Homeಚಳವಳಿಪಠ್ಯ ಪರಿಷ್ಕರಣೆ ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು: ಸಿಎಂಗೆ ನಿರಂಜನಾರಾಧ್ಯರ ಪತ್ರ

ಪಠ್ಯ ಪರಿಷ್ಕರಣೆ ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು: ಸಿಎಂಗೆ ನಿರಂಜನಾರಾಧ್ಯರ ಪತ್ರ

ಸಮಿತಿಗೆ ಕೇವಲ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ವರದಿ ನೀಡುವ ಅಧಿಕಾರವನ್ನು ಮಾತ್ರ ನೀಡಿತ್ತು. ಹೀಗಾಗಿ, ಪರಿಷ್ಕರಣೆಗೆ ಸರ್ಕಾರದ ಅನುಮತಿ ಇಲ್ಲವಾದ್ದರಿಂದ ಇಡೀ ಪ್ರಕ್ರಿಯೆಯೆ ಅಸಂವಿಧಾನಿಕ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಬದಲಾವಣೆಗಳಿಗೆ ಮುಕ್ತವಾಗಿದ್ದೇವೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿಯರವರಿಗೆ ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರು ಪತ್ರ ಬರೆದಿದ್ದು, ಇಡೀ ಪ್ರಕ್ರಿಯೆಯು ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು ಮತ್ತು ಅಪಮೌಲ್ಯದಿಂದ ಕೂಡಿವೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲದ ಗೂಡಾಗಿ ಲಕ್ಷಾಂತರ ಮಕ್ಕಳ ಕಲಿಕೆ ನೆನೆಗುದಿಗೆ ಬಿದ್ದಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ಮಕ್ಕಳ ಕಲಿಕೆ ಹಾಗು ಶಿಕ್ಷಣದ ಹಕ್ಕನ್ನು ಗೌರವಿಸಿ ಎತ್ತಿ ಹಿಡಿಯಬೇಕಿದೆ. ಈ ಕುರಿತು ಮೇ 22 ರಂದೇ ತಮಗೆ ಪತ್ರ ಬರೆದಿದ್ದೇನೆ. ಆದರೆ ವಿಳಂಬವಾದರೂ ಸಹ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಪರಿಷ್ಕೃತ ಪುಸ್ತಕಗಳನ್ನು ಕೈಬಿಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಅಪ್ರಬುದ್ಧ -ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು –ಅಪಮೌಲ್ಯದ ಪ್ರಕ್ರಿಯೆಯ ಮೂಲಕ ನಡೆದ ಪಠ್ಯ ಪರಿಷ್ಕರಣಾ ವಿಷಯದಲ್ಲಿ ತಾವು ಒಂದು ವಸ್ತುನಿಷ್ಟ ತೀರ್ಮಾನ ತೆಗೆದುಕೊಳ್ಳಲು, ಕಳೆದ 35 ವರ್ಷಗಳಿಂದ ಶಾಲಾ ಶಿಕ್ಷಣದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು, ನನ್ನ ಅನುಭವದಲ್ಲಿ ಕೆಲವೊಂದು ಸತ್ಯ ಆಧಾರಿತ ವಸ್ತುನಿಷ್ಟ ಮುಖ್ಯಾಂಶಗಳನ್ನು ಸಕಾರಣಗಳೊಂದಿಗೆ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪರಿಶೀಲನೆಗೆ ಸಮಿತಿ ರಚಿಸುವ ಮುನ್ನವೇ ಇಲಾಖೆಯು ವಿವಾದಿತ ವಿಷಯಾಂಶಗಳನ್ನು ಬೋಧನೆ-ಕಲಿಕೆಗೆ/ಮೌಲ್ಯ ಮಾಪನಕ್ಕೆ ಪರಿಗಣಿಸದಿರಲು ಇಲಾಖೆಯು ದಿನಾಂಕ:17.02.2021ರಂದು ಸುತ್ತೋಲೆ ಹೊರಡಿಸಿದೆ. ಸಮಾಲೋಚನೆ-ಪರಿಶೀಲನೆಯೇ ಇಲ್ಲದೆ ಏಕಾಏಕಿ ಸುತ್ತೋಲೆ ಹೊರಡಿಸಿದ್ದು ಆತುರದ ಸರ್ವಾಧಿಕಾರದ ಅಪ್ರಬುದ್ಧ ತೀರ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ದಿನಾಂಕ:08.09.2021 ರಂದು ಸರ್ಕಾರ ಸಮಿತಿ ರಚಿಸಲು ಹೊರಡಿಸಿದ ಆದೇಶದಲ್ಲಿ ಸಮಿತಿಗೆ ಕೇವಲ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ವರದಿ ನೀಡುವ ಅಧಿಕಾರವನ್ನು ಮಾತ್ರ ನೀಡಿತ್ತು. ಹೀಗಾಗಿ, ಪರಿಷ್ಕರಣೆಗೆ ಸರ್ಕಾರದ ಅನುಮತಿ ಇಲ್ಲವಾದ್ದರಿಂದ ಇಡೀ ಪಠ್ಯ ಪರಿಷ್ಕರಣಾ ಪ್ರಕ್ರಿಯೆಯು ಅಸಂವಿಧಾನಿಕ ಮತ್ತು ಆದೇಶರಹಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪರಿಷ್ಕರಣೆಗೆ ಆದೇಶವೇ ಇರಲಿಲ್ಲ. ಜೊತೆಗೆ, ಯಾವುದೇ ಒಪ್ಪಿತ ಪಠ್ಯಕ್ರಮ ಚೌಕಟ್ಟು, ಪಠ್ಯವಸ್ತು ಮತ್ತು ನಿರ್ಧಿಷ್ಟ ಮಾರ್ಗ ಸೂಚಿಯಿಲ್ಲದೆ ಹಾಗು ನೀತಿ-ನಿಯಮಗಳಿಲ್ಲದೆ ಪರಿಷ್ಕರಣೆಯನ್ನು ಮಾಡಿದ್ದು ಒಪ್ಪಿತ ವಿಧಾನವಲ್ಲ. ಈ ಹಿಂದೆ ರೂಪಿಸಿದ ಭಾಷಾ ಹಾಗು ಸಮಾಜ ವಿಜ್ಞಾನ ಪುಸ್ತಕಗಳಲ್ಲಿ ದೋಷಗಳಿದ್ದರೆ, ಅಯಾ ಲೇಖಕರು ಮತ್ತು ಇತಿಹಾಸಕಾರರರ ಜೊತೆ ಮುಖಾಮುಖಿಯಾಗಿ ಚರ್ಚಿಸಿ, ಸರಿ-ತಪ್ಪುಗಳನ್ನು ಪ್ರಜಾಸತ್ತಾತ್ಮಕವಾಗಿ ಸಮಾಲೋಚಿಸಿ ಪರಿಷ್ಕರಣೆ ನಡೆಯಬೇಕಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಹಿಂದಿನ ಪರಿಷ್ಕರಣೆಯಲ್ಲಿ ದೋಷಗಳಿದ್ದರೆ ಅದು ಸಹಜ ನ್ಯಾಯ ತತ್ವಗಳನ್ನು ಅನುಸರಿಸಿ ತೀರ್ಮಾನಿಸಬೇಕಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಗೌರವಿಸಿ ಅದರಂತೆ ಪ್ರಜಾಸತ್ತಾತ್ಮಕವಾಗಿ ನಡೆಯಬೇಕಿತ್ತು. ಇದಾವ ಪ್ರಕ್ರಿಯೆ ನಡೆದಿಲ್ಲದ ಕಾರಣ ಇದು ಅಪ್ರಜಾಸತ್ತಾತ್ಮಕ ಎಂದು ಅವರು ದೂರಿದ್ದಾರೆ.

ಪರಿಶೀಲನೆ/ಪರಿಷ್ಕರಣೆ ಪ್ರಾರಂಭವಾದಾಗಿನಿಂದಲೂ, ಪರಿಶೀಲನೆ/ಪರಿಷ್ಕರಣೆಗೆ ಸಕಾರಣಗಳಾಗಲಿ, ಪ್ರಕ್ರಿಯೆ ನಡೆದ ನಡಾವಳಿಗಳಾಗಳಿ, ಪರೀಶೀಲಿಸಿದ ನಂತರ ಪರಿಶೀಲನೆಯ ವರದಿಯಾಗಲಿ, ಎಲ್ಲಾ ಆದೇಶ-ವರದಿಗಳನ್ನು ಸಾರ್ವಜನಿಕ ಚರ್ಚೆಗಾಗಲಿ ದೊರಕದಂತೆ ಮಾಡುವ ಮೂಲಕ ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿ ಮಾಡಲಾಗಿದೆ. ಆದ್ದರಿಂದ ಇದು ಅಪಾರದರ್ಶಕವಾಗಿದೆ ಎಂದು ನಿರಂಜನಾರಾಧ್ಯರು ಹೇಳಿದ್ದಾರೆ.

3 ಮತ್ತು 4ನೇ ತರಗತಿಯ ಪರಿಸರ ಅಧ್ಯಯನ, 1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯಗಳು ಮತ್ತು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳನ್ನು ಆದೇಶವಿಲ್ಲದೆ ಪರಿಷ್ಕರಿಸಿ, ನಂತರ ದಿನಾಂಕ 27.01.2022ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆದೇಶ ರಹಿತ ಪರಿಷ್ಕರಣೆಯನ್ನು ತಮ್ಮ ಗಮನಕ್ಕಾಗಲಿ ಅಥವಾ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆಯದೆ ಸಚಿವರೇ ಅನುಮೋದಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ತೀರ್ಮಾನದಂತೆ ದಿನಾಂಕ 19.03.2022 ರಂದು ಪಠ್ಯ ಪುಸ್ತಕಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿದ ಸರ್ಕಾರಿ ಆದೇಶದಲ್ಲಿ “ಕನ್ನಡ ಭಾಷೆ, ಪರಿಸರ ಅಧ್ಯಯನ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ಲೇಖಕರು/ಕವಿಗಳು, ಚಿತ್ರಗಳು, ಭೂಪಟಗಳು , ನಕ್ಷೆಗಳು ಹಾಗು ಆಧಾರಗಳಿಗೆ ಸಮಿತಿ ಅಧ್ಯಕ್ಷರು ಹಾಗು ಸದಸ್ಯರು ಜವಾಬ್ದಾರರಾಗಿದ್ದು, ಪಠ್ಯಪುಸ್ತಕಗಳಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ ಶ್ರೀ ರೋಹಿತ್ ಚಕ್ರತೀರ್ಥ ಸಮಿತಿ ಅಧ್ಯಕ್ಷರು ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆ” ಎಂದು ಬರೆದಿದೆ. ಇದು ಸರಕಾರದ ಅಧಿಕೃತ ತೀರ್ಮಾನವಾದರೆ ಪಠ್ಯಪುಸ್ತಕಗಳ ಪರಿಷ್ಕರಣೆ ಅಸಿಂಧು ಹಾಗು ಅಮಾನ್ಯವಾಗಿವೆ ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ; ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಈ ಪರಿಷ್ಕರಣೆಯ ಹೆಸರಲ್ಲಿ ನಾಡಿನ ಹಾಗು ದೇಶದ ದಾರ್ಶನಿಕರನ್ನು ಅವಮಾನಿಸಿ, ಅವರ ವಿಚಾರಗಳನ್ನು ತಿರುಚಿರುವುದಲ್ಲದೆ, ಇತಿಹಾಸವನ್ನು ತನಗೆ ಇಷ್ಟಬಂದ ರೀತಿಯಲ್ಲ ಯಾವುದೇ ಸಾಕ್ಷಿ-ಆಧಾರ ಪುರಾವೆಗಳಿಲ್ಲದೆ ಬದಲಾಯಿಸಿದೆ. ಭಾಷಾ ವಿಷಯಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಗೌಣಗೊಳಿಸಿ ವಿವಾದಾತ್ಮಕ ಪಾಠಗಳನ್ನು ಸೇರಿಸಿ, ಹಿಂದಿನ ಲೇಖಕರ ಪಾಠ/ಪದ್ಯಗಳನ್ನು ಕೈಬಿಟ್ಟಿದೆ. ಒಟ್ಟಾರೆ, ಈ ಪ್ರಕ್ರಿಯೆ ಮೂಲಕ ಪಠ್ಯಪುಸ್ತಕ ಹಾಗು ಅವುಗಳಲ್ಲಿನ ವಿಷಯಗಳನ್ನು ಅಪಮೌಲ್ಯಗೊಳಿಸಿದೆ.

ಈಗಿನ ಪರಿಷ್ಕರಣಾ ಕ್ರಮ, ವಿಧಾನ ಮತ್ತು ವಿಷಯಗಳ ಆಯ್ಕೆಯಲ್ಲಿ ಗೊಂದಲ ಹಾಗು ಸಾಂವಿಧಾನಿಕ ಸಂಘರ್ಷ ಉಂಟಾಗಿದೆ. ಈ ಎಲ್ಲಾ ಕಾರಣಗಳಿಂದ ಈಗಿನ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ಈ ಹಿಂದೆ ರಚನೆಯಾಗಿದ್ದ ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ನಾಡಿನ ಪ್ರಜ್ಞಾವಂತ ಜನರ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರು ಆದ ನಿರಂಜನಾರಾಧ್ಯರು ಮನವಿ ಮಾಡಿದ್ದಾರೆ.

ಅಲ್ಲದೆ ಪಠ್ಯ ಪರಿಷ್ಕರಣೆಗೆ ಯುನೇಸ್ಕೊ ವರದಿಗಳು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಭಾರತೀಯ ಸಂವಿಧಾನದ ಮುನ್ನಡಿ ಆಧಾರದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕೆಂದು ಸಹ ತಮ್ಮ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...