Homeಕರ್ನಾಟಕಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ

ಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮತಾಂಧ ಶಕ್ತಿಗಳು ಹತ್ಯೆ ಮಾಡಿ ಇಂದಿಗೆ ಐದು ವರ್ಷಗಳಾಗುತ್ತಿವೆ. ಈ ಹಿನ್ನಲೆಯಲ್ಲಿ ಗೌರಿ ಲಂಕೇಶ್ ಅವರ ಕುಟುಂಬ, ಅವರ ಒಡನಾಡಿಗಳು ಮತ್ತು ಹೋರಾಟಗಾರರು ಚಾಮರಾಜಪೇಟೆ ಸ್ಮಶಾನದಲ್ಲಿ ಇರುವ ಅವರ ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.

ಜಗದ ತುಂಬಾ ಗೌರಿ ಲಂಕೇಶ್ ಹುಟ್ಟಿ ಐದು ವರ್ಷಗಳು ಆಗಿವೆ. ನೀವು ಗೌರಿಯನ್ನು ಕೊಲ್ಲಬಹುದು, ಅವರ ಆಶಯ ಚಿಂತನೆಗಳನ್ನಲ್ಲ. ನಾವೀಗ ಸಾವಿರ ಸಾವಿರ ಗೌರಿಯರು.

ಬಹುಭಾಷಾ ನಟ Prakash Raj ಅವರು ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಅವರು ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಗೌರಿ ಲಂಕೇಶ್ ಸ್ಮರಣೆ ಪ್ರಾರಂಭದ ವಿಡಿಯೊ.

ಗೌರಿ ಲಂಕೇಶ್ ಕುರಿತು ಅವರ ಒಡನಾಡಿ ಡಾ.ಸಬಿಹಾ ಭೂಮಿಗೌಡ ಅವರು ಕಣ್ಣೀರು ಸುರಿಸುತ್ತಾ ಮಾತನಾಡಿದರು.

ಕೆವಿಎಸ್‌ ತಂಡದಿಂದ,‘ಗೌರಿ ನಿಮಗೆ ಲಾಲ್ ಸಲಾಂ, ಗಗನವೆ ನಿಮಗೆ ನೀಲ್ ಸಲಾಂ’ ಹಾಡು.

ಗೌರಿ ಲಂಕೇಶ್‌ ಪತ್ರಿಕೆಯನ್ನು ಅವರ ಕೊಲೆಗಾರರಿಗೆ ತಡೆದು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೋರಾಟಗಾರರಾದ ನೂರ್ ಶ್ರೀಧರ್ ಹೇಳಿದ್ದಾರೆ.

“ಅವಳು ನನಗೆ ಹೂವು ಹಾಕಬೇಕಿತ್ತು, ನಾನು ಹೂವು ಹಾಕುತ್ತಿದ್ದೇನೆ” ಎನ್ನುತ್ತಾ ಭಾವುಕರಾದ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್.

ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಸಿನಿಮಾ ನಿರ್ದೇಶಕ ಸಂಜಯ್ ಖಾಖ್.

‘ಗೌರಿ ಲಂಕೇಶ್ ತಮ್ಮ ವಿರೋಧಿಗಳಿಗೂ ಪ್ರೀತಿ ಹಂಚಿದವರು’ ~ಲೇಖಕಿ ದು.ಸರಸ್ವತಿ.

ಸಮಾಜ ವಿರೋಧಿ ಮನಸ್ಥಿತಿಗಳ ವಿರುದ್ಧ ಹೋರಾಡಬೇಕು. ~ ರಾಜಲಕ್ಷ್ಮಿ ಅಂಕಲಗಿ, ಹೈಕೋರ್ಟ್ ವಕೀಲರು.

ಗೌರಿ ಲಂಕೇಶ್ ನಮ್ಮ ಹೋರಾಟಗಳ ಸ್ಪೂರ್ತಿ. ~ಮಾಜಿ ಐಎಎಸ್ ಅಧಿಕಾರಿ ಸಸಿಕುಮಾರ್ ಸೆಂಥಿಲ್

ಗೌರಿ ಲಂಕೇಶ್ ಅವರ ಆಶಯಗಳನ್ನು ಹೊತ್ತು ಕೊಂಡು ಮುಂದೆ ಸಾಗುತ್ತೇವೆ. ~ಹೋರಾಟಗಾರ ಇರ್ಷಾದ್ ಅಹ್ಮದ್ ದೇಸಾಯಿ.

“ಒಂದಲ್ಲ ಒಂದು ದಿನ ಈ ನೆಲದ ಹೆಣ್ಣುಗಳು, ಮೆರವಣಿಗೆ ಹೊರಡುತ್ತಾರೆ”. ಗೌರಿ ಲಂಕೇಶ್ ಅವರ ಇಷ್ಟದ ಹಾಡನ್ನು ಹಾಡಿದ ಲೇಖಕಿ ದು. ಸರಸ್ವತಿ, ಹೋರಾಟಗಾರ್ತಿ ಮಲ್ಲಿಗೆ, ಸಿರಿಮನೆ, ಅಕ್ಕೈ ಪದ್ಮಶಾಲಿ, ಮಲ್ಲು ಕುಂಬಾರ್‌, ಕೌಸಲ್ಯ ಹಾಗೂ ಸಂಗಾತಿಗಳು.

ಇಂದು ಸಂಜೆ ಐದು ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆಯುವ “ಗೌರಿ ನೆನಪು” ಕಾರ್ಯಕ್ರಮದ ಬಗ್ಗೆ ಹೋರಾಟಗಾರ ಕೆ.ಎಲ್. ಅಶೋಕ್ ಅವರು ಮಾಹಿತಿ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...