“ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು. ಇ.ಡಿ. ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ. ಪಲಾಯವಾದವೇ ಇವರ ಬಂಡವಾಳ!” ಎಂಬ ಪ್ರತಿಪಾದನೆಯೊಂದಿಗೆ ಬಿಜೆಪಿ ಕರ್ನಾಟಕ ವಿಡಿಯೊವೊಂದನ್ನು ಟ್ವೀಟ್ ಮಾಡಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರು ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ವಿಡಿಯೊವನ್ನು ಟ್ರೋಲ್ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು ಇದನ್ನು ಅಣಕಿಸುತ್ತಿದ್ದಾರೆ. ಆದರೆ ಬಿ.ವಿ.ಶ್ರೀನಿವಾಸ್ ಈ ವಿಡಿಯೊ ಹಿಂದಿನ ಅಸಲಿ ಕಥೆಯನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು.
ಇಡಿ ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಐವೈಸಿ ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ.
ಪಲಾಯವಾದವೇ ಇವರ ಬಂಡವಾಳ!
#FakeGandhisBachaoToolKit pic.twitter.com/Gygnt5d5jP
— BJP Karnataka (@BJP4Karnataka) June 13, 2022
ಈ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಬಿ.ವಿ.ಶ್ರೀನಿವಾಸ್, “ಪೊಲೀಸರ ಉದ್ದೇಶ ಸರಿ ಇದ್ದರೆ ಖಂಡಿತವಾಗಿಯೂ ನಾನು ಅವರ ಜೊತೆಯಲ್ಲಿ ಹೋಗಲು ತಯಾರಿದ್ದೆ. ಅವರ ಉದ್ದೇಶ ಬೇರೆಯಾಗಿತ್ತು. ಪ್ರತಿಭಟನೆಗೂ ಮುಂಚಿತವಾಗಿಯೇ ಅರೆಸ್ಟ್ ಮಾಡಲು ಯೋಜಿಸಿದ್ದರು. ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬೆಳಿಗ್ಗೆ ಏಳು ಗಂಟೆಯ ಸಮಯದಲ್ಲಿ ಪೊಲೀಸರು ನನ್ನನ್ನು ಅರೆಸ್ಟ್ ಮಾಡಲು ಪ್ರಯತ್ನಪಟ್ಟರು. ರಾತ್ರಿ ಎರಡು ಸಲ ಪ್ರಯತ್ನಪಟ್ಟರು. ಬೆಳಿಗ್ಗೆ ಎಂಟು ಗಂಟೆಗೆ ಮತ್ತೊಮ್ಮೆ ಪೊಲೀಸರು ಯತ್ನಿಸಿದಾಗ ನಾನು ಗೆರಿಲ್ಲಾ ಮಾದರಿಯಲ್ಲಿ ಎಸ್ಕೇಪ್ ಆದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ರಾಹುಲ್ ಗಾಂಧಿಯವರಿಗೆ ಇ.ಡಿ. ಸಮನ್ಸ್ ನೀಡಿದ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಇ.ಡಿ. ಕಚೇರಿ ಬಳಿಗೆ ತೆರಳಿ ಕಾರ್ಯಕರ್ತರೊಂದಿಗೆ ನಾನು ಸೇರಿಕೊಳ್ಳಬೇಕಿತ್ತು. ಹೀಗಾಗಿ ತಪ್ಪಿಸಿಕೊಂಡು ಓಡಿದೆ. ನಂತರದ ಪ್ರತಿಭಟನೆಯಲ್ಲಿ ನನ್ನ ಹಾಜರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯಾಷನಲ್ ಟಿ.ವಿ. ಚಾನೆಲ್‌ಗಳಲ್ಲೂ ಇದು ಲೈವ್ ಆಗಿದೆ. ಈ ಬಿಜೆಪಿವರು ಸುಳ್ಳಿನ ಫ್ಯಾಕ್ಟರಿ ಗಿರಾಕಿಗಳು. ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಏನು ಎಂಬುದು ನ್ಯೂಯಾರ್ಕ್ ಟೈಮ್ಸ್‌ನವರು ಬರೆದಿದ್ದಾರೆ. ಸಂವಿಧಾನದ ಉಳಿವಿವಾಗಿ ಹೋರಾಡಿ 130 ಕೇಸು ಹಾಕಿಸ್ಕೊಂಡಿದ್ದೇನೆ” ಎಂದು ತಿಳಿಸಿದರು.
ಇದನ್ನೂ ಓದಿರಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ
“ಸಿ.ಟಿ.ರವಿ ನನ್ನ ಬಗ್ಗೆ ಮಾತನಾಡಿದ್ದಾರಂತೆ. ನಾನು ಓ.ಟಿ. ಹಾಕಿಕೊಂಡು ಕಾರು ಅಪಘಾತ ಮಾಡಿ ಓಡಿ ಹೋಗಿಲ್ಲ. ಓಡಿ ಹೋಗುವವರು ಬಿಜೆಪಿ ನಾಯಕರು ಮಾತ್ರ” ಎಂದು ಕುಟುಕಿದರು.
“ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದ ಸ್ಥಳಕ್ಕೆ ಐದಾರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದೇ ರೀತಿಯಲ್ಲಿ ದೊಡ್ಡ ಮಟ್ಟದ ಪೊಲೀಸರನ್ನು ಅರುಣಾಚಲಪ್ರದೇಶಕ್ಕೆ ನಿಯೋಜಿಸಿದ್ದರೆ ಚೈನಾದವರು ನಮ್ಮ ದೇಶದ ಒಳಗೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಹಿಂದೂಗಳು ಎನ್ನುತ್ತಾರೆ. ಆದರೆ ಜಮ್ಮು ಕಾಶ್ಮೀರಕ್ಕೆ ಇಷ್ಟು ದೊಡ್ಡ ಪ್ರಮಾಣದ ಪೊಲೀಸರನ್ನು ನಿಯೋಜಿಸಿದ್ದರೆ ಹಿಂದೂಗಳು ಸಾಯುತ್ತಿರಲಿಲ್ಲ. ಸರ್ಕಾರ ಇವರದ್ದೇ ಅಲ್ಲವೇ?” ಎಂದು ಪ್ರಶ್ನಿಸಿದರು.
“ನನ್ನ ಹಿನ್ನಲೆ ಏನೆಂಬುದು ದೇಶಕ್ಕೆ ಗೊತ್ತಿದೆ. ಈ ಸಿ.ಟಿ.ರವಿಯಂಥವರಿಂದ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ” ಎಂದು ಹೇಳಿದರು.



Why should he get arrested? What he has done is correct.
ನಿಜ ಹೇಳಿದ್ದಾರೆ ಶ್ರೀನಿವಾಸ್ ರವರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,, ಅವರು ಹೇಳಿದ ಹಾಗೆ ಬಿಜೆಪಿ ಯವರು ಸುಳ್ಳು ಸೃಷ್ಟಿಸುವ ಕಾರ್ಖಾನೆಗಳಾಗಿವೆ,, ಕೆಲವೊಂದು ಬಾಲ್ ಗಳು ಆದೆ ಸತ್ಯ ಅಂತ ಬೊಬ್ಬೆ ಹೊಡೀತಾವೆ ಅವಿವೇಕಿಗಳು 😂😂😂