Homeಕರ್ನಾಟಕNEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

- Advertisement -
- Advertisement -

“ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟದ ವೇಳೆ ಮೊಟ್ಟೆಗಳನ್ನು ನೀಡುವುದರಿಂದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಬೆಳೆಸಿದಂತಾಗುತ್ತದೆ. ಮೊಟ್ಟೆ ಮತ್ತು ಮಾಂಸದ ನಿಯಮಿತ ಸೇವನೆಯಿಂದ ಉಂಟಾಗುವ ಕೊಲೆಸ್ಟ್ರಾಲ್, ಜೀವನಶೈಲಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂಬ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ರೂಪಿಸಲಾಗಿರುವ ‘ಆರೋಗ್ಯ ಮತ್ತು ಯೋಗಕ್ಷೇಮ’ದ ಪೊಷಿಷನ್‌ ಪೇಪರ್‌‌ ಪ್ರಸ್ತಾಪಿಸಿದೆ.

ಯಾವುದಾದರೂ ಒಂದು ವಿಷಯವನ್ನು ಯಾವ ಆಧಾರದ ಮೇಲೆ ಬೋಧಿಸಬೇಕಾಗುತ್ತದೆ ಎಂದು ತಿಳಿಸುವ ಪ್ರಬಂಧವೇ ಪೊಸಿಷನ್ ಪೇಪರ್‌. ರಾಜ್ಯ ಸರ್ಕಾರಗಳು ಎನ್‌ಸಿಇಆರ್‌ಟಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪೊಷಿಷನ್‌ ಪೇಪರ್‌ಗಳನ್ನು ಸಲ್ಲಿಸುತ್ತವೆ. ಅವುಗಳ ಆಧಾರದಲ್ಲಿ ಪಠ್ಯಪುಸ್ತಗಳನ್ನು ರೂಪಿಸಲಾಗುತ್ತದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರವು 26 ವಿಷಯಗಳಿಗೆ ಸಂಬಂಧಿಸಿದಂತೆ ಪೊಸಿಷನ್ ಪೇಪರ್‌ಗಳನ್ನು ಎನ್‌ಸಿಇಆರ್‌ಟಿಗೆ ಸಲ್ಲಿಸಿದ್ದು, ಅವುಗಳಲ್ಲಿನ ಬ್ರಾಹ್ಮಣೀಕರಣ ಒಂದೊಂದಾಗಿ ಹೊರಬೀಳತೊಡಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಿಮ್ಹಾನ್ಸ್‌ನ ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಜಾನ್ ವಿಜಯ್ ಸಾಗರ್ ಅವರ ನೇತೃತ್ವದ ತಜ್ಞರ ಸಮಿತಿ ‘ಆರೋಗ್ಯ ಮತ್ತು ಯೋಗಕ್ಷೇಮ’ಕ್ಕೆ ಸಂಬಂಧಿಸಿದ ಪೋಷಿಷನ್‌ ಪೇಪರ್‌ ರೂಪಿಸಿದ್ದು, ಮಕ್ಕಳ ಮೊಟ್ಟೆಯ ಮೇಲೆ ಸಮಿತಿ ಕೆಂಗಣ್ಣಿಟ್ಟಿದೆ.

“ಒಂದೇ ತರಗತಿಯ ಮಕ್ಕಳ ನಡುವೆ ವಿವಿಧ ರೀತಿಯ ಆಹಾರ ವಿತರಿಸುವುದರಿಂದ ಮಕ್ಕಳಲ್ಲಿ ಪೋಷಕಾಂಶಗಳ ವಿತರಣೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಉದಾಹರಣೆಗೆ ಮೊಟ್ಟೆ ಅಥವಾ ಕಾಳು, ಮೊಟ್ಟೆ ಅಥವಾ ಬಾಳೆಹಣ್ಣು ನೀಡುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಅಸಮತೋಲನ ಎದುರಾಗುತ್ತದೆ” ಎಂದಿದೆ ಸಮಿತಿ.

ಮಕ್ಕಳಲ್ಲಿ ಸಂಕೀರ್ಣ ಬೆಳವಣಿಗೆಗಳಾಗುತ್ತವೆ. ಗೆಳೆತನದಲ್ಲಿ ಭಾವನಾತ್ಮಕ ಅಡಚಣೆಗಳು ಉಂಟಾಗುತ್ತವೆ. ಎಲ್ಲಾ ಮಕ್ಕಳನ್ನು ಸಮಾನವಾಗಿ ಮತ್ತು ಯಾವುದೇ ತಾರತಮ್ಯವಿಲ್ಲದೆ ಪರಿಗಣಿಸುವುದು ಅಧಿಕೃತ ಭಾರತೀಯ ತತ್ವಶಾಸ್ತ್ರ ಅಥವಾ ಧರ್ಮವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ಸಾತ್ವಿಕ ಆಹಾರ’- ಪರಿಕಲ್ಪನೆಯನ್ನು ಸಮಿತಿ ಶಿಫಾರಸ್ಸು ಮಾಡುತ್ತದೆ. ಕಡಲೆಕಾಯಿ, ಎಳ್ಳುಂಡೆ, ಬೆಲ್ಲದಂತಹ “ನೈಸರ್ಗಿಕ ಆಹಾರ”ವನ್ನು ಮಕ್ಕಳಿಗೆ ನೀಡಬೇಕು. ಈ ಆಹಾರ ಕ್ರಮವು ಕುಂಠಿತ ಬೆಳವಣಿಗೆ ಮತ್ತು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ ಎಂಬುದು ಸಮಿತಿಯ ವಾದ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಪ್ರೋಟೀನ್ ಕೊರತೆಯಿಂದ ಬಳಲುತ್ತಿರುವ 6 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಯೋಜಿಸಿದೆ. ಹೀಗಿರುವ ಸಮಿತಿಯ ಸಲಹೆಗಳು ಆತಂಕಕಾರಿಯಾಗಿವೆ.

ಈ ಪೊಸಿಷನ್‌ ಪೇಪರ್‌ನ ನೇತೃತ್ವ ವಹಿಸಿದ್ದ ವಿಜಯ್‌ ಸಾಗರ್‌, “ಕೊಬ್ಬಿನಾಂಶ ಮುಕ್ತವಾಗಿರುವಂತಹ ಬಿಸಿಯೂಟ ನೀಡಬೇಕು. ಹೆಚ್ಚುವರಿ ತೂಕ, ಕೊಬ್ಬಿನಿಂದ ಉಂಟಾಗುವ ಸ್ಥೂಲಕಾಯತೆ, ಹಾರ್ಮೋನ್ ಅಸಮತೋಲನವನ್ನು ತಡೆಗಟ್ಟಲು ಮೊಟ್ಟೆ, ಹಾಲು, ಬಿಸ್ಕತ್ತುಗಳಂತಹ ಪದಾರ್ಧಗಳನ್ನು ನೀಡುವುದನ್ನು ನಿಷೇಧಿಸಬೇಕು. ಹಾರ್ಮೊನ್ ವೃದ್ಧಿಗೆ ಪ್ರಾಣಿ ಮೂಲ ಆಹಾರಗಳು ತೊಡಕಾಗಿವೆ…” ಎಂದಿದ್ದಾರೆ.

ಭೀಮ, ಹನುಮಂತನ ಆಹಾರ ಪದ್ಧತಿಯ ಕುರಿತ ಕತೆಗಳು ಮಕ್ಕಳಲ್ಲಿ ಧೈರ್ಯ, ಶೌರ್ಯ, ಉತ್ತಮ ಆಹಾರ ಸೇವನೆಗೆ ಪ್ರೇರಣೆಯಾಗುತ್ತವೆ. ಆರೋಗ್ಯ ರಕ್ಷಣೆಯ ಕುರಿತ ಜಾನಪದ ಹಾಗೂ ಪಂಚತಂತ್ರ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದು ಸಮಿತಿ ಸಲಹೆ ನೀಡುತ್ತದೆ.

ಇದನ್ನೂ ಓದಿರಿ: ಎನ್‌ಇಪಿ: ಫೈಥಾಗರಸ್‌ ಥಿಯರಿ ಸುಳ್ಳು, ಸಂಸ್ಕೃತ, ಮನುಸ್ಮೃತಿ ಕಲಿಕೆಗೆ ಪ್ರಸ್ತಾಪ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ

ಮೊಟ್ಟೆ ನೀಡುವುದು ಅಗತ್ಯ: ವೈದ್ಯರ ಸಲಹೆ

“ಹಸಿರು ಕ್ರಾಂತಿಯ ನಂತರ ಹೆಚ್ಚೆಚ್ಚು ಶರ್ಕರಪಿಷ್ಟವಿರುವ ಏಕದಳ ಬೆಳೆಗಳಿಗೆ ಮಾತ್ರ ಹೆಚ್ಚಿನ ಪ್ರೋತ್ಸಾಹ ದೊರೆಯಿತು, ಬೆಂಬಲ ಬೆಲೆಯೂ ಅದಕ್ಕೇ ಸಿಗುತ್ತದೆ, ಸಾರ್ವಜನಿಕ ಆಹಾರ ವ್ಯವಸ್ಥೆ (ರೇಷನ್ ಅಂಗಡಿ)ಯಲ್ಲೂ ಅವೇ ದೊರೆಯುತ್ತವೆ ಮತ್ತು ಅವೇ ಹೆಚ್ಚು ಅಗ್ಗದ ಆಹಾರ ಪದಾರ್ಥಗಳಾಗಿವೆ. ಹೀಗಾಗಿ ಹಲವು ರೀತಿಯ ರೋಗಗಳು ಜನರನ್ನು ಬಾಧಿಸುತ್ತಿವೆ. ಇವೆಲ್ಲಕ್ಕೆ ಮೊಟ್ಟೆ ಅತ್ಯುತ್ತಮ ಪರಿಹಾರವಾಗಬಲ್ಲದು. ಜೊತೆಗೆ ದೇಶದ ಬಹುಸಂಖ್ಯಾತರಿಗೆ ಮೊಟ್ಟೆ ತಿನ್ನುವುದು ಅಪಥ್ಯವೂ ಅಲ್ಲ. ಆದರೆ ಹುಸಿ ಶ್ರೇಷ್ಠತೆಯ ವ್ಯಸನ ಹತ್ತಿಸಿಕೊಂಡು, ಹುಸಿ ಸಾಂಸ್ಕೃತಿಕ ಮೇಲ್ಮೆಯನ್ನು ಪ್ರತಿಪಾದಿಸುವ ಚಿಂತನೆಗಳು ಇದಕ್ಕೆ ಅಡ್ಡಿಯಾಗಿವೆ. ಮಕ್ಕಳಿಗೆ ಮೊಟ್ಟೆಯನ್ನು ಕೊಡಲು ವಿರೋಧಿಸುವವರು ವಾಸ್ತವದಲ್ಲಿ ಜೀವವಿರೋಧಿಗಳಾಗಿದ್ದಾರೆ. ಇದು ಅರ್ಥವಾಗದೇ ವಿರೋಧಿಸುತ್ತಿರುವವರೂ ಇದ್ದಾರೆ, ಅರ್ಥವಾಗಿಯೂ ವಿರೋಧಿಸುತ್ತಿರುವವರು ಇದ್ದಾರೆ. ಇದೇ ದುರಂತ” ಎನ್ನುತ್ತಾರೆ ಡಾ.ಎಚ್.ವಿ.ವಾಸು.

“ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಮೊಟ್ಟೆಗಳನ್ನು ನೀಡುತ್ತಿದ್ದಾರೆ. ಈ ರಾಜ್ಯಗಳಲ್ಲಿ ಮಕ್ಕಳ ಕುಪೋಷಣೆ ಇಡೀ ದೇಶದಲ್ಲೇ ಕನಿಷ್ಠ ಮಟ್ಟದಲ್ಲಿದೆ. ಮಕ್ಕಳಲ್ಲಿ ಕುಪೋಷಣೆ ಇಲ್ಲವೇ ಇಲ್ಲ ಅನ್ನುವ ಮಟ್ಟಕ್ಕೆ ಈ ರಾಜ್ಯಗಳು ಯಶಸ್ಸು ಪಡೆದಿವೆ” ಎನ್ನುತ್ತಾರೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬೇವರ್ಸಿ ಸರ್ಕಾರಕ್ಕೆ ಇದಕ್ಕಿಂತ ಒಳ್ಳೆಯ ವಿಷಯ ಸಿಕ್ಕಲಿಲ್ಲವೇ? ಯಾಕೆ ಈ ಬೇವರ್ಸಿ ಬ್ರಹ್ಮಣ್ಯದ ಕುನ್ನಿಗಳಿಗೆ ಬಹುಜನರ ಆಹಾರದ ಮೇಲೆ ಕಣ್ಣು? ಇದನ್ನ ಪ್ರಸ್ತಾಪಿಸಿದ ಮನೋವೈದ್ಯನಿಗೆ ಬಹುಶಃ ಗುಣಪಡಿಸಲಾಗದ ಜಾತಿ ರೋಗ ವಿರಬೇಕು,ಅಲ್ಲಾ ಬೆಳೆಯುವ ಮಕ್ಕಳು ಅದರಲ್ಲಿಯೂ ಗ್ರಾಮೀಣ ಮತ್ತು ನಗರದ ಬಡ ಮಕ್ಕಳಿಗೆ ಯಾವ ರೀತಿಯ ಅಗತ್ಯ ಪೋಷಕಾಂಶಗಳ ಕೊರತೆ ಇದೆ ಅನ್ನೋದು ಸರ್ವರಿಗೂ ತಿಳಿದ ವಿಷಯ, ಆ 3ಶೇ ಸಂಖ್ಯೆಯ ಸಮುದಾಯದವರು ಏನನ್ನಾದರೂ ತಿನ್ನಲು ಅರ್ಹರು ಅದೇ ರೀತಿಯಲ್ಲಿ ಬಹುಸಂಖ್ಯಾತ ಉಳಿದ ಸಮುದಾಯದ ಮಕ್ಜಳು, ಈ 3ಶೇ ಸಮುದಾಯದವರ ಆಹಾರವನ್ನ ಉಳಿದವರ ಮೇಲೆ ಹೇರಲು ಅಧಿಕಾರ ಕೊಟ್ಟವರಾರು ಮೂರ್ಖರೆ ಅಥವಾ ಬ್ರಾಹ್ಮಣ್ಯದ ಗುಲಾಮರೆ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...