Homeಮುಖಪುಟಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ: ಬುಲ್ಡೋಜರ್‌ಗಳಿಂದ ಮನೆಗಳ ನಾಶಕ್ಕೆ ತೀವ್ರ ವಿರೋಧ

ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ: ಬುಲ್ಡೋಜರ್‌ಗಳಿಂದ ಮನೆಗಳ ನಾಶಕ್ಕೆ ತೀವ್ರ ವಿರೋಧ

- Advertisement -
- Advertisement -

ರಾಜಕೀಯ ವಿರೋಧಿಗಳನ್ನು, ಹೋರಾಟಗಾರರನ್ನು ಮಣಿಸಲು ಉತ್ತರ ಪ್ರದೇಶ ಸರ್ಕಾರವು ಮುಸ್ಲಿಂ ಸಮುದಾಯದ ಮನೆಗಳ ಮೇಲೆ ಬುಲ್ಡೋಜರ್ ಹರಿಸುತ್ತಿರುವುದಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

“ಬಿಜೆಪಿ ಆಡಳಿತದ ಸಮಯದಲ್ಲಿ ‘ಬುಲ್ಡೋಜರ್’ ಎಂಬುದು ಪ್ರಭುತ್ವ ಭಯೋತ್ಪಾದನೆಯ ಸಂಕೇತವಾಗಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮನೆಗಳನ್ನು ಕೆಡವಿರುವುದು ಅಮಾನುಷವಾಗಿದೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಪ್ರತಿಭಟಿಸುವ ನಾಗರಿಕರನ್ನು ಗುರಿಯಾಗಿಸಲು ಬಿಜೆಪಿ ಹೊಸ ತಂತ್ರಗಳನ್ನು ಹೂಡುತ್ತಿದೆ. ಆದರೆ ನಾವು ಸಂತ್ರಸ್ತ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ರಾಜ್ಯವು ಮನೆಗಳನ್ನು ಕೆಡವುವ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವುದು ತುರ್ತು ಮತ್ತು ಅನಿವಾರ್ಯ ಎಂದು ಭಾವಿಸದ ಭಾರತೀಯ ನ್ಯಾಯಾಲಯಗಳ ಬಗ್ಗೆ ನಾಚಿಕೆಯಾಗುತ್ತದೆ. Honourable my foot!” ಎಂದು ಸಂಗೀತಗಾರ, ಲೇಖಕ ಟಿ.ಎಂ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ದೇಶದ ನ್ಯಾಯಾಲಯವು ಭಾರತದ ಜನರ ವಿಶ್ವಾಸವನ್ನು ಕಳೆದುಕೊಂಡಿದೆಯೇ? ಇದು ಅಪಾಯಕಾರಿ ಆಟ, ನ್ಯಾಯಾಂಗವು ಈ ಬಗ್ಗೆ ಯೋಚಿಸಬೇಕು.” ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ಹಲವು ಪ್ರದೇಶಗಳಲ್ಲಿ ಮುಸ್ಲಿಂ ಹೋರಾಟಗಾರರ ಮನೆಗಳನ್ನು ಕೆಡವುತ್ತಿದೆ. ಮುಸ್ಲಿಂ ಮುಖಂಡರಾದ ಜಾಫರ್ ಹಯಾತ್ ಹಶ್ಮಿ, ಮೊಹಮ್ಮದ್ ಇಶ್ತಿಯಾಕ್, ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಎಂಬುವವರ ಮನೆಗಳನ್ನು ಧ್ವಂಸಗೊಳಿಸಿ, ಪೊಲೀಸರು ಅದನ್ನು ಸಂಭ್ರಮದಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಮುಂದುವರಿದು ಸಿಎಎ ವಿರೋಧಿ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಮತ್ತು ಅವರ ತಂದೆ ಜಾವೇದ್ ಮೊಹಮ್ಮದ್‌ರವರ ಮನೆ ಮೇಲೆಯೂ ಬುಲ್ಡೋಜರ್ ಹರಿಸಿ ತಮ್ಮ ವಿರುದ್ಧ ಹೋರಾಡಬೇಡಿ ಎಂಬ ಸಂದೇಶ ನೀಡುತ್ತಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ; ಇತಿಹಾಸ ಏನು ಹೇಳುತ್ತದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಲು ಸಂವಿಧಾನ ಹೇಳಿದೆಯೆ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...