Homeಕರ್ನಾಟಕಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!

ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!

ಚಿ.ಉದಯಶಂಕರ್‌ ಅವರು ಬರೆದ ಹಾಡನ್ನು ಆರ್‌.ಎನ್‌.ಜಯಗೋಪಾಲ್‌ ಹೆಸರಲ್ಲಿ ನೂತನ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದೆ.

- Advertisement -
- Advertisement -

ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಎಡವಟ್ಟುಗಳು ಒಂದೊಂದಾಗಿ ಹೊರಬೀಳತೊಡಗಿವೆ. ಟ್ರೋಲ್‌ಗಳಿಂದ ಹೆಸರಾಗಿದ್ದ ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಪಠ್ಯಪುಸ್ತಕಗಳಲ್ಲಿ ಸಾಲು ಸಾಲು ತಪ್ಪುಗಳು ಕಂಡುಬರುತ್ತಿದ್ದು, “ಆಡಿಸಿ ನೋಡು, ಬೀಳಿಸಿ ನೋಡು” ಹಾಡು ಬರೆದವರ ಹೆಸರನ್ನೇ ತಪ್ಪಾಗಿ ಪ್ರಕಟಿಸಲಾಗಿದೆ.

ಏಳನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ‘ಸಿರಿ ಕನ್ನಡ’ದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಪದ್ಯವನ್ನು ಪೂರಕ ಪಠ್ಯವಾಗಿ ರೋಹಿತ್ ಚಕ್ರತೀರ್ಥ ಸಮಿತಿ ನೀಡಿದೆ. ಅದನ್ನು ಬರೆದವರು ‘ಆರ್‌.ಎನ್‌.ಜಯಗೋಪಾಲ್‌’ ಎಂದು ತಿಳಿಸಿ ಕವಿ ಪರಿಚಯವನ್ನೂ ನೀಡಲಾಗಿದೆ. ವಾಸ್ತವದಲ್ಲಿ ಇದನ್ನು ಬರೆದವರು ಖ್ಯಾತ ಗೀತರಚನಾಕಾರ ಚಿ.ಉದಯಶಂಕರ್‌ ಎಂಬುದು ವಾಸ್ತವ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿರಿಯ ಸಾಹಿತಿ, ಸಿನಿಮಾ ನಿರ್ದೇಶಕರು ಆದ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆ ಈ ಹಿಂದೆ ಪರಿಷ್ಕರಣೆಗೊಂಡಿದ್ದ ಪಠ್ಯದಲ್ಲಿ ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರ ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ಪೂರಕ ಪಠ್ಯವಾಗಿ ನೀಡಲಾಗಿತ್ತು. ಅದರ ಬದಲಾಗಿ ಆರ್‌.ಎನ್‌.ಜಯಗೋಪಾಲ್‌ ಪಠ್ಯವನ್ನು ನೀಡಲು ಹೋಗಿರುವ ಚಕ್ರತೀರ್ತ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ಎಡವಟ್ಟು ಮಾಡಿಕೊಂಡಿದೆ. ‘ಗೊಂಬೆ ಕಲಿಸುವ ನೀತಿ’ ಶೀರ್ಷಿಕೆಯಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ಮುದ್ರಣಕ್ಕೆ ಕಳುಹಿಸಲಾಗಿದ್ದು, ಇದನ್ನು ಬರೆದದ್ದು ಚಿ.ಉದಯಶಂಕರ್‌ ಆಗಿದ್ದಾರೆ. ಆದರೆ ಪಠ್ಯದಲ್ಲಿ ಆರ್‌.ಎನ್‌.ಜಯಗೋಪಾಲ್‌ ಅವರ ಹೆಸರು ಹಾಗೂ ಪರಿಚಯವನ್ನು ಮಾಡಿಕೊಡಲಾಗಿದೆ.

‘ಆಡಿಸಿ ನೋಡು, ಬೀಳಿಸಿ ನೋಡು’ ಹಾಡು ಕನ್ನಡಿಗರ ಜನಮನಗೆದ್ದ ‘ಕಸ್ತೂರಿ ನಿವಾಸ’ದಲ್ಲಿದೆ. ವರನಟ ಡಾ.ರಾಜ್‌ಕುಮಾರ್‌ ಅವರು ನಟಿಸಿದ್ದ ಈ ಸಿನಿಮಾವನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಈ ಸಿನಿಮಾಕ್ಕೆ ಹಾಡುಗಳನ್ನು ಮೂವರು ಚಿತ್ರಸಾಹಿತಿಗಳು ರಚನೆ ಮಾಡಿದ್ದಾರೆ. ಚಿ.ಉದಯಶಂಕರ್‌ ಅವರೇ ಹೆಚ್ಚಿನ ಹಾಡುಗಳನ್ನು ರಚಿಸಿದ್ದು, ಆರ್‌.ಎನ್‌.ಜಯಗೋಪಾಲ್‌ ಹಾಗೂ ವಿಜಯ ನಾರಸಿಂಹ ಅವರು ಕೆಲವು ಹಾಡುಗಳನ್ನು ಬರೆದಿದ್ದಾರೆ. ಆದರೆ ‘ಆಡಿಸಿ ನೋಡು, ಬೀಳಿಸಿ ನೋಡು’ ಬರೆದವರು ಚಿ.ಉದಯಶಂಕರ್‌ ಎಂಬ ಮಾಹಿತಿ ವಿಕಿಪಿಡಿಯಾದಲ್ಲೂ ಕೂಡ ಲಭ್ಯವಿದೆ. ಅಧಿಕೃತ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಅಪ್‌ಲೋಡ್‌ ಮಾಡಲಾಗಿರುವ ವಿಡಿಯೊಗಳಲ್ಲೂ ಇದೇ ಮಾಹಿತಿ ಇದೆ.

ಹಂಸಲೇಖ ಅವರು ಬರೆದ ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ಈ ಹಿಂದಿನ ಪಠ್ಯದಲ್ಲಿ ನೀಡಲಾಗಿತ್ತು. ಹಂಸಲೇಖ ಅವರು ‘ಮಾಂಸಾಹಾರ ಹಾಗೂ ಅಸ್ಪಶ್ಯತೆ’ ಕುರಿತು ಮಾತನಾಡುತ್ತಾ, ಪೇಜಾವರ ಶ್ರೀಗಳನ್ನು ಉಲ್ಲೇಖಿಸಿದ್ದಕ್ಕೆ ದೊಡ್ಡ ಮಟ್ಟದ ವಿರೋಧವನ್ನು ಒಂದು ವರ್ಗದ ಜನರು ತೋರಿದ್ದರು. ಆ ನಂತರದಲ್ಲಿ ‘ಬಾಡೇ ನಮ್‌ ಗಾಡು’ ಎಂಬ ಅಭಿಯಾನವೂ ನಡೆದಿತ್ತು. ಹಂಸಲೇಖ ಅವರ ಕೆಲವರು ದೂರು ನೀಡಿದ್ದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇಂತಹವರನ್ನ ನಾವು ನೀಡುವ ತೆರಿಗೆ ಹಣದಲ್ಲಿ ಪೋಷಣೆ ಮಾಡುತ್ತಿದೆಯಲ್ಲಾ ನಾಚಿಗೆಗೆಟ್ಟ ಸರ್ಕಾರ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...