Homeಆರೋಗ್ಯನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ |

ಶಿಕ್ಷಣದ ಮುಖ್ಯ ಉದ್ದೇಶ ನಾವು ನಮ್ಮ ಜೀವನವನ್ನು ನಮಗೆ ಬೇಕಾದಂತೆ ರೂಪಿಸಿಕೊಂಡು, ನಮ್ಮ ಕುಟುಂಬದ,  ಸಮಾಜದ ಮತ್ತು ದೇಶದ ಬೆಳವಣಿಗೆಗೆ ಸಹಾಯಕರಾಗುವುದು. ಮಕ್ಕಳ ಶಿಕ್ಷಣ ಅವರು ಶಾಲೆಯನ್ನು ಪ್ರವೇಶ ಮಾಡುವದಕ್ಕಿಂತ ಮುಂಚೆಯೇ ಪ್ರಾರಂಭವಾಗುತ್ತದೆ. ಆದರಿಂದ ಅವರಿಗೆ ಮನೆಯಲ್ಲಿ ಮತ್ತು ಅವರು ಬೆಳೆಯುವ ಸಮಾಜದಲ್ಲಿ ಕಲಿಕೆಗೆ ಅನುಕೂಲವಾದ ವಾತಾವರಣ ಸದಾ ಇರಬೇಕಾಗಿರುವುದು ಅನಿವಾರ್ಯ. ಆದರೆ ವಿಜ್ಞಾನ, ಭೂಗೋಳ, ಗಣಿತ, ವಿದೇಶಿ ಭಾಷೆ ಮುಂತಾದ ವಿಷಯಗಳನ್ನು ಅವರಿಗೆ ಮೂರು ವರ್ಷಕ್ಕೆ ಕಲಿಸಿ “ನಮ್ಮ ಮಗು ಮಹಾ ಪ್ರಚಂಡ” ಎಂದು ದೃಶ್ಯಮಾಧ್ಯಮದಲ್ಲಿ ಪ್ರದರ್ಶಿಸುವುದನ್ನು ಕಂಡಾಗ ನನಗೆ ಅತ್ಯಂತ ಖೇದವಾಗುತ್ತದೆ. ಏಕೆಂದರೆ ಅವರು ಮೊದಲು ಕಲಿಯ ಬೇಕಾಗಿರುವುದು ಜೀವನಾವಶ್ಯಕ ಕಲೆಗಳು.

ಮಹಾದಾರ್ಶನಿಕ ಪ್ಲುಟೋ ಸಾವಿರಾರು ವರ್ಷದ ಹಿಂದೆಯೇ “ಯಾವ ದೇಶದಲ್ಲಿ ಉತ್ತಮ ಪ್ರಜೆಗಳು ಇರುತ್ತಾರೋ ಅಲ್ಲಿ ಮಾತ್ರ ಉತ್ತಮ ಸರಕಾರ ಸಾಧ್ಯ” ಎಂಬ ಮಾತನ್ನು ಹೇಳಿರುತ್ತಾನೆ. ಅಂದರೆ ಪ್ರಜೆಗಳೇ ದೇಶದ ಅಡಿಪಾಯ. ತಳಪಾಯ ಭದ್ರವಾಗಿದ್ದರೇ ಮಾತ್ರ ಕಟ್ಟಡ ಸುಭದ್ರ. ಜನರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಒಂದು ಸಣ್ಣ ಪ್ರಯತ್ನ ನನ್ನದು. ಹಾಗಾದರೆ ಈ ಜೀವನಾವಶ್ಯಕ ಕಲೆಗಳು ಯಾವವು ಎಂದು ನೋಡೋಣ. ಜೀವನಾವಶ್ಯಕ ಕಲೆಗಳು ನಮಗೆ ದೈನಂದಿನ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಲು ಮತ್ತು ಪರಸ್ಪರ ಕ್ರಿಯೆಯಲ್ಲಿ (Interaction) ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ:

1.      ಸ್ವ-ಅರಿವು (ಸೆಲ್ಫ್ ಅವೇರ್ನೆಸ್)

2.      ಅನುಭೂತಿ ಶಕ್ತಿ (ಎಂಪಥಿ)

3.      ವಿಮರ್ಶಾತ್ಮಕ ಚಿಂತನೆ

4.      ಸೃಜನಾತ್ಮಕ ಚಿಂತನೆ

5.      ಸಮಸ್ಯೆಗೆ ಪರಿಹಾರ ಹುಡುಕುವ ಕಲೆ

6.      ನಿರ್ಧಾರ ತೆಗೆದುಕೊಳ್ಳುವ ಕಲೆ

7.      ಸಮರ್ಪಕ ಸಂವಹನ ಕಲೆ

8.      ಪರಸ್ಪರ ಸಂಬಂಧ ನಿರ್ವಹಣ ಕಲೆ

9.      ಮಾನಸಿಕ ಒತ್ತಡ (ಸ್ಟ್ರೆಸ್) ನಿರ್ವಹಣೆ

10.  ಭಾವನೆಗಳ ನಿರ್ವಹಣೆ ಕಲೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಾ ಬೋರ್ಡಿನ ಪಠ್ಯಕ್ರಮದಲ್ಲಿ ಈ ಕಲೆಗಳ ಬಗ್ಗೆ ಉಲ್ಲೇಖವಿದೆ. ನಮ್ಮ ದೇಶದ ಶಿಕ್ಷಣ ನೀತಿಯಲ್ಲಿ ಮತ್ತು ಮುನ್ನೋಟದ ಟಿಪ್ಪಣಿಯಲ್ಲಿ ಈ ರೀತಿಯ ಚಿಂತನೆ ಕಂಡು ಬಂದರೂ ಸಹ ನಮ್ಮ ಮಕ್ಕಳ ಶಾಲೆಯ ಪಠ್ಯಪುಸ್ತಕದಲ್ಲಿ, ಪಾಠಗಳ ಆಯ್ಕೆಯಲ್ಲಿ ಇದೇ ಚಿಂತನೆ ಕಾಣಿಸುವುದಿಲ್ಲ. ಶಿಕ್ಷಣ ನೀತಿ ರೂಪಿಸುವವರಿಗೂ, ಪಾಠಗಳ ಆಯ್ಕೆ ಮಾಡುವವರಿಗೂ ಪರಸ್ಪರ ಸಂಪರ್ಕದ ಅಭಾವ ಇರುವುದು ಕಾಣಸಿಗುತ್ತದೆ ಎಂಬುದು ಖೇದನೀಯ.

ಈ ಎಲ್ಲಾ ಕಲೆಗಳು ನಮಗೆ ದೈವದತ್ತವಾಗಿ ಜನ್ಮದಿಂದಲೇ ಬಂದ ಕಲೆಗಳು. ಬಡವ-ಬಲ್ಲಿದ ಬೇಧವಿಲ್ಲದೆ, ಇವನ್ನು ನಾವು ಎಷ್ಟೋ ಚಿಕ್ಕ ಮಕ್ಕಳಲ್ಲಿ ಕಾಣಬಹುದು. ಆದರೆ ಹಿರಿಯರು ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಯಲು ಬಿಡದೇ, ಅದನ್ನು ಸರಿಯಾಗಿ ಪೋಷಿಸದೇ, ಅವುಗಳು ಕಾಲ ಕ್ರಮೇಣ ಕುಂಠಿತಗೊಳ್ಳಲು ಕಾರಣಕರ್ತರಾಗುತ್ತಾರೆ. ಮಕ್ಕಳು ನಾವು ಹೇಳುವುದರಿಂದ ಕಲಿಯುವುದು ಕಡಿಮೆ, ನಮ್ಮನ್ನು ನೋಡಿ ಕಲಿಯುವುದೇ ಹೆಚ್ಚು. ಇದನ್ನೇ ಸಂಸ್ಕಾರವೆಂದೂ ಕರೆಯಬಹುದು. ನಮ್ಮಲ್ಲಿ ಈ ಕಲೆಗಳು ಕ್ಷೀಣವಾಗುತ್ತಿದ್ದಂತೆ ಅವರಲ್ಲಿಯೂ ಅಗೋಚರವಾಗಲು ಪ್ರಾರಂಭವಾಗುತ್ತವೆ. ಇದನ್ನು ಪೋಷಕರು, ಶಿಕ್ಷಕರು, ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ.

1.      ಸ್ವ-ಅರಿವು (ಸೆಲ್ಫ್ ಅವೇರ್ನೆಸ್): ಇದನ್ನು ನಾವು ಆಧ್ಯಾತ್ಮಕ ಚಿಂತನೆ ಎಂದು ನೋಡದೇ ಮಗುವಿಗೆ ತಾನು ಯಾರು, ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಮಾಜದಲ್ಲಿ ತನ್ನ ಸ್ಥಾನಮಾನ ಏನು ಎಂಬುದರ ಅರಿವು ಇರಬೇಕು. ಇದರಿಂದ ಮಗುವಿಗೆ ಶಾಲೆಯಲ್ಲಿ ಕೀಳರಿಮೆಯಾಗಲೀ ಅಥವಾ ಶ್ರೀಮಂತ ಕುಟುಂಬದ ಮಗುವಾಗಿದ್ದಲ್ಲಿ ಹಿರಿಯರಿಮೆಯಾಗಲೀ ಆಗದಂತೆ, ಮನೆಯಲ್ಲಿ ನಾನು ಏನೇ ಆಗಿದ್ದರೂ ಶಾಲೆಯಲ್ಲಿ ನಾನೂ ಮಿಕ್ಕವರಂತೆ ಸರಿ-ಸಮಾನ ವಿದ್ಯಾರ್ಥಿ ಎಂಬುದು ಮನದಟ್ಟಾಗಬೇಕು. ಮಗುವಿನ ಗ್ರಹಿಸುವ ಶಕ್ತಿ ಬೆಳೆದಂತೆ, ಈ ಅರಿವಿನ ವ್ಯಾಖ್ಯಾನವೂ ಬದಲಾಗುತ್ತಿರುತ್ತದೆ, ಆದರೆ ಸಮಾನತೆಯ ಭಾವನೆಗೆ ಧಕ್ಕೆ ಬಾರದಂತೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳಬೇಕು.

2.      ಅನುಭೂತಿ ಶಕ್ತಿ (ಎಂಪಥಿ) : ಎಂದರೆ ಇನ್ನೊಬ್ಬರ ಬಗ್ಗೆ ಅನುಕಂಪವಲ್ಲ, ಇನ್ನೊಬ್ಬರ ಸಮಸ್ಯೆಯನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವುದು ಅನುಭೂತಿ. ಒಬ್ಬ ದೃಷ್ಟಿಹೀನನ ಬಗ್ಗೆ ಅಯ್ಯೋ ಪಾಪ ಎನ್ನುವುದಕ್ಕಿಂತ, ಅವನ ದಾರಿಯಲ್ಲಿರುವ ಅಡೆತಡೆಗಳನ್ನು ಹೋಗಲಾಡಿಸಲು ಪ್ರಯತ್ನಿಸುವುದು ಅನುಭೂತಿ. ಧೃತರಾಷ್ಟ್ರ ಕುರುಡನೆಂದು ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು ದಿವ್ಯಾಂಗರ ಅವಶ್ಯಕತೆಗನುಗುಣವಾಗಿ ವಿನ್ಯಾಸ/ನಿರ್ಮಾಣಗೊಳಿಸುವುದು ಸರಕಾರದ ಅನುಭೂತಿ.

3.      ವಿಮರ್ಶಾತ್ಮಕ ಚಿಂತನೆ: ಯಾವುದೇ ವಿಷಯವನ್ನು ಅರಿತುಕೊಳ್ಳುವ ಸಲುವಾಗಿ, ತನ್ನ ಕುತೂಹಲವನ್ನು ಸದಾ ಕಾಯ್ದಿರಿಸಿಕೊಂಡು, ಅದರ ಹಿಂದಿರುವ ತಥ್ಯವನ್ನು ಪ್ರಶ್ನಿಸುವುದೇ ವಿಮರ್ಶಾತ್ಮಕ ಚಿಂತನೆ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಸಂಬಂಧಿಕರು, ಹೊರಗೆ ಸ್ನೇಹಿತರು ಹೇಳಿದ್ದೆಲ್ಲ ನಿಜ/ಸುಳ್ಳು ಎಂದು ಒಮ್ಮೆಗೇ ನಿರ್ಧರಿಸದೇ ಅದನ್ನು ಒರೆ ಹಚ್ಚುವ ಕಲೆ ವಿಮರ್ಶಾತ್ಮಕ ಚಿಂತನೆ. ಇದರಿಂದ ಕಲಿತದ್ದು ಮಕ್ಕಳ ಮನಸ್ಸಿನಲ್ಲಿ ದೃಢವಾಗುತ್ತದೆ.

4.      ಸೃಜನಾತ್ಮಕ ಚಿಂತನೆ: ಇದು ವಿಮರ್ಶಾತ್ಮಕ ಚಿಂತನೆಗಿಂತ ವಿಭಿನ್ನವಾಗಿದ್ದು, ನಮಗೆ ತಿಳಿದಿರುವ ವಿಷಯದಿಂದ ಇನ್ನೂ ಹೆಚ್ಚು ಪ್ರಯೋಜನ ಪಡೆಯಲು ಸಾದ್ಯವೇ ಎಂದು ಚಿಂತಿಸುವುದು ಸೃಜನಶೀಲತೆ. ಉದಾ: ಶಾಲೆಯಲ್ಲಿ 2+2=4 ಎಂದು ಕಲಿಸಿದರೆ ಹೇಗೆ ಎಂದು ಪ್ರಶ್ನಿಸುವುದು ವಿಮರ್ಶಾತ್ಮಕ ಚಿಂತನೆಯಾದರೆ, 2+2=5 ಯಾಕಾಗಬಾರದು ಎಂದು ತರ್ಕಿಸುವ ಕಲೆ ಸೃಜನಾತ್ಮಕ ಚಿಂತನೆ.

5.      ಸಮಸ್ಯೆಗೆ ಪರಿಹಾರ ಹುಡುಕುವ ಕಲೆ: ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅರಿಯದ ಸಮಸ್ಯೆಗೆ ಹೆದರುವುದು ಅಥವಾ ಹೆದರಿ ಓಡಿಹೋಗುವುದು ನೈಸರ್ಗಿಕ ಪ್ರತಿಕ್ರಿಯೆ ಆದರೆ ಅದು ಕ್ಷಣಿಕ. ಮತ್ತೊಮ್ಮೆ ಅದು ಎದುರಾದಾಗ ಅದಕ್ಕೆ ಹೆದರಿ ಓಡಿಹೋಗದೆ, ಅದು ಏನು, ಏಕೆ, ಹೇಗೆ ಎಂದು ಯೋಚಿಸಿ, ಅದನ್ನು ಮೀರಲು ಮಾಡುವ ಪ್ರಯತ್ನವೇ ಈ ಕಲೆ.

6.      ನಿರ್ಧಾರ ತೆಗೆದುಕೊಳ್ಳುವ ಕಲೆ: ಸಮಸ್ಯೆಗಳು ಮತ್ತು ಪರಿಹಾರಗಳು ಅನೇಕವಾದಾಗ ಅದರಲ್ಲಿ ಸರಿಯಾದ ಆಯ್ಕೆ ಯಾವುದು ಎಂದು ನಿರ್ಧರಿಸುವುದು ಈ ಕಲೆ. ಚಿಕ್ಕ ಮಕ್ಕಳ ಮುಂದೆ ಎರಡು ವಸ್ತುಗಳನ್ನಿಡಿ, ಅದು ಹೇಗೆ ತನಗೆ ಬೇಕಾದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತದೆ, ನೀವೇ ನೋಡಿ.

7.      ಸಮರ್ಪಕ ಸಂವಹನ ಕಲೆ: ನಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಇನ್ನೊಬ್ಬರಿಗೆ ಸರಿಯಾಗಿ ಅರ್ಥವಾಗವಾಗುವಂತೆ ತಿಳಿಸುವುದೇ ಸಂವಹನ ಕಲೆ. ಮಾತು ಬಾರದ ಪುಟ್ಟ ಮಗು ಹೇಗೆ ತನ್ನ ಅನಿಸಿಕೆಯನ್ನು ತನ್ನ ತಾಯಿಗೆ ತಿಳಿಸುತ್ತದೆ ಅಥವಾ ಹೇಗೆ ಆಕೆ ಅದನ್ನು ಅರಿತುಕೊಳ್ಳುತ್ತಾಳೆ ಎಂಬುದನ್ನು ಒಂದು ಕ್ಷಣ ಯೋಚಿಸಿದಲ್ಲಿ, ಇದರ ಮಹತ್ವ ತಾನಾಗಿಯೇ ತಿಳಿಯುತ್ತದೆ.

8.      ಪರಸ್ಪರ ಸಂಬಂಧ (interpersonal) ಕಲೆ: ನಾವು ಇತರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಈ ಕಲೆ ಕಲಿಸುತ್ತದೆ. ಮನೆಯವರೆಲ್ಲರೂ ಮುಕ್ತವಾಗಿ ಪರಸ್ಪರ ಒಳ್ಳೆಯ ಸಂಬಂಧ / ಧನಾತ್ಮಕ ಸಂವಹನ ಇಟ್ಟುಕೊಂಡಿದ್ದಲ್ಲಿ ಮಕ್ಕಳೂ ಸಹ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತವೆ. ಇಲ್ಲವಾದಲ್ಲಿ ಮಖಹೇಡಿಗಳಾಗುತ್ತಾರೆ.

9.      ಮಾನಸಿಕ ಒತ್ತಡ (Stress) ನಿರ್ವಹಣೆ: ದೈನಂದಿನ ಜೀವನದಲ್ಲಿ ಒತ್ತಡಗಳು ಬರುವುದು ಸ್ವಾಭಾವಿಕ, ಆದರೆ ಅದರ ಬಗ್ಗೆ ನಮ್ಮಲ್ಲಿ ಪ್ರತಿಯೊಬ್ಬರ ಪ್ರತಿಕ್ರಿಯೆಯೂ ವಿಭಿನ್ನವಾಗಿರುತ್ತದೆ. ಈ ಪ್ರತಿಕ್ರಿಯೆಯಿಂದ ನಮ್ಮ ಮೇಲಿನ ಒತ್ತಡ ಹೆಚ್ಚಬಹುದು ಅಥವಾ ಕ್ಷೀಣಿಸಬಹುದು. ಇದನ್ನು ಸರಿಯಾಗಿ ನಿರ್ವಹಿಸುವುದೇ ಈ ಕಲೆ. ಮಗು ಏನಾದರೂ ಮಾಡಿದಲ್ಲಿ ತಾಯಿ ಪ್ರೀತಿ ತೋರಿಸುತ್ತಾಳೋ, ಗದರುತ್ತಾಳೋ, ಅಥವಾ ಹೊಡೆಯುತ್ತಾಳೋ ಅದರಿಂದ ಮಗುವಿನ ಮಾನಸಿಕ ಒತ್ತಡ ಏರುಪೇರಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಿಸಲು ಕಲಿಸುವುದೇ ಈ ಕಲೆ.

10.  ಭಾವನೆಗಳ ನಿರ್ವಹಣೆ ಕಲೆ: ಮಾನಸಿಕ ಒತ್ತಡದಿಂದ ನಮಗೆ ಕೋಪ, ದುಃಖ, ಬೇಸರ, ಸಂತೋಷ ಹೀಗೆ ಹಲವಾರು ಭಾವನೆಗಳು ಉಕ್ಕಿ ಬರಬಹುದು. ಅವನ್ನು ಸಮಯಕ್ಕೆ ತಕ್ಕಂತೆ ನಿಯಂತ್ರಿಸಿ, ನಿರ್ವಹಿಸುವುದೇ ಈ ಕಲೆ.

ಈ ಕಲೆಗಳನ್ನು ನೀವೂ ಕಲಿಯಿರಿ, ಜೀವನದಲ್ಲಿ ರೂಢಿಸಿಸಿಕೊಳ್ಳಿ, ಮಕ್ಕಳಲ್ಲೂ ಬೆಳೆಯಲು ಬಿಡಿ.

ಲೇಖಕರ ಪರಿಚಯ

ಜಿ. ಆರ್. ವಿದ್ಯಾರಣ್ಯ ಅವರು ಶ್ರೀಮತಿ ಶಾಂತ ಮತ್ತು ದಿ. ಜಿ.ವಿ.ರಂಗಸ್ವಾಮಿಯವರ ಜ್ಯೇಷ್ಠ ಪುತ್ರರಾಗಿ 1951ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿ, ದೂರದ ಮುಂಬಯಿ ನಗರದಲ್ಲಿ ಬೆಳೆದವರು. ಶಾಲಾ ಕಾಲೇಜು ಶಿಕ್ಷಣ ಮುಂಬಯಿಯಲ್ಲಿ ನಡೆಯಿತು. ತಮ್ಮ 18ನೆಯ ವಯಸ್ಸಿನಲ್ಲಿ, 1969ರಲ್ಲಿ ಐ.ಬಿ.ಎಂ. 1401 ಆಟೋಕೋಡರ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಡಿಪ್ಲೊಮಾ ಪಡೆದ ನಂತರ, ಕೆಲಸ ಸಿಗದೆ, ಮರೀನ್ ಕಮ್ಯುನಿಕೇಷನ್ ಕ್ಲಾಸ್ 1 ಲೈಸೆನ್ಸ್ ಪಡೆದು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಇಂಗ್ಲೆಂಡಿನ ಲಿವರ್ಪೂಲ್ ನಗರದ ರಿವರ್ಸ್ಡೇಲ್ ಕಾಲೇಜಿನಲ್ಲಿ ಓದಿ, ಮರೀನ್ ರೇಡಾರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್ ಆಸಕ್ತಿ ಮುಂದುವರೆಸಿ, ಮೈಕ್ರೋಸಾಫ್ಟ್ ಕಂಪನಿಯ ಸಿಸ್ಟಮ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮುಂತಾದ ಡಿಪ್ಲೊಮಾಗಳನ್ನೂ ಪಡೆದಿದ್ದಾರೆ. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ, ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಹಲವಾರು ಎನ್.ಜಿ.ಒ. ಗಳೊಂದಿಗೆ ಸುಮಾರು 75 ಶಾಲೆಗಳಲ್ಲಿ ಮತ್ತು 15 ಕಾಲೇಜುಗಳಲ್ಲಿ ಮಕ್ಕಳಿಗೆ ಪೌರಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಜಿಲ್ಲಾ ಮಟ್ಟದ ತರಬೇತುದಾರರಾಗಿ, ಅರ್.ಟಿ.ಐ. ಇಂಡಿಯಾ ಜಾಲತಾಣದಲ್ಲಿ ಕಮ್ಯುನಿಟಿ ಬಿಲ್ಡರ್ ಆಗಿ, ಜನರಿಗೆ ಉಚಿತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿನ ಕೊಳಗೇರಿಗಳಲ್ಲಿ ಬಡ ಮಕ್ಕಳಿಗೆ, ಎನ್.ಜಿ.ಒ. ಜೊತೆ ಸೇರಿ, ಜೀವನಾವಶ್ಯಕ ಕಲೆಗಳ ಮತ್ತು ನಾಯಕತ್ವದ ತರಬೇತಿಯನ್ನೂ ನೀಡುತ್ತಿದ್ದಾರೆ. ಬರಹದಲ್ಲಿ ತಮ್ಮ ಆಸಕ್ತಿಯಿಂದ ಮೈಸೂರಿನ ರೋಟರಿ ವೆಸ್ಟ್ ಕ್ಲಬ್ಬಿನ ಬೃಂದಾವನ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ/ಜಾಲತಾಣಗಳಲ್ಲಿ ಲೇಖನ ಪ್ರಕಟಿಸಿದ್ದಾರೆ. ಶ್ರೀಯುತರ ಪತ್ನಿ, ಶ್ರೀಮತಿ ಸ್ವರ್ಣಗೌರಿ, ನಿವೃತ್ತ ಶಾಲಾ ಶಿಕ್ಷಕಿ. ಇಬ್ಬರು ಪುತ್ರಿಯರು ವಿದೇಶದಲ್ಲಿ ನೆಲೆಸಿದ್ದಾರೆ.

ನಾನುಗೌರಿ. ಕಾಂಗೆ ಈಗಾಗಲೇ ಹತ್ತಾರು ಸಕಾಲಿಕ ಲೇಖನಗಳನ್ನು ಬರೆದಿರುವು ಅವರು ಇನ್ನು ಮುಂದೆ ಜೀವನ ಕಲೆಗಳು, ವ್ಯಕ್ತಿತ್ವ ವಿಕಸನದ ಕುರಿತು ನಿರಂತರವಾಗಿ ಅಂಕಣ ಬರೆಯಲಿದ್ದಾರೆ. ಎಲ್ಲಾ ವಯೋಮಾನದವರಿಗೂ ಗೊತ್ತಿದ್ದರೂ ಸಹ ಒತ್ತಡದಲ್ಲಿ ಮರೆತುಬಿಡಬಹುದಾದ ಹಲವು ಬಹುಮುಖ್ಯ ಅಂಶಗಳು ಕುರಿತು ಅವರು ಬೆಳಕು ಚೆಲ್ಲಲ್ಲಿದ್ದಾರೆ. ಹಾಗಾಗಿ ತಪ್ಪದೇ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...