ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ (ಅಡುಗೆ ಸಿಬ್ಬಂದಿ) ಸುನೀತಾ ದೇವಿ ಅವರು ತಯಾರಿಸಿದ ಬಿಸಿಯೂಟವನ್ನು ಸೇವಿಸಲು ಏಳರಿಂದ ಎಂಟು ವಿದ್ಯಾರ್ಥಿಗಳು ಮತ್ತೆ ನಿರಾಕರಿಸಿದ್ದಾರೆ.
ಡಿಸೆಂಬರ್ 2021ರಲ್ಲಿ ದಲಿತ ಮಹಿಳೆಯನ್ನು ವಜಾಗೊಳಿಸಿದಾಗ ವಿವಾದ ಸೃಷ್ಟಿಯಾಗಿತ್ತು. ದಲಿತ ವಿದ್ಯಾರ್ಥಿಗಳು ಸವರ್ಣೀಯರು ತಯಾರಿಸಿದ ಊಟವನ್ನು ಸೇವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ದಲಿತ ಮಹಿಳೆಯನ್ನು ಮರು ನೇಮಕ ಮಾಡಿಕೊಳ್ಳಲಾಯಿತು. ‘ಈಗ ಮತ್ತೆ ವಿವಾದ ಶುರುವಾಗಿದೆ’ ಎಂದು ಶಾಲೆಯ ಪ್ರಾಂಶುಪಾಲರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆಯ ನಂತರ ಚಂಪಾವತ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ನರೇಂದ್ರ ಸಿಂಗ್ ಭಂಡಾರಿ ಅವರು ಮೇ 20ರಂದು ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿದ್ದಾರೆ. ಜೌಲ್‌ನಲ್ಲಿರುವ ಸ್ವತಂತ್ರ ಸಂಗ್ರಾಮ ಸೇನಾನಿ ದಿವಂಗತ ಶ್ರೀ ರಾಮಚಂದ್ರ ಸರ್ಕಾರಿ ಅಂತರ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಬೇಕು ಎಂದು ಸೂಚಿಸಿದ್ದಾರೆ.
“ಇಂದು ಜಿಲ್ಲಾ ಮ್ಯಾಜಿಸ್ಟ್ರೇಟ್, ಕೆಲವು ಪೊಲೀಸ್ ಅಧಿಕಾರಿಗಳು ಹಾಜರಿದ್ದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಭೆ ನಡೆಸಿದರು. ಊಟವನ್ನು ಬಹಿಷ್ಕರಿಸುವುದನ್ನು ನಿಲ್ಲಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಅಧಿಕಾರಿಗಳೇ ಶಾಲೆಯಲ್ಲಿ ಊಟ ಮಾಡಿದರು. ಆದಾಗ್ಯೂ, ಈ 7-8 ವಿದ್ಯಾರ್ಥಿಗಳು ಊಟ ತಿನ್ನಲು ನಿರಾಕರಿಸಿದರು. ಅನ್ನವನ್ನು ತಿನ್ನುವುದಿಲ್ಲ ಎಂದು ಈ ವಿದ್ಯಾರ್ಥಿಗಳು ಹೇಳಿಕೊಂಡರು” ಎಂದು ಪ್ರಾಂಶುಪಾಲರು ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ..
ಊಟ ಬಹಿಷ್ಕರಿಸುವವರನ್ನು ಶಾಲೆಯಿಂದ ಹೊರಹಾಕಲಾಗುವುದು ಎಂದು ವಿದ್ಯಾರ್ಥಿಗಳ ಪೋಷಕರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನರೇಂದ್ರ ಸಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ.
ದಲಿತ ಮಹಿಳೆಯನ್ನು ವಜಾಗೊಳಿಸಿ ಮರುನೇಮಕ ಮಾಡಲಾಗಿದೆ. ಅದೇ ಶಾಲೆಯಲ್ಲಿ ಆರರಿಂದ ಎಂಟನೇ ತರಗತಿಗಳಲ್ಲಿ ಓದುತ್ತಿರುವ ಸವರ್ಣೀಯ ಸಮುದಾಯಕ್ಕೆ ಸೇರಿದ ಸುಮಾರು 43 ವಿದ್ಯಾರ್ಥಿಗಳು ದೇವಿ ಬೇಯಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದರು.
23 ಡಿಸೆಂಬರ್ 2021ರಂದು, ಚಂಪಾವತ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಲಿತ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ್ದರು. ನೇಮಕಾತಿಯಲ್ಲಿನ ಕಾರ್ಯವಿಧಾನದಲ್ಲಿ ಲೋಪವಾಗಿದೆ ಎಂದು ಕಾರಣ ನೀಡಿದ್ದರು. ದಲಿತ ಮಹಿಳೆಯ ಬದಲಿಗೆ ಸವರ್ಣೀಯ ಜಾತಿಗೆ ಸೇರಿದವರನ್ನು ನೇಮಿಸಲಾಗಿತ್ತು. ಇದಕ್ಕೆ ಪ್ರತಿರೋಧವಾಗಿ ಶಾಲೆಯ 23 ದಲಿತ ವಿದ್ಯಾರ್ಥಿಗಳು ಸವರ್ಣೀಯ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ಸೇವಿಸಲು ನಿರಾಕರಿಸಿದರು.
ಇದನ್ನೂ ಓದಿರಿ: #RejectBrahminTextBooks ಟ್ವಿಟರ್ ಅಭಿಯಾನ ಇಂದು
ದೇವಿ ಅವರನ್ನು ವಜಾಗೊಳಿಸಿದ ನಂತರ, ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರು ಧ್ವನಿ ಎತ್ತಿ, “ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸಲು” ಕಾಂಗ್ರೆಸ್ ಆಂದೋಲನವನ್ನು ಪ್ರಾರಂಭಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ ಪ್ರತಿಕ್ರಿಯೆ ನೀಡಿ, “ಸುನೀತಾ ದೇವಿಯವರನ್ನು ಮರುಸೇರ್ಪಡೆ ಮಾಡದಿದ್ದರೆ, ನಮ್ಮ ಸಂಘಟನೆಯು ಉತ್ತರಾಖಂಡ್ ಮುಖ್ಯಮಂತ್ರಿ ಸಚಿವ ಪುಷ್ಕರ್ ಸಿಂಗ್ ಧಾಮಿಗೆ ಘೇರಾವ್ ಹಾಕಲಿದೆ” ಎಂದಿದ್ದರು.
ದೇವಿಯವರನ್ನು ಜನವರಿ 1 ರಂದು ಮರು ನೇಮಕ ಮಾಡಲಾಯಿತು. ಮಾರ್ಚ್ ತಿಂಗಳಿನಿಂದ ಶಾಲೆಯಲ್ಲಿ ಮಧ್ಯಾಹ್ನದ ಅಡುಗೆ ಮಾಡಲು ದೇವಿ ಆರಂಭಿಸಿದರು.
ತಮ್ಮನ್ನು ವಜಾಗೊಳಿಸಿದ ನಂತರ ಉತ್ತರಾಖಂಡ ಪೊಲೀಸರಿಗೆ ದೇವಿ ದೂರು ನೀಡಿದ್ದರು. ದೇವಿಯವರಿಗೆ ಜಾತಿ ನಿಂದನೆ ಹಾಗೂ ಕ್ರಿಮಿನಲ್ ಬೆದರಿಕೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.



ದಲಿತ ಮಹಿಳೆಗೆ ಸರ್ಕಾರ ನೀಡಿರುವ ಪರಿಶುದ್ದತೆಯ ನಿರ್ವಹಣೆಯ ತರಪೇತಿ, ಅಡುಗೆ ತರಪೇತಿಯ ವಿವರಗಳನ್ನು ಮತ್ತು ಆಕೆ ತರಪೇತಿಯ ಕೊನೆಯಲ್ಲಿ ಜನರ ಆರೋಗ್ಯದ ಮತ್ತು ಯೋಗಕ್ಷೇಮದ ಬಗ್ಗೆ ತೆಗೆದುಕೊಂಡ ಪ್ರತಿಜ್ಞೆಯನ್ನು ಜನರಿಗೆ ಮತ್ತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಈ ಸಮಸ್ಯೆಗೆ ಉತ್ತರಿಸಲಾಗದಿರುವ ಇನ್ನೂ ಹಲವಾರು ವಿಷಯಗಳಿವೆ. ಅದನ್ನು ಸರ್ಕಾರ ಒಂದು ನಿಯೋಗದ ಮುಖಾಂತರ ಅಧ್ಯಯನ ಮಾಡಿ ಜನರು ಕೇಳುವ ಮತ್ತು ಅವರ ಮನಸ್ಸಿನಲ್ಲಿ ಉಳಿದುಕೊಂಡಿರುವ ಎಲ್ಲಾ ವಿಷಯಗಳಿಗೂ ಕೇವಲ ಮಾತಿನಲ್ಲಲ್ಲದೆ ಕಾರ್ಯತಹ: ಪರಿಹರಿಸುವ ಪ್ರಯತ್ನವನ್ನು ಮಾಡಬೇಕು. ಉದಾಹರಣೆಗೆ : ಒಬ್ಬ ಮ್ಯಾನ್‌ಹೋಲ್ ಕ್ಲೀನ್ ಮಾಡುವವನ ಹೆಂಡತಿ ಕುಕ್ ಆದರೆ ಪರಿಶುದ್ದತೆಯ ಬಗ್ಗೆ ಅನುಮಾನಗಳು ಸಹಜವಾಗಿರುತ್ತವೆ.
All nonsense are re emerged after BJP rule came in India.