ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಕೇಂದ್ರ ಸಚಿವೆ ಮೀರಾ ಕುಮಾರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ತಂದೆ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಕೂಡಾ ಜಾತಿ ವ್ಯವಸ್ಥೆಯಿಂದಾಗಿ ಎದುರಿಸಿದ್ದ ತಾರತಮ್ಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ದಲಿತ ಬಾಲಕನೊಬ್ಬ ಸವರ್ಣೀಯರಿಗೆ ಮೀಸಲಾದ ಪಾತ್ರೆಯಲ್ಲಿ ನೀರು ಕುಡಿಸಿದ್ದಾರೆಂದು ಆರೋಪಕ್ಕೊಳಗಾಗಿ ಶಿಕ್ಷಕನಿಂದ ಹತ್ಯೆಯಾದ ಪ್ರಕರಣದ ವಿರುದ್ಧ ಮೀರಾ ಕುಮಾರ್ ಮಾತನಾಡಿದ್ದಾರೆ.
ಸೋಮವಾರದಂದು ಟ್ವೀಟ್ ಮಾಡಿರುವ ಮೀರಾ ಕುಮಾರ್ ಅವರು, “100 ವರ್ಷಗಳ ಹಿಂದೆ, ನನ್ನ ತಂದೆ ಬಾಬು ಜಗಜೀವನ್ ರಾಮ್ ಅವರಿಗೆ ಶಾಲೆಯಲ್ಲಿ ಸವರ್ಣ ಹಿಂದೂಗಳಿಗೆ ಮೀಸಲಾದ ಪಾತ್ರೆಯಿಂದ ನೀರನ್ನು ಕುಡಿಯಬಾರದು ಎಂದು ನಿಷೇಧಿಸಿದ್ದರು. ಆಗ ಅವರ ಪ್ರಾಣ ಉಳಿದಿದ್ದು ಒಂದು ಪವಾಡ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಂದು, ಅದೇ ಕಾರಣಕ್ಕಾಗಿ ಒಂಬತ್ತು ವರ್ಷದ ದಲಿತ ಬಾಲಕನನ್ನು ಕೊಲ್ಲಲಾಗಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ, ಜಾತಿ ವ್ಯವಸ್ಥೆಯು ನಮ್ಮ ದೊಡ್ಡ ಶತ್ರುವಾಗಿ ಉಳಿದಿದೆ” ಎಂದು ಅವರು ಹೇಳಿದ್ದಾರೆ.
Today, a nine year old #Dalit boy has been killed for the same reason.
75 long years after Independence, caste system remains our greatest enemy. 2/2
— Meira Kumar (@meira_kumar) August 15, 2022
ಮಂಗಳವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೀರಾ ಕುಮಾರ್ ತನ್ನ ತಂದೆಯನ್ನು “ಅವಮಾನಗೊಳಿಸಲಾಗಿತ್ತು” ಮತ್ತು ಅವರು ತಮ್ಮ ಅಧಿಕಾರಾವಧಿಯಲ್ಲಿ ಜಾತಿವಾದಿ ನಿಂದನೆಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮ್ಯಾನೇಜ್‌ಮೆಂಟ್ ಸರ್ಕಾರ | ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ
1978 ರಲ್ಲಿ ವಾರಣಾಸಿಯಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ ಅವರು, ತಂದೆ ಸಂಪೂರ್ಣಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲು ಹೋಗಿದ್ದರು. ಅಲ್ಲಿ ಅವರಿಗೆ “ಜಗಜೀವನ್ ‘ಚಮ್ಮಾರ್’ ಇಲ್ಲಿಂದ ಹೋಗು” ಎಂದು ಹೇಳಲಾಗಿತ್ತು” ಎಂದು ಹೇಳಿದ್ದಾರೆ.
“ಪ್ರತಿಮೆ ‘ಕಲುಷಿತ’ವಾಗಿದೆ ಎಂದು ಅವರು ಅದನ್ನು ಗಂಗಾಜಲದಿಂದ ತೊಳೆದರು… ಜಾತಿ ವ್ಯವಸ್ಥೆಯು ಪ್ರತಿಯೊಬ್ಬರನ್ನು ಆವರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಲಂಡನ್‌ನಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕುತ್ತಿರುವಾಗ ತನ್ನ ಜಾತಿಯ ಕುರಿತು ಕೇಳಿರುವ ಬಗ್ಗೆ ಮೀರಾ ಕುಮಾರ್ ಅವರು ನೆನಪಿಸಿಕೊಂಡಿದ್ದಾರೆ. “ಮನೆಯನ್ನು ಬಾಡಿಗೆಗೆ ನೀಡಲು ಹೊರಟಿದ್ದ ವ್ಯಕ್ತಿ ಹಿಂದೂ ಕೂಡ ಆಗಿರಲಿಲ್ಲ. ಅವರು ಕ್ರಿಶ್ಚಿಯನ್ ಆಗಿದ್ದರೂ… ಅವರು ನನ್ನನ್ನು ‘ನೀವು ಬ್ರಾಹ್ಮಣರೆ?’ ಎಂದು ಕೇಳಿದರು. ನಾನು, ‘ಅಲ್ಲ, ನಾನು ಬ್ರಾಹ್ಮಣನಲ್ಲ, ಪರಿಶಿಷ್ಟ ಜಾತಿ. ನಿಮಗೆ ಏನಾದರೂ ತೊಂದರೆ ಇದೆಯೇ?’ ಎಂದೆ. ಆಗ ಅವರು, ‘ಇಲ್ಲ’ ಎಂದರು. ಆದರೆ ಅವರು ನನಗೆ ಮನೆ ಕೊಡಲೇ ಇಲ್ಲ!” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಶಿಕ್ಷಕನಿಂದ ದಲಿತ ಬಾಲಕನ ಹತ್ಯೆ ಪ್ರಕರಣ; ರಾಜಕೀಯ ಬಿಕ್ಕಟ್ಟಿನಲ್ಲಿ ಸಿಎಂ ಗೆಹ್ಲೋಟ್
“ಈ ಬಗ್ಗೆ ನಾನು ನನ್ನ ತಂದೆಯನ್ನು, ‘ನೀವು ಸ್ವಾತಂತ್ರ್ಯಕ್ಕಾಗಿ ಏಕೆ ಹೋರಾಡಿದ್ದೀರಿ? ಈ ದೇಶ ನಿಮಗಾಗಿ ಏನನ್ನೂ ಮಾಡಿಲ್ಲ. ಅದು ನಿಮಗೆ ಅಥವಾ ನಿಮ್ಮ ಪೂರ್ವಜರಿಗೂ ಏನನ್ನೂ ನೀಡಿಲ್ಲ… ಎಂದು ಕೇಳಿದ್ದೆ’ ಅದಕ್ಕೆ ಅವರು, ‘ಸ್ವತಂತ್ರ ಭಾರತವು ಬದಲಾಗಲಿದ್ದು, ಜಾತಿ ರಹಿತ ಸಮಾಜ ನಿರ್ಮಾಣವಾಗಲಿದೆ’ ಎಂದು ಹೇಳಿದ್ದರು” ಎಂದು ಮೀರಾ ಅವರು ನೆನಪಿಸಿಕೊಂಡಿದ್ದಾರೆ.
“ಸ್ವಾತಂತ್ರ್ಯದ 75 ವರ್ಷಗಳ ನಂತರ ಕೂಡಾ ಭಾರತ ಬದಲಾಗಿಲ್ಲ ಎಂಬುವುದನ್ನು ನೋಡಲು ಅವರು ಈಗ ಇಲ್ಲ ಎಂಬುವುದೆ ನನಗೆ ಖುಷಿಯ ವಿಚಾರವಾಗಿದೆ” ಎಂದು ಮೀರಾ ಹೇಳಿದ್ದಾರೆ.
#NDTVExclusive | “My Father, A Deputy PM, Was Discriminated Against”: Ex Speaker @Meira_Kumar pic.twitter.com/10dHWEB3Db
— NDTV (@ndtv) August 16, 2022
ಇದನ್ನೂ ಓದಿ: ಮಹಿಳೆಯ ಬಗ್ಗೆ ಮೋದಿ ಆಡಿದ ಮಾತಿಗೆ ಅರ್ಥವಿಲ್ಲವೆ?: ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆ ಬಳಿಕ ಪ್ರತಿಪಕ್ಷಗಳ ವಾಗ್ದಾಳಿ
ಜಲೋರ್‌ನ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ಒಂದು ಬಣ ಕಿಡಿಕಾರಿದ್ದಾರೆ. ಅಲ್ಲದೆ ಬರನ್-ಅತ್ರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ಅವರು ಸೋಮವಾರ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಮತ್ತು ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ.


