ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ಅವಲೋಕನಗಳ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌ಎನ್ ಧಿಂಗ್ರಾ, ಹಿರಿಯ ವಕೀಲರಾದ ಅಮನ್ ಲೇಖಿ ಮತ್ತು ಕೆ. ರಾಮಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅನುಮತಿ ನಿರಾಕರಿಸಿದ್ದಾರೆ. “ಅವರ ಹೇಳಿಕೆಗಳು…ಸುಪ್ರೀಂಕೋರ್ಟ್ ನಡೆಸಿದ ವಿಚಾರಣೆಯ ನ್ಯಾಯಯುತವಾದ ಪ್ರತಿಕ್ರಿಯೆಯ ಪರಿದಿಯಲ್ಲಿದೆ” ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ.
ಮೂವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಸಮ್ಮತಿಯನ್ನು ಕೋರಿದ ವಕೀಲ ಸಿ ಆರ್ ಜಯ ಸುಕಿನ್ ಅವರಿಗೆ ಪ್ರತಿಕ್ರಿಯಿಸಿರುವ ವೇಣುಗೋಪಾಲ್, “ಅವರ ಹೇಳಿಕೆಗಳು ದುರುದ್ದೇಶಪೂರಿತ ಅಥವಾ ನಿಂದನೀಯವಲ್ಲ. ಅಲ್ಲದೆ ಅವರ ಹೇಳಿಕೆಗಳು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯದ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆಯಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನ್ಯಾಯಾಂಗ ಪ್ರಕ್ರಿಯೆಯ ನ್ಯಾಯಯುತ ಮತ್ತು ಸಮಂಜಸವಾದ ಟೀಕೆಯು ನ್ಯಾಯಾಲಯದ ನಿಂದನೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಹೆಚ್ಚಿನ ತೀರ್ಪುಗಳಲ್ಲಿ ಪರಿಗಣಿಸಿದೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.
“ನಿಮ್ಮ ಪತ್ರದಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳು ಮಾಡಿರುವ ಟೀಕೆಯು ದುರುದ್ದೇಶದಿಂದ ಕೂಡಿಲ್ಲ. ನ್ಯಾಯಾಂಗದ ಆಡಳಿತವನ್ನು ಕುಂಠಿತಗೊಳಿಸುವ ಪ್ರಯತ್ನವಲ್ಲ. ಜೊತೆಗೆ ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ಮಾಡಿದ ಉದ್ದೇಶಪೂರ್ವಕ ಪ್ರಯತ್ನವಲ್ಲ” ಎಂದು ಅವರು ಹೇಳಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ್ದಕ್ಕಾಗಿ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಅನೇಕ ಎಫ್‌ಐಆರ್‌ಗಳನ್ನು ಒಟ್ಟು ಸೇರಿಸಿ ವಿಚಾರಣೆ ನಡೆಸುವಂತೆ ಕೋರಲಾಗಿತ್ತು.
ಇದನ್ನೂ ಓದಿ: ಪ್ರವಾದಿ ನಿಂದನೆ: ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಕೋಲ್ಕತ್ತಾ ಪೊಲೀಸರ ಸಮನ್ಸ್
ಈ ಪ್ರಕರಣವನ್ನು ಆಲಿಸಿದ್ದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ಪೀಠವು ಜುಲೈ 1 ರಂದು ನೂಪುರ್ ಶರ್ಮಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಈ ಹೇಳಿಕೆಯನ್ನು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌ಎನ್ ಧಿಂಗ್ರಾ, ಹಿರಿಯ ವಕೀಲರಾದ ಅಮನ್ ಲೇಖಿ ಮತ್ತು ಕೆ. ರಾಮಕುಮಾರ್ ವಿರೋಧಿಸಿದ್ದರು.


