Homeಮುಖಪುಟಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮಾಧ್ಯಮಗಳು ಸಹಾಯ ಮಾಡುತ್ತಿವೆ. ಆದರೆ ಜನರು ಈ ಕುರಿತು ಆಲೋಚಿಸುತ್ತಿಲ್ಲ.

ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮಾಧ್ಯಮಗಳು ಸಹಾಯ ಮಾಡುತ್ತಿವೆ. ಆದರೆ ಜನರು ಈ ಕುರಿತು ಆಲೋಚಿಸುತ್ತಿಲ್ಲ.

- Advertisement -
- Advertisement -

ಭಾರತದಲ್ಲಿ ಮತದಾನ ಹೇಗೆ ನಡೆಯುತ್ತದೆ: ಮಾಧ್ಯಮಗಳು ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡುತ್ತಿವೆ. ಆದರೆ ಜನರು ಈ ಕುರಿತು ಆಲೋಚಿಸುತ್ತಿಲ್ಲ.

ಭಾರತದ ಜನ ಬಿಜೆಪಿಗೆ ಓಟ್ ಮಾಡುವಂತೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಿವೆ. ಆದರೆ ಸುದ್ಧಿಗಳನ್ನು ಬಿತ್ತರಿಸುವಲ್ಲಿ ಮಾಧ್ಯಮಗಳು ಮಾಡುತ್ತಿರುವ ರಾಜಕೀಯ ಪಕ್ಷಪಾತದ ಬಗ್ಗೆ ಜನರು ಆಲೋಚಿಸುತ್ತಿಲ್ಲ ಎಂದು ಸಮೀಕ್ಷೆಗಳು ತೋರಿಸುತ್ತಿವೆ.

ಕಳೆದ ಐದು ವರ್ಷಗಳಿಂದ ಈಚೆಗೆ, ಭಾರತದ ಮಾಧ್ಯಮಗಳು ಆಡಳಿತ ಪಕ್ಷವನ್ನು ಮತ್ತು ಹಿಂದಿಗಿಂತಲೂ ಇಂದು ಹೆಚ್ಚಾಗಿ ಅದರ ನಾಯಕನ ಭಜನೆ ಮಾಡುವುದರಲ್ಲಿ ತನ್ನ ವಸ್ತುನಿಷ್ಠತೆಯನ್ನು ಕಳೆದುಕೊಂಡಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. 2019ರ ಚುನಾವಣೆಯ ಮೇಲೆ ಮಾಧ್ಯಮಗಳ ಈ ಪಕ್ಷಪಾತದ ಪರಿಣಾಮ ಗಂಭೀರವಾದದ್ದು.

 

ಭಾರತದ ಜನ ಅತಿ ಹೆಚ್ಚಾಗಿ ತಮ್ಮನ್ನು ತಾವು ಮಾಧ್ಯಮಗಳಿಗೆ, ಮುಖ್ಯವಾಗಿ ಹಿಂದಿ ಮಾಧ್ಯಮಗಳಿಗೆ ತೆರೆದುಕೊಂಡಿದ್ದಾರೆ. ಗಮನಾರ್ಹ ಸಂಖ್ಯೆಯ ಜನ ಇದರ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ಅಂತವರು ಭಾರತೀಯ ಜನತಾ ಪಕ್ಷವನ್ನು ತಮ್ಮ ಆಯ್ಕೆಯಾಗಿ ಆರಿಸಿಕೊಂಡಿದ್ದಾರೆ.

ಅಭಿವೃದ್ದಿಶೀಲ ಸಮಾಜಗಳ ಅಧ್ಯಯನಕ್ಕಾಗಿ ಲೋಕನೀತಿ ಕೇಂದ್ರವು ರಾಷ್ಟ್ರೀಯ ಚುನಾವಣೆಗಳ ಅಧ್ಯಯನವನ್ನು ನಡೆಸಿದೆ. ಇದರಲ್ಲಿ 20 ವರ್ಷದ ದತ್ತಾಂಶಗಳನ್ನೊಳಗೊಂಡ ಗ್ರಾಫ್, ಭಾರತದ ಜನರು ವಾರ್ತೆ ಹಾಗೂ ಸುದ್ಧಿಗಳಿಗಾಗಿ ಪತ್ರಿಕೆ, ಟಿವಿ ಮತ್ತು ರೇಡಿಯೋಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಭಾರತದಲ್ಲಿ ದೂರದರ್ಶನವು ಸುದ್ಧಿಯನ್ನು ಪಡೆಯಲು ಹೆಚ್ಚು ಜನಪ್ರಿಯ ಮೂಲವಾಗಿ ಉಳಿದುಕೊಂಡಿದೆ: NES ಅಧ್ಯಯನದ ಪ್ರಕಾರ ಪ್ರತಿದಿನ 46% ಜನ ಟಿವಿಯನ್ನು ವೀಕ್ಷಿಸುತ್ತಿದ್ದಾರೆ. 26% ಪತ್ರಿಕೆಗಳ ಮೂಲಕ ಸುದ್ಧಿಯನ್ನು ಪಡೆಯುತ್ತಿದ್ದಾರೆ. 2014ರ ಓಇS ಅಧ್ಯಯನದ ಪ್ರಕಾರ, ಅಂತರ್ಜಾಲವು ಸುದ್ಧಿಗಳನ್ನು ಪಡೆಯುವುದಕ್ಕಾಗಿ ಬೆಳೆಯುತ್ತಿರುವ ಮೂಲವಾಗಿದೆ, ರೇಡಿಯೋ ಇಂದು ಎರಡು ಪಟ್ಟು ಜನಪ್ರಿಯಗೊಂಡಿದೆ.

ಆದಾಗ್ಯೂ, 2017ರಲ್ಲಿ Pew Global Attitudes ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 16% ಜನರು ಅಂತರ್ಜಾಲದ ಮೂಲಕ ಸುದ್ಧಿಗಳನ್ನು ಪಡೆಯುತ್ತಿದ್ದಾರೆ. ಅಂತರ್ಜಾಲವನ್ನು ಬಳಸುತ್ತಿರುವ ವರ್ಗದಲ್ಲಿ ಯುವಕರು, ಶ್ರೀಮಂತರು, ಉತ್ತಮ ಶಿಕ್ಷಣ ಪಡೆದವರು ಮತ್ತು ಅಗಾಧವಾಗಿ ಗಂಡಸರೇ ಇದ್ದಾರೆ.

2014ರ NES ದತ್ತಾಂಶಗಳನ್ನು ರಾಹುಲ್ ವರ್ಮ ಅವರು ವಿಶ್ಲೇಷಿಸುವುದರ ಪ್ರಕಾರ, ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯದ ರಾಜಕೀಯ ತಜ್ಞ ಬಕ್ರ್ಲಿ ಮತ್ತು ಲೋಕನೀತಿ- CSDS ನ ಶ್ರೇಯಸ್ ಸರ್‍ದೇಸಾಯಿ ಇವರ ವಿಶ್ಲೇಷಣೆಗಳು ತೋರಿಸುವುದೆನೆಂದರೆ, ಬಿಜೆಪಿ ತನ್ನ ಭೂತಕಾಲಕ್ಕಿಂತ ಇಂದು ಜನರ ನಡುವೆ ಅತಿ ಹೆಚ್ಚಿನ ಮಾಧ್ಯಮ ಪ್ರಚಾರವನ್ನು ಪಡೆದಿದೆ. 2014ರಲ್ಲಿ ಭಾರತದ ಜನ ಬಿಜೆಪಿಗೆ 31.1% ಮತ ನೀಡಿದ್ದರು. ಆಗ NES ಒಂದು ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆಗಾಗಿ 306 ಕ್ಷೇತ್ರಗಳಲ್ಲಿ 20,000 ಜನರನ್ನು ಭೇಟಿ ಮಾಡಿದ್ದರು.

ಆ ಸಮೀಕ್ಷೆ ಕಂಡುಕೊಂಡ ಸತ್ಯವೆಂದರೆ, ಮುಂದಿನ ಚುನಾವಣೆಯಲ್ಲಿ ಯಾರು ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಾರೋ ಅವರ ಓಟ್ ಷೇರಿನ ಅನುಪಾತ ಮುಂದೆ 39%ಗೆ ಏರಲಿದೆ ಮತ್ತು ಯಾರು ಮಾಧ್ಯಮಗಳಲ್ಲಿ ಕಡಿಮೆ ಪ್ರಚಾರ ಪಡೆದುಕೊಳ್ಳುತ್ತಾರೋ ಅವರ ಓಟ್ ಷೇರ್ ಮುಂದೆ 27%ಗೆ ಇಳಿಯಲಿದೆ. ಮಾಧ್ಯಮಗಳಿಗೆ ಹೆಚ್ಚು ಮೋರೆ ಹೋದ ಜನರು ಗುಜರಾತ್ ಆಡಳಿತವನ್ನು ಒಳ್ಳೆಯ ಆಡಳಿತವೆಂದು ಮೆಚ್ಚಿದ್ದಾರೆ ಮತ್ತು ಅವರ ನೆಚ್ಚಿನ ನಾಯಕನನ್ನು ಪ್ರಧಾನಿಯಾಗಿ ಮಾಡಿದ್ದಾರೆ.

ಎಲ್ಲಾ ಹಂತಗಳ ಮಾಧ್ಯಮ ಪ್ರಚಾರಗಳಲ್ಲಿ ಬಿಜೆಪಿಯು ಕಾಂಗ್ರೆಸ್‍ ಅನ್ನು ಮೀರಿಸಿದೆ. ಒಂದು ಚಿಕ್ಕ ಕ್ಷೇತ್ರದಲ್ಲೂ, ಅಂತರ್ಜಾಲದ ಮೂಲಕ ತಮ್ಮ ಕ್ಷೇತ್ರದ ಸುದ್ಧಿಯನ್ನು ಪಡೆಯುವವರು ಕೂಡ ಬಿಜೆಪಿಯ ಸುದ್ಧಿಯನ್ನೇ ನೋಡಲು ಇಷ್ಟಪಟ್ಟಿದ್ದಾರೆ. ಪ್ರಜ್ಞಾಪೂರ್ವಕವಾಗಿ ತಮ್ಮ ಇಷ್ಟದ ಆಯ್ಕೆಯಾಗಿ ನೋಡಿದ್ದಾರೆ. ಮೇಲಾಗಿ, ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ ಮತ್ತು ಎಲ್ಲಾ ಹಂತದ ಮಾಧ್ಯಮ ಪ್ರಚಾರಗಳಲ್ಲಿ ಮೋದಿ ಹೆಸರು ಬೆಳೆದಿದೆ.

ಯಾರು ಹೆಚ್ಚಾಗಿ ತಮ್ಮನ್ನು ಮಾಧ್ಯಮಕ್ಕೆ ತೆರೆದುಕೊಂಡಿದ್ದಾರೆ ಅಂದರೆ ಶ್ರೀಮಂತರು, ನಗರ ವಾಸಿಗಳು, ಮೇಲ್ಜಾತಿಯವರು ಮತ್ತು ಯುವಕರು. ಇವರೇ ಬಿಜೆಪಿಯ ಸರ್ವೋತ್ಕೃಷ್ಟ ಮತದಾರರು ಆಗಿದ್ದಾರೆ ಎಂದು ಸಂಶೋಧನೆ ಹೇಳುತ್ತದೆ. ನಂತರವೂ ಸಹ ಅಸ್ಥಿರವಾಗಿದ್ದ ಎಲ್ಲಾ ಸ್ತರದ ಜನ ವಿಭಾಗ ಬಿಜೆಪಿಯೊಂದಿಗೆ ಅಚಲವಾಗಿ ನಿಂತಿದೆ. ಟಿವಿಯಲ್ಲಿ ಹಿಂದಿ ನ್ಯೂಸ್ ನೋಡುವ ಮತ್ತು ಹಿಂದಿ ಪತ್ರಿಕೆಗಳನ್ನು ಓದುವ ಮತದಾರರು ಬಿಜೆಪಿಯನ್ನು ಹೆಚ್ಚು ಇಷ್ಟ ಪಟ್ಟು ಓಟ್ ಮಾಡಿದ್ದಾರೆ. ತದ್ವಿರುದ್ಧವಾಗಿ, ಟಿವಿ ಚಾನಲ್‍ಗಳಲ್ಲಿ ಹಿಂದಿಯೇತರ ನ್ಯೂಸ್ ನೋಡುವ ಮತದಾರರು ಬಿಜೆಪಿಯನ್ನು ಕಡಿಮೆ ಬೆಂಬಲಿಸಿದ್ದಾರೆ.

Broadcast Audience Research Council of India ದ ದತ್ತಾಂಶದ ಪ್ರಕಾರ ಜನವರಿ ತಿಂಗಳ ಮೊದಲ ವಾರದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಹಿಂದಿ ಟಿವಿ ಚಾನಲ್ ವಾರಕ್ಕೆ 140 ಮಿಲಿಯನ್‍ಗೂ ಅಧಿಕ ಅಭಿಪ್ರಾಯ, ಅನಿಸಿಕೆಗಳನ್ನು ಪಡೆದಿತ್ತು. ಅದೇ ರೀತಿ ಹೆಚ್ಚು ಶ್ರೇಯಾಂಕ ಪಡೆದಿದ್ದ ಇಂಗ್ಲೀಷ್ ಚಾನಲ್‍ವೊಂದು 200 ಪಟ್ಟು ವೀಕ್ಷಕತ್ವ ಹೊಂದಿತ್ತು. ಅಗ್ರ ಶ್ರೇಯಾಂಕದ ಇಂಗ್ಲೀಷ್ ಚಾನಲ್‍ನ 100 ಪಟ್ಟು ವೀಕ್ಷಕತ್ವವನ್ನು ಅಗ್ರ ಶ್ರೇಯಾಂಕದ ಮಲಯಾಳಂ ಮತ್ತು ತಮಿಳು ಚಾನಲ್‍ಗಳು ಹೊಂದಿತ್ತು.

ಇದರ ನಡೆವೆಯೂ ಮಾಧ್ಯಮಗಳಲ್ಲಿ ಕಡಿಮೆ ಪ್ರಚಾರವನ್ನು ಹೊಂದಿದ್ದ ಕಾಂಗ್ರೆಸ್ ಮತದಾರರ ನಡುವೆ ಉತ್ತಮ ಪ್ರದರ್ಶನ ಮಾಡುತ್ತದೆ.
ಮತದಾನದ ಮೇಲೆ ನಿಜವಾದ ಪರಿಣಾಮ ಉಂಟಾಗಬೇಕೆಂದರೆ, ಆ ಮಾಧ್ಯಮದ ವಿಷಯವು ಮುಖ್ಯವಾಗುತ್ತದೆ.

ದೆಹಲಿಯ media lab at the centre for media studies ನಡೆಸಿದ ಅಧ್ಯಯನ ಪ್ರಕಾರ, 2014ರ ಚುನಾವಣಾ ಪ್ರಚಾರ ಉತ್ತುಂಗದಲ್ಲಿದ್ದ ಸಮಯದಲ್ಲಿ, ಮಾರ್ಚ್ 1 ಮತ್ತು ಮೇ 11ರ ನಡುವೆ, ಮೋದಿ ನಂತರ ಅಗ್ರ ಸ್ಥಾನದಲ್ಲಿದ್ದ ಒಂಭತ್ತು ನಾಯಕರಿಗೆ ಹೋಲಿಸಿದ್ದಲ್ಲಿ, ಹಿಂದಿ ಮತ್ತು ಇಂಗ್ಲೀಷ್ ಚಾನಲ್‍ಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗಿನ ಸ್ಲಾಟ್ ನಡುವೆ ಹೆಚ್ಚು ಪ್ರಸಾರವನ್ನು ಪಡೆದವರು ಮೋದಿ. ಈ ಎಲ್ಲಾ ಚಾನಲ್‍ಗಳಲ್ಲಿ ಆಗಾಗಲೇ ಮೋದಿ ಕುರಿತು ಮೂರಕ್ಕಿಂತ ಅಧಿಕ ಬಾರಿ ಚರ್ಚೆ ನಡೆಸಿ ಮುಗಿಸಿ ಆಗಿತ್ತು.

ಮಾಧ್ಯಮಗಳಲ್ಲಿ ಬಿಜೆಪಿಯ ಕವರೇಜ್ ಮೀರಿದೆ. ಕಾಂಗ್ರೆಸ್‍ಗಿಂತ 10% ಹೆಚ್ಚಿದೆ. ಇದು ಹಿಂದೆಂದೂ ಕಂಡಿಲ್ಲದ ಅಂತರವಾಗಿದೆ. 2009ರಲ್ಲಿ ಈ ಅಂತರ 1% ಗಿಂತ ಹೆಚ್ಚಿರಲಿಲ್ಲ ಎಂದು ಮೀಡಿಯಾ ಲ್ಯಾಬ್‍ನ ಮುಖ್ಯಸ್ಥರಾದ ಪ್ರಭಾಕರ್ ಅವರು ಹೇಳುತ್ತಾರೆ.
2014ರಲ್ಲಿ ಮೋದಿ ಮತ್ತು ಬಿಜೆಪಿಗೆ ಮಾಧ್ಯಮಗಳು ಈ ಮಟ್ಟದ ಪ್ರಚಾರಕೊಟ್ಟಿದ್ದು ನೈತಿಕವೋ, ಅನೈತಿಕವೋ ಸ್ಪಷ್ಟಗೊಳ್ಳಬೇಕಿದೆ. ಆದರೆ ಛಿeಟಿಣಡಿe ಜಿoಡಿ centre for media studies ಯಾವುದೇ ವಿಶ್ಲೇಷಣೆಗಳನ್ನು ಭಾವನಾತ್ಮಕವಾಗಿ ಮಾಡುವುದಿಲ್ಲ.

ಕಳೆದ ಕೆಲವು ವರ್ಷಗಳ ನಂತರದಿಂದ ಪ್ರಾಯೋಗಿಕ ದತ್ತಾಂಶಗಳನ್ನು, ಅಧ್ಯಯನಯೋಗ್ಯ ಮಾಹಿತಿಗಳನ್ನು, ವಿಶ್ಲೇಷಣೆಗಳನ್ನು, ಅಂಕಿ-ಸಂಖ್ಯೆ ವಿವರಗಳನ್ನು ಶೇಖರಿಸಿ ಇಟ್ಟಿಲ್ಲ. ಆದರೆ ನಾವು ಬಲ್ಲ ಘಟನೆಗಳಲ್ಲಿ ಭಾಗಿಯಾಗಿದ್ದ ಸಾಕಷ್ಟು ಸಾಕ್ಷಿಗಳಿವೆ. ಇವು ಮಾಧ್ಯಮಗಳು ಬಿಜೆಪಿ ಮತ್ತು ಮೋದಿಗೆ ವ್ಯಾಪಾಕ ಪ್ರಚಾರ ನೀಡುತ್ತಿದೆ. ಅಷ್ಟೇ ಅಲ್ಲ, ವಿಶಾಲಾರ್ಥದಲ್ಲಿ ಅಡಿಯಾಳುತನ ತೋರುತ್ತಿದೆ.

ಇದು ವೀಕ್ಷಕರ ಮತ್ತು ಮತದಾರರ ಮನಸ್ಥಿತಿ ಅಷ್ಟೇ ಆಗಿಲ್ಲದಿರಬಹುದು. 2017ರಲ್ಲಿ Pew Global Attitudes ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಪಂಚದ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತೀಯರು ಬಹುಮಟ್ಟಿಗೆ ತಮ್ಮ ಮಾಧ್ಯಮಗಳ ರಾಜಕೀಯ ಪಕ್ಷಪಾತವನ್ನು ಸ್ವೀಕರಿಸಿದ್ದಾರೆ. ಹೆಚ್ಚಿನ ಭಾರತೀಯರು ಕೆಲವೊಮ್ಮೆ ಸುದ್ಧಿವಾಹಿನಿಗಳು, ಸುದ್ಧಿ ಸಂಸ್ಥೆಗಳು ಒಂದು ರಾಜಕೀಯ ಪಕ್ಷದ ಪರವಹಿಸಿ ಮಾತನಾಡುವುದು ಸರಿ (41%) ಎಂದು ಒಪ್ಪಿಕೊಂಡಿದ್ದಾರೆ ಮತ್ತು ಇದು ಎಂದಿಗೂ ಸ್ವೀಕಾರಾರ್ಹವಲ್ಲವೆಂದು (25%) ಇನ್ನೊಂದು ವರ್ಗ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಈ ರೀತಿಯ ಫಲಿತಾಂಶ ಪಡೆದ ಏಕೈಕ ದೇಶ ಭಾರತವಾಗಿದೆ. ಮೂರನೇ ವರ್ಗದ ಜನ ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.

ಭಾರತದ ಆಡಳಿತ ಪಕ್ಷ 2019ರ ಚುನಾವಣೆಗಾಗಿ ಮಾಧ್ಯಮಗಳನ್ನು ಆವರಿಸಿಕೊಳ್ಳಲು ಪ್ರಾರಂಭಿಸಿತ್ತು. ಮೋದಿ ಅವರು ANI ಸುದ್ಧಿ ಸಂಸ್ಥೆಗೆ ನೀಡಿದ ಇತ್ತೀಚಿನ ಸಂದರ್ಶನ ಅಥವಾ ಅವರ ಜನಪ್ರಿಯ ಫೇಸ್‍ಬುಕ್ ಪೇಜ್ Humans of Bombay ಮೂಲಕ – ವೀಕ್ಷಕರು ಮತ್ತೋಮ್ಮೆ ಇವರಿಗೆ ತಮ್ಮ ಮೆಚ್ಚುಗೆಯನ್ನು ತೋರಿಸಿ ರತ್ನ ಗಂಬಳಿಯನ್ನು ಹಾಸಿದ್ದಾರೆ. ಇವರ ಈ ತಂತ್ರ ಮುಂದೆಯೂ ಕೆಲಸ ಮಾಡುವ ಸಂಭವವಿದೆ.

ಮೂಲ: scroll.in
ಲೇಖಕರು: Rukmini S
ಅನುವಾದ: ಸಂಜಯ್, ಕರ್ನಾಟಕ ಜನಶಕ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...