Homeಮುಖಪುಟಪಡಿತರ ಅಂಗಡಿಯಲ್ಲಿ ಮೋದಿ ಚಿತ್ರ ಇಲ್ಲದಿರುವುದನ್ನು ಕಂಡುಹಿಡಿದ ನಿರ್ಮಲಾ ಸೀತಾರಾಮನ್; ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್

ಪಡಿತರ ಅಂಗಡಿಯಲ್ಲಿ ಮೋದಿ ಚಿತ್ರ ಇಲ್ಲದಿರುವುದನ್ನು ಕಂಡುಹಿಡಿದ ನಿರ್ಮಲಾ ಸೀತಾರಾಮನ್; ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್

ಎಲ್‌ಪಿಜಿ ಸಿಲಿಂಡರ್‌ ಮೇಲೆ ಅದರ ಬೆಲೆ ಹಾಗೂ ಪ್ರಧಾನಿಯ ಚಿತ್ರವನ್ನು ಅಂಟಿಸಿ ‘ತಗೊಳಿ, ಪೋಸ್ಟರ್‌ ಬಂದಿದೆ’ ಎಂದು ವ್ಯಂಗ್ಯವಾಡಲಾಗಿದೆ

- Advertisement -
- Advertisement -

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತವಾಗಿ ಅಕ್ಕಿ ವಿತರಿಸುವ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಪ್ರದರ್ಶಿಸದ ಕಾರಣಕ್ಕೆ ತೆಲಂಗಾಣ ಸರ್ಕಾರದ ವಿರುದ್ಧ ಶುಕ್ರವಾರ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೊವನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಹಲವಾರು ಜನರು ಸಚಿವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಗುರುವಾರದಿಂದ ಬಿಜೆಪಿಯ ಲೋಕಸಭೆ ಪ್ರವಾಸ ಯೋಜನೆ ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ತೆಲಂಗಾಣ ಪ್ರವಾಸದಲ್ಲಿದ್ದ ಸೀತಾರಾಮನ್ ಅವರು ಶುಕ್ರವಾರ ಕಾಮರೆಡ್ಡಿ ಜಿಲ್ಲೆಗೆ ಭೇಟಿ ನೀಡಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಒಕ್ಕೂಟ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವೇಳೆ ಅವರು ಬಿರ್ಕೂರ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಿಲ್ಲಿಸಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದರು. ಪರಿಶೀಲನೆ ವೇಳೆ ಅಂಗಡಿಯಲ್ಲಿ ಪ್ರಧಾನಿಯವರ ಭಾವಚಿತ್ರವಾಗಲಿ, ಫ್ಲೆಕ್ಸ್ ಬೋರ್ಡ್ ಆಗಲಿ ಇಲ್ಲದಿರುವುದನ್ನು ಗಮನಿಸಿದ ಅವರು, ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್ ಪಟೇಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಸಿಯಾದ ತೇಜಸ್ವಿ ಸೂರ್ಯ ಭರವಸೆ: ‘ನನ್ನನ್ನು ಕೇಳಿ ಬ್ಯಾಂಕಲ್ಲಿ ಹಣ ಇಟ್ಟಿದ್ದೀರಾ?’ ಎಂದ ನಿರ್ಮಲಾ ಸೀತಾರಾಮನ್!

ಒಕ್ಕೂಟ ಸರ್ಕಾರದ ಯೋಜನೆಯಡಿ ಅಕ್ಕಿಯನ್ನು ಸರಬರಾಜು ಮಾಡುವ ಪ್ರತಿ ಪಡಿತರ ಅಂಗಡಿಗೆ ಕಡ್ಡಾಯವಾಗಿ ಮೋದಿಯವರ ಫ್ಲೆಕ್ಸ್ ಬೋರ್ಡ್ ಏಕೆ ಇಲ್ಲ ಎಂದು ಈ ವೇಳೆ ಅವರು ಕೇಳಿದ್ದಾರೆ. ನಂತರ ಅವರು ಜಿಲ್ಲೆಯ ಎಲ್ಲ ಅಂಗಡಿಗಳಲ್ಲಿ ಮೋದಿ ಅವರ ಭಾವಚಿತ್ರ ಹಾಕುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. “ಪಡಿತರ ಅಂಗಡಿಗಳಲ್ಲಿ ಪ್ರಧಾನಮಂತ್ರಿಯವರ ಚಿತ್ರಗಳು ತಪ್ಪದೆ ಇರುವಂತೆ ನೋಡಿಕೊಳ್ಳುವುದು ಎಲ್ಲಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.

ತೆಲಂಗಾಣದಲ್ಲಿ ಉಚಿತ ಪಡಿತರ ಅಕ್ಕಿ ವಿತರಣೆಯಲ್ಲಿ ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳ ಪಾಲು ಎಷ್ಟು ಎಂಬುವುದು ಗೊತ್ತಿದೆಯೆ ಎಂದು ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿತೇಶ್‌ ಪಟೇಲ್ ಅವರು ಯೋಜನೆಯ ಸಂಪೂರ್ಣ ವಿವರಗಳನ್ನು ತಾನು ಹೊಂದಿಲ್ಲ ಎಂದು ಹೇಳಿದ್ದು, ಈ ವೇಳೆ ಸಚಿವರು, ಅವರು 30 ನಿಮಿಷಗಳಲ್ಲಿ ಯೋಜನೆಯ ಸಂಪೂರ್ಣ ವಿವರಗಳು ಬೇಕು ಎಂದು ಕೇಳಿದ್ದಾರೆ. ಒಂದು ವೇಳೆ ವಿವರಗಳು ನೀಡಲು ವಿಫಲವಾದರೆ ಪತ್ರಿಕಾಗೋಷ್ಠಿ ಕರೆದು ಟಿಆರ್‌‌ಎಸ್ ಸರ್ಕಾರದವನ್ನು ಎಕ್ಸ್‌‌ಪೋಸ್‌ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್‌ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್

ಫಲಾನುಭವಿಯೊಂದಿಗೆ ಬೆದರಿಸುವ ರೀತಿಯಲ್ಲಿ ಮಾತನಾಡಲು ಯತ್ನಿಸಿದ ನ್ಯಾಯಬೆಲೆ ಅಂಗಡಿಯ ವ್ಯಾಪಾರಿಯನ್ನೂ ನಿರ್ಮಲಾ ಸೀತಾರಾಮನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಡೀಲರ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, “ವ್ಯಾಪಾರಿ ನನ್ನ ಮುಂದೆ ಹೇಗೆ ಮಾತನಾಡುತ್ತಾನೆ?” ಅವಳು ಹೇಳಿದ್ದಾರೆ.

ನಿರ್ಮಲಾ ಅವರು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿರುವುದು ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಅವರು ಪತ್ರಿಕಾಗೋಷ್ಠಿ ಕರೆದು ಅವರ ವರ್ತನೆಯನ್ನು ಖಂಡಿಸಿದ್ದಾರೆ.

ಪಡಿತರ ಅಂಗಡಿಗಳಲ್ಲಿ ಮೋದಿ ಅವರ ಭಾವಚಿತ್ರ ಇಡುವಂತೆ ಒಕ್ಕೂಟ ಸರ್ಕಾರದ ಹಣಕಾಸು ಸಚಿವರು ಒತ್ತಾಯಿಸಿರುವುದು ಹಾಸ್ಯಾಸ್ಪದವಾಗಿದೆ. ಇದು ಪ್ರಧಾನಿಯವರ ಘನತೆಯನ್ನು ಕುಗ್ಗಿಸುವುದಲ್ಲದೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಬಗ್ಗೆ ನಿಮ್ಮ ರಾಜ್ಯ ಸರ್ಕಾರಗಳನ್ನು ಕೇಳಿ: ನಿರ್ಮಲಾ ಸೀತಾರಾಮನ್‌

ಅನೇಕ ಪ್ರಧಾನಿಗಳು ದೇಶವನ್ನು ಆಳಿದ್ದಾರೆ ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಬೇಕೆಂದು ಅವರು ಎಂದಿಗೂ ಒತ್ತಾಯಿಸಲಿಲ್ಲ ಎಂದು ಅವರು ಹೇಳಿದ್ದು, ಈಗಿನ ಸರ್ಕಾರ ಕೀಳು ಮಟ್ಟದಲ್ಲಿ ವರ್ತಿಸುತ್ತಿದೆ ಎಂದಿದ್ದಾರೆ.

“ತೆಲಂಗಾಣದಲ್ಲಿ ಉಚಿತ ಅಕ್ಕಿ ಯೋಜನೆಗೆ ಒಕ್ಕೂಟ ಸರ್ಕಾರ ಕೇವಲ 55% ಕೊಡುವು ನೀಡುತ್ತಿದ್ದು, ಉಳಿದ 45% ರಾಜ್ಯ ಸರ್ಕಾರ ನೀಡುತ್ತಿದೆ” ಎಂದು ಅವರು ಹೇಳಿದ್ದಾರೆ. ಉಚಿತ ಅಕ್ಕಿ ಯೋಜನೆಗೆ 3,610 ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಹಾಗಾದರೆ, ಪಡಿತರ ಅಂಗಡಿಗಳಲ್ಲಿ ಮುಖ್ಯಮಂತ್ರಿಗಳ ಚಿತ್ರ ಹಾಕುವಂತೆ ನಾವು ಒತ್ತಾಯಿಸಬೇಕೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಈ ನಡುವೆ ಹಲವಾರು ಜನರು ಸಚಿವರನ್ನು ಟ್ರೋಲ್ ಮಾಡಿದ್ದಾರೆ. ಚಿತ್ರ ನಟ ಪ್ರಕಾಶ್ ರಾಜ್ ಅವರು, ‘ತಗೊಳಿ, ಪೋಸ್ಟರ್‌ ಬಂದಿದೆ’ ಎಂದು ಎಲ್‌ಪಿಜಿ ಸಿಲಿಂಡರ್‌ ಮೇಲೆ ಅದರ ಬೆಲೆಯೊಂದಿಗೆ ಪ್ರಧಾನಿ ಮೋದಿಯ ಚಿತ್ರವನ್ನು ಅಂಟಿಸಿರುವ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಟಿಆರ್‌ಎಸ್‌ ಪಕ್ಷದ ನಾಯಕ ಕೃಷ್ಣನ್ ಅವರು ಕೂಡಾ ಅದೇ ವಿಡಿಯೊವನ್ನು ಪೋಸ್ಟ್‌ ಮಾಡಿ, ನಿರ್ಮಲಾ ಸೀತಾರಾಮ್‌ ಅವರೆ, ಮೋದಿ ಅವರ ಫೊಟೊ ಬೇಕೇ ತೆಗೆದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...