Homeಮುಖಪುಟಏರ್‌ಪೋರ್ಟ್ ವಿವಾದದಲ್ಲಿ ಬಿಜೆಪಿ ಸಂಸದ; ದಿಯೋಘರ್‌ ಡಿಸಿ ವಿರುದ್ಧ ದೆಹಲಿಯಲ್ಲಿ ದೇಶದ್ರೋಹ ಪ್ರಕರಣ ದಾಖಲು

ಏರ್‌ಪೋರ್ಟ್ ವಿವಾದದಲ್ಲಿ ಬಿಜೆಪಿ ಸಂಸದ; ದಿಯೋಘರ್‌ ಡಿಸಿ ವಿರುದ್ಧ ದೆಹಲಿಯಲ್ಲಿ ದೇಶದ್ರೋಹ ಪ್ರಕರಣ ದಾಖಲು

- Advertisement -
- Advertisement -

ಆಗಸ್ಟ್ 31ರಂದು ದಿಯೋಘರ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ‘ಬಲವಂತವಾಗಿ’ ಫ್ಲೈಟ್ ಕ್ಲಿಯರೆನ್ಸ್ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಮನೋಜ್ ತಿವಾರಿ, ದುಬೆ ಅವರ ಇಬ್ಬರು ಪುತ್ರರು ಮತ್ತು ಇತರರ ವಿರುದ್ಧ ಜಾರ್ಖಂಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಇದಾದ ನಂತರ ದುಬೆ ಅವರ ದೂರಿನ ಮೇರೆಗೆ ದೆಹಲಿ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ದಿಯೋಘರ್ ವಿಮಾನ ನಿಲ್ದಾಣದ ‘ನಿರ್ಬಂಧಿತ’ ಪ್ರದೇಶವನ್ನು ಪ್ರವೇಶಿಸುವ ಮೂಲಕ ‘ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದ್ದಾರೆ’ ಎಂದು ದಿಯೋಘರ್ ಡೆಪ್ಯೂಟಿ ಕಮಿಷನರ್ ಮತ್ತು ಜಾರ್ಖಂಡ್ ಪೊಲೀಸ್ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೆಹಲಿ ಪೊಲೀಸರು ದಿಯೋಘರ್‌ನಲ್ಲಿರುವ ಕುಂದಾ ಪೊಲೀಸ್ ಠಾಣೆಗೆ ತನಿಖೆಗಾಗಿ ಎಫ್‌ಐಆರ್‌ ಕಳುಹಿಸಿದ್ದಾರೆ. ದಿಯೋಘರ್ ವಿಮಾನ ನಿಲ್ದಾಣ ಸಲಹಾ ಸಮಿತಿಯ ಅಧ್ಯಕ್ಷ ಸಂಸದ ನಿಶಿಕಾಂತ್ ದುಬೆ ಅವರು ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 124A (ದೇಶದ್ರೋಹ), 353 (ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ), 448 (ಮನೆ ಅತಿಕ್ರಮಣ), 201 (ಸಾಕ್ಷಾಧಾರಗಳ ಕಣ್ಮರೆಗೆ ಕಾರಣ), 506 (ಅಪರಾಧ ಬೆದರಿಕೆ), 120 ಬಿ (ಅಪರಾಧದ ಪಿತೂರಿ) ಮತ್ತು ಅಧಿಕಾರಿಗಳ ರಹಸ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಿಯೋಘರ್ ಡೆಪ್ಯುಟಿ ಕಮಿಷನರ್ ಮಂಜುನಾಥ್ ಭಜಂತ್ರಿಯವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯೆ ನೀಡಿದ್ದು, “ಇದು (ಎಫ್‌ಐಆರ್) ಒಂದು ಅಸಂಬದ್ಧ ಮತ್ತು ಶೇ.100ರಷ್ಟು ಕಟ್ಟುಕಥೆಯಾಗಿದೆ. ಅವರು ಭದ್ರತಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ. ತನಿಖೆಯಲ್ಲಿ ಎಲ್ಲವೂ ಬಹಿರಂಗವಾಗುತ್ತದೆ” ಎಂದಿದ್ದಾರೆ.

ಎಟಿಸಿ ಕೋಣೆಗೆ ಪ್ರವೇಶಿಸುವ ಮೂಲಕ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಕ್ಲಿಯರೆನ್ಸ್‌ ಕೊಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ಭದ್ರತಾ ಉಸ್ತುವಾರಿ ಸುಮನ್ ಆನಂದ್ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 1ರಂದು ಕುಂದಾ ಪೊಲೀಸ್ ಠಾಣೆಯಲ್ಲಿ ದುಬೆ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದಿಯೋಘರ್‌ನಿಂದ ಟೇಕಾಫ್ ಮಾಡಲು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನಿಂದ ಬಲವಂತವಾಗಿ ಕ್ಲಿಯರೆನ್ಸ್ ತೆಗೆದುಕೊಂಡ ಆರೋಪದ ಮೇಲೆ ಸಂಸದರ ವಿರುದ್ಧ ಜಾರ್ಖಂಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆಗಸ್ಟ್ 31ರಂದು ವಿಮಾನ ನಿಲ್ದಾಣದಲ್ಲಿ ರಾತ್ರಿ ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸೌಲಭ್ಯವಿಲ್ಲ. ಸೆಪ್ಟಂಬರ್ 1 ರಂದು ಭದ್ರತಾ ಪ್ರಭಾರಿ ಸುಮನ್ ಆನಂದ್ ದೂರು ನೀಡಿದ್ದರು.

ಡಿಸಿ ಭಜಂತ್ರಿಯವರು ಜಾರ್ಖಂಡ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದು, “ದುಬೆ ಮತ್ತು ಇತರರು ಎಟಿಸಿ ಕೊಠಡಿಯೊಳಗೆ ಬಂದರು. ಕ್ಲಿಯರೆನ್ಸ್‌ಗಾಗಿ ಒತ್ತಡ ಹೇರಿದರು” ಎಂದು ಆರೋಪಿಸಿದ್ದಾರೆ.

ಇದಾದ ಬಳಿಕ ದುಬೆ ಅವರು ದೂರು ನೀಡಿದ್ದು ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಗಸ್ಟ್ 31 ರಂದು ದೆಹಲಿಗೆ ಪ್ರಯಾಣಿಸಬೇಕಾಗಿತ್ತು. ಭದ್ರತಾ ತಪಾಸಣೆಯ ನಂತರ ಆಗಸ್ಟ್ 31ರಂದು ಸಂಜೆ 5.25 ಫ್ಲೈಟ್ ಹತ್ತಲಾಯಿತು. ನೈಟ್ ಲ್ಯಾಂಡಿಂಗ್ ಸೌಲಭ್ಯಗಳ ಕೊರತೆಯ ಬಗ್ಗೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಕರಣವೊಂದು ಬಾಕಿ ಉಳಿದಿರುವುದರಿಂದ ಮತ್ತು ಸಾಕಷ್ಟು ಸಮಯವಿಲ್ಲದ ಕಾರಣ, ಈ ವಿಷಯದ ಕುರಿತು ಚರ್ಚಿಸಲು ನಾನು ವಿಮಾನ ನಿಲ್ದಾಣದ ನಿರ್ದೇಶಕರ ಕಚೇರಿಗೆ ಬರಿಗಾಲಿನಲ್ಲಿ ನಡೆದಿದ್ದೇನೆ ಎಂದು ದುಬೆ ಹೇಳಿದ್ದಾರೆ.

“ನಾನು ಹೋಗುತ್ತಿರುವಾಗ, ಜಾರ್ಖಂಡ್ ಪೊಲೀಸರು ಮತ್ತು (ರಾಜ್ಯ ಸರ್ಕಾರದ) ನೌಕರರು ನನ್ನನ್ನು ತಡೆದರು. ನನ್ನ ಇಬ್ಬರು ಗಂಡುಮಕ್ಕಳನ್ನು ನಿಂದಿಸಿದರು. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ದಿಯೋಘರ್ ಡಿಸಿಯ ಸೂಚನೆಯಲ್ಲಿ ಅವರು ನನ್ನ ಕೆಲಸಕ್ಕೆ ಅಡ್ಡಿಪಡಿಸಿದರು. ಮರುದಿನ ಜಿಲ್ಲಾಧಿಕಾರಿಯವರು ದಿಯೋಘರ್ ವಿಮಾನ ನಿಲ್ದಾಣದ ಸುರಕ್ಷಿತ ಡಿಆರ್‌ಡಿಒ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ನನಗೆ ತಿಳಿದಿತ್ತು. ಅಲ್ಲಿಗೆ ಪಿಎಂಒ ಅನುಮತಿಯ ನಂತರ ಮಾತ್ರ ಹೋಗಬಹುದು” ಎಂದು ದೆಹಲಿ ದುಬೆ ಆಪಾದಿಸಿದ್ದಾರೆ.

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ದುಬೆ ಮತ್ತು ಭಜಂತ್ರಿ ನಡುವೆ ಟ್ವಿಟ್ಟರ್ ವಾರ್‌ ನಡೆದಿದೆ. ದುಬೆ: “…ನೀವು ವಿಮಾನ ನಿಲ್ದಾಣದೊಳಗೆ ಹೇಗೆ ಬಂದಿರಿ? ಯಾವ ಅಧಿಕಾರದ ಅಡಿಯಲ್ಲಿ ಬಂದಿರಿ? ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಲು ನಿಮಗೆ ಅನುಮತಿ ನೀಡಿದವರು ಯಾರು? ನೀವು ಹತಾಶರಾಗಿದ್ದೀರಿ”.

ಇದನ್ನೂ ಓದಿರಿ: ಲಿಂಬಾವಳಿ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ‘ರೇಪ್‌’ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ

ಭಜಂತ್ರಿ: ಇದಕ್ಕೆ ಅಧಿಕಾರ ಹೊಂದಿದ್ದೇನೆ. ಪ್ರವೇಶಕ್ಕಾಗಿ ಗೇಟ್ ಪಾಸ್ ಇದೆ.

ದುಬೆ: “ಎಟಿಸಿ ಟವರ್‌ ಪ್ರವೇಶಿಸಲು ನಿಮಗೆ ಅನುಮತಿ ನೀಡಿದವರು ಯಾರು? ನೀವು ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿದ್ದೀರಿ”.

ಭಜಂತ್ರಿ ಆರೋಪವನ್ನು ತಿರಸ್ಕರಿಸಿದ್ದಾರೆ. ಅಧಿಕಾರಿ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.

ಎಟಿಸಿ ಆವರಣವನ್ನು ಪ್ರವೇಶಿಸಲು, ಒಬ್ಬ ವ್ಯಕ್ತಿಗೆ ಏರೋಡ್ರೋಮ್ ಎಂಟ್ರಿ ಪರ್ಮಿಟ್ (AEP) ಅಗತ್ಯವಿರುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಬಿಐ, ಜಾರಿ ನಿರ್ದೇಶನಾಲಯವನ್ನು ಮುಚ್ಚಬೇಕು: ಇಂಡಿಯಾ ಮೈತ್ರಿ ಕೂಟದ ಮುಂದೆ ಅಖಿಲೇಶ್ ಯಾದವ್ ಪ್ರಸ್ತಾಪ

0
ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಇಲಾಖೆಗಳು ಅಗತ್ಯವಿಲ್ಲ, ಅವುಗಳನ್ನು ಮುಚ್ಚಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಸಿಬಿಐ ಮತ್ತು...