Homeಅಂಕಣಗಳುಜನಪರ ಹೋರಾಟಗಾರರ ಅಕ್ರಮ ಬಂಧನ

ಜನಪರ ಹೋರಾಟಗಾರರ ಅಕ್ರಮ ಬಂಧನ

- Advertisement -
- Advertisement -

| ಗೌರಿ ಲಂಕೇಶ್
ಜೂನ್ 3, 2009 (ಸಂಪಾದಕೀಯದಿಂದ) |

ಮಾನವತಾವಾದಿ ಬಿನಾಯಕ್ ಸೇನ್‍ರವರ ಅಕ್ರಮ ಬಂಧನ ಕುರಿತಂತೆ ಬರಹಗಾರ ಅಸೀಮ್ ಶ್ರೀವಾಸ್ತವ ಅವರು ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಹಲವು ಸ್ವಾರಸ್ಯಕರವಾದ ಸಂಗತಿಗಳಿವೆ. ಅವನ್ನು ಇಲ್ಲಿ ನೀಡಬೇಕೆನಿಸುತ್ತಿದೆ.
ಮೊದಲನೆಯದು ಇಬ್ಬರು ಖ್ಯಾತ ಅಮೆರಿಕನ್ನರ ನಡುವೆ ಸಂಭವಿಸಿದ್ದು.
ಮೆಕ್ಸಿಕೋ ದೇಶದ ಮೇಲೆ ಅಮೆರಿಕ ದಾಳಿ ಮಾಡಿದಾಗ ಖ್ಯಾತ ನಿಸರ್ಗವಾದಿ ಹೆನ್ರಿ ಥೋರೊ ಅದನ್ನು ಪ್ರತಿಭಟಿಸಿದರಲ್ಲದೆ, ತಮ್ಮ ಸರ್ಕಾರದ ನಿಲುವಿನ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ತೆರಿಗೆಗಳನ್ನು ಕಟ್ಟಲು ನಿರಾಕರಿಸಿದ್ದರು. ಆಗ ಅಮೆರಿಕನ್ ಸರ್ಕಾರ ಥೋರೊ ಅವರನ್ನು ಬಂಧಿಸಿ ಜೈಲಿಗಟ್ಟಿತು.
ಥೋರೊ ಅವರ ಸ್ನೇಹಿತ ಮತ್ತು ಹಿತೈಷಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಬರಹಗಾರ ರಾಲ್ಫನಾಲ್ವ ಎಮರ್ಸನ್ ಥೋರೊರನ್ನು ನೋಡಲು ಜೈಲಿಗೆ ಬಂದರು. ಜೈಲಿನ ಸರಳುಗಳ ಹಿಂದಿದ್ದ ಥೋರೊ ಅವರನ್ನು ಕಂಡು ಎಮರ್ಸನ್ ಅವರು “ನೀನು ಇದರೊಳಗೆ ಏನು ಮಾಡುತ್ತಿದ್ದೀಯಾ?” ಎಂದು ಕೇಳಿದರು. ಆಗ ಥೋರೊ “ನೀನು ಹೊರಗಡೆ ಏನು ಮಾಡುತ್ತಿದ್ದೀಯಾ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಉತ್ತರಿಸಿದರು. ಅದನ್ನು ಕೇಳಿ ಎಮರ್ಸನ್‍ರವರ ಮುಖ ನಾಚಿಕೆಯಿಂದ ಕೆಂಪೇರಿತು.
ಅಂದರೆ, ತನ್ನಂಥವರನ್ನೇ ಸರ್ಕಾರ ಬಂಧಿಸಿರುವಾಗ ಎಮರ್ಸನ್ ಥರದ ಜನ ಹೊರಗಡೆ ಏನು ಮಾಡುತ್ತಿದ್ದಾರೆ ಎಂಬುದೇ ಥೋರೊ ಅವರ ಪ್ರಶ್ನೆಯಾಗಿತ್ತು.
ಎರಡನೆ ಸಂಗತಿ ಎರಡು ರೀತಿಯ ಜನರ ಪಟ್ಟಿಗಳಿಗೆ ಸಂಬಂಧಪಟ್ಟಿದ್ದು.
ಮೊದಲನೆ ಪಟ್ಟಿಯಲ್ಲಿ ಸಾಕ್ರೆಟೀಸ್, ನೆಲ್ಸನ್ ಮಂಡೇಲ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್, ಫೈಜ್ ಅಹಮ್ಮದ್ ಫೈಜ್, ಬಿನಾಯಕ್ ಸೇನ್, ಇರೋಮ್ ಶರ್ಮಿಳಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಹೆನ್ರಿ ಥೋರೊ ಮತ್ತು ಫ್ರೆಡೋರ್ ದಸ್ತೋವಸ್ಕಿ ತರಹದ ಜನ ಇದ್ದಾರೆ. ಅವರೆಲ್ಲರ ನಡುವೆ ಒಂದು ಸಾಮ್ಯತೆ ಇದೆ. ಆ ಸಾಮ್ಯತೆ ಏನು?
ಎರಡನೆ ಪಟ್ಟಿಯಲ್ಲಿ ಒಸಾಮಾ ಬಿನ್ ಲಾಡನ್, ಜಗದೀಶ್ ಟೈಟ್ಲರ್, ಸಜ್ಜನ ಕುಮಾರ್, ನರೇಂದ್ರ ಮೋದಿ, ಜ್ಯೋತಿ ಬಸು, ಬಾಳಾ ಠಾಕ್ರೆ, ಜಾರ್ಜ್ ಬುಷ್, ಟೋನಿ ಬ್ಲೇರ್, ಡೊನಾಲ್ಡ್ ರಮ್ಸ್‍ಫೆಲ್ಟ್, ಡಿಕ್ ಚೆನಿ, ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಥರದವರಿದ್ದಾರೆ. ಇವರೆಲ್ಲರ ನಡುವೆಯೂ ಒಂದು ರೀತಿಯ ಸಾಮ್ಯತೆ ಇದೆ. ಈ ಸಾಮ್ಯತೆ ಏನು?
ಮೊದಲನೆ ಪಟ್ಟಿಯಲ್ಲಿರುವವರೆಲ್ಲರೂ ಸರ್ಕಾರ ನಡೆಸುತ್ತಿದ್ದ ಅನ್ಯಾಯಗಳನ್ನು ಪ್ರತಿಭಟಿಸಿದ್ದಕ್ಕೆ ಜೈಲಿಗೆ ದೂಡಲ್ಪಟ್ಟವರು. ಎರಡನೇ ಪಟ್ಟಿಯಲ್ಲಿರುವವರು ಸಾಮೂಹಿಕ ಮಾರಣಹೋಮಕ್ಕೆ ಕಾರಣೀಭೂತರಾಗಿದ್ದರೂ, ಎಂದೂ ಶಿಕ್ಷೆಗೆ ಗುರಿಯಾಗದೆ ಸಮಾಜದಲ್ಲಿ ಮೆರೆದವರು.
ಶ್ರೀವಾಸ್ತವ ಅವರ ಲೇಖನದಲ್ಲಿನ ಮೂರನೆ ಸಂಗತಿ ದಾಮೋದರ್ ರಥ್ ಎಂಬಾತನನ್ನು ಕುರಿತದ್ದು, ಒರಿಸ್ಸಾದ ಭಿನ್ನಮತೀಯರಾದ ರಥ್ ಅವರು ಕೆಲ ವರ್ಷಗಳ ಹಿಂದೆ ಒಂದು ಜೈಲಿನ ಬಾಗಿಲಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅವರ ಬೇಡಿಕೆ ಏನಾಗಿತ್ತೆಂದರೆ ಒರಿಸ್ಸಾ ಸರ್ಕಾರ ತನ್ನ ಪೆದ್ದುತನದಿಂದಾಗಿ ಹಲವಾರು ಅಮಾಯಕ ಜನರನ್ನು ಅಕ್ರಮಬಾಗಿ ಜೈಲಿನಲ್ಲಿಟ್ಟಿದ್ದರಿಂದ ತನ್ನನ್ನೂ ಜೈಲಿನಲ್ಲಿ ಬಂಧಿಸಬೇಕೆಂಬುದೇ ಆಗಿತ್ತು.
ರಥ್‍ರವರು ಹೀಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಹತ್ತು ದಿನಗಳ ಕಾಲ ಮುಂದುವರೆಸಿದಾಗ ಕೊನೆಗೂ ಜೈಲಧಿಕಾರಿಯೊಬ್ಬ ಬಂದು “ನೀನು ಯಾಕೆ ಇಷ್ಟು ಕಷ್ಟ ಅನುಭವಿಸುತ್ತಿದ್ದೀಯಾ?” ಎಂದು ಕೇಳಿದ. ಆಗ ರಥ್ “ಜೈಲಿನ ಹೊರಗಡೆಗಿಂತ ಜೈಲಿನೊಳಗೇ ಉತ್ತಮ ಜನರಿದ್ದಾರೆ. ಅದಕ್ಕೆ” ಎಂದು ಉತ್ತರಿಸಿದರು. ಮರುಕ್ಷಣವೇ ರಥ್‍ರವರ ಮಿತ್ರರನ್ನು ಬಂಧಮುಕ್ತರನ್ನಾಗಿಸಲಾಯಿತು.
ಶ್ರೀವಾಸ್ತವ ಅವರ ಲೇಖನದ ಸಾರಾಂಶ ಇವತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ನೆಪದಲ್ಲಿ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ತೊಡಗಿದೆ. ಆದರೆ ನಾವು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದ್ದರೆ ಸರ್ಕಾರವೇ ಭಯೋತ್ಪಾದಕನಂತೆ ವರ್ತಿಸುವುದನ್ನು ನಾವೆಲ್ಲರೂ ಜೊತೆಗೂಡಿ ತಡೆಯಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...