2018ರಲ್ಲಿ ಬಿಜೆಪಿ ಮುಖಂಡ ಶಹ್‌ನವಾಜ್ ಹುಸೇನ್ ವಿರುದ್ಧ ದೆಹಲಿ ಮೂಲದ ಮಹಿಳೆ ಸಲ್ಲಿಸಿದ್ದ ದೂರನ್ನು ಪರಿಗಣಿಸಿ ಅತ್ಯಾಚಾರದ ಪ್ರಕರಣ ದಾಖಲಿಸಬೇಕೆಂದು ದೆಹಲಿ ಪೊಲೀಸರಿಗೆ ಹೈಕೋರ್ಟ್ ತಾಕೀತು ಮಾಡಿದೆ.
2018ರಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ ಆದೇಶದ ವಿರುದ್ಧ ಆರೋಪಿ ಶಹ್‌ನವಾಜ್ ಹುಸೇನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಮೇಲಿನ ಪ್ರಕರಣ ಕೈಬಿಡುವಂತೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ಆಶಾ ಮೆನನ್ ವಿಚಾರಣೆಗೆ ತಡೆಯಾಗಿದ್ದ ಮಧ್ಯಂತರ ಆದೇಶವನ್ನು ರದ್ದಗೊಳಿಸಿ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ.
“ಈ ಅರ್ಜಿಯಲ್ಲಿ ಯಾವುದೇ ಹುರಳಿಲ್ಲ. ಹಾಗಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಧ್ಯಂತರ ಆದೇಶವನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಎಫ್‌ಐಆರ್ ದಾಖಲಿಸಬಹುದು. ಸಿ.ಆರ್.ಪಿ.ಸಿಒ ಸೆಕ್ಷನ್ 173ರ ಅನ್ವಯ ತನಿಖೆ ನಡೆಸಿ ವಿವರವಾದಿ ವರದಿಯನ್ನು ಮೂರು ತಿಂಗಳ ಒಳಗೆ ಮೆಟ್ರೊಪೊಲಿಟಾನ್ ಮ್ಯಾಜಸ್ಟ್ರೇಟ್ ಎದುರು ಸಲ್ಲಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದುವರೆಗೆ ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂಬುದಕ್ಕೆ ಸರಿಯಾದ ವಿವರಣೆ ನೀಡಿಲ್ಲ. ಯಾವುದೇ ತನಿಖೆಯಲ್ಲಿ ಎಫ್‌ಐಆರ್ ತಳಹದಿ ಇದ್ದಂತೆ. ಅದರ ಆಧಾರದಲ್ಲಿ ತನಿಖೆ ನಡೆಸಿದ ನಂತರವಷ್ಟೇ ಪೊಲೀಸರು ಅಪರಾಧ ನಡೆದಿದೆಯೆ ಅಥವಾ ಇಲ್ಲವೇ ಎಂಬ ನಿರ್ಣಯಕ್ಕೆ ಬರಲು ಸಾಧ್ಯ. ಆದರೆ ಈ ಪ್ರಕರಣದಲ್ಲಿ ಎಲ್ಲಾ ತದ್ವಿರುದ್ಧವಾಗಿದೆ. ಕನಿಷ್ಠ ಎಫ್‌ಐಆರ್ ಸಹ ದಾಖಲಿಸಿಲ್ಲ ಎಂದು ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ದೆಹಲಿ ಮಹಿಳೆ ಬಿಜೆಪಿ ಮುಖಂಡ ಶಹ್‌ನವಾಜ್ ಹುಸೇನ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಮ್ಯಾಜಿಸ್ಟ್ರೀಯಲ್ ನ್ಯಾಯಾಲಯ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಅದರ ವಿರುದ್ಧ ಹುಸೇನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು ಸಚಿವ


