Homeಮುಖಪುಟಇಂಧನ ಬೆಲೆ ಏರಿಕೆ ಬಗ್ಗೆ ನಿಮ್ಮ ರಾಜ್ಯ ಸರ್ಕಾರಗಳನ್ನು ಕೇಳಿ: ನಿರ್ಮಲಾ ಸೀತಾರಾಮನ್‌

ಇಂಧನ ಬೆಲೆ ಏರಿಕೆ ಬಗ್ಗೆ ನಿಮ್ಮ ರಾಜ್ಯ ಸರ್ಕಾರಗಳನ್ನು ಕೇಳಿ: ನಿರ್ಮಲಾ ಸೀತಾರಾಮನ್‌

- Advertisement -
- Advertisement -

ಇಂಧನ ಬೆಲೆ ಏರಿಕೆ ಬಗ್ಗೆ ಜನರು ತಮ್ಮದೇ ರಾಜ್ಯ ಸರ್ಕಾರಗಳನ್ನು ಕೇಳಬೇಕು. ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇಂಧನ ದರವನ್ನು ಮತ್ತಷ್ಟು ತಗ್ಗಿಸಲು ಮೌಲ್ಯವರ್ಧಿತ ತೆರಿಗೆ (VAT) ಅನ್ನು ಕಡಿಮೆ ಮಾಡುವಂತೆ ರಾಜ್ಯಗಳಿಗೆ ಮನವಿ ಮಾಡಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಜಿಎಸ್‌ಟಿ ಕೌನ್ಸಿಲ್‌ ಇಂಧನ ಸೇರ್ಪಡೆಗೆ ದರವನ್ನು ನಿಗದಿಪಡಿಸುವವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಸೇರಿಸಲಾಗುವುದಿಲ್ಲ’ ಎಂದರು.

ದೇಶದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳೊಂದಿಗಿನ ಸಂವಾದದ ನಂತರ ಸೀತಾರಾಮನ್‌ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂಧನ ಬೆಲೆ ಏರಿಕೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ, ಕೇಂದ್ರ ಸರ್ಕಾರವು ದೀಪಾವಳಿಯ ಹಿಂದಿನ ದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 5ರೂ ಮತ್ತು 10 ರೂ ನಷ್ಟು ಕಡಿಮೆ ಮಾಡಿದೆ. ಇಂಧನ ಬೆಲೆಗಳನ್ನು ತಗ್ಗಿಸಲು ಹಲವಾರು ರಾಜ್ಯಗಳು ವ್ಯಾಟ್‌ ಅನ್ನು ಕಡಿಮೆ ಮಾಡಿದ್ದವು. ಕೆಲವು ರಾಜ್ಯಗಳು ಅಬಕಾರಿ ಸುಂಕವನ್ನು ಮತ್ತಷ್ಟು ಕಡಿಮೆ ಮಾಡಬೇಕೆಂದು ಕೇಂದ್ರವನ್ನು ಒತ್ತಾಯಿಸಿವೆ.

ಕೇರಳದ ಹಣಕಾಸು ಸಚಿವರು ಕೇಂದ್ರದ ಕ್ರಮವನ್ನು ‘ಹಾನಿ ನಿಯಂತ್ರಣ’ ಎಂದು ಕರೆದರು. ಇತ್ತೀಚಿನ ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಹಲವು ಸ್ಥಾನಗಳಲ್ಲಿ ಸೋತಿದೆ. ಅದಕ್ಕೆ ಇಂಧನ ಬೆಲೆ ಏರಿಕೆ ಮತ್ತಿತರ ಅಂಶಗಳೂ ಕಾರಣವಾಗಿವೆ. ಹಾಗಾಗಿ ಅವರು ಸಣ್ಣ ಮಟ್ಟಿಗೆ ಬೆಲೆ ಇಳಿಸಿದ್ದಾರೆ ಎಂದು ಟೀಕಿಸಿದ್ದರು.

ಮೋದಿ ಸರ್ಕಾರವು ಈ ಹಿಂದೆ ಅಬಕಾರಿ ಸುಂಕವನ್ನು ಗಣನೀಯವಾಗಿ ಹೆಚ್ಚಿಸಿ, ನಂತರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ರಾಜ್ಯ ಸರ್ಕಾರಗಳು ವ್ಯಾಟ್‌ ಹೆಚ್ಚಿಸಿಲ್ಲ ಆದ್ದರಿಂದ ಅದನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ. ಕೇಂದ್ರವು ಅಬಕಾರಿ ಸುಂಕವನ್ನು ಹೆಚ್ಚಳವನ್ನು ಹಿಂತೆಗೆದುಕೊಂಡರೆ ಬೆಲೆಗಳು ಸ್ವಯಂಚಾಲಿತವಾಗಿ ಇಳಿಯುತ್ತವೆ ಎಂದು ವಿರೋಧ ಪಕ್ಷಗಳು ತಿಳಿಸಿವೆ.

ಕೇಂದ್ರ ಸರ್ಕಾರವು ದೀಪಾವಳಿ ಸಮಯದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು  5 ರೂ ಮತ್ತು ಡೀಸೆಲ್ ಮೇಲೆ 10 ರೂ ಸುಂಕವನ್ನು ಇಳಿಸಿತ್ತು. ಕರ್ನಾಟಕ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು 7 ರೂ ಕಡಿಮೆ ಗೊಳಿಸಿತ್ತು.

ಪ್ರಸ್ತುತ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 27ರೂ ಮತ್ತು ರಾಜ್ಯ ಸರ್ಕಾರವು 20 ರೂ ಸುಂಕ ವಸೂಲಿ ಮಾಡುತ್ತಿದೆ. ಹಾಗೆಯೇ ಡೀಸೆಲ್ ಮೇಲೆ ಕೇಂದ್ರವು 21 ರೂ ಹಾಗೂ ರಾಜ್ಯವೂ 11 ರೂ ತೆರಿಗೆ ವಿಧಿಸುತ್ತಿದೆ.


ಇದನ್ನು ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಸಂಪೂರ್ಣ ಸೆಸ್ ತೆಗೆದುಹಾಕಿ: ತೆಲಂಗಾಣ ಸಿಎಂ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹಾಗಾದರೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದಕ್ಕೆ ಇದೆ ರಾಜೀನಾಮೆ ಕೊಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...