Homeರಾಷ್ಟ್ರೀಯಪ್ರವಾದಿ ನಿಂದನೆ ವಿವಾದ ಹಿನ್ನಲೆ: ಪಕ್ಷದ ಪರವಾಗಿ ಚರ್ಚೆಗಳಲ್ಲಿ ಭಾಗವಹಿಸುವವರಿಗೆ ಹೊಸ ನಿಯಮ ಹೇರಿದ ಬಿಜೆಪಿ

ಪ್ರವಾದಿ ನಿಂದನೆ ವಿವಾದ ಹಿನ್ನಲೆ: ಪಕ್ಷದ ಪರವಾಗಿ ಚರ್ಚೆಗಳಲ್ಲಿ ಭಾಗವಹಿಸುವವರಿಗೆ ಹೊಸ ನಿಯಮ ಹೇರಿದ ಬಿಜೆಪಿ

- Advertisement -
- Advertisement -

ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದ ಪಕ್ಷದ ನಾಯಕಿ, ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಯ ನಂತರ ಒಕ್ಕೂಟ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡಕ್ಕೆ ಸಿಲುಕಿದೆ. ಈ ನಡುವೆ ಆಡಳಿತಾರೂಢ ಬಿಜೆಪಿ ತನ್ನ ಪಕ್ಷದ ವಕ್ತಾರರು ಮತ್ತು ಟಿವಿ ಚರ್ಚೆಗಳಲ್ಲಿ ಭಾಗವಹಿಸುವ ನಾಯಕರಿಗೆ ಹೊಸ ನಿಯಮಗಳನ್ನು ನಿಗದಿಪಡಿಸಿದೆ.

ಅಧಿಕೃತ ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ಮಾತ್ರ ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಾಗಿ ಬಿಜೆಪಿ ಮೂಲಗಳು ಹೇಳಿದ್ದು, ಅವರನ್ನು ಮಾಧ್ಯಮ ಸೆಲ್ ನಿಯೋಜಿಸುತ್ತದೆ. ಹೀಗೆ ಭಾಗವಹಿಸುವರಿಗೆ ಯಾವುದೇ ಧರ್ಮ, ಅದರ ಚಿಹ್ನೆಗಳು ಅಥವಾ ಧಾರ್ಮಿಕ ವ್ಯಕ್ತಿಗಳನ್ನು ಟೀಕಿಸದಂತೆ ಎಚ್ಚರಿಕೆ ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತೀವ್ರ ಚರ್ಚೆಯ ವೇಳೆ ಕೂಡಾ ಬಿಜೆಪಿ ಪ್ಯಾನೆಲಿಸ್ಟ್‌ಗಳು ತಮ್ಮ ಗಡಿಯನ್ನು ದಾಟದಂತೆ ನಿರ್ಬಂಧ ಹೇರಲಾಗಿದ್ದು, ಅವರು ತಮ್ಮ ಭಾಷೆಯನ್ನು ಸಂಯಮದಲ್ಲಿಟ್ಟುಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ. ಯಾವುದೇ ಸಮಯದಲ್ಲಿ ಉದ್ರೇಕಗೊಳ್ಳಬಾರದು ಎಂದು ಪಕ್ಷವು ತಿಳಿಸಿದ್ದು, ಯಾವುದೇ ಪ್ರಚೋದನೆಗೂ ಪಕ್ಷದ ಸಿದ್ಧಾಂತ ಅಥವಾ ಆದರ್ಶಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಪಕ್ಷವು ತನ್ನ ನಿಯಮದಲ್ಲಿ ಹೇಳಿದೆ.

ಇದನ್ನೂ ಓದಿ: ಚಡ್ಡಿಗಳು ಮಾಡುವುದು ಚಡ್ಡಿ ಕೆಲಸವನ್ನೇ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ವ್ಯಂಗ್ಯ

ಟಿವಿ ಚರ್ಚೆಯ ವಿಷಯವನ್ನು ಮೊದಲು ಪರಿಶೀಲಿಸಿ, ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಚಾನೆಲ್‌ನಲ್ಲಿ ಕಾಣಿಸಿಕೊಳ್ಳುವ ಮೊದಲು ಅದರ ಬಗ್ಗೆ ಪಕ್ಷದ ನಿಲುವೇನು ಎಂದು ತಿಳಿದುಕೊಳ್ಳುವಂತೆ ಬಿಜೆಪಿ ತನ್ನ ವಕ್ತಾರರಿಗೆ ಆದೇಶಿಸಿದೆ.

“ಪಕ್ಷದ ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ತಮ್ಮ ಅಜೆಂಡಾದಲ್ಲಿ ಉಳಿಯಬೇಕು. ಅವರು ಯಾವುದೇ ಬಲೆಗೆ ಬೀಳಬಾರದು” ಎಂದು ಪಕ್ಷವು ಹೇಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ತನ್ನ ವಕ್ತಾರರು ಸರ್ಕಾರದ ಸಮಾಜ ಕಲ್ಯಾಣ ಕಾರ್ಯಗಳತ್ತ ಗಮನ ಹರಿಸಬೇಕೆಂದು ಬಿಜೆಪಿ ಬಯಸುತ್ತಿದೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಸುಮಾರು 10 ದಿನಗಳ ಹಿಂದೆ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದರ ನಂತರ ಪಕ್ಷದ ಮತ್ತೊಬ್ಬ ನಾಯಕ ನವೀನ್ ಜಿಂದಾಲ್ ಪ್ರವಾದಿ ಕುರಿತು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ತನ್ನ ನಾಯಕರ ಹೇಳಿಕೆಯನ್ನು ಪಕ್ಷವು ಖಂಡಿಸಿದ್ದು ನೂಪುರ್‌ ಅವರನ್ನು ಅಮಾನತು ಮಾಡಿದ್ದು, ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಒಕ್ಕೂಟ ಸರ್ಕಾರ ಈ ವಿವಾದಾತ್ಮಕ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ಅವರನ್ನು “ಫ್ರಿಂಜ್ ಎಲಿಮೆಂಟ್‌ಗಳು” ಎಂದು ಕರೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...