ಉತ್ತರ ಪ್ರದೇಶದ ಕಾನ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರದ ನಾಲ್ಕು ದಿನಗಳ ನಂತರ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಿಜೆಪಿ ಯುವ ಘಟಕದ ಪದಾಧಿಕಾರಿ ಹರ್ಷಿತ್ ಶ್ರೀವಾಸ್ತವ ತನ್ನ ಆಕ್ಷೇಪಾರ್ಹ ಪೋಸ್ಟ್‌ಗಳ ಮೂಲಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಪ್ರಯತ್ನಿಸುವವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಮೀನಾ ಹೇಳಿದ್ದಾರೆ. ವಿವಾದ ಹೆಚ್ಚಾದ ನಂತರ ಹರ್ಷಿತ್ ಶ್ರೀವಾಸ್ತವ ಅವರ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಡಿಲಿಟ್ ಮಾಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ನಾಯಕಿ ನೂಪುರ್ ಶರ್ಮಾ ಟಿವಿ ಚರ್ಚೆಯ ವೇಳೆ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಕೆಯನ್ನು ಪ್ರತಿಭಟಿಸಿ ಕಳೆದ ಶುಕ್ರವಾರ ಕಾನ್ಪುರ ಬಂದ್‌ಗೆ ಕರೆ ನೀಡಲಾಗಿತ್ತು. ಈ ವೇಳೆ ಅಲ್ಲಿನ ಕೆಲವು ಭಾಗಗಳಲ್ಲಿ ಹಿಂಸಾಚಾರವು ಪ್ರಾರಂಭವಾಯಿತು. ಎರಡು ಗುಂಪುಗಳ ಸದಸ್ಯರು ಘರ್ಷಣೆಯಲ್ಲಿ ಏರ್ಪಟ್ಟು, ಪರಸ್ಪರ ಕಲ್ಲುಗಳ ತೂರಾಟ ನಡೆಸಿದ್ದರು.
ಇದನ್ನೂ ಓದಿ: ಆರೆಸ್ಸೆಸ್ಸಿನಲ್ಲಿ ದಲಿತರ ಸ್ಥಾನ ಏನು ಎಂಬುವುದಕ್ಕೆ ಛಲವಾದಿ ನಾರಾಯಣ ಸ್ವಾಮಿ ಉತ್ತರ: ಸಿದ್ದರಾಮಯ್ಯ
ಪ್ರವಾದಿಯವರ ಕುರಿತಾದ ಹೇಳಿಕೆಗಳಿಗಾಗಿ ಬಿಜೆಪಿ ಭಾನುವಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಜೊತೆಗೆ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ಪ್ರವಾದಿ ವಿರುದ್ಧದ ಟೀಕೆಗಳಿಗೆ ವಿಶ್ವದಾದ್ಯಂತ ಭಾರೀ ಆಕ್ರೋಶ ಉಂಟಾಗಿದ್ದು, ಸುಮಾರು 16 ದೇಶಗಳು ಖಂಡಿಸಿವೆ.
ಸೋಮವಾರ ಕಾನ್ಪುರ ಪೊಲೀಸರು ಹಿಂಸಾಚಾರದಲ್ಲಿ ಭಾಗಿಯಾದವರ 40 ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಸಿಸಿಟಿವಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳ ಚಿತ್ರಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರವಾದಿ ನಿಂದನೆ ಮಾಡಿದವನಿಂದ ಪಠ್ಯಪರಿಷ್ಕರಣೆ; ರೋಹಿತ್ ಚಕ್ರತೀರ್ಥರ ಹಳೆಯ ಪೋಸ್ಟ್‌ಗಳು ವೈರಲ್
ಹಿಂಸಾಚಾರದಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಈ ವರೆಗೆ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ 1,500 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.



ಬಹುಶಃ ಇವರಾರು ವಿಶ್ವ ಮನುಜರಲ್ಲ, ಕೇವಲ ಸಮಾಜ ದ್ರೋಹಿಗಳು.
ಇಲ್ಲಿಯವರೆಗೂ ಮುಸ್ಲಿಮರ ವಿರುದ್ಧ ಹರಿಹಾಯುತ್ತಿದ್ದ ಬ್ರಾಹ್ಮಣರ ನೇತೃತ್ವದ ಆರ್.ಎಸ್.ಎಸ್., ಭಜರಂಗದಳ ಹಿಂದೂಪರವೆಂದು ಬೊಬ್ಬೆ ಹಾಕುತ್ತಿರುವ ಬಿ.ಜೆ.ಪಿ. ಬೆಂಬಲಿತ ಸಂಘಟನೆಗಳಿಗೆ ಜಾಗತಿಕ ಮಟ್ಟದಲ್ಲಿ ಎದ್ದಿರುವ ಕೂಗು ನುಂಗಲಾರದ ತುತ್ತಾಗಿದೆ. ಅದನ್ನು ಅರಗಿಸಿಕೊಳ್ಳಲು ಇಷ್ಟಕ್ಕೆಲ್ಲ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಾಟಕವಾಡುತ್ತಿದ್ದಾರೆ. ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿರುವ ಎಷ್ಟು ಜನರ ಮೇಲೆ ಇವರು ಕ್ರಮ ತೆಗೆದುಕೊಂಡಿದ್ದಾರೆ? ಪ್ರಬಲ ವಿರೋಧ ಎದುರಾದರೆ ಇಂತಹ ನಾಟಕವಾಡುವುದು ಜಗತ್ತಿಗೇ ಗೊತ್ತಿರುವ ವಿಚಾರ.