Homeರಾಷ್ಟ್ರೀಯಬಿಹಾರದ ರಾಷ್ಟ್ರೀಯ ಹೆದ್ದಾರಿ: ನೂರು ಅಡಿ ಸುತ್ತಲತೆಯ ದೊಡ್ಡ ಹತ್ತಾರು ಹೊಂಡಗಳು!

ಬಿಹಾರದ ರಾಷ್ಟ್ರೀಯ ಹೆದ್ದಾರಿ: ನೂರು ಅಡಿ ಸುತ್ತಲತೆಯ ದೊಡ್ಡ ಹತ್ತಾರು ಹೊಂಡಗಳು!

ಸಚಿವ ನಿತಿನ್ ಗಡ್ಕರಿ ಬಿಹಾರದ ರಸ್ತೆ ಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಅಮೆರಿಕಾದ ರಸ್ತೆಗೆ ಸಮನಾಗಿರುತ್ತದೆ ಎಂದು ಹೇಳಿದ್ದರು

- Advertisement -
- Advertisement -

100 ಅಡಿ ಸುತ್ತಲತೆಯಷ್ಟು ಬೃಹತ್‌ ಹೊಂಡಗಳಿರುವ ರಸ್ತೆಯೊಂದರ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೇಶದ ರಸ್ತೆಯ ಸ್ಥಿತಿಯನ್ನು ಬಿಚ್ಚಿಟ್ಟಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ಅವರು ಚಿತ್ರೀಕರಿಸಿದ ವೈಮಾನಿಕ ವಿಡಿಯೊದಲ್ಲಿ ಬಿಹಾರದ ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227ಯ ಆತಂಕಕಾರಿ ಸ್ಥಿತಿ ಬಯಲಾಗಿದೆ.

ಸಂಪೂರ್ಣವಾಗಿ ಕೆಟ್ಟು ಹೋಗಿರುವ ಈ ರಸ್ತೆಯಲ್ಲಿ ವಾಹನಗಳು ಓಡಾಡುವ ದೃಶ್ಯಗಳೂ ವಿಡಿಯೊದಲ್ಲಿ ಕಾಣುತ್ತಿದೆ. ರಸ್ತೆಯ ಸ್ಥಿತಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಅವರು ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“90 ರ ದಶಕದ ಜಂಗಲ್ ರಾಜ್‌ನ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತದೆ. ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227 (ಎಲ್) ಆಗಿದೆ. ಇತ್ತೀಚೆಗೆ, ನಿತೀಶ್ ಕುಮಾರ್ ಅವರು ರಸ್ತೆ ನಿರ್ಮಾಣ ವಿಭಾಗದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಅವರು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದ್ದರು” ಎಂದು ಪ್ರಶಾಂತ್‌ ವಿಡಿಯೊವೊಂದಿಗೆ ಟ್ವೀಟ್ ಮಾಡಿದ್ದಾರೆ.

“2015ರಿಂದಲೂ ಈ ರಸ್ತೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ದುರಸ್ತಿಗೆ ಇದುವರೆಗೆ ಮೂರು ಬಾರಿ ಟೆಂಡರ್‌ ಕರೆದರೂ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ” ಎಂದು ದೈನಿಕ್ ಭಾಸ್ಕರ್ ಪತ್ರಿಕೆಯ ವರದಿ ಹೇಳಿದೆ.

 

ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಒಕ್ಕೂಟ ಸರ್ಕಾರದ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಅಮೆರಿಕಾದ ರಸ್ತೆಗೆ ಸಮನಾಗಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ : ಸಂತ್ರಸ್ತೆಯ ವಿಡಿಯೋ ಹಂಚಿಕೊಂಡಿದ್ದ ಬಿಜೆಪಿ ಶಾಸಕನ ಮೇಲೆ FIR

“ಕಳೆದ ಕೆಲವು ವರ್ಷಗಳಲ್ಲಿ ಬಿಹಾರದ ರಸ್ತೆ ಜಾಲವು ಮಹತ್ತರವಾದ ಸುಧಾರಣೆಯನ್ನು ಕಂಡಿದೆ” ಎಂದು ಅವರು ಹಾಜಿಪುರದಲ್ಲಿ ಗಂಗಾ ನದಿಯ ಮೇಲೆ ಪುನರ್ನಿರ್ಮಿಸಿದ ಮಹಾತ್ಮ ಗಾಂಧಿ ಸೇತುವಿನ ಪೂರ್ವ ಪಾರ್ಶ್ವವನ್ನು ಉದ್ಘಾಟಿಸಿ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...