ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರನ್ನು ಪಕ್ಷವು ಉಚ್ಚಾಟನೆ ಮಾಡಿದ ಬೆನ್ನಲ್ಲೇ ‘ಫ್ರಿಂಜ್ ಎಲಿಮೆಂಟ್’ (ಕೊನೆಯ ಎಳಸುಗಳು) ಕುರಿತು ಚರ್ಚೆಯಾಗುತ್ತಿದೆ.
ಯಾರ್‍ಯಾರು ಈ ಹಿಂದೆ ಪ್ರವಾದಿಯವರ ಕುರಿತು ಕ್ಷುಲ್ಲಕವಾಗಿ ಮಾತನಾಡಿದ್ದಾರೋ ಅವರೆಲ್ಲರ ವಿರುದ್ಧ ಸರ್ಕಾರ ಕ್ರಮ ಜರುಗಿಸುತ್ತದೆಯೇ ಎಂಬ ಪ್ರಶ್ನೆಗಳು ಮೂಡಿದ್ದು, ಅದಕ್ಕೆ ಸಂಬಂಧಿಸಿದ ಹಲವಾರು ವ್ಯಂಗ್ಯಚಿತ್ರಗಳು ರಚಿತವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರವಾದಿ ನಿಂದಿಸಿದವರ ವಿರುದ್ಧ ಬಿಜೆಪಿ ಕಠಿಣ ಕ್ರಮ ಜರುಗಿಸಿರುವುದರಿಂದ, ರೋಹಿತ್ ಚಕ್ರತೀರ್ಥ ಅವರ ವಿರುದ್ಧವೂ ಇಂಥಹದ್ದೇ ಕ್ರಮ ಜರುಗಿಸಿ, ಹೊಸ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕೆಂಬ ಆಗ್ರಹ ಮಾಡಲಾಗುತ್ತಿದೆ. ರೋಹಿತ್ ಚಕ್ರತೀರ್ಥ ಅವರು ಫೇಸ್‌ಬುಕ್‌ನಲ್ಲಿ ಪ್ರವಾದಿಯವರನ್ನು ನಿಂದಿಸಿ ಬರೆದಿರುವ ಹಳೆಯ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ವಿವಾದಿತ ಪೋಸ್ಟ್‌ಗಳು
“#ಜೈಪೈಗಂಬರ್ #ಜೈಮೋದಿ” ಹ್ಯಾಷ್‌ಟ್ಯಾಗ್‌ನಲ್ಲಿ ಬರೆದಿರುವ ರೋಹಿತ್ ಚಕ್ರತೀರ್ಥ ಅವರು ಪ್ರಧಾನಿ ಮೋದಿಯವರನ್ನು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರಿಗೆ ಹೋಲಿಸಿ ಬರೆದಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ ‘ಧರ್ಮ ಮತ್ತು ರಿಲಿಜಿಯನ್’ (ಇದೇ ಧೋರಣೆಯನ್ನು ಹೊಸ ಪಠ್ಯಪುಸ್ತಕಗಳಲ್ಲೂ ಕಾಣಬಹುದು) ನಡುವೆ ವ್ಯತ್ಯಾಸಗಳಿವೆ ಎಂದು ಪ್ರತಿಪಾದಿಸುತ್ತಾ ‘ಪ್ರವಾದಿ’ಯ ಕುರಿತು ನಿಂದನಾತ್ಮಕವಾಗಿ ರೋಹಿತ್ ಬರೆದಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ರಾಮ ಮತ್ತು ಪ್ರವಾದಿಗಳ ಕುರಿತು ರೋಹಿತ್ ಬರೆದಿದ್ದಾರೆ. ಅದರಲ್ಲಿ ಪ್ರವಾದಿಯವರ ತಂದೆ, ತಾಯಿಯ ಕುರಿತು ಹಗುರವಾಗಿ ಮಾತನಾಡಿರುವುದು ದಾಖಲಾಗಿದೆ.
ಹಿಂದೂ ದೇವತೆಗಳನ್ನ ಅಪಹಾಸ್ಯ ಮಾಡಿದ್ದ ಕಮ್ಯೂನಿಸ್ಟ್ ರು ಪಠ್ಯಾ ಪುಸ್ತಕ ಪರಿಷ್ಕರಣೆ ಯಲ್ಲಿ ಇದ್ದಾಗ ನಿಮ್ಮ ಕಚಡ ಡೋಂಗಿಗಳು ಸತ್ತುಹೋಗಿದ್ದರೆ