ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಮೃತಪಟ್ಟಿರುವ, ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ.
ಹೊಡೆದಾಟದಲ್ಲಿ ಯಂಕಪ್ಪ ತಳವಾರ (60), ಪಾಷಾವಲಿ (27) ಎಂಬುವವರು ಮೃತಪಟ್ಟಿದ್ದು 10ಕ್ಕೂ ಹೆಚ್ಚು ಜನರಿಗೆ ಪೆಟ್ಟು ತಗುಲಿದೆ. ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವಾರಣ ಸೃಷ್ಟಿಯಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಗ್ರಾಮದ ಮುಸ್ಲಿಂ ಸಮುದಾಯದ ಯುವತಿ ಮತ್ತು ನಾಯಕ ಸಮುದಾಯದ ಯುವಕ ಪ್ರೀತಿಸುತ್ತಿದ್ದರು. ಅವರು ಮದುವೆಯಾಗಿ ಮೂರು ತಿಂಗಳಿನಿಂದ ಊರು ಬಿಟ್ಟು ಹೋಗಿದ್ದಾರೆ. ಇದು ಜಗಳಕ್ಕೆ ಕಾರಣವಾಗಿ ಹೊಡೆದಾಟಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಆದರೆ ಗಲಾಟೆಯ ಹಿಂದೆ ಸಣ್ಣ ಪುಟ್ಟ ಕ್ಷುಲ್ಲಕ ವಿಷಯಗಳೂ ಸೇರಿ ದೊಂಬಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಂಪೂರ್ಣ ವಿಚಾರಣೆಯ ಬಳಿಕವಷ್ಟೇ ನಿಜಾಂಶ ಹೊರಬೀಳಲಿದೆ.
ಇಬ್ಬರ ಕೊಲೆ ವಿಚಾರ ಬಹಿರಂಗವಾಗುತ್ತಿದ್ದಂತೆ ಎರಡೂ ಗುಂಪಿನ ಜನರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಪಹರೆ ನಿಂತಿದ್ದು ಆಗಸ್ಟ್ 20ರ ವರೆಗೂ ಸೆಕ್ಷನ್ 144 ಅನ್ವಯ ನಿಷೇದಾಜ್ಞೆ ಹೇರಲಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ತಿಳಿಸಿದ್ದಾರೆ.
Interfaith love affair led to communal clash between #Muslims & #SC Madiga community. The clash has led to death of two people Shamappa Talwar (60) and Bhasha Saheb (22). Six people are seriously injured.Tense atmosphere in huli hyder village of #Koppal #Karnataka. pic.twitter.com/jLILpNvRWb
— Imran Khan (@KeypadGuerilla) August 11, 2022
ಹುಲಿಹೈದರ್ ಗ್ರಾಮದಲ್ಲಿ ಹಿಂದಿನಿಂದಲೂ ಮುಸ್ಲಿಂ ಮತ್ತು ನಾಯಕ ಸಮುದಾಯದ ನಡುವೆ ಸಣ್ಣ ಪುಟ್ಟ ಜಗಳಗಳಿದ್ದವು. ಅಲ್ಲದೆ ಆ ಸಮುದಾಯಗಳ ನಡುವೆ ಪ್ರೇಮ ಪ್ರಕರಣಗಳು, ಸಂಬಂಧಗಳು ಏರ್ಪಟ್ಟಿದ್ದು ಎರಡೂ ಸಮುದಾಯದ ಅಸಹನೆಗೆ ಕಾರಣವಾಗಿತ್ತು. ಅದೆಲ್ಲದರ ಪರಿಣಾಮವಾಗಿ ಕ್ಲುಲ್ಲಕ ಕಾರಣಕ್ಕೆ ಆರಂಭವಾದ ಗಲಭೆ ಇಬ್ಬರನ್ನು ಬಲಿತೆಗೆದುಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ; ತೀರ್ಥಹಳ್ಳಿ: ಸಮಾಜವಾದಿ-ಗಾಂಧಿವಾದಿ-ವಿಶ್ವಮಾನವರ ಕರ್ಮಭೂಮಿಯಲ್ಲಿ ಸಂಕುಚಿತ ರಾಜಕೀಯ!


