ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರವರ ನೇತೃತ್ವದಲ್ಲಿ ಎಬಿವಿಪಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜ ಹಾರಿಸಿದ್ದಾರೆ ಎಂದು ಆರೋಪಿಸಿ ಸಿಂಧನೂರಿನಲ್ಲಿ ಸಚಿವ ನಾಗೇಶ್‌ರವರ ವಿರುದ್ಧ ದೂರು ದಾಖಲಾಗಿದೆ.
ಸಿಂಧನೂರಿನ ಸಾಮಾಜಿಕ ಕಾರ್ಯಕರ್ತರಾದ ಎಂ.ಗಂಗಾಧರ ಎಂಬುವವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, “ಆಗಸ್ಟ್ 10 ರಂದು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ ಅವರು ತಿಪಟೂರಿನಲ್ಲಿ ಶಾಲಾ ಸಿಬ್ಬಂದಿವರ್ಗ ಹಾಗೂ ಮಕ್ಕಳನ್ನು ಬಳಸಿಕೊಂಡು ತ್ರಿವರ್ಣಧ್ವಜ ಅಂದರೆ, ರಾಷ್ಟ್ರಧ್ವಜದ ಮೇಲೆ ಎಬಿವಿಪಿ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುತ್ತಾರೆ. ಇದು ರಾಷ್ಟ್ರದ್ರೋಹಕ್ಕೆ ಸಮನಾದ ಅಪರಾಧವಾಗಿರುತ್ತದೆ, ಹಾಗಾಗಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದ್ದಾರೆ.
ಶಾಲಾ ಮಕ್ಕಳನ್ನು ಇಂತಹ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಇದು ಒಬ್ಬ ಶಿಕ್ಷಣ ಸಚಿವರು ಭಾಗವಹಿಸುತ್ತಾರೆ ಎನ್ನುವುದಕ್ಕೆ ಎಬಿವಿಪಿ ಸಂಘಟನೆಯೊಂದಿಗೆ ಶಾಲಾ ಕಾಲೇಜಿನ ಉಪನ್ಯಾಸಕರುಗಳು ರಸ್ತೆಗೆ ಇಳಿದಿರುವುದು ದೇಶದ್ರೋಹವಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಧ್ವಜ ಸಂಹಿತೆ ಮತ್ತು ರಾಷ್ಟ್ರದ್ರೋಹದ ಅಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ.
ನಡೆದಿದ್ದೇನು?
‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಂಗವಾಗಿ ತಿಪಟೂರು ನಗರದಲ್ಲಿ ಎಬಿವಿಪಿ ಆಯೋಜಿಸಲಾಗಿದ್ದ ‘ತಿರಂಗ ಯಾತ್ರೆ’ಯಲ್ಲಿ ಸಚಿವ ನಾಗೇಶ್ ಭಾಗವಹಿಸಿದ್ದರು. ಭಾಗಶಃ ವಿದ್ಯಾರ್ಥಿನಿಯರೇ ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಅವರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಹೆಜ್ಜೆ ಹಾಕಿದ್ದರು. ಆದರೆ ಅದಕ್ಕಿಂತಲೂ ಎತ್ತರದಲ್ಲಿ ಎಬಿವಿಪಿ ಧ್ವಜವನ್ನು ಹಿಡಿಯಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ದಾಖಲಾಗಿತ್ತು.
'ಸ್ವಾತಂತ್ರ್ಯದ ಅಮೃತ ಮಹೋತ್ಸವ' ಅಂಗವಾಗಿ
ತಿಪಟೂರು ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವತಿಯಿಂದ ಆಯೋಜಿಸಲಾಗಿದ್ದ 'ತಿರಂಗ ಯಾತ್ರೆ'ಯಲ್ಲಿ ಭಾಗವಹಿಸಿದೆ.@ABVPKarnataka#ಸ್ವಾತಂತ್ರ್ಯದಅಮೃತಮಹೋತ್ಸವ#AzadiKaAmritMahotsav #IndiaAt75 pic.twitter.com/dmXTuniN8B— B.C Nagesh (@BCNagesh_bjp) August 10, 2022
ಧ್ವಜ ಸಂಹಿತೆ ಏನು ಹೇಳುತ್ತದೆ?
ರಾಷ್ಟ್ರಧ್ವಜಕ್ಕಾಗಿ ರೂಪಿಸಲಾಗಿರುವ ಧ್ವಜಸಂಹಿತೆ, “ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಬಾರದು” ಎಂದು ಹೇಳುತ್ತದೆ. ಆದರೆ ಸಚಿವ ನಾಗೇಶ್ ಅವರು ಭಾಗವಹಿಸಿದ್ದ ಮೆರವಣಿಗೆಯು ಧ್ವಜ ಸಂಹಿತೆಯ ಈ ನಿಯಮವನ್ನು ಉಲ್ಲಂಘಿಸಲಾಗಿದೆ.
ಧ್ವಜ ಸಂಹಿತೆಯ ನಿಯಮ ( ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ)
ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಬಾರದು.
ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜದ ಮೇಲೆ ಇಡಬಾರದು.
ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕೆ ಸರಿಸಮಾನವಾಗಿ ಇಡಬಾರದು.
ಸಾಂವಿಧಾನಿಕ ಹುದ್ದೆಯಲ್ಲಿ ಇರುವ ಜನಪ್ರತಿನಿಧಿಯೊಬ್ಬ ಕಾನೂನು ಉಲ್ಲಂಘಿಸಿದ್ದು ರಾಜ್ಯದಾದ್ಯಂತ ಆಕ್ರೊಶ ಹುಟ್ಟು ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಂತಕ ಜಿಎನ್ ನಾಗರಾಜ್, “ಹರ್ ಘರ್ ಮೇ ತಿರಂಗಾ ಎಂದು ವದರುತ್ತಿರುವವರಿಗೆ ದೇಶಪ್ರಜ್ಞೆ ಇದ್ದರೆ ಸಂಪುಟದಿಂದ ವಜಾ ಮಾಡಿ. ತಕ್ಷಣ ಈ ಅಪರಾಧ ಮಾಡಿದವರಿಗೆ ತಕ್ಕ ಕಾನೂನಿನ ಶಿಕ್ಷೆ ನೀಡಿ” ಎಂದು ಕಿಡಿ ಕಾರಿದ್ದಾರೆ.
ವಿಧಾನ ಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಹರಿಪ್ರಸಾದ್ ಅವರು, ತ್ರಿವರ್ಣ ಧ್ವಜದ ಮೇಲೆ ಯಾವ ಧ್ವಜವನ್ನೇ ಹಾರಿಸುವುದು ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. “ಶಿಕ್ಷಣ ಸಚಿವರಿಗೆ ಕನಿಷ್ಟ ಕಾನೂನಿನ ತಿಳುವಳಿಕೆ ಇಲ್ಲದೆ, ಭಾಗವಧ್ವಜವನ್ನ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಿಡಿದುಕೊಂಡು ಅಪರಾಧ ಮಾಡಿದ್ದಲ್ಲದೇ RSS ಮನಸ್ಥಿತಿಯನ್ನ ತೋರಿಸಿದ್ದಾರೆ. ಕೂಡಲೇ ಬಿಸಿ ನಾಗೇಶ್ ಮೇಲೆ ದ್ವಜಸಂಹಿತೆಯಡಿ ಕೇಸ್ ಹಾಕಬೇಕು” ಎಂದು ಆಗ್ರಹಿಸಿದ್ದಾರೆ.
ತ್ರಿವರ್ಣ ಧ್ವಜದ ಮೇಲೆ ಯಾವ ಧ್ವಜವನ್ನೇ ಹಾರಿಸುವುದು ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆ.!
ಶಿಕ್ಷಣ ಸಚಿವರಿಗೆ ಕನಿಷ್ಟ ಕಾನೂನಿನ ತಿಳುವಳಿಕೆ ಇಲ್ಲದೆ,ಭಾಗವಧ್ವಜವನ್ನ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಿಡಿದುಕೊಂಡು ಅಪರಾಧ ಮಾಡಿದ್ದಲ್ಲದೇ RSS ಮನಸ್ಥಿತಿಯನ್ನ ತೋರಿಸಿದ್ದಾರೆ.
ಕೂಡಲೇ@BCNagesh_bjpಮೇಲೆ ದ್ವಜಸಂಹಿತೆಯಡಿ ಕೇಸ್ ಹಾಕಬೇಕು pic.twitter.com/xIw8oe5lRg
— Hariprasad.B.K. (@HariprasadBK2) August 11, 2022



Deshdrohi Nagesh.
Minister Nagesh.Down down.