ಪುತ್ತೂರಿನ ವಿವೇಕಾನಂದ ಕಾಲೇಜೆಂದರೆ ಶುದ್ದ ಸಂಘಪರಿವಾರದ ಸಂಸ್ಕಾರ- ಸಂಸ್ಕೃತಿಯ ವಿದ್ಯಾಸಂಸ್ಥೆ. ಹಿಂದೂತ್ವದ ಬ್ರೈನ್ ವಾಶಿಂಗ್ ಕೇಂದ್ರ; ಮತಾಂಧ ಆಕ್ರಮಣಶೀಲ ತರಬೇತಿಯ ಗರಡಿಮನೆ. ಎಬಿವಿಪಿ ಸಂಘಟನೆ ಒಂದನ್ನು ಬಿಟ್ಟು ಉಳಿದ್ಯಾವ ವಿದ್ಯಾರ್ಥಿ ಸಂಘಟನೆಗಳಿಗೂ ಈ ಕಾಲೇಜಿನಲ್ಲಿ ಅವಕಾಶವಿಲ್ಲ. ಕರಾವಳಿ ಸಂಘ ಅಂಗ ಪಡೆಗಳ ತೆರೆಮರೆಯ ರಿಂಗ್ ಮಾಸ್ಟರ್ ಕಲ್ಲಡ್ಕ ಪ್ರಭಾಕರ ಭಟ್ ಬಳಗದ ಯಜಮಾನಿಕೆಯಲ್ಲಿದೆ ವಿವೇಕಾನಂದ ಕಾಲೇಜು. ಹಿಂದು ಸಂಸ್ಕೃತಿಯಷ್ಟು ಪರಮ ಪವಿತ್ರ ಧರ್ಮ ಈ ಭೂಮಂಡಲದಲ್ಲೇ ಮತ್ತೊಂದಿಲ್ಲ ಎಂದು ಉದ್ದುದ್ದ ಭಾಷಣ ಬಿಗಿದು ಮುಗ್ಧ ಹಿಂದುಳಿದ ವರ್ಗದ ಯುವಕ/ಯುವತಿಯರ ದಿಕ್ಕು ತಪ್ಪಿಸುವ ಕಲ್ಲಡ್ಕ ಭಟ್ಟರ ಸದರಿ ಕಾಲೇಜಿನ ಐವರು ವಿದ್ಯಾರ್ಥಿಗಳು ಸಹಪಾಠಿ ದಲಿತ ವಿದ್ಯಾರ್ಥಿನಿಯನ್ನು ಕಾಡಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇಂತಹ ದುರ್ನಡತೆಯನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಹರಿಯಬಿಟ್ಟಿದ್ದಾರೆ.
ಅಲ್ಲಿಗೆ ಹಿಂದುತ್ವದ ಅಸಲಿ ಅವತಾರ ಜಗತ್ತಿನಾದ್ಯಂತ ವೈರಲ್ ಆಗಿ ಹೋಗಿದೆ. ರೇಪಿಸ್ಟ್ ಹುಡುಗರೆಲ್ಲರೂ ಎಬಿವಿಪಿಯಲ್ಲಿ ಪಳಗಿದವರು. ಸಂತ್ರಸ್ಥೆಯು ಸಹ ಇದೇ ಕೇಸರಿ ಒಕ್ಕೂಟದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದವಳೆ. ಸ್ನೇಹ-ಸಲಿಗೆಯಲ್ಲಿದ್ದವರು. ಬುಡಕಟ್ಟು ಸಮುದಯಕ್ಕೆ ಸೇರಿದ ಈ ಹುಡುಗಿಯ ತಾಯಿ ಬಿಜೆಪಿಯಿಂದ ಗೆದ್ದಿರುವ ಗ್ರಾಮ ಪಂಚಾಯತ್ ಸದಸ್ಯೆ ಕೂಡ. ಹಿಂದುತ್ವ ಆರ್.ಎಸ್.ಎಸ್ ಬಿಜೆಪಿ ಎಬಿವಿಪಿ ಕಲಸುಮೇಲೋಗರಗೊಂಡ ಕೂಟವಿದು.! ಆ ಕಿರಾತಕ ಹುಡುಗರು ಅದ್ಯಾವಾಗ ಈ ಅಮಾಯಕ ಹುಡುಗಿಯ ಮೇಲೆ ಕಣ್ಣು ಹಾಕಿ ಸ್ಕೆಚ್ ಹಾಕಿದ್ದರೋ?
ಮೊನ್ನೆ ಆಕೆ ಕ್ಲಾಸ್ ಮುಗಿಸಿ ಮನೆಗೆ ಹೋಗಲು ಬಸ್ ಕಾಯುತ್ತಾ ನಿಂತಿದ್ದಳು. ಆಗ ಬಸ್ ಸ್ಟ್ಯಾಂಡಿಗೆ ಬಂದ ಪಂಚ ಪಾತಕ ಪಡೆ ಏನೋ ಅರ್ಜೆಂಟಾಗಿ ಮುಖ್ಯವಾದ ವಿಷಯ ಮಾತಾಡಲಿಕ್ಕಿದೆ ಬಾ ಎಂದು ಹುಡುಗಿಯನ್ನು ಕಾರಲ್ಲಿ ಕರೆದೊಯ್ದಿದ್ದಾರೆ. ಕಾರು ಊರು ಬಿಟ್ಟು ಕಾಡಿನ ದಾರಿ ಹಿಡಿಯುತ್ತಿದ್ದಂತೆಯೇ ಅಪಾಯದ ಅರಿವಾದ ಹುಡುಗಿ ಕಂಗಾಲಾಗಿದ್ದಾಳೆ. ಬೊಬ್ಬೆ ಹೊಡೆದಿದ್ದಾಳೆ, ಕೊಸರಾಡಿ ಚೀರಾಡಿದ್ದಾಳೆ. ಆಗ ಆಕೆಯ ಬಾಯಿ ಒತ್ತಿ ಹಿಡಿದು ಸದ್ದು ಮಾಡದಂತೆ ತಡೆದಿದ್ದಾರೆ. ಆಕೆಗೆ ಬಲಾತ್ಕಾರವಾಗಿ ಮತ್ತು ಬರುವ ತಿಂಡಿ ತುರುಕಿದ್ದಾರೆ. ಅದರಲ್ಲಿ ಗಾಂಜಾ ಬೆರೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಪ್ರಜ್ಞೆ ತಪ್ಪಿದ ಹುಡುಗಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆ ಮುಗ್ಧ ಹುಡುಗಿಯನ್ನು ಹುರಿದು ತಿಂದ ಈ ಕಾಮುಕರು ಕಿಶನ್ ಆಚಾರಿ, ಪ್ರಜ್ವಲ್, ಗುರುನಂದನ್, ಸುನೀಲ್ ಮತ್ತು ಪ್ರಖ್ಯಾತ್ ರಾತ್ರಿ ಹೊತ್ತು ಆರ್‍ಎಸ್‍ಎಸ್ ಪ್ರಣೀತ ದನ ಕಾಯುವ ಧರ್ಮರಕ್ಷಣೆ ಎಂಬ ನಾಟಕ ಮಾಡುವವರೆ ಆಗಿದ್ದಾರೆ.
ಈ ಫಟಿಂಗರು ಈ ಘಟನೆಯನ್ನು ಬೇರೆ ಎಲ್ಲಾದರೂ ಬಾಯ್ಬಿಟ್ಟರೆ ನಿನ್ನನ್ನು ಕೊಂದೇ ಹಾಕುವುದಾಗಿ ಬೆದರಿಕೆ ಹಾಕಿ ಕಾಡಿನಿಂದ ಸಿಟಿಗೆ ತಂದು ಬಿಟ್ಟಿದ್ದಾರೆ. ಈ ರೇಪಿಸ್ಟ್ ಗಳಲ್ಲಿ ಕೆಲವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಜಾರಿಯ ನಂಟಿನವರಾದರೆ ಇನ್ನು ಕೆಲವರು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್‍ಗೆ ಹತ್ತಿರದವರು. ಹೀಗಾಗಿ ಕಂಪ್ಲೇಟು ಕೊಟ್ಟರೆ ತನಗೆ ತೊಂದರೆಯಾಗಬಹುದೆಂದು ಹುಡುಗಿಯ ಹೆತ್ತವರು ಹಿಂಜರಿದಿದ್ದಾರೆ. ಕಾಮುಕ ಹುಡುಗರು ತಾವು ಶಾಸಕರ ಜೊತೆಗಿರುವ ಫೋಟೊವನ್ನು ಫೇಸ್ಬುಕ್ಕಿನಲ್ಲಿ ಹಾಕಿಕೊಂಡು ಪ್ರಭಾವಿ ಇಮೇಜು ಬೆಳೆಸಿಕೊಂಡಿದ್ದಾರೆ. ಇದು ಹುಡುಗಿ ಮನೆಯವರಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಅಂತ ಸಂದರ್ಭದಲ್ಲಿ ಕಳೆದ ಬುಧವಾರದಂದು ಊರಿಗೆಲ್ಲಾ ಸುದ್ದಿ ಗೊತ್ತಾಗಿದ್ದರಿಂದ ಈ ಆ ಅತ್ಯಾಚಾರದ ವಿಡಿಯೋವನ್ನು ಆ ಕಾಮುಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‍ಗೆ ಹಾಕಿಕೊಂಡಿದ್ದಾನೆ. ಅದನ್ನು ನೋಡಿದ ಕಾಲೇಜಿನ ಚುನಾವಣೆಯಲ್ಲಿ ಆತನ ವಿರುದ್ಧ ಗುಂಪಿನಲ್ಲಿದ್ದವನು ಅದನ್ನು ವಾಟ್ಸಾಪಿನಲ್ಲಿ ಹರಿಯಬಿಟ್ಟಿದ್ದಾನೆ. ಅಲ್ಲಿಂದ ಎಲ್ಲಾ ಕಡೆಗೆ ಹಬ್ಬಿದೆ. ಇದನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.
ಇಷ್ಟೆಲ್ಲಾ ಆದರೂ ಏನು ಆಗದವರಿಂತೆ ಪೋಸು ಕೊಡುತ್ತಿದ್ದ ಆ ಕಾಮುಕರನ್ನು ನೇರವಾಗಿ ಎಸ್ಪಿಯೇ ಕಾಲೇಜಿಗೆ ಬಂದು ಎತ್ತಾಕಿಕೊಂಡು ಹೋಗಿದ್ದಾರೆ. ರೇಪಿಸ್ಟ್ ಗಳು ಎಬಿವಿಪಿ ಮತ್ತು ಕೌಬಾಯ್ ಗ್ಯಾಂಗಿನ ಸಕ್ರಿಯ ಸದಸ್ಯರೆಂಬ ಸತ್ಯ ಸಾಕ್ಷಾತ್ಕಾರ ಆಗುತ್ತಲೇ ಸಂಘಪರಿವಾರದ ಹೈಕಮಾಂಡಿನಲ್ಲಿ ಚಡಪಡಿಕೆ ಶುರುವಾಗಿದೆ. ಎಬಿವಿಪಿ ತಕ್ಷಣಾ ಹೇಳಿಕೆ ಬಿಡುಗಡೆ ಮಾಡಿ ಅವರಿಗೂ ತಮಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳಲು ಹವಣಿಸಿದೆ. ಎಬಿವಿಪಿ, ಸಂಘ ಪರಿವಾರದವರೆಲ್ಲ ಅವರು ನಮ್ಮವರಲ್ಲ ಎಂದು ತೋರಿಸಿಕೊಳ್ಳಲು ಎಷ್ಟೇ ಪ್ರಯತ್ನ ನಡೆಸಿದರೂ ರೇಪಿಸ್ಟ್ ಗಳು ಎಬಿವಿಪಿಯವರೇ ಎಂಬುದನ್ನು ಮಾರೆ ಮಾಚಲು ಸಾಧ್ಯವಾಗಿಲ್ಲ. ಸಾಮೂಹಿಕ ಅತ್ಯಾಚಾರ ಮಾಡಿದವರು ಆರ್.ಎಸ್.ಎಸ್ ಶಾಖೆಗಳಲ್ಲಿ “ಸಂಸ್ಕಾರ” ದೀಕ್ಷೆ ಪಡೆದವರು, ಸ್ವಯಂ ಘೋಷಿತ ಗೋರಕ್ಷಕರು, ಶಾಸಕರ ಜೊತೆಗಿದ್ದವರು ಎಂಬ ಸತ್ಯ ಎಲ್ಲೆಡೆ ಹರಿದಾಡುತ್ತಿದ್ದು ಬಿಜೆಪಿಯವರ ಚಿಂತೆಯನ್ನು ಹೆಚ್ಚು ಮಾಡಿದೆ.
ತಮ್ಮವರು ಸಿಕ್ಕಿಬಿದ್ದಾಗ ಉದಾತ್ತತೆ, ನಾಗರೀಕ ಶಿಷ್ಠಾಚಾರ, ಮನುಷ್ಯತ್ವ, ಧರ್ಮಾತೀತತೆ, ಜಾತ್ಯಾತೀತತೆಯ ಬಗ್ಗೆ ಪ್ರವಚನ ಬಿಗಿಯುವ ತಂತ್ರಗಾರಿಕೆ ಸಂಘಪರಿವಾರಕ್ಕೆ ಲಗಾಯ್ತಿನಿಂದಲೂ ಕರಗತ. ಈ ಬಾರಿಯೂ ಅದೇ ಅಸ್ತ್ರ ಬಳಸಿದ್ದಾರೆ. ಪುತ್ತೂರಿನ ಕ್ರೌರ್ಯದ ವಿಚಾರದಲ್ಲಿ ಜಾತಿ ತರಬೇಡಿ, ಧರ್ಮ ತರಬೇಡಿ, ಕೇಸರಿ ತರಬೇಡಿ, ಹಸಿರು ತರಬೇಡಿ ಎಂದೆಲ್ಲಾ ವೇದಾಂತ ಸಂಘಿ ಸಿಂಫಥೈಸರ್‍ಗಳು ಅವಲತ್ತುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾನದಲ್ಲಿ ಗುಳೋ ಅಂತ ಅಳುತ್ತಿದ್ದಾರೆ. ಆದರೆ ಈ ಮಂದಿಯೆಲ್ಲಾ ದಕ್ಷಿಣ ಕನ್ನಡದ ಸಣ್ಣ ಪುಟ್ಟ ಹಿಂದು-ಮುಸ್ಲಿಂ ಜಗಳ ವ್ಯಾಜ್ಯದಲ್ಲಿಯೂ ಧರ್ಮದ ಹೆಸರು ಎಳೆದು ತಂದು, ಧರ್ಮದ ಬಣ್ಣ ಹಚ್ಚಿ ಶೂದ್ರ ಕಾಲಾಳುಗಳನ್ನು ಹಿಂದುತ್ವ ರಕ್ಷಣೆಯ ಯುದ್ಧಕ್ಕೆ ಛೂ ಬಿಟ್ಟು ನೋಡಿದವರು. ಶಾಂತಿಯ ಸಮಾಜಕ್ಕೆ ಧರ್ಮದ ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡವರು.
ಕರಾವಳಿಯ ಅನೈತಿಕ ಪೊಲೀಸ್‍ಗಿರಯ ಪ್ರತಿಯೊಂದು ಘಟನೆಯಲ್ಲಿಯೂ ಕೇಸರಿ ಗ್ಯಾಂಗಿಗೆ ಈಗವರು ಪ್ರತಿಪಾದಿಸುತ್ತಿರುವ “ಪುತ್ತೂರಿನ ನೀತಿಯನ್ನೇ” ಏಕೆ ಅನುಸರಿಸಿರಲಿಲ್ಲ. ಆಗ ಜಾತಿಧರ್ಮದ ಬಣ್ಣ ಹಚ್ಚಿ ರಾಜಕೀಯ ಲಾಭ ಪಡೆದವರು ಈಗ ಮಾತ್ರ ಆದರ್ಶದ ಮಾತಾಡುತ್ತಿದ್ದಾರೆ. ಇಂದಿನ ಅವರ ಆದರ್ಶದ ಮಾನಸಿಕತೆ ಕರಾವಳಿಯ ಪ್ರತಿಯೊಂದು ಘಟನೆಯಲ್ಲಿಯೂ ಇದ್ದಿದ್ದರೆ ಪುತ್ತೂರಿನ ರೇಪ್ ದುರ್ಘಟನೆ ನಡೆಯುತ್ತಲೇ ಇರಲಿಲ್ಲ. ಪಾಪ ಆ ದಲಿತ ಹುಡುಗಿ ಇವರಿಗೆ ಹಿಂದೂ ಅನ್ನಿಸಲಿಲ್ಲವೇ? ಒಂದು ವೇಳೆ ಅತ್ಯಾಚಾರವೆಸಗಿದ ಪಾತಕಿಗಳು ಮುಸ್ಲಿಮರಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ? ಅದೃಷ್ಟವಶಾತ್ ಆ ಹುಡುಗಿ ಬದುಕಿದ್ದಾಳೆ. ಒಂದು ವೇಳೆ ಸತ್ತು ಹೋಗಿದ್ದರೆ? ಅದರಲ್ಲಿಯೂ ಅವಳು ಎಬಿವಿಪಿ ಹುಡುಗಿ ನಿಜವಾಗಿಯೂ ಈ ಪಾಪಿಗಳು ಅದನ್ನು ಮುಸ್ಲಿಂಮರ ತಲೆಗೆ ಕಟ್ಟಿ ರಾಡಿ ಎಬ್ಬಿಸಿ ಅಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಂಡುಬಿಡುತ್ತಿದ್ದರು.
ಇದೆಂಥ ಹಿಂದುತ್ವ? ರೇಪ್ ಯಾವ ಧರ್ಮದವರು ಮಾಡಿದರು ಅದೂ ಘೋರ ಪಾಪವಲ್ಲವೇ? ಬರ್ಬರ ಅಮಾನುಷವಲ್ಲವೇ? ಈಗ ಬಿಜೆಪಿ ಬಳಗವೇಕೆ ಬಾಯಿಮುಚ್ಚಿ ಕುಳಿತಿದೆ. ಈ ಥರದ ಯಾವುದೇ ಘಟನೆ ಆದರೆ ಸಾಕು ಪ್ರತ್ಯಕ್ಷವಾಗಿ ಹಿಂದುತ್ವದ ರಣಕಹಳೆಯೂದುತ್ತಿದ್ದ ಕೂಗುಮಾರಿ ಶೋಭಾ ಕರಂದ್ಲಾಚೆಯವರು ಈಗ ಎಲ್ಲಿದ್ದಾರೆ? ಇದೇ ಪುತ್ತೂರು ಬಂಟ್ವಾಳ ಏರಿಯಾದಲ್ಲಿಯೂ ಹಲವು ಹಿಂದೂ ಹುಡುಗಿಯರಿಗೆ ಲೈಂಗಿಕ ತೊಂದರೆ ಕೊಟ್ಟು ಚಿನ್ನ ದೋಚಿ ಸೈನೈಡ್ ಕೊಟ್ಟು ಕೊಂದ ಸರಣಿ ಕಿಲ್ಲರ್ ಸೈನೈಡ್ ಮೋಹನನನ್ನು ‘ಹಿಂದೂ’ ಎಂಬ ಏಕೈಕ ಕಾರಣಕ್ಕೆ ಸಹಿಸಿಕೊಂಡ ಸಂಘಪರಿವಾರ ಪೂತ್ತೂರಿನ ಎಬಿವಿಪಿ ರಿಯಾಯಿತಿ ತೋರಿಸದೇ ಇರುತ್ತದಾ?
ಇನ್ನು ಎಬಿವಿಪಿ ಈ ಘಟನೆಯನ್ನು ಮರೆಮಾಚಲು ಗುರುವಾರ ಬಸ್ ಪಾಸ್ ಉಚಿತವಾಗಿ ಕೊಡುವಂತೆ ಒತ್ತಾಯಿಸಿ ಪ್ರತಿಭಟಿಸಿದೆ. ಅಂದರೆ ಸಮಾಜದ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರ ಎದ್ದು ಕಾಣುತ್ತಿದೆ. ಶಾಲೆಗಳು ಶುರುವಾಗಿ ಒಂದು ತಿಂಗಳ ನಂತರ ಹೋರಾಟ ಮಾಡುತ್ತದೆ ಎಂದರೆ ಪ್ರಕರಣವನ್ನು ಮುಚ್ಚಿಹಾಕಲು ಅದು ಎಷ್ಟು ಕ್ರಿಯಾಶಿಲವಾಗಿದೆ ನೋಡಿ. ಇದರ ಜೊತೆಗೆ ಕೆಲವು ಮತಾಂಧ ಕ್ರಿಮಿಗಳು ಫೇಸ್ ಬುಕ್ ನಲ್ಲಿ ಈ ಅತ್ಯಾಚಾರವನ್ನು ಬಹಿರಂಗವಾಗಿ ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ. ಈ ರೀತಿಯ ಘಟನೆ ಹಿಂದೆಂದೂ ನಡೆದಿರಲಿ
ಅಮಾಯಕ ಹುಡುಗಿಗಾದ ಅನ್ಯಾಯವನ್ನು ಖಂಡಿಸಿ ಉಳಿದ ಸಂಘಟನೆಗಳೇ ಹೋರಾಟ ರೂಪಿಸುತ್ತಿವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಅತ್ಯಚಾರಗಳು ಸಂಭವಿಸದಂತೆ ತಡೆಯಬೇಕಿದೆ. ಇದಕ್ಕಾಗಿ ಸಮಾಜದ ನಾಗರೀಕರೆಲ್ಲರೂ ದನಿಯೆತ್ತಬೇಕಿದೆ.


