ಪ್ರವಾದಿ ಮುಹಮ್ಮದ್ ಕುರಿತ ಅವಹೇಳನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿಸಲು ಬುಲ್ಡೋಜರ್ ದಾಳಿ ನಡೆಸಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ (ಜೂನ್.16) ಛೀಮಾರಿ ಹಾಕಿದೆ.
“ಕೆಡವುವಿಕೆ ಎಂಬುದು ಕಾನೂನಿನ ಪ್ರಕಾರವಾಗಿರಬೇಕು, ಅವು ಪ್ರತೀಕಾರವಾಗಿರಬಾರದು” ಎಂದಿರುವ ಸುಪ್ರೀಂಕೋರ್ಟ್ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ, ಕಟ್ಟಡವನ್ನು ನೆಲಸಮ ಮಾಡುವುದನ್ನು ನಿಲ್ಲಿಸುವಂತೆ ಆದೇಶ ನೀಡಿಲ್ಲ. “ನಾವು ಕಟ್ಟಡ ಉರುಳಿಸುವಿಕೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ಅವರಿಗೆ ಕಾನೂನಿನ ಪ್ರಕಾರ ಹೋಗಿ ಎಂದು ಹೇಳಬಹುದು” ಎಂದು ನ್ಯಾಯಾಲಯ ಹೇಳಿದೆ.
ಜಮಿಯತ್ ಉಲಾಮಾ-ಇ-ಹಿಂದ್ (Jamiat Ulama-i-Hind) ಎಂಬ ಸಂಘಟನೆಯು ಬುಲ್ಡೋಜರ್ ದಾಳಿ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು, ಮನೆಗಳನ್ನು ಅಕ್ರಮವಾಗಿ ಧ್ವಂಸ ಮಾಡಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು.
ಇದನ್ನೂ ಓದಿ: ಹಿಂಸಾಚಾರದ ಆರೋಪ; ಮನೆ ನೆಲಸಮಗೊಳಿಸಿದ ಯುಪಿ ಸರ್ಕಾರ – ಅಫ್ರೀನ್ ಫಾತಿಮಾ ಯಾರು?
ಸಂಘಟನೆಯು, ’ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಬೇರೆ ಯಾವುದೇ ಕಟ್ಟಡವನ್ನು ಕೆಡವದಂತೆ ನೋಡಿಕೊಳ್ಳಲು ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರವಾದಿ ಮುಹಮ್ಮದ್ ಕುರಿತು ಇಬ್ಬರು ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಯೋಗಿ ಆದಿತ್ಯನಾಥ್ ಸರ್ಕಾರ ಇತ್ತೀಚೆಗೆ ಹಲವರು ಆಸ್ತಿ ಮೇಲೆ ಬುಲ್ಡೋಜರ್ ದಾಳಿ ನಡೆಸಿದೆ.
“ಈ ದಾಳಿಗಳು ಆಘಾತಕಾರಿ ಮತ್ತು ಭಯಾನಕ. ಮನೆಗಳನ್ನು ನೆಲಸಮಗೊಳಿಸಿದ ನಂತರ ನೋಟಿಸ್‌ಗಳನ್ನು ನೀಡಲಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಯಾವುದೇ ಕಟ್ಟಡವನ್ನು ನೆಲಸಮ ಮಾಡುವ ಮುನ್ನ ಯುಪಿ ಕಾನೂನಿನ ಪ್ರಕಾರ ಕನಿಷ್ಠ 15 ರಿಂದ 40 ದಿನಗಳ ಸೂಚನೆ ಅತ್ಯಗತ್ಯ” ಎಂದು ಅರ್ಜಿದಾರರ ಪರ ವಕೀಲ ಸಿ.ಯು ಸಿಂಗ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಯುಪಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ’ಕಟಟ್ಟಡಗಳನ್ನು ಕೆಡವಲು ಸರ್ಕಾರ ಕಾನೂನಿನ ಸರಿಯಾದ ಮಾರ್ಗಗಳನ್ನು ಅನುಸರಿಸಿದೆ. ಮಾಧ್ಯಮಗಳು ಅನಗತ್ಯವಾಗಿ ರಾಜಕೀಯ ಹೇಳಿಕೆಗಳೊಂದಿಗೆ ಪ್ರಕರಣವನ್ನು ಜೋಡಿಸುತ್ತವೆ” ಎಂದಿದ್ದಾರೆ.
ಅಕ್ರಮ ಬಂಧನ, ಮನೆಗಳ ಮೇಲೆ ಬುಲ್ಡೋಜರ್ ದಳಿ ಮತ್ತು ಪೊಲೀಸರ ಹಲ್ಲೆಯ ಆರೋಪಗಳ ಕುರಿತು ಗಮನಿಸುವಂತೆ ಕೆಲವು ಮಾಜಿ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಪತ್ರ ಬರೆದಿದ್ದರು. ಇದಾದ ಎರಡು ದಿನಗಳ ನಂತರ ನ್ಯಾಯಮೂರ್ತಿಗಳಾದ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರ ರಜಾಕಾಲದ ಪೀಠ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ: ಬುಲ್ಡೋಜರ್‌ಗಳಿಂದ ಮನೆಗಳ ನಾಶಕ್ಕೆ ತೀವ್ರ ವಿರೋಧ



ನಿಜವಾಗ್ಲೂ ಮನೆಗಳನ್ನು ಬುಲ್ಡೋಜರ್ ನಿಂದ ಏಕಪಕ್ಷೀಯವಾಗಿ ಕೆಡವಿಹಾಕುವುದು ಅವಿವೇಕತನದ ಪರಮಾವಧಿ. ಕೋರ್ಟು ಛೀಮಾರಿ ಹಾಕಿದ್ದು ನಾಚಿಕೆಗೇಡು…..
Hagadre terrorist galu bere Jana gala mele manaso icchhe kallu turuvudu enough? Nivu yava bhrama loka dalli idira
Yogi act is correct.We like his act