Homeಮುಖಪುಟಪಠ್ಯವಿವಾದ ಡೈವರ್ಟ್ ಮಾಡಲು ಯತ್ನ: ಬಿಜೆಪಿಗೆ ತಿರುಗುಬಾಣವಾದ ಚಡ್ಡಿ ಕಳಿಸುವ ಅಭಿಯಾನ

ಪಠ್ಯವಿವಾದ ಡೈವರ್ಟ್ ಮಾಡಲು ಯತ್ನ: ಬಿಜೆಪಿಗೆ ತಿರುಗುಬಾಣವಾದ ಚಡ್ಡಿ ಕಳಿಸುವ ಅಭಿಯಾನ

ಚಡ್ಡಿಯನ್ನು ದಲಿತರ ಮೇಲೆ ಹೊರಿಸಲಾಗಿದೆ... ಪಠ್ಯಪುಸ್ತಕ ಪರಿಶೀಲನೆಯನ್ನು ಬ್ರಾಹ್ಮಣರಿಗೆ ವಹಿಸಲಾಗಿದೆ... ಅಂಬೇಡ್ಕರ್‌ ಅವರು ಸ್ವಾಭಿಮಾನದ ಬದುಕನ್ನು ಹೇಳಿದರು.. ಆದರೆ ಬಿಜೆಪಿಯಲ್ಲಿನ ದಲಿತರು ಏನನ್ನು ಸಾರಲು ಹೊರಟಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಪಠ್ಯ ಪರಿಷ್ಕರಣೆ ಮಾಡಲು ಮುಂದಾದ ಬಿಜೆಪಿ ಸರ್ಕಾರಕ್ಕೆ ಇನ್ನಿಲ್ಲದ ಹೊಡೆತ ಬಿದ್ದಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಯಡವಟ್ಟುಗಳು ದಿನ ಕಳೆದಂತೆ ಹೆಚ್ಚಾಗುತ್ತಲೇ ಇವೆ. ಮೊದ ಮೊದಲು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಅದನ್ನು ವಿರೋಧಿಸಿದವರು. ಆ ನಂತರ ಸಾಹಿತಿಗಳು ಪಠ್ಯ ವಾಪಸ್ ಮಾಡಿದರು. ಕುವೆಂಪುರವರಿಗೆ, ಅಂಬೇಡ್ಕರ್‌ರವರಿಗೆ, ಬಸವಣ್ಣನವರಿಗೆ ಅವಮಾನವಾದಾಗ ದಲಿತರು, ಒಕ್ಕಲಿಗರು, ಲಿಂಗಾಯತರು ದೊಡ್ಡ ಮಟ್ಟದಲ್ಲಿ ವಿರೋಧಿಸಿದರು. ಸ್ವಾಮೀಜಿಗಳು ಬೀದಿಗೆ ಬಂದು ಹೋರಾಡಿದರು. ಈಗ ಪಠ್ಯದಲ್ಲಿ ಶಂಕರಾಚಾರ್ಯರಿಗೂ ಅವಮಾನವಾಗಿದೆ ಎಂಬ ಚರ್ಚೆ ನಡೆಯುತ್ತಿದ್ದು, ಸ್ಮಾರ್ತ ಬ್ರಾಹ್ಮಣ ಮಠಗಳು ಆಕ್ರೋಶ ಹೊರ ಹಾಕುವ ಸೂಚನೆ ಕಾಣುತ್ತಿದೆ.

ಇಂತಹ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿರುವ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿದೆ. ಪಠ್ಯ ಪರಿಷ್ಕರಣೆಯಲ್ಲಿ ತಪ್ಪಾಗಿವೆ ಎಂದಿರುವ ಶಿಕ್ಷಣ ಮಂತ್ರಿ ಬಿ.ಸಿ ನಾಗೇಶ್ ಹೊಸದಾಗಿ ಪಠ್ಯ ಮುದ್ರಿಸುವುದಾಗಿ ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ಈ ವಿಷಯದಿಂದ ಜನರನ್ನು ಡೈವರ್ಟ್ ಮಾಡಲು ಯತ್ನಿಸಿದ ಬಿಜೆಪಿ ಸರ್ಕಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಚಡ್ಡಿ ಕಳಿಸುವ ಅಭಿಯಾನ ಮಾಡಲು ಮುಂದಾಯಿತು. ಆದರೆ ದಲಿತರಿಗೆ ಚಡ್ಡಿ ಸಂಗ್ರಹಿಸುವ ಮತ್ತು ಚಡ್ಡಿ ಹೊರುವಂತೆ ಮಾಡುವ ಮೂಲಕ ಅದು ಮತ್ತೆ ಜಾತೀಯತೆ ಮೆರೆದು ಆ ಅಭಿಯಾನ ತನಗೆ ತಿರುಗುಬಾಣವಾಗುವಂತೆ ಮಾಡಿಕೊಂಡಿದೆ.

ಇದೆಲ್ಲ ಶುರುವಾಗಿದ್ದು ಹೀಗೆ..

ನಾಡಿನೆಲ್ಲೆಡೆ ಪಠ್ಯ ವಿವಾದ ತಾರಕಕ್ಕೇರಿತ್ತು. ತೀವ್ರ ವಿರೋಧವಿದ್ದರೂ ಸಹ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಪರವಾಗಿ ವಾದಿಸಿದ್ದರು. ಹೋರಾಟನಿರತರನ್ನು ಹೀಯಾಳಿಸಿದ್ದರು. ಇದರಿಂದ ಕ್ರೋಧಗೊಂಡ NSUI ಕಾರ್ಯಕರ್ತರು ಜೂನ್ 01 ರಂದು ತಿಪಟೂರಿನ ನಾಗೇಶ್‌ರವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. RSS ಚಡ್ಡಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಸಿಎಂ, ಗೃಹಸಚಿವ ಎಲ್ಲರೂ ಖಂಡಿಸಿದ್ದರು. ತುಮಕೂರು ಸಂಸದ ಬಸವರಾಜುರವರು ಚಡ್ಡಿ ನಮ್ಮ ಬ್ರಾಂಡ್ ಅದನ್ನು ಸುಟ್ಟಿದ್ದು ತಪ್ಪು ಎಂದರು. NSUI ಅಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ 24 ಜನರ ವಿರುದ್ಧ FIR ದಾಖಲಿಸಿ ಬಂಧಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು ಒಂದು ಚಡ್ಡಿ ಸುಟ್ಟರೆ ಕೇಸ್ ಹಾಕಿ ಬಂಧಿಸುವುದಾದರೆ ತಾನೂ RSS ಚಡ್ಡಿ ಸುಡುವುದಾಗಿ ಘೋಷಿಸಿದ್ದರು. ಕಳೆದ ಒಂದು ತಿಂಗಳಿನಿಂದ ಆರ್‌ಎಸ್‌ಎಸ್‌ ವಿರುದ್ಧ ಸಮರ ಹೂಡಿರುವ ಅವರು #AryanRSS ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಏಕೆ ಆರ್‌ಎಸ್‌ಎಸ್‌ನಲ್ಲಿ ದಲಿತರಿಗೆ ಮುಖ್ಯ ಸ್ಥಾನ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದರು. ಮುಂದುವರಿದು ಅದು ಭಯೋತ್ಪಾದಕ ಸಂಘಟನೆ, ಹಾಗಾಗಿ ಅದನ್ನು ಕಂಡರೆ ನನಗೆ ಭಯ ಎಂದಿದ್ದ ಅವರು ಆರ್ಯನ್ನರು ಈ ದೇಶದ ಮೂಲನಿವಾಸಿಗಳಲ್ಲ, ಬದಲಿಗೆ ಹೊರಗಿನಿಂದ ಬಂದವರು ಎಂದಿದ್ದರು. ಇದಕ್ಕೆ ಹಲವಾರು ಬಿಜೆಪಿ ಮುಖಂಡರು ಪ್ರತಿಕ್ರಿಯೆ ನೀಡಿದ್ದರು. ಆಗ ಮತ್ತೆ ಸಿದ್ದರಾಮಯ್ಯನವರು ನಾನು ಕೇಳಿದ್ದು RSSಗೆ. ಏಕೆ ಬಿಜೆಪಿ ನಾಯಕರು ಉತ್ತರಿಸುತ್ತೀರಿ? RSS ನಾಯಕರಿಗೆ ಅಷ್ಟು ಧೈರ್ಯವಿಲ್ಲವೆ ಎಂದು ಛೇಡಿಸಿದ್ದರು.

ಹೀಗೆ ಸಿದ್ದರಾಮಯ್ಯನವರು ಚಡ್ಡಿ ಸುಡುವುದಾಗಿ ಹೇಳಿದ್ದಕ್ಕೆ ಪ್ರತಿಯಾಗಿ ಬಿಜೆಪಿ ನಾವೇ ಹಳೆ ಚಡ್ಡಿ ಕಳಿಸುತ್ತೇವೆ ಎಂಬ ಅಭಿಯಾನ ಆರಂಭಿಸಿದರು. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿಯವರು ಪತ್ರಿಕಾಗೋಷ್ಟಿ ನಡೆಸಿ “ಬಿಜೆಪಿ ಪರಿಶಿಷ್ಟ ಮೋರ್ಚಾದ ಕಾರ್ಯಕರ್ತರು ಚಡ್ಡಿಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಬಿಜೆಪಿ ಮುಖಂಡರು ಸಿದ್ದರಾಮಯ್ಯನವರಿಗೆ ಕಳಿಸಿಕೊಡುತ್ತಾರೆ” ಎಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೇ ತಾವೇ ಚಡ್ಡಿಗಳ ಮೂಟೆಯನ್ನು ತಲೆಯ ಮೇಲೊತ್ತಿಕೊಂಡು ಪ್ರತಿಭಟನೆ ನಡೆಸಿದ್ದರು. ಆ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಕೊಳಕು ಚಡ್ಡಿಗಳನ್ನು ಸಂಗ್ರಹಿಸುವ, ಹೊರುವ ಕೆಲಸವನ್ನು ಬಿಜೆಪಿಯಲ್ಲಿನ ದಲಿತರು ಮಾತ್ರವೇ ಏಕೆ ಮಾಡಬೇಕು? ಬಿ.ಸಿ ನಾಗೇಶ್, ತೇಜಸ್ವಿ ಸೂರ್ಯ, ಸುರೇಶ್ ಕುಮಾರ್‌ರಂತಹ ಬ್ರಾಹ್ಮಣರೇಕೆ ಹೊರಬಾರದು ಎಂದು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು, “ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ‌ ಜಾತಿಗಳು ಯಾಕೆ ಇಲ್ಲ” ಎನ್ನುವ ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ‌ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಆರ್.ಎಸ್.ಎಸ್‌ ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ. ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ. ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು‌‌ ಮನಸ್ಸಿಗೆ ನೋವಾಯಿತು. ನಿಮ್ಮನ್ನು “ಪಠ್ಯಪುಸ್ತಕ‌ ಪರಿಷ್ಕರಣ‌ ಸಮಿತಿಯ ಅಧ್ಯಕ್ಷತೆ” ಯಂತಹ ಸ್ಥಾನದಲ್ಲಿ‌‌ ಕಾಣುವ ಆಸೆ ನನಗೆ. ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ‌ ಮನಸ್ಥಿತಿಗೆ ನನ್ನ ಧಿಕ್ಕಾರ. ಸ್ವಾಭಿಮಾನವನ್ನು‌ ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ‌ನಿಮಗೆ‌ ನಾನು ನೀಡುವ ಸಲಹೆ” ಎಂದು ಹೇಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದರು.

ಅದಲ್ಲದೆ ಹಲವಾರು ಜನರು “ತೇಜಸ್ವಿ ಸೂರ್ಯ, ಸಚಿವ ಬಿ.ಸಿ.ನಾಗೇಶ್ ಅಥವಾ ಸುರೇಶಕುಮಾರ್ ಚಡ್ಡಿ ತಲೆಮೇಲೆ ಹೊತ್ತು ಸಿದ್ಧರಾಮಯ್ಯ ವಿರುದ್ಧ ಪ್ರತಿಭಟಿಸುವುದಾದರೆ ಬಳಸಿದ ನಮ್ಮ ಹಳೆ ಚಡ್ಡಿ ಕೊಡಲು ನಾವೂ ಸಿದ್ಧ” ಎಂದು ಸವಾಲು ಹಾಕಿದರು. ಆದರೆ ಬಿಜೆಪಿ ಹಾಗೆ ಮಾಡಲೇ ಇಲ್ಲ…

“ಪಠ್ಯಪುಸ್ತಕ ಪರಿಷ್ಕರಣೆ – ಮೇಲ್ವರ್ಗದವರಿಗೆ. ಚಡ್ಡಿ ಹೊರುವ ಕೆಲಸ – ದಲಿತರಿಗೆ. ಇದು ಬಿಜೆಪಿಯ ಆಧುನಿಕ ಮನುಧರ್ಮ. ದಲಿತರೊಬ್ಬರು RSSನವರು ಬಳಸಿ ಬಿಸಾಡಿದ ಚಡ್ಡಿ ಹೊತ್ತಿದ್ದು ಮಲ ಹೊರುವ ಪದ್ಧತಿಗಿಂತ ಬಿನ್ನವೇನಲ್ಲ. ನಾರಾಯಣಸ್ವಾಮಿ ಅಣ್ಣ, ಅಂಬೇಡ್ಕರ್‌ರವರು ಶೋಷಿತರ ತಲೆಯ ಮೇಲೆ ಕಿರೀಟವನ್ನ ಕಾಣಬಯಸಿದ್ದರೇ ಹೊರತು ಚಡ್ಡಿಗಳನ್ನಲ್ಲ” ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿಯು ಪಠ್ಯಪುಸ್ತಕದಲ್ಲಿ ಅಂಬೇಡ್ಕರ್‌ ಕುರಿತ ಪಠ್ಯದಲ್ಲಿ ಬದಲಾವಣೆ ಮಾಡಿ ಸಂವಿಧಾನ ಶಿಲ್ಪಿ ಪದವನ್ನೇ ಕಿತ್ತು ಹಾಕಿದೆ. ಜೊತೆಗೆ ಅವರು ಬೌದ್ಧಧರ್ಮಕ್ಕೆ ಸೇರಿದ್ದು ಏಕೆಂಬ ಮಾಹಿತಿಯನ್ನು ತಿರುಚಲಾಗಿದೆ. ಹಲವಾರು ದಲಿತ ಲೇಖಕರ ಪಠ್ಯ ಕೈಬಿಟ್ಟಿದೆ. ಮತ್ತೊಂದು ಕಡೆ ದಲಿತರ ಮೇಲೆ ಹಳೆ ಚಡ್ಡಿಗಳನ್ನು ಹೊರಿಸುತ್ತಿದೆ. ಹೀಗೆ ನೇರನೇರಾ ವರ್ಣಾಶ್ರಮ ಪದ್ದತಿಯನ್ನು ಜಾರಿ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿದೆ.

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ಈ ನಿಟ್ಟಿನಲ್ಲಿ ಪಠ್ಯಪುಸ್ತಕ ವಿವಾದದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಚಡ್ಡಿ ಕಳಿಸುವ ಅಭಿಯಾನ ಹಮ್ಮಿಕೊಂಡ ಬಿಜೆಪಿ ಅಲ್ಲಿಯೂ ಹಿನ್ನಡೆ ಅನುಭವಿಸಿದೆ. ನಾಲ್ವರು ಬಿಜೆಪಿ ಶಾಸಕರೆ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿದ್ದಾರೆ. ಎಲ್ಲಾ ಸಮುದಾಯದ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ತಾನು ಏನೂ ಬೇಕಾದರೆ ಮಾಡಿ ಜಯಿಸಿಕೊಳ್ಳಬಲ್ಲೆ ಎಂಬುದು ಸುಲಭದ ಮಾತಲ್ಲ ಎಂಬುದನ್ನು ಈ ಪ್ರಕರಣಗಳು ಸಾಬೀತು ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...