ಕ್ಲಬ್ ಹೌಸ್ ಚರ್ಚೆಯ ತಿರುಚಿದ ವಿಡಿಯೋ ಪ್ರಸಾರ ಮಾಡಿ ನನ್ನ ತೇಜೋವಧೆ ಮಾಡಲಾಗಿದೆ. ನನ್ನ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರ್‌ನಾಥ್‌ರವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೂನ್ 16ರ ಸಂಜೆ ಕ್ಲಬ್‌ಹೌಸ್ ಚರ್ಚೆಯಲ್ಲಿ ಶ್ರೀರಾಮ, ಸೀತೆ ಹಾಗೂ ಹನುಮಂತ ದೇವರನ್ನು ಅವಹೇಳನ ಮಾಡಿದ್ದೇನೆ ಎಂದು ನನ್ನ ಧ್ವನಿಯನ್ನು ಬಳಸಿ ವಿಕ್ರಮ ಟಿವಿ ತಿರುಚಿದ ವಿಡಿಯೋ ಪ್ರಕಟಿಸಿದೆ. ಅದನ್ನೆ ಬಿಜೆಪಿ ಪಕ್ಷವು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ತೇಜೋವಧೆ ಮಾಡಿದೆ. ಇದರಿಂದಾಗಿ ದುಷ್ಕರ್ಮಿಗಳು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ 16 ರಂದು ನಾನು ಯಾವುದೇ ಕ್ಲಬ್‌ಹೌಸ್ ಚರ್ಚೆಯಲ್ಲಿ ಭಾಗವಹಿಸಿಲ್ಲ. ಅಂದು ನಾನು ನನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದೆ. ಈ ಕುರಿತು ಯಾವುದೇ ತನಿಖೆಗೆ ಸಿದ್ದವಿದ್ದೇನೆ. ಆದರೆ ಪೊಲೀಸರು ತನಿಖೆ ಮಾಡುತ್ತಿಲ್ಲ ಏಕೆ? ನಾನು ದೇವರ ಭಕ್ತೆಯಾಗಿದ್ದು, ಯಾವುದೇ ಕಾರಣಕ್ಕೂ ದೇವರಿಗೆ ಅವಹೇಳನ ಮಾಡುವ ಹೆಣ್ಣುಮಗಳಲ್ಲ. ಶ್ರೀರಾಮ ಸೀತೆ, ಪುತ್ತೂರು ಮಹಾಲಿಂಗೇಶ್ವರ ದೇವರ ಸಹಿತ ಎಲ್ಲಾ ದೇವರುಗಳನ್ನು ನಂಬುವ ಹಾಗೂ ಹಿಂದೂ ಸಂಪ್ರದಾಯ-ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಮಹಿಳೆಯಾಗಿದ್ದೇನೆ. ನಾನು ಹಿಂದು ಧರ್ಮೀಯಳು ಹೌದೋ, ಅಲ್ಲವೋ ಅನ್ನುವುದಕ್ಕೆ ಯಾವುದೊ ಯುಟ್ಯೂಬ್ ಚಾನೆಲ್ ಅಥವಾ ಯಾವುದೇ ಸಂಘಟನೆಗಳ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಡಿಕೆಶಿ ಅವರೇ, ನೀವು ಕೂಡಾ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ?
ಹಿಂದೂ ದೇವ- ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ.
ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ?#ResignDKS pic.twitter.com/yS6kwSpAu9
— BJP Karnataka (@BJP4Karnataka) June 19, 2022
ಕ್ಲಬ್ ಹೌಸ್‌ನಲ್ಲಿ ಹಿಂದೆ ನಡೆದ ಚರ್ಚೆಯನ್ನು ತಿರುಚಿ, ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಿದ ವಿಕ್ರಮ ಯುಟ್ಯೂಬ್ ಚಾನೆಲ್ ಮತ್ತು ನಿರೂಪಕಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದೇನೆ. ನನ್ನ ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದೇನೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸುವ ಬದಲು ಸುಮ್ಮನಿದ್ದಾರೆ. ನನಗೆ 48 ಗಂಟೆಯೊಳಗೆ ನ್ಯಾಯ ಸಿಗದಿದ್ದರೆ ನನ್ನನ್ನು ಬಂಧಿಸಿ ಎಂದು ಪೊಲೀಸ್ ಠಾಣೆ ಎದುರು ಧರಣಿ ಕೂರುತ್ತೇನೆ. ಜಾಮೀನು ಕೂಡ ಪಡೆಯುವುದಿಲ್ಲ. ಇಡೀ ಪ್ರಕರಣದ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಡುತ್ತೇನೆ ಎಂದರು.
ನಾನು ಅಧರ್ಮಿ ಅಲ್ಲವೇ ಅಲ್ಲ. ಅದೇ ರೀತಿ ನಾನು ಹೆಮ್ಮೆಯ ಕಾಂಗ್ರೆಸಿಗಳು ಸಹ ಹೌದು. ಸಮಾಜದಲ್ಲಿ ಸಮಾನತೆಗಾಗಿ ಹೋರಾಡುತ್ತೇನೆ. ಆದರೆ ಬಿಜೆಪಿ ಧರ್ಮದ ಹೆಸರಲ್ಲಿ ಅಧರ್ಮ ಮಾಡುತ್ತಿದೆ. ಬಿಜೆಪಿ ಓಟು ಗಿಟ್ಟಿಸುವ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿದೆ ಎಂದು ಕಿಡಿಕಾರಿದರು.
ಇನ್ನು ನಾನು ಕ್ಷಮೆಯಾಚಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ತಪ್ಪು ಮಾಡಿಲ್ಲದ ನಾನ್ಯಾಕೆ ಕ್ಷಮೆ ಕೇಳಬೇಕು? ತನ್ನ ಪಟಲಾಂ ಬಿಟ್ಟು ಮಹಿಳೆಯ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ನಾನು ನಿಧನ ಹೊಂದಿದ್ದೇನೆ ಎಂದು ಬ್ಯಾನರ್ ಹಾಕಿ ಕ್ಷೇತ್ರದ ವ್ಯಾಪ್ತಿಯ ಮಹಿಳೆಯೊಬ್ಬಳ ತೇಜೋವಧೆ ಮಾಡುತ್ತಿರುವಾಗ ಸೂಕ್ತ ಭದ್ರತೆ ಒದಗಿಸದ ಶಾಸಕರೇ ಕ್ಷಮೆ ಯಾಚಿಸಬೇಕು. ನಾನು ಯಾವುದೇ ದೇವರಿಗೆ ಅವಹೇಳನ ಮಾಡಿಲ್ಲ. ನನಗೆ ದೇವರ ಬೆಂಬಲ ಇದೆ. ಶ್ರೀರಾಮಚಂದ್ರನೇ ನನ್ನನ್ನು ರಕ್ಷಿಸುತ್ತಾನೆ ಎಂದರು.
ಇದನ್ನೂ ಓದಿ: ಬೆಂಗಳೂರು: ವಲಸೆ ಕಾರ್ಮಿಕರ ಮೇಲೆ ಪೊಲೀಸ್ ದೌರ್ಜನ್ಯ; ದೂರು ದಾಖಲು



ಹಿಂದೂ ದೇವತೆಗಳಾದ ಶ್ರೀರಾಮ,ಸೀತೆ,ಹನುಮಂತ ಇವರುಗಳ ಬಗ್ಗೆ ಹೀಯಾಳಿಸಿದ ಇಂತ ಬೇವರ್ಸಿ ಹಂದಿಗಳನ್ನು ಸಿಕ್ಕ ಲ್ಲಿ ಗುಂಡುಹಿಟ್ಟು ಕೊಲ್ಲಬೇಕಿದೆ ,ಗುಲಾಮರ ತಳಿಗಳಿಂದ ಮಾತ್ರ ಇಂತ ಹೇಳಿಕೆಗಳು ಬರಲು ಸಾಧ್ಯ
ಶೈಲಜಾ ಅಮರನಾಥ್ ನಿಮ್ಮ ನ್ಯಾಯಯುತ ಹೆಜ್ಜೆಗೆ ನಮ್ಮ ಬೆಂಬಲವಿದೆ , ರಾಮ ಸೀತೆ ಹನುಮಂತಪ್ಪ ರನ್ನು ಯಾರಿಗೂ ಸ್ವಂತಕ್ಕೆ ಬಿಟ್ಟು ಕೊಟ್ಟಿಲ್ಲ ,ಈ ದೇಶದ ಜನರ ನಡೆನುಡಿಗಳಲ್ಲಿ ಬೆರೆತುಹೋಗಿದ್ದಾರೆ .
ಶೈಲಜಾರವರ ವಿರುದ್ಧದ ಈ ದೌರ್ಜನ್ಯ, ದಬ್ಬಾಳಿಕೆ ಕಂಡನಾರ್ಹ.