ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದ ಯಾರಿಗಾದರೂ ತನ್ನ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ ರಾಜಸ್ಥಾನದ ಅಜ್ಮೀರ್ ದರ್ಗಾದ ಧರ್ಮಗುರುವನ್ನು ಬಂಧಿಸಲಾಗಿದೆ.
ವಿಡಿಯೋ ಕ್ಲಿಪ್ ಆಧಾರಿಸಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಿಸಿದ ನಂತರ ರಾಜಸ್ಥಾನ ಪೊಲೀಸರು ಸಲ್ಮಾನ್ ಚಿಸ್ತಿಗಾಗಿ ಹುಡುಕಾಟ ನಡೆಸಿದ್ದರು.
ಈ ಕುರಿತು ಎನ್‌ಡಿಟಿವಿ ವರದಿ ಮಾಡಿದ್ದು, “ಈ ವಿಡಿಯೊದ ಅಧಿಕೃತತೆಯನ್ನು ನಾವು ಪರಿಶೀಲಿಸಿಲ್ಲ. ನೂಪುರ್ ಶರ್ಮಾ ಅವರ ತಲೆಯನ್ನು ತನ್ನ ಬಳಿಗೆ ತರುವ ಯಾರಿಗಾದರೂ ತನ್ನ ಮನೆಯನ್ನು ನೀಡುವುದಾಗಿ ಧರ್ಮಗುರು ಹೇಳುತ್ತಾರೆ. ಪ್ರವಾದಿಯನ್ನು ಅವಹೇಳನ ಮಾಡಿದ್ದಕ್ಕಾಗಿ ನೂಪುರ್ ಅವರನ್ನು ಗುಂಡಿಕ್ಕಿ ಸಾಯಿಸುವುದಾಗಿ ಹೇಳಿದ್ದೂ ಕೇಳಿಬರುತ್ತಿದೆ” ಎಂದು ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನೀವು ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಉತ್ತರವನ್ನು ನೀಡಬೇಕು. ನಾನು ಇದನ್ನು ರಾಜಸ್ಥಾನದ ಅಜ್ಮೀರ್‌ನಿಂದ ಹೇಳುತ್ತಿದ್ದೇನೆ. ಈ ಸಂದೇಶವು ಹುಜೂರ್ ಖ್ವಾಜಾ ಬಾಬಾ ಕಾ ದರ್ಬಾರ್‌ನಿಂದ ಬಂದಿದೆ” ಎಂದು ಹೇಳುವ ಅವರು, ಪ್ರಸಿದ್ಧ ಸೂಫಿ ದರ್ಗಾವನ್ನು ಉಲ್ಲೇಖಿಸಿ ವೀಡಿಯೊ ಮಾಡಿದ್ದಾರೆ.
ಆರೋಪಿಯು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿಯು ಈ ವಿಡಿಯೋವನ್ನು ಖಂಡಿಸಿದೆ. ಈ ದರ್ಗಾವು ಕೋಮು ಸೌಹಾರ್ದತೆಯ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.
ಖದೀಮರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದರ್ಗಾದ ಸಂದೇಶವೆಂದು ಪರಿಗಣಿಸಬಾರದು. ಈ ಟೀಕೆಗಳು ಒಬ್ಬ ವ್ಯಕ್ತಿಯ ಹೇಳಿಕೆಯಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದು ಕಚೇರಿ ಸ್ಪಷ್ಟಪಡಿಸಿದೆ.
ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ಬಳಿಕ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಉದಯಪುರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿಗಳು ಹತ್ಯೆಯನ್ನು ಚಿತ್ರೀಕರಿಸಿದ್ದರು. ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯ ಆರೋಪಿಗಳಲ್ಲಿ ಒಬ್ಬ ಆರೋಪಿಯು ಬಿಜೆಪಿ ಜೊತೆಗೆ ಒಡನಾಟ ಇಟ್ಟುಕೊಂಡಿದ್ದನು ಮತ್ತು ಬಿಜೆಪಿ ಸೇರಲು ಬಯಸಿದ್ದನು ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರೊಬ್ಬರು ಆರೋಪಿಯು ಬಿಜೆಪಿ ಸದಸ್ಯ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ‘ಬಿಜೆಪಿ ಸದಸ್ಯ’ ಎಂದು ನೇರಾನೇರ ಆರೋಪಿಸಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂದು ಪ್ರಶ್ನಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ.
“ಯಾವುದೇ ಆರೋಪಿಗಳೊಂದಿಗೆ, ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ರಾಜಸ್ಥಾನ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಸಾದಿಕ್ ಖಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಹತ್ಯೆಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿರಿ: ಜುಬೇರ್ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್ ದೀಪಕ್ ಗುಪ್ತಾ
ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ‘ಬಿಜೆಪಿ ಸದಸ್ಯ’ ಎಂದು ಕಾಂಗ್ರೆಸ್ ಆರೋಪಿಸಿದ್ದು, ಪ್ರಕರಣವನ್ನು ದಾರಿ ತಪ್ಪಿಸಲು ಬೇಕಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಲು ಕೇಂದ್ರ ಸರ್ಕಾರ ತರಾತುರಿಯಲ್ಲಿ ಮುಂದಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಉದಯಪುರ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಹೊರ ಹಾಕಿರುವ ವರದಿಯನ್ನು ಉಲ್ಲೇಖಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, “ಕನ್ಹಯ್ಯಾ ಲಾಲ್‌ನ ಹಂತಕ, ರಿಯಾಜ್ ಅತ್ತಾರಿ ಬಿಜೆಪಿಯ ಸದಸ್ಯ” ಎಂದು ಹೇಳಿದ್ದಾರೆ.
ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸರು ಹೇಳಿದ್ದಾರೆ.



ದರ್ಗಾ ಗಳಲ್ಲಿ ಇರುವ ಬಾಗಶಹ ಎಲ್ಲಾ ಧರ್ಮ ಗುರುಗಳು ಇದೇ ಮನಸ್ಥಿತಿ ಉಳ್ಳವರೇ ಆಗಿದ್ದಾರೆ,ಅವರಿಗೆ ಮತಾಂದತೆಯ ಅಫೀಮು ತಲೆಗೆ ಹತ್ತಿದಾಗ ಈ ರೀತಿಯ ಹೇಳಿಕೆಗಳು ಸರ್ವೇ ಸಾಮಾನ್ಯ,ಮೊದಲು ಇವನನ್ನು ದೇಶದ್ರೋಹಿ ಕಾನೂನು ಅಡಿ ಕೇಸ್ ದಾಖಲಿಸಿ ಗಲ್ಲಿ ಗರಗಸ ಭೇಟಿ ದೆ,ಇವನಿಗೆ ನೀಡುವ ಶಿಕ್ಷೆ ಇತರರಿಗೆ ಭಯ ತರಿಸಬೇಕಿದೆ
ದರ್ಗಾ ಗಳಲ್ಲಿ ಇರುವ ಬಾಗಶಹ ಎಲ್ಲಾ ಧರ್ಮ ಗುರುಗಳು ಇದೇ ಮನಸ್ಥಿತಿ ಉಳ್ಳವರೇ ಆಗಿದ್ದಾರೆ,ಅವರಿಗೆ ಮತಾಂದತೆಯ ಅಫೀಮು ತಲೆಗೆ ಹತ್ತಿದಾಗ ಈ ರೀತಿಯ ಹೇಳಿಕೆಗಳು ಸರ್ವೇ ಸಾಮಾನ್ಯ,ಮೊದಲು ಇವನನ್ನು ದೇಶದ್ರೋಹಿ ಕಾನೂನು ಅಡಿ ಕೇಸ್ ದಾಖಲಿಸಿ ಗಲ್ಲಿಗೇರಿಸಬೇಕಿದೆ,ಇವನಿಗೆ ನೀಡುವ ಶಿಕ್ಷೆ ಇತರರಿಗೆ ಭಯ ತರಿಸಬೇಕಿದೆ