Homeಮುಖಪುಟಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ಮೋದಿ ಒತ್ತಡಕ್ಕೆ ಮಣಿದು ಶ್ರೀಲಂಕಾದಲ್ಲಿ ಇಂಧನ ಯೋಜನೆಯ ಗುತ್ತಿಗೆಯನ್ನು ಗೌತಮ್ ಅದಾನಿ ಗುಂಪಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಲಂಕಾ ಅಧಿಕಾರಿ ರಾಜೀನಾಮೆ ನೀಡಿದ್ದಾರೆ.

- Advertisement -
- Advertisement -

ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸಿದ್ದಾರೆ. ಮೋದಿ ಒತ್ತಡಕ್ಕೆ ಮಣಿದು ಗೌತಮ್ ಅದಾನಿ ಗುಂಪಿಗೆ ಶ್ರೀಲಂಕಾದಲ್ಲಿ ಇಂಧನ ಯೋಜನೆಯ ಗುತ್ತಿಗೆಯನ್ನು ನೀಡಲಾಗಿದೆ ಎಂದು ಆರೋಪಿಸಿರುವ ಲಂಕಾ ಅಧಿಕಾರಿ ರಾಜೀನಾಮೆ ನೀಡಿದ್ದಾರೆ.

ಪವನ ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಗ್ರೂಪ್‌ಗೆ ನೀಡುವಂತೆ ಭಾರತದ ಪ್ರಧಾನಿ ಮೋದಿ ಒತ್ತಡ ಹೇರಿದ್ದಾರೆ ಎಂದು ಅಧ್ಯಕ್ಷ ರಾಜಪಕ್ಸೆ ಅವರು ತಮಗೆ ಹೇಳಿರುವುದಾಗಿ ತಿಳಿಸಿದ್ದ ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ) ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶ್ರೀಲಂಕಾದ ಮನ್ನಾರ್ ಜಿಲ್ಲೆಯಲ್ಲಿ 500-ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಗೆ ಸಂಬಂಧಿಸಿದಂತೆ ಈ ಆರೋಪ ಮಾಡಲಾಗಿತ್ತು. ಸಾರ್ವಜನಿಕ ಉದ್ಯಮಗಳ ಸಮಿತಿಯ (COPE) ಮುಕ್ತ ವಿಚಾರಣೆಯಲ್ಲಿ ಫರ್ಡಿನಾಂಡೋ ಮಾತನಾಡಿರುವುದಾಗಿ ವರದಿಯಾಗಿತ್ತು. “ಮೋದಿಯವರ ಒತ್ತಡಕ್ಕೆ ಒಳಗಾಗಿರುವುದಾಗಿ ರಾಜಪಕ್ಸೆ ನನಗೆ ಹೇಳಿದರು” ಎಂದು ಫರ್ಡಿನಾಂಡೋ ಹೇಳಿಕೆ ನೀಡಿದ್ದು ಪತ್ರಿಕೆಗಳಲ್ಲಿಯೂ ವರದಿಯಾಗಿತ್ತು.

ಆ ಆರೋಪಗಳನ್ನು ಮಾಡಿದ ಮೂರು ದಿನಗಳ ನಂತರ ಫರ್ಡಿನಾಂಡೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾನುವಾರ ಸಂಜೆ ಟ್ವಿಟರ್‌ನಲ್ಲಿ ಅಧ್ಯಕ್ಷ ರಾಜಪಕ್ಸೆ ಪ್ರತಿಕ್ರಿಯೆ ನೀಡಿದ್ದು, ಫರ್ಡಿನಾಂಡೋ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಫರ್ಡಿನಾಂಡೋ ಅವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷರ ಕಚೇರಿಯೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಆರೋಪಗಳನ್ನು ಸಂಪೂರ್ಣ ನಿರಾಕರಿಸಲಾಗಿದೆ. ಮನ್ನಾರ್‌ನಲ್ಲಿ ಪವನ ವಿದ್ಯುತ್ ಯೋಜನೆಯನ್ನು ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಸ್ಥೆಗೆ ನೀಡಲು ತಾನು ಯಾವುದೇ ಸಮಯದಲ್ಲಿ ಅಧಿಕಾರ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಶ್ರೀಲಂಕಾ ದೇಶವು ಪ್ರಸ್ತುತ ಇಂಧನ ಕೊರತೆಯನ್ನು ತೀವ್ರತರನಾಗಿ ಎದುರಿಸುತ್ತಿದೆ. ಸಾಧ್ಯವಾದಷ್ಟು ಬೇಗ ಮೆಗಾ ಪವರ್ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಬೇಕಿದೆ. ಇಷ್ಟಾಗಿಯೂ ಅಂತಹ ಯೋಜನೆಗಳನ್ನು ನೀಡುವಲ್ಲಿ ಯಾವುದೇ ಅನಗತ್ಯ ಪ್ರಭಾವವನ್ನು ಬಳಸಲಾಗುವುದಿಲ್ಲ. ದೊಡ್ಡ-ಪ್ರಮಾಣದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಪ್ರಸ್ತಾಪಗಳು ಸೀಮಿತವಾಗಿವೆ. ಸಂಸ್ಥೆಗಳ ಆಯ್ಕೆಗೆ ವಿಶೇಷ ಗಮನ ನೀಡಲಾಗುವುದು. ಸರ್ಕಾರ ಪಾರದರ್ಶಕವಾಗಿರಲಿದೆ” ಎಂದು ಅಧ್ಯಕ್ಷ ರಾಜಪಕ್ಸೆ ಅವರ ಕಚೇರಿ ಪ್ರತಿಕ್ರಿಯೆ ನೀಡಿದೆ.

ಶ್ರೀಲಂಕಾದ ದಿನಪತ್ರಿಕೆ ‘ದಿ ಮಾರ್ನಿಂಗ್‌’ಗೆ ಒಂದು ದಿನದ ನಂತರ ಹೇಳಿಕೆ ನೀಡಿರುವ ಫರ್ಡಿನಾಂಡೋ ಕ್ಷಮೆಯಾಚಿಸಿದ್ದಾರೆ. ಅನಿರೀಕ್ಷಿತ ಒತ್ತಡ ಹಾಗೂ ಭಾವನೆಗಳಿಂದಾಗಿ ಮೋದಿಯವರ ಹೆಸರು ಬಂತು ಎಂದಿದ್ದಾರೆ.

ಶ್ರೀಲಂಕಾ ತನ್ನ ಕಾನೂನುಗಳನ್ನು ಬದಲಾಯಿಸಿದ ಒಂದು ದಿನದ ನಂತರ ಮತ್ತು ಇಂಧನ ಯೋಜನೆಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್ ವ್ಯವಸ್ಥೆ ಕೈಬಿಟ್ಟ ನಂತರ ವಿವಾದ ಉಂಟಾಗಿದೆ. ಅದಾನಿ ಗ್ರೂಪ್‌ಗೆ ನೀಡಿರುವ ಮನ್ನಾರ್ ಎನರ್ಜಿ ಪ್ರಾಜೆಕ್ಟ್ ಗುತ್ತಿಗೆಯನ್ನು ಸುಗಮಗೊಳಿಸಲು ಸರ್ಕಾರ ಈ ಬದಲಾವಣೆ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇದನ್ನೂ ಓದಿರಿ: ಇತಿಹಾಸವನ್ನು ಯಾರಾದರೂ ಹೇಗೆ ಬದಲಾಯಿಸಬಹುದು?: ಅಮಿತ್ ಶಾ ಹೇಳಿಕೆ ನಿತೀಶ್ ಕುಮಾರ್‌ ಟಾಂಗ್

ವಿದ್ಯುತ್ ತಿದ್ದುಪಡಿ ಮಸೂದೆಯ ಸಂಸತ್ತಿನ ಚರ್ಚೆಯಲ್ಲಿ ಅದಾನಿ ಗುಂಪಿನ ವಿಚಾರ ಬಂದಿದೆ. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಮಸೂದೆ ಅಂಗೀಕಾರವಾಗಿದೆ.

ಲಂಕಾದಲ್ಲಿನ ಪ್ರಮುಖ ಪ್ರತಿಪಕ್ಷ ಎಸ್‌ಜೆಬಿ ಪ್ರತಿಕ್ರಿಯೆ ನೀಡಿದ್ದು, “10 ಮೆಘಾವ್ಯಾಟ್‌ ಸಾಮರ್ಥ್ಯದ ಆಚೆಗಿನ ಯೋಜನೆಗಳು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ಮೂಲಕ ನಿರ್ಧಾರವಾಗಬೇಕು” ಎಂದು ಒತ್ತಾಯಿಸಿತು. ಆದರೆ ಸರ್ಕಾರದ ಬಹುಪಾಲು ಸಂಸದರು ಈ ಷರತ್ತಿನ ವಿರುದ್ಧ ಮತ ಚಲಾಯಿಸಿದರು.

ಮನ್ನಾರ್ ಮತ್ತು ಪೂನೆರಿನ್‌ನಲ್ಲಿ ಎರಡು ಪವನ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಗುತ್ತಿಗೆಗಳನ್ನು ಅದಾನಿ ಗ್ರೂಪ್ ಡಿಸೆಂಬರ್‌ನಲ್ಲಿ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಗೌತಮ್ ಅದಾನಿ ಅಕ್ಟೋಬರ್‌ನಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಅಧ್ಯಕ್ಷ ರಾಜಪಕ್ಸೆ ಅವರ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ, ಹಳೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ: ಕೇಂದ್ರ

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಇಂದು ಪರಿಷ್ಕೃತ ನೀಟ್ ಯುಜಿ 2024 ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಊಹಾಪೋಹದ ನಂತರ, ಆರಂಭದಲ್ಲಿ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ,...