“ಪಕ್ಕದ ಮನೆಯ ಮಹಿಳೆ ಸಿಂಕ್ ರಿಪೇರಿಗೆ ಕರೆದಳು. ಬಹುಶಃ ಅವಳು ಸೆಕ್ಸ್ ವಿಡಿಯೋ ನೋಡಲ್ಲ ಅನ್ಸುತ್ತೆ, ಅದಕ್ಕೆ 20 ನಿಮಿಷವಾದರೂ ನಮ್ಮ ನಡುವೆ ಏನೂ ನಡೀತಾ ಇಲ್ಲ” 30.08.2013 ರಂದು ರೋಹಿತ್ ಚಕ್ರತೀರ್ಥ ಈ ರೀತಿ ಫೇಸ್ಬುಕ್ ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಓದಿದ ಹದಿಹರೆಯದ ಯುವಕರು ತಮ್ಮ ನೆರೆಹೊರೆಯ ಮಹಿಳೆಯರ ಬಗ್ಗೆ ಯಾವ ಭಾವನೆ ಬೆಳೆಸಿಕೊಳ್ಳಬಹುದು?
“ದೀಪಿಕಾ ಪಡುಕೋಣೆಯಂತವರು ಹೇಳುತ್ತಾರೆ ವಿವಾಹೇತರ ಲೈಂಗಿಕ ಸಂಬಂಧ ನನ್ನ ಹಕ್ಕು ಎನ್ನುತ್ತಾರೆ. ಅಂದರೆ ಮುಖೇಶ್ ಸಿಂಗ್ ನಂತವರು ರೇಪ್ ಮಾಡುವುದು ಮತ್ತು ಕೊಲೆ ಮಾಡುವುದು ನನ್ನ ಹಕ್ಕು ಎಂದು ಹೇಳಿದಂಗಿದೆ ಅವರ ಮಾತು.. ಈ ಪೋಸ್ಟ್ ಮಾಡಿದ್ದು, 31.03.2015 ರಂದು.
ಈ ಪೋಸ್ಟ್ ಮೂಲಕ ನೇರವಾಗಿ ಅತ್ಯಾಚಾರ ಮತ್ತು ಕೊಲೆಯನ್ನು ಸಮರ್ಥಿಸಿಕೊಂಡಿದ್ದರು ರೋಹಿತ್ ಚಕ್ರತೀರ್ಥ.

ಟ್ರೋಲ್ ಪೇಜ್ಗಳು ಅಂತ ಇರುತ್ತವೆ. ಅದರ ಅಡ್ಮಿನ್ಗಳು ಯಾರು ಅಂತ ಗೊತ್ತಿರೊಲ್ಲ.. ಅವರು ರಾಜಕಾರಣಿಗಳು, ಸಿನಿಮಾ ನಟರ ಹೇಳಿಕೆಗಳಿಗೆ ಕೌಂಟರ್ ಕೊಡೋದು ಮಾಡುತ್ತಿರುತ್ತಾರೆ. ಜನ ಅದನ್ನು ನೋಡಿ ನಕ್ಕು ಮುಂದಕ್ಕೆ ಹೋಗುತ್ತಾರೆ. ಆದರೆ ಈ ಟ್ರೋಲ್ ಮಾಡುವವರ ಸಮಸ್ಯೆ ಎಂದರೆ ಅವರಿಗೆ ಲೈಕ್, ಹಿಟ್ಸ್ ಬೇಕು ಅಷ್ಟೆ. ಸೂಕ್ಷ್ಮತೆ – ಸಂವೇದನೆ ಎಂಬುದು ಇರುವುದಿಲ್ಲ.. ಯಾರನ್ನು ಹೇಗೆ ಬೇಕಾದರೂ ಜಾಡಿಸುತ್ತಾರೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತದೆ, ಮಿತಿ ಮೀರುತ್ತದೆ. ಅದಕ್ಕೆ ಸ್ಪಷ್ಟ ಉದಾಹರಣೆ ಈ ರೋಹಿತ್ ಚಕ್ರತೀರ್ಥ.

ಈ ವ್ಯಕ್ತಿಯ ಫೇಸ್ಬುಕ್ ಮತ್ತು ಟ್ವಿಟರ್ ಪುಟಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಅಷ್ಟೊಂದು ಕೊಳಕು ಅಶ್ಲೀಲ ಪೋಸ್ಟ್ಗಳು ಕಾಣುತ್ತವೆ. ಸೆಕ್ಸ್ ವಿಡಿಯೋ, ಪೋರ್ನ್ ಇತ್ಯಾದಿ ಬಗ್ಗೆ ಆತನ ಹತ್ತಾರು ಪೋಸ್ಟ್ಗಳು ಕಂಡಬರುತ್ತವೆ. ಸಭ್ಯ ಎನಿಸಿಕೊಳ್ಳುವ ಯಾವ ವ್ಯಕ್ತಿಯೂ ಅವನ್ನು ನೋಡಲಾಗುವುದಿಲ್ಲ ಅಷ್ಟು ಕೊಳಕಾಗಿರುತ್ತವೆ.
ಇಂತಹ ಹುಳುಗಳು ಇವನೊಬ್ಬನೇ ಅಲ್ಲ, ಹಲವರು ಇದ್ದಾವೆ. ಇವರನ್ನು ಬಿಟ್ಟು ಬಿಡೋಣ ಎನ್ನಬಹುದು. ಅದರೆ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಕೊಳಕು ಮನಸ್ಥಿತಿಯ ವ್ಯಕ್ತಿ ರೂಪಿಸುವ ಪಠ್ಯಗಳನ್ನು ನಿಮ್ಮ ಮಕ್ಕಳು ಓದಬೇಕಾಗಿದೆ? ಅವರನ್ನು ಪಠ್ಯ ಪುನರ್ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದು ನಿಮಗೆ ಒಪ್ಪಿಗೆಯೇ?
ರಾಷ್ಟ್ರಕವಿ ಕುವೆಂಪುರವರಿಗೆ ಅಪಮಾನ
ನಮ್ಮ ರಾಷ್ಟ್ರಕವಿ ಕುವೆಂಪುರವರು ಬರೆದ ನಾಡಗೀತೆಯನ್ನು ತಿರುಚಿ ಅವಮಾನಿಸಿದ್ದ ಈ ರೋಹಿತ್ ಚಕ್ರತೀರ್ಥ…
ಜಯ ಭಾರತ ಜನನಿಯ ತನುಜಾತೆ ಜಯಹೆ ಕರ್ನಾಟಕ ಮಾತೆ ಎಂಬ ಗೀತೆಯನ್ನು
ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ ಮಾತೆ
ಜೈ ಸುಂದರ ಮಟನ್ ಅಂಗ್ಲಿಗಳ ‘ಸಾಲೇ’.. ಜಯಹೇ ಎಣ್ಣೆ ಕುಡುಕರ ಬೀಡೇ..
ಸೇಂದಿ ಸರಾಯಿಯೇ ತುಂಗಾ.. ಕಾವೇರಿದೆ ತಲೆ ತುಂಬಾ..
ತೈಲ’ ವ ಸೇವಿಪ ಜನಗಳ ಜಾಡೇ
ಕುಡ್ಯಣ ತಿನ್ನಣ ನೆಚ್ಚಿನ ಬೀಡೇ..
ಚೈತನ್ಯ ರಹಿತ ಅತಿ ಅವಿವೇಕಿಯ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ ಮಾತೆ
(ವಾಟ್ಸಾಪಲ್ಲಿ ಬಂದಿದೆ. ಮೂಲಕವಿಗಳು ಇದ್ದರೆ ಮುಂದೆ ಬನ್ನಿ. ಬುರ್ಜ್ ಖಲೀಫ ಕೊಡ್ತೀನಿ.)

ಇದನ್ನು ಅವರ ಖಾತೆಯಲ್ಲಿಯೇ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ಅಲ್ಲದೆ ಮೂಲಕವಿಗೆ ಬುರ್ಜ ಖಲೀಫ ಕೊಡ್ತೀನಿ ಎಂದರೆ ಆ ಬರಹ ಇವರಿಗೆ ಮೆಚ್ಚುಗೆ ಆಗಿದೆ ಎಂದರ್ಥ. ಇದರ ವಿರುದ್ಧ ನೂರಾರು ದೂರುಗಳು ದಾಖಲಾಗಿವೆ. ಆದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಏಕೆಂದರೆ ಈಗ ಇರುವುದು ಬಿಜೆಪಿ ಸರ್ಕಾರ.
ಇದೇ ರೋಹಿತ್ ಚಕ್ರತೀರ್ಥ 03.12.2019 ರಂದು ಕಠಿಣ ಪದಗಳ ಅರ್ಥ ಎಂಬ ಪೋಸ್ಟ್ ಮೂಲಕ ವಿಶ್ವಮಾನವ = ಬ್ರಾಹ್ಮಣರನ್ನು ಬೈದರೆ ಸಿಗುವ ಪಟ್ಟ ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ನಮ್ಮ ರಾಷ್ಟ್ರಕವಿ ಕುವೆಂಪುರವರು ಕೊಟ್ಟ ವಿಶ್ವಮಾನವ ಸಂದೇಶವನ್ನು ಅವಮಾನಿಸಿದ್ದರು.

ಅಲ್ಲದೆ ‘ಕುವೆಂಪುರವರ ಎರಡು ಕವಿತೆಗಳ ಸುತ್ತಾ’ ಎಂಬ ಶೀರ್ಷಿಕೆಯಲ್ಲಿ 6.12.2019 ರಂದು ಹೊಸ ದಿಗಂತ ಪತ್ರಿಕೆಯಲ್ಲಿ ಅಂಕಣ ಬರೆದು ವಿಷ ಕಾರಿಕೊಂಡಿದ್ದರು. ತೇಜಸ್ವಿಯವರು ಬರೆದ ‘ಬ್ರಾಹ್ಮಣ ಯುವಕರಿಗೆ’ ಎಂಬ ಕವಿತೆಗೆ ಈತ 90 ಎಮ್ಮೆಲ್ ಕವಿತೆ ಎಂದು ಕಮೆಂಟ್ ಮಾಡಿ ಹೀಯಾಳಿಸಿದ್ದರು.
ಏಕೆ ಕುವೆಂಪು ಮತ್ತು ತೇಜಸ್ವಿ ಮೇಲೆ ಈ ರೋಹಿತ್ ಚಕ್ರತೀರ್ಥನಿಗೆ ಈ ಮಟ್ಟದ ವಿರೋಧ ಎಂಬುದಕ್ಕೆ ಒಂದೇ ಕಾರಣ ಅದು ಜಾತಿ. ಶೂದ್ರ ಸಮುದಾಯದ ಲೇಖಕರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯಿಂದ ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿದರೆ ಈ ಬ್ರಾಹ್ಮಣ ಸಮುದಾಯದ ಟ್ರೋಲರ್ಗೆ ಸಹಿಸಲು ಸಾಧ್ಯವಿಲ್ಲ. ಜಾತಿ ಶ್ರೇಷ್ಠತೆಯ ವ್ಯಸನದಿಂದ ಹಾಗೆ ಮಾಡಿದ್ದಾರೆ.
ಎಲ್ರೂ ನಮ್ಗೂ ಧ್ವಜ ಬೇಕು ನಮ್ಗೂ ಧ್ವಜ ಬೇಕು ಅಂತ ಪೋಸ್ಟ್ ಹಾಕ್ತಿದ್ದಾರೆ. ನಮ್ಮನೆಲಿ ಆಗ್ಲೇ ನಾಲ್ಕು ಧ್ವಜಗಳು ಹಗ್ಗದಲ್ಲಿ ನೇತಾಡ್ತಿವೆ. ಬೇಕು ಅಂತ ಮಾತ್ರ ಕೇಳ್ಬೇಡ್ರಪ್ಪ ಎಂದು 19.07.2017ರಂದು ಪೋಸ್ಟ್ ಹಾಕಿ ನಾಡಧ್ವಜಕ್ಕೆ ಅವಮಾನಿಸಿದ್ದ ಈ ಭೂಪ.

ಅಂಬೇಡ್ಕರ್ರವರಿಗೆ ಅವಮಾನ
“ಅಂಬೇಡ್ಕರ್ ಜಗತ್ತಿನ ಅತಿದೊಡ್ಡ ಜಲತಂತ್ರಜ್ಞರು, ವಾಯುತಂತ್ರಜ್ಞರು, ವೈದ್ಯರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೆಟ್ ತಂತ್ರಜ್ಞರು ಆಗಿದ್ದರು. ಪ್ರಪಂಚದಲ್ಲಿ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಕಂಡುಹಿಡಿದವರು ಇವರೇ ಎಂದು ಹೀಯಾಳಿಸಿದ್ದ ಚಕ್ರತೀರ್ಥ.

ಆಡುಮುಟ್ಟದ ಸೊಪ್ಪಿಲ್ಲ, ಅಂಬೇಡ್ಕರ್ ತಿಳಿಯದ ವಿಷಯಗಳಿಲ್ಲ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ. ಅಷ್ಟರಮಟ್ಟಿಗೆ ಅಂಬೇಡ್ಕರ್ ದೇಶದ ಹಲವು ವಿಷಯಗಳ ಕುರಿತು ಬರೆದಿದ್ದಾರೆ. ಅದನ್ನು ಸಹಿಸದ ಈ ಟ್ರೋಲರ್ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಸಹ ಇವರೆ ಕಂಡುಹಿಡಿದರು ಎಂದು ಹೀಯಾಳಿಸಿದ್ದಾನೆ.
ಪಠ್ಯ ಪರಿಷ್ಕರಣೆ ಮಾಡಲು ಬರಗೂರು ರಾಮಚಂದ್ರಪ್ಪ ಅವರಿಗೆ ಇರುವ ಅರ್ಹತೆ ಏನು? ಕನ್ನಡಿಗರಿಗೆ ಅರ್ಥವಾಗುವಂತೆ ನಾಲ್ಕು ಸಾಲು ಬರೆಯಲು ಬರದ ಈ ‘ಸಾಯಿತಿ’ ಅದು ಹೇಗೆ ಒಂದು ಕೋಟಿ ವಿದ್ಯಾರ್ಥಿಗಳ ಹಣೆ ಬರಹ ನಿರ್ಧರಿಸುತ್ತಾರೆ ಎಂದು ಬರೆದಿದ್ದರು. ಅದೇ ಪೋಸ್ಟ್ನಲ್ಲಿ “ಕನ್ನಡ ಪಠ್ಯದಲ್ಲಿ ದೇವನೂರು ಮಹಾದೇವ ಎಂಬ ಸಾಯಿತಿಯ ಒಂದು ಪಾಠ ಇದೆ. ಆ ಯಪ್ಪ ಏನು ಬರೆದಿದ್ದಾರೆ ಎಂದು ಅಧ್ಯಾಪಕರಿಗೇ ಅರ್ಥವಾಗುವುದಿಲ್ಲ, ಇನ್ನು ವಿದ್ಯಾರ್ಥಿಗಳ ಪಾಡು ದೇವರೇ ಮೆಚ್ಚಬೇಕು” ಎಂದು ಬರೆದಿದ್ದ.

ಇನ್ನೊಬ್ಬರನ್ನು ಇಷ್ಟೆಲ್ಲಾ ಅವಮಾನಿಸುವ ಈ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಅರ್ಹತೆಯೇನು? ಬಿ.ಎಸ್.ಸಿ ಡ್ರಾಪ್ ಔಟ್ ಆದವರು ಹೇಗೆ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರಾಗುತ್ತಾರೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಇದೇ ಪ್ರಶ್ನೆಯನ್ನು ನಾನುಗೌರಿ.ಕಾಂ ರೋಹಿತ್ ಮುಂದೆ ಇಟ್ಟಾಗ ಅವರು ಉತ್ತರ ಹೇಳಿಲ್ಲ. ಡೆಕ್ಕನ್ ಹೆರಾಲ್ಡ್ ಪತ್ರಿಕೆ ಸಹ ಇದೇ ಪ್ರಶ್ನೆ ಕೇಳಿದಾಗ ಅರ್ಹತೆ ಬೇಕಿಲ್ಲ ಎಂದರು. ಶಿಕ್ಷಣ ಸಚಿವ ನಾಗೇಶ್ ಒಂದು ಹೆಜ್ಜೆ ಮುಂದೆ ಹೋಗಿ ರೋಹಿತ್ ಚಕ್ರತೀರ್ಥ ಐಐಟಿ ಮತ್ತು ಸಿಇಟಿಗೆ ಪ್ರೊಫೆಸರ್ ಆಗಿದ್ದರು ಎಂದುಬಿಟ್ಟರು.
ಶೂದ್ರ ಒಡೆತನದ ಪತ್ರಿಕೆಗಳನ್ನು ಈ ರೋಹಿತ್ ಚಕ್ರತೀರ್ಥ ಬಿಟ್ಟಿಲ್ಲ. ಕೆಲವು ಕೊಮ್ಮಿಗಳು ಎಂದು ಬರೆದು ಪ್ರಜಾವಾಣಿ ಪತ್ರಿಕೆಯ ಮಾಲೀಕರ ಜಾತಿಯನ್ನು ಹೀಯಾಳಿಸಿ ಮಾತನಾಡಿದ್ದಾನೆ. “ಪ್ರಜಾವಾಣಿ ನೀವು ಇಂಥ ಸೆನ್ಸೇಶನಲ್ ಹೆಡ್ಡಿಂಗ್ ಪತ್ರಿಕೋದ್ಯಮ ಮಾಡೋದಕ್ಕಿಂತ ಕಳ್ಳಭಟ್ಟಿ ಸಾರಾಯಿ ಮಾಡಿ ಅನ್ನ ಸಂಪಾದಿಸ್ಬೋದಲ್ವ?” ಎಂದು ಕುಲಕಸುಬನ್ನು ಪ್ರಸ್ತಾಪ ಮಾಡಿ ಜಾತಿವ್ಯಸನ ಕಾರಿಕೊಂಡಿದ್ದಾರೆ.

ಕೀಳು ಅಭಿರುಚಿಯ ಅಸಹ್ಯದ ಪೋಸ್ಟ್ಗಳು
ಭಾರತ ತಂಡ ಕ್ರಿಕೆಟ್ ಮ್ಯಾಚ್ ನೋಡಿದರೆ ಪೋರ್ನ್ ನೋಡಿದಂತೆ.. ಎಂದು ಬರೆದಿದ್ದ. ಮುಂದುವರಿದು ಪ್ಲಂಬರ್ ನಿಮ್ಮ ಮನೆಗೆ ಬೇಗ ಬರುತ್ತಾರೆ ಎಂದು ಹೆಣ್ಣು ಮಕ್ಕಳಿಗೆ ಅವಾಸ್ತವಿಕ, ಅನಾರೋಗ್ಯಕರ ವಿಚಾರಗಳನ್ನು ಪೋರ್ನ್ ಯುವತಿಯರಿಗೆ ನೀಡುತ್ತದೆ ಎಂದು ಬರೆದಿದ್ದ. ಯಾಕೆ ಯಾವಗಲೂ ಸೆಕ್ಸ್ ವಿಡಿಯೋಗಳಲ್ಲಿ ಗಣಿತ ಶಿಕ್ಷಕರೆ ಪಾಠ ಮಾಡುತ್ತಿರುತ್ತಾರೆ ಎಂದು ಬರೆದಿದ್ದ. ವಿಷಯ ಏನೆಂದರೆ ಈತ ಕೂಡ ಗಣಿತ ಶಿಕ್ಷಕನಂತೆ.

ಲೈಂಗಿಕತೆ ಬೇರೆ ಕಾಮುಕತೆ ಬೇರೆ. ಮಕ್ಕಳಿಗೆ ಉತ್ತಮ ಲೈಂಗಿಕ ಶಿಕ್ಷಣ ಕೊಡಬೇಕೆಂದು ಹಲವರು ಒತ್ತಾಯಿಸುತ್ತಾರೆ. ಆದರೆ ಈ ರೋಹಿತ್ ಚಕ್ರತೀರ್ಥ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಕಾರಿಕೊಂಡಿದ್ದು ಕಾಮುಕತೆ. ಈ ಎಲ್ಲಾ ಪೋಸ್ಟ್ಗಳು, ಕಮೆಂಟ್ಗಳು ವೈರಲ್ ಆಗುತ್ತಿದ್ದಂತೆ ಅವಮಾನಗೊಂಡ ಈತ ತನ್ನ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳು ಸಾರ್ವಜನಿಕರಿಗೆ ಕಾಣದಂತೆ ಲಾಕ್ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರ ಪರವಾಗಿ ಮತ್ತು ಬಿಜೆಪಿಯ ಪರವಾಗಿ ತೀರಾ ಕೀಳು ಮಟ್ಟದಲ್ಲಿ ಟ್ರೋಲ್ ಮಾಡುತ್ತಾ ಕುಖ್ಯಾತಿ ಪಡೆದಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಮರು ಪರಿಷ್ಕರಣೆ ಸಮಿತಿಯ ಅಧ್ಯಕ್ಷನ್ನಾಗಿ ಬಿಜೆಪಿ ಸರ್ಕಾರ ಆಯ್ಕೆ ಮಾಡಿತ್ತು. ಬಿಜೆಪಿ ಸರ್ಕಾರದ ಈ ನಿಲುವನ್ನು ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ಸಾಹಿತ್ಯಿಕ ವಲಯದ ಗಣ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಸಮಿತಿಯನ್ನು ವಿಸರ್ಜನೆ ಮಾಡಿದ್ದೀವಿ. ಅವರು ಕೊಟ್ಟ ಪಠ್ಯಗಳನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳುವ ಮೂಲಕ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆ ಇಷ್ಟೆ. ಇಂತಹ ಕೊಳಕು ಅಸಹ್ಯದ ಪೋಸ್ಟ್ಗಳನ್ನು ಹಾಕಿರುವ ವ್ಯಕ್ತಿ ಎಂತಹ ಪಠ್ಯ ಸೇರಿಸಿರಬಹುದು? ಈ ವ್ಯಕ್ತಿ ಪರಿಷ್ಕರಣೆ ಮಾಡಿದ ಪಾಠಗಳನ್ನು ನಿಮ್ಮ ಮಕ್ಕಳು ಓದಬೇಕೆ ಎಂಬುದಾಗಿದೆ? ಇದಕ್ಕೆ ಬಿಜೆಪಿ ಸರ್ಕಾರ ಯಾವ ರೀತಿ ಉತ್ತರಿಸುತ್ತದೆ ನೋಡಬೇಕಿದೆ.
ವಿಡಿಯೋ ನೋಡಿ
ಇದನ್ನೂ ಓದಿ: ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!



ಬ್ರಾಹ್ಮಣ ರು ಮಾತ್ರ ಭಾರತವನ್ನ ಆಳಬೇಕು ಎನ್ನುವ ಫ್ಯಾಶಿಸ್ಟ್ ಜನರ ಮತ್ತು ಆಡಳಿತಗಾರರ ಮನಸ್ಥಿತಿ ಇದರಿಂದ ಅರ್ಥ ಮಾಡಿಕೊಳ್ಳ ಬಹುದು