ಒಂದೇ ಜಾತಿಯವರು ಒಳಗೊಂಡಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ರೂಪಿಸಿರುವ ಪಠ್ಯವು ತಾರತಮ್ಯದಿಂದ ಕೂಡಿದ್ದು, ಅದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಲಿಂಗ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಕುರಿತು ಲಘುವಾದ ಧೋರಣೆ ತಾಳಿರುವ ಸಮಿತಿ ರಚಿಸಿರುವ ಪಠ್ಯಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದ್ದು, #RejectBrahminTextBooks ಹ್ಯಾಷ್ ಟ್ಯಾಗ್‌ನಲ್ಲಿ ಟ್ವಿಟರ್ ಅಭಿಯಾನವನ್ನು ಆಯೋಜಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾನುವಾರ (ಇಂದು) ಸಂಜೆ 5 ಗಂಟೆಗೆ ಅಭಿಯಾನ ನಡೆಯಲಿದ್ದು #RejectBrahminTextBooks ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುವಂತೆ ಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನದ ಆಯಶಗಳನ್ನು ಉಳಿಸಲು ಹೋರಾಡುತ್ತಿರುವ ಮನಸ್ಸುಗಳು ಕರೆ ನೀಡಿವೆ.
“ಪಠ್ಯಪುಸ್ತಕಗಳಲ್ಲಿ ಒಂದು ಜಾತಿಯ ಲೇಖಕರ ವಿಜೃಂಭಣೆ, ಕೇಸರೀಕರಣ- ವೈದೀಕರಣ, ಕರ್ನಾಟಕದ, ಭಾರತದ ಸಮಾಜ ಸುಧಾರಕರ ಕುರಿತಾದ ಪಾಠಗಲನ್ನು ತೆಗೆದು ಹಾಕಿರುವುದನ್ನು ಖಂಡಿಸಿ ಈ ಅಭಿಯಾನ ಕೈಗೊಳ್ಳಲಾಗಿದೆ” ಎಂಬ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.
#rejectBrahminTextBooks pic.twitter.com/EFmfIlVJ04
— ಸೂರ್ಯ ಮುಕುಂದರಾಜ್/Surya Mukundaraj (@suryamukundaraj) May 22, 2022
ಕೇಸರಿಕರಣ ವಿರುದ್ದ ಟ್ವಿಟರ್ ಅಬಿಯಾನ ಇಂದು ಸಂಜೆ ೫ ಕ್ಕೆ
ಹ್ಯಾಶ್ ಟ್ಯಾಗ್: #RejectBrahminTextBooks pic.twitter.com/HlRpCrqGUt
— ರವಿ ಶಂಕರ್ ಗೊರೂರು (@aGAUpbNjP8GivgV) May 22, 2022
“ಕೋಮವಾದದ ಪಠ್ಯಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು” ಎಂಬ ಆಗ್ರಹ ಜೋರಾಗಿದೆ.
ರಾಜ್ಯ ಸರ್ಕಾರವೇ,
ಕನ್ನಡ ನಾಡಿನ ಮಕ್ಕಳ ಶೈಕ್ಷಣಿಕ ಪಠ್ಯದ ಕೇಸರಿಕರಣ ಈ ಕೂಡಲೇ ನಿಲ್ಲಿಸಿ.ಪರಿಷ್ಕ್ರತ ಪಠ್ಯ ಕೈಬಿಡಿ,ಶೈಕ್ಷಣಿಕವಾಗಿ ಕೋಮುವಾದ ನಿಮ್ಮ ಧೂರ್ತ ನಡೆ ನಿಲ್ಲಿಸಿರೆಂದು ಒತ್ತಾಯಿಸುತ್ತೇನೆ.#ಶಿಕ್ಷಣದ_ಕೇಸರಿಕರಣ_ನಿಲ್ಲಿಸಿ #RejectBrahminTextBooks— ಕನ್ನಡಿಗರ ಧ್ವನಿ. (@voiceoutindia2) May 22, 2022
ನಮ್ಮ ನಾಳೆಗಳಿಗಾಗಿ ನಮ್ಮ ಮಕ್ಕಳ ಬವಿಷ್ಯಕ್ಕಾಗಿ ಬಸವ-ಕುವೆಂಪು ಕಂಡ ಕರುನಾಡನ್ನ ಉಳಿಸಲಿಕ್ಕಾಗಿ ಟ್ವಿಟ್ ಮಾಡಿ
ಹ್ಯಾಶ್ ಟ್ಯಾಗ್: #RejectBrahminTextBooks pic.twitter.com/FVjrQaJfgs— Shivanna Gundanavar (@shivanand087) May 21, 2022
“ಪಠ್ಯ ಪುಸ್ತಕವನ್ನು ಬಿಜೆಪಿಯ ಪುಸ್ತಕವನ್ನಾಗಿ ಮಾಡಿ ಹಿಂಬಾಗಿಲ ಮೂಲಕ ಮನುಸ್ಮೃತಿಯನ್ನು ತರಲಾಗುತ್ತಿದೆ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಶಿಕ್ಷಣದ ವಿಚಾರದಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆಗೆ ಒತ್ತಾಯಿಸಲಾಗಿದೆ.
#ಕನ್ನಡಪಠ್ಯ#ಕನ್ನಡನೇತಾರರು#ಕನ್ನಡದಪುಸ್ತಕದಲ್ಲಿ_ಕನ್ನಡಿಗರು
ಲಂಕೇಶ್… ಸಾರಾ ಅಬೂಬಕ್ಕರ್ ಗಿಂತ ಹೆಗಡೆವಾರ್ ಮುಕ್ಯನ??#RejectBrahminTextBooks pic.twitter.com/KJ9bewUWwQ— ಮ್ಹಾತಾರೊ ಚರ್ಬೆಲಾ (@CMhataro) May 21, 2022
ರಾಜ್ಯ ಸರ್ಕಾರವೇ,
ಕನ್ನಡ ನಾಡಿನ ಮಕ್ಕಳ ಶೈಕ್ಷಣಿಕ ಪಠ್ಯದ ಕೇಸರಿಕರಣ ಈ ಕೂಡಲೇ ನಿಲ್ಲಿಸಿ.ಪರಿಷ್ಕ್ರತ ಪಠ್ಯ ಕೈಬಿಡಿ,ಶೈಕ್ಷಣಿಕವಾಗಿ ಕೋಮುವಾದ ನಿಮ್ಮ ಧೂರ್ತ ನಡೆ ನಿಲ್ಲಿಸಿರೆಂದು ಒತ್ತಾಯಿಸುತ್ತೇನೆ.@CMofKarnataka@BCNagesh_bjp@hd_kumaraswamy@KPCCPresident#ಶಿಕ್ಷಣದ_ಕೇಸರಿಕರಣ_ನಿಲ್ಲಿಸಿ #RejectBrahminTextBooks pic.twitter.com/heGKVN5jJO— ಕರಪ ಚೇತನ್ ಗೌಡ ಎಂ (@karapaCMG) May 22, 2022
ಬಿಜೆಪಿಸರ್ಕಾರದ ಪಟ್ಯಪುಸ್ತಕ ಸಮಿತಿಯಲ್ಲಿ ಬ್ರಾಹ್ಮಣರು ಮುಕ್ಯಸಮಿತಿಯಲ್ಲಿ ೭ಜನರಪೈಕಿ ೬ಜನರು ಬ್ರಾಹ್ಮಣರುರೋಹಿತ್ ಚಕ್ರತೀರ್ತ ರಾಜರಾಮ ಹೆಗಡೆಸತ್ಯಪ್ರಾಕಾಶ್ ವಾಸುಕಿ ಅನಂತಕೃಶ್ಣಬಟ್ ಮತ್ತುವಿಟಲ್ ಪೋತೇದಾರ್ ಇವರ ಉಪಸ್ತಿತಿಯಲ್ಲಿ ಪಟ್ಯಗಳು ಕೇಸರಿಕರಣಗೊಳ್ಳುತ್ತಿದೆ
ಇದರವಿರುದ್ದಟ್ವಿಟರ್ ಅಬಿಯಾನಇಂದು ಸಂಜೆ೫ಕ್ಕೆ
#RejectBrahminTextBooks— ರವಿ ಶಂಕರ್ ಗೊರೂರು (@aGAUpbNjP8GivgV) May 22, 2022
‘ಪಠ್ಯ ಸೇರಿದ ಸೂಲಿಬೆಲೆ ಪಾಠ; ನಾರಾಯಣಗುರು ಪಠ್ಯ ಪ್ರತ್ಯೇಕವಾಗಿಲ್ಲ’
ಸುಳ್ಳುಗಳನ್ನು ಹೇಳುತ್ತಾ, ಬಿಜೆಪಿ ಪರ ಪ್ರಚಾರ ಮಾಡುತ್ತಾ ಟೀಕೆಗಳಿಗೆ ಒಳಗಾಗಿರುವ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರ ಪಾಠವೊಂದನ್ನು ಇಡಲಾಗಿದೆ. ಸಮಾಜ ಸುಧಾರಕ, ಶೂದ್ರ ಸಮುದಾಯದಲ್ಲಿ ಸ್ವಾಭಿಮಾನವನ್ನು ತುಂಬಿದ ನಾರಾಯಣಗುರುಗಳ ಪಠ್ಯವನ್ನು ಮರು ಸೇರಿಸಲಾಗಿದ್ದು, ಆದರೆ ಪ್ರತ್ಯೇಕವಾದ ಅಧ್ಯಾಯವಾಗಿ ರೂಪಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿದ ಚಕ್ರತೀರ್ಥ ಸಮಿತಿ; ಸಚಿವ ಬಿ.ಸಿ.ನಾಗೇಶ್ ರಾಜೀನಾಮೆಗೆ ಆಗ್ರಹ
ಡಾ.ಜಿ.ರಾಮಕೃಷ್ಣ ಅವರ ‘ಭಗತ್‌ಸಿಂಗ್’ ಪಾಠವನ್ನು ಕೈಬಿಟ್ಟ ಬಳಿಕ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಆ ಪಾಠವನ್ನು ಹೊಸ ಪಠ್ಯದಲ್ಲಿ ಸೇರಿಸಿಕೊಳ್ಳಲಾಗಿದ್ದು, ಚಕ್ರವರ್ತಿ ಸೂಲಿಬೆಲೆಯವರ ‘ತಾಯಿ ಭಾರತಿಯ ಅಮರ ಪುತ್ರರು’ ಶೀರ್ಷಿಕೆಯ ಬರಹವನ್ನೂ ಹತ್ತನೇ ತರಗತಿಯ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕದಲ್ಲಿ ಒಳಗೊಳ್ಳಲಾಗಿದೆ.
‘ಸಾಮಾಜಿಕ ಚಳವಳಿಯನ್ನೇ ಹುಟ್ಟು ಹಾಕಿ, ಹಿಂದುಳಿದ ಸಮುದಾಯದವರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಕುರಿತ ಅಧ್ಯಾಯ ಸಮಾಜ ವಿಜ್ಞಾನ ಪಠ್ಯದಲ್ಲಿತ್ತು. ಅದನ್ನೂ ಕೈಬಿಡಲಾಗಿತ್ತು. ಮತ್ತೆ ಪರಿಷ್ಕರಿಸಿರುವ ಸರ್ಕಾರ ಈ ವಿವರಗಳನ್ನು ಕನ್ನಡ ಪುಸ್ತಕದಲ್ಲಿ ಸೇರಿಸಿದೆ. ಆದರೆ ಇವರ ಬಗ್ಗೆ ಪ್ರತ್ಯೇಕ ಪಾಠ ಇಲ್ಲ” ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.
‘ಭಗತ್‌ಸಿಂಗ್’, ‘ತಾಯಿ ಭಾರತಿಯ ಅಮರಪುತ್ರರು’ ಮತ್ತು ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು’ ಅಧ್ಯಾಯಗಳನ್ನು ಪಠ್ಯಪೂರಕ ವಿಭಾಗದಲ್ಲಿ ಸೇರಿಸಲಾಗಿದೆ.


