳು ಜ್ಞಾನವಾಪಿ ಮಸೀದಿ ಆವರಣದ ಪತ್ತೆಯಾದ ಫೋಟೋಗಳೇ? ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳ ಪ್ರತಿಪಾದನೆಯನ್ನು ಪರಿಶೀಲಿಸೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್:
1ನೇ ಚಿತ್ರ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕೆಎಸ್ ಈಶ್ವರಪ್ಪ ಹೆಸರಿನಲ್ಲಿ ಫೋಸ್ಟ್ ಮಾಡಿದ ದೊಡ್ಡ ಶಿವಲಿಂಗದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫೋಟೋವನ್ನು ರನ್ ಮಾಡಿದಾಗ, ಫೋಟೋ ಒಡಿಸ್ಸಾದಲ್ಲಿರುವ ಬಾಬಾ ಭುಸಂದೇಶ್ವರ ದೇವಾಲಯಕ್ಕೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಆ ದೇವಾಲಯದ ಇತರ ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
#Bhusandeswar Temple in Baleswar district is famous for the largest Shiva Lingam in #Asia made of Black Granite. pic.twitter.com/ofNscLeAmu
— Odisha Tourism (@odisha_tourism) June 25, 2015
ಹಾಗಾಗಿ, ಕೆಎಸ್ ಈಶ್ವರಪ್ಪ ಹೆಸರಿನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ತ್ರೈಲೋಕ್ಯಮಹಾದೇವ ನಂದಿ ಹಾಗೂ ಶಿವಲಿಂಗ ವಿಗ್ರಹ ಪತ್ತೆಯಾಗಿದೆ ಎಂದು ಅವರು ಪ್ರತಿಪಾದಿಸಿರುವುದು ಸುಳ್ಳಾಗಿದೆ. ಅವರು ಪೋಸ್ಟ್ ಮಾಡಿರುವ ಚಿತ್ರಕ್ಕೂ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುವ ಆಕೃತಿಗೂ ಯಾವುದೆ ಸಂಬಂಧವಿಲ್ಲ.
2ನೇ ಚಿತ್ರ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮತ್ತು ನಂದಿ ಫೋಟೋ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿರುವ ಫೋಟೋವನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಅದು ಸುಮಾರು ಎರಡು ವರ್ಷದಿಂದ ಇಂಟರ್‌ನೆಟ್‌ನಲ್ಲಿ (ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ) ಲಭ್ಯವಿರುವುದಾಗಿ ಕಂಡು ಬಂದಿದೆ.
ಶಿವಲಿಂಗ ಮತ್ತು ನಂದಿ ಚಿತ್ರವು ಡಿಜಿಟಲ್ ಆರ್ಟ್ ಮೂಲಕ ಚಿತ್ರಿಸಲಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫೇಸ್‌ಬುಕ್ ಫೋಸ್ಟ್‌ನಲ್ಲಿ ಜ್ಞಾನವಾಪಿ ಮಸೀದಿಯ ಶಿವಲಿಂಗ ಎಂದು ಪ್ರತಿಪಾದಿಸಿದ ಫೋಸ್ಟ್ ಸುಳ್ಳಾಗಿದೆ.
View this post on Instagram
ಸುಮಾರು 2020ರಿಂದಲೂ ನಂದಿ ಮತ್ತು ಶಿವಲಿಂಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಚಿತ್ರವು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ ಎಂದು ಹೇಳಬಹುದು.
तू परम् पिता है संसार का,
और मैं तेरी संतान हुँ।
आधार है सारी दृष्टि का,
मैं बालक नादान हुँ॥#हर_हर_महादेव 🙏 pic.twitter.com/boKNz9qLLg— बनारसी_व्यापारी (@banarsi_vyapari) July 20, 2020
ಸಂಕ್ಷಿಪ್ತವಾಗಿ ಹೇಳುವುದಾದರೆ, ಜ್ಞಾನವಾಪಿ ಮಸೀದಿಯಲ್ಲಿ ಕಂಡುಬರುವ ‘ಶಿವಲಿಂಗ’ದ ದೃಶ್ಯಗಳೆಂದು ಸಂಬಂಧವಿಲ್ಲದ ಚಿತ್ರಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೊ
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದೆ ಎಂದು ಮತ್ತೊಂದು ವಿಡಿಯೊವನ್ನು ಶೇರ್ ಮಾಡಲಾಗುತ್ತಿದೆ. ಆದರೆ ಇದೂ ಕೂಡ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎಂದು ಹೇಳುವ ಯಾವ ಪುರಾವೆಗಳು ಇಲ್ಲ. ವೀಡಿಯೊದ ನಿಖರವಾದ ಸ್ಥಳವನ್ನು ನಾವು ಕಂಡುಹಿಡಿಯಲಾಗದಿದ್ದರೂ, ವೀಡಿಯೊ ಕನಿಷ್ಠ ಒಂದು ವರ್ಷ ಹಳೆಯದು ಎಂದು ಕಂಡುಬಂದಿದೆ. ಹಾಗಾಗಿ ಇತ್ತೀಚೆಗಷ್ಟೇ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆದಿರುವ ಹಿನ್ನೆಲೆಯಲ್ಲಿ ಹಳೆಯ ವಿಡಿಯೋ ಮತ್ತು ಫೋಟೋ ಶೇರ್ ಆಗುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಜ್ಞಾನವಾಪಿಯಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಫೋಟೋಗಳಲ್ಲ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಜ್ಞಾನವಾಪಿ ಮಸೀದಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು ತೀರ್ಪು ಬಂದ ನಂತರವೇ ವಾಸ್ತವ ಏನೆಂದು ತಿಳಿಯುತ್ತದೆ. ಅಲ್ಲಿಯವರಗೆ ಸುಳ್ಳು ಸುದ್ದಿಯನ್ನು ಹರಡದಂತೆ ಎಚ್ಚರವಹಿಸಿ.


