Homeಮುಖಪುಟಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

- Advertisement -
- Advertisement -

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೂ ಮಹಾಸಭಾ ನಾಯಕ ಸಾವರ್ಕರ್ ಕುರಿತು ತೀವ್ರ ರೀತಿಯ ಪ್ರಚಾರಕ್ಕೆ ಮುಂದಾಗಿದ್ದು ಅದಕ್ಕೆ ಸಾಕಷ್ಟು ವಿರೋಧ ಸಹ ದಾಖಲಾಗಿದೆ. ಇದೇ ಸಂದರ್ಭದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ್ದ 8ನೇ ತರಗತಿ ಕನ್ನಡ ದ್ವಿತೀಯ ಭಾಷ ಪಠ್ಯದಲ್ಲಿ ಸಾವರ್ಕರ್ ಕುರಿತು ಉತ್ಪ್ರೇಕ್ಷಿತ ಪಠ್ಯ ಸೇರಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಬುಲ್‌ಬುಲ್ ಹಕ್ಕಿಯ ಮೇಲೆ ಕುಳಿತು ಭಾರತಕ್ಕೆ ಬಂದಿದ್ದರು ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳು ಮೀಮ್‌ಗಳು ಹರಿದಾಡುತ್ತಿವೆ.

8ನೇ ತರಗತಿಯ ‘ತಿಳಿ ಕನ್ನಡ’ ಪಠ್ಯಪುಸ್ತಕದಲ್ಲಿ ಲೇಖಕ ಕೆ ಟಿ ಗಟ್ಟಿಯವರು ಬರೆದಿರುವ ವಿ ಡಿ ಸಾವರ್ಕರ್ ಕುರಿತ ‘ಕಾಲವನ್ನು ಗೆದ್ದವರು’ ಎನ್ನುವ ಪ್ರವಾಸ ಕಥನವು ಇದೀಗ ವಿವಾದದ ವಸ್ತುವಾಗಿದೆ. ಅದರಲ್ಲಿ ಲೇಖಕರು ಸಾವರ್ಕರ್‌ರನ್ನು ಇರಿಸಲಾಗಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ ಬಗ್ಗೆ ಬರೆದಿರುವುದು ಹೀಗೆ.. “ಕೋಣೆಯೊಳಗಿನ ಹಿಂಬದಿ ಗೋಡೆಯ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ ಎಲ್ಲಿಂದಲೋ ಬುಲ್‌ಬುಲ್ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು”. ಇಷ್ಟೊಂದು ಉತ್ಪ್ರೇಕ್ಷಿತ ಪಠ್ಯವನ್ನು ಮಕ್ಕಳು ಕಲಿಯಬೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದು ಸುಳ್ಳಲ್ಲವೆ? ನಿಜವೇ ಆದ್ರೆ ಹೇಗೆ ತಿಳಿಸಿ. ನಿಮ್ಮ ಪ್ರಕಾರ ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಗಾಳಿ ಬೆಳಕು ಎಲ್ಲಾ ಚೆನ್ನಾಗಿ ಬರುತ್ತಿದ್ದ ಕೋಣೆ ಇದು, ಆದರೆ ಗಾಳಿ ಬೆಳಕು ಬರಲು ಒಂದೂ ಕಿಂಡಿ ಕೂಡ ಇರದ ಕೋಣೆಲಿ ಸಾವರ್ಕರ್ ಇದ್ರು ಅಂತ ಸುಳ್ಳು ಬರೆದು 8ನೇ ತರಗತಿ ಪುಸ್ತಕದಲ್ಲಿ ಹಾಕಿರೋದ್ಯಾಕೆ? ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ? ಎಂದು ಕನ್ನಡ ಹೋರಾಟಗಾರು ರೂಪೇಶ್ ರಾಜಣ್ಣ ಪ್ರಶ್ನಿಸಿದ್ದಾರೆ.

25 ಗ್ರಾಂ ತೂಕದ ಬುಲ್ ಬುಲ್ ಹಕ್ಕಿ 50 ರಿಂದ 60 ಕೆಜಿ ತೂಕದ ಮನುಷ್ಯನ್ನ ರೆಕ್ಕೆ ಮೇಲೆ ಕೂರಿಸಿಕೊಂಡು ಹೊತ್ಕೊಂಡು ಹೋಗುತ್ತೆ ಅಂದ್ರೆ ಅದರ ಶಕ್ತಿ ಬಗ್ಗೆ ಅಧ್ಯಯನ ಆಗಲೇ ಬೇಕು.

ಸಾವರ್ಕರ್ ಬುಲ್ ಬುಲ್ ಹಕ್ಕಿ ಮೇಲೆ ಕೂರು ಕ್ಷಮಾಪಣಾ ಪತ್ರ ಬರೆಯುತ್ತಿದ್ದರೆ ಎಂದು ಹಲವರು ಟ್ವಿಟರ್‌ನಲ್ಲಿ ಟ್ರೋಲ್ ಮಾಡಿದ್ದಾರೆ.

“ಹೇಡಿ ಸಾವರ್ಕರ್ ಕುರಿತು 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಬರೆದ ಸುಳ್ಳಿನ ಕಥೆಗಳಲ್ಲಿ ಮಹಾನ್ ಸುಳ್ಳೆಂದು ಪತ್ತೆಯಾಗಿದೆ. ಅಂಡಮಾನ್ ಜೈಲಿನಿಂದ ಸಾವರ್ಕರ್ ಪ್ರತೀ ದಿನ ಬುಲ್ ಬುಲ್ ಹಕ್ಕಿಗಳ ಮೂಲಕ ಸೆಲ್‌ನಿಂದ ತಾಯ್ಕಾಡಿಗೆ ಹೋಗಿ ತಾಯ್ಕಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದನಂತೆ. ಒಂದು ವೇಳೆ ಸಾವರ್ಕರ್ ಇಂದು ಬದುಕಿರುತ್ತಿದ್ದರೆ ಇದನ್ನು ಓದಿ ಎದ್ದು ಬಿದ್ದು ನಕ್ಕು ಸಾಯುತ್ತಿದ್ದ ಎಳೆಯ ಮನಸ್ಸುಗಳಲ್ಲಿ ಸುಳ್ಳನ್ನು ಬಿತ್ತುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸುವವರಾರು?’ ಎಂದು ರವಿ ಆನಂದ್ ಎಂಬುವವರು ಫೇಸ್ಟುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲಾ ರೀತಿ ವಿಫಲವಾಗಿರುವ ಬಿಜೆಪಿ ಅಧಿಕಾರಕ್ಕಾಗಿ ಮಾತ್ರ ಸಾವರ್ಕರ್ ಹೆಸರು ಬಳಸುತ್ತಿದೆ: ಹಿಂದೂ ಮಹಾಸಭಾ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಇಂತಹ ಪಠ್ಯವನ್ನು ಓದಿದ ಮಕ್ಕಳು ಉದ್ದಾರ ಆಗುವುದಿಲ್ಲ ಮತ್ತು ಮನುವಾದಿಗಳಿಗೆ ಬೇಕಾಗಿರುವುದು ಸಹ ಇದೆ.

  2. ಒಬ್ಬ ವ್ಯಕ್ತಿಯನ್ನು ತಮಗೆ ಬೇಕಾದ ರೀತಿಯಲ್ಲಿ ವೈಭವಿಕರಿಸುವುದು ಅದರಿಂದ ತಮಗೆ ಉಪಯೋಗವಾಗುವುದಿದ್ದಲ್ಲಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಇವರು. ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಮಟ್ಟಕ್ಕೆ ಇಳಿದಿರುವುದು ಹೇಸಿಗೆಯ ವಿಚಾರ. ಹಿಜಾಬ್ ಆಯ್ತು, ಹಿಲಾಲ್ ಆಯ್ತು, ಮಸೀದಿ ಆಯ್ತು, ಈಗ ಇದು.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...