Homeಕರ್ನಾಟಕಗೌರಿಯ ದನಿ ಅಡಗುವುದಿಲ್ಲ: ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಡನಾಡಿಗಳ ಪ್ರತಿಜ್ಞೆ

ಗೌರಿಯ ದನಿ ಅಡಗುವುದಿಲ್ಲ: ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಡನಾಡಿಗಳ ಪ್ರತಿಜ್ಞೆ

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಐದನೇ ವರ್ಷದ ಸ್ಮರಣೆಯ ಭಾಗವಾಗಿ, ಗೌರಿಯವರ ಸಮಾಧಿಗೆ ಹೋರಾಟಗಾರರು, ಗೌರಿಯ ಒಡನಾಡಿಗಳು ಹಾಗೂ ಜನಪರ ಆಶಯಗಳಿಗಾಗಿ ದುಡಿಯುತ್ತಿರುವವರು ನಮನ ಸಲ್ಲಿಸಿದರು.

ಗೌರಿ ನಡೆದ ಹಾದಿಯಲ್ಲಿ ನಾವು ಕ್ರಮಿಸಬೇಕಾದ ಅನಿವಾರ್ಯತೆ ಹಾಗೂ ಕಾಲದ ತಲ್ಲಣಗಳಿಗೆ ಗೌರಿ ಸ್ಪಂದಿಸುತ್ತಿದ್ದ ರೀತಿಯನ್ನು ಸ್ಮರಿಸಿ ಭಾವುಕರಾದರು.

ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಗೌರಿಯವರ ಒಡನಾಡಿ ನೂರ್‌ ಶ್ರೀಧರ್‌ ಮಾತನಾಡಿ, “ಇಂದು ಗೌರಿ ಇದ್ದಿದ್ದರೆ ಕರ್ನಾಟಕದ ಪರಿಸ್ಥಿತಿ ನೋಡಿ ವಿಲವಿಲ ಒದ್ದಾಡುತ್ತಿದ್ದರು. ರಾಜ್ಯಾದ್ಯಂತ ಓಡಾಡುತ್ತಿದ್ದರು. ಈ ದುರಿತ ಕಾಲದಲ್ಲಿ ಏನು ಮಾಡಬೇಕೆಂದು ಚಿಂತಿಸುತ್ತಿದ್ದರು. ಒಂದು ಕ್ಷಣ ಸಮಾಧಾನದಿಂದ ಇರುತ್ತಿದ್ದ ಜೀವವಾಗಿರಲಿಲ್ಲ ಗೌರಿ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಗೌರಿಯ ಆಶಯಗಳನ್ನು ಮುಂದುವರಿಸುತ್ತಲೇ ಇದ್ದೇವೆ. ಗೌರಿಯ ದನಿಯನ್ನು, ಅವರ ಪತ್ರಿಕೆಯನ್ನು ಅಡಗಿಸಬೇಕು ಎಂದು ಹತ್ಯೆ ಮಾಡಿದರು. ಆದರೆ ಎಲ್ಲ ಸವಾಲುಗಳ ನಡುವೆಯೇ ಗೌರಿಯ ಪತ್ರಿಕೆಯನ್ನು ಮುಂದುವರಿಸಿದ್ದೇವೆ. ಟಾಬ್ಲ್ಯಾಡ್ ಕಾಲ ಮುಗಿಯಿತು, ವಾರಪತ್ರಿಕೆಗಳನ್ನು ಇನ್ನು ಮುಂದೆ ತರಲು ಸಾಧ್ಯವಿಲ್ಲ  ಅದೆಲ್ಲಾ ಅಭಿಪ್ರಾಯಗಳು ಬಂದವು. ಗೌರಿಯ ದನಿಯನ್ನು ನಿಲ್ಲಿಸಬಾರದೆಂದು ಪತ್ರಿಕೆಯನ್ನು ಹೊರತರುತ್ತಿದ್ದೇವೆ” ಎಂದು ತಿಳಿಸಿದರು.

“ಪತ್ರಿಕೆಯ ಹಿಂದಿನ ನೋವೇನು ಎಂಬುದು ಅನೇಕರಿಗೆ ಗೊತ್ತಿಲ್ಲ. ಗೌರಿಯ ಜೊತೆ ಕೆಲಸ ಮಾಡಿದ ತಂಡ ಚದುರಿಹೋಗಲಿಲ್ಲ. ಗೌರಿಯ ಆಶಯಗಳ ಜೊತೆ ನಿಂತು, ಅರ್ಧ ಸಂಬಳದಲ್ಲಿ ಕೆಲಸ ಮಾಡಿತು. ಕೆಲವು ಸಲ ಸಂಬಳವೇ ಇರಲಿಲ್ಲ. ಆದರೂ ಲಕ್ಷಾಂತರ ರೂಪಾಯಿ ಸಾಲವನ್ನು ತಲೆಯ ಮೇಲೆ ಹಾಕಿಕೊಂಡು ಪತ್ರಿಕೆಯನ್ನು ಮುಂದುವರಿಸಿದ್ದಾರೆ” ಎಂದು ಹೇಳಿದರು.

ಪತ್ರಿಕೆಯಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ಹೊಂದಿಕೊಳ್ಳಬೇಕೆಂದು ಗೌರಿ ಬಯಸುತ್ತಿದ್ದರು. ಅದರ ಭಾಗವಾಗಿ ‘ನಾನುಗೌರಿ.ಕಾಂ’, ‘ಗೌರಿಲಂಕೇಶ್.ಕಾಂ’ (ಇಂಗ್ಲಿಷ್‌) ವೆಬ್‌ಸೈಟ್‌ಗಳು ಕೆಲಸ ಮಾಡುತ್ತಿವೆ. ಗೌರಿಯ ಹೆಸರಲ್ಲಿ ಪತ್ರಿಕೆಯನ್ನು ಮುಂದುವರಿಸಲು ಸರ್ಕಾರ ಅವಕಾಶ ಕೊಡಲಿಲ್ಲ. ಸ್ನೇಹಿತರು ತರುತ್ತಿದ್ದ ‘ನ್ಯಾಯಪಥ’ವನ್ನೇ ಗೌರಿಪತ್ರಿಕೆಯಾಗಿ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ವಿವರಿಸಿದರು.

ಮೊದಲೆಲ್ಲ ಪೀತ ಪತ್ರಿಕೋದ್ಯಮವಿತ್ತು. ಈಗ ಪ್ರೇತ ಪತ್ರಿಕೋದ್ಯಮ ಬಂದಿದೆ. ಇದರ ನಡುವೆ ಚಳವಳಿಗೆ ಬೆನ್ನೆಲುಬಾಗಿರುವ ಮಾಧ್ಯಮಗಳಿವೆ. ಪ್ರೇತ ಪತ್ರಿಕೋದ್ಯಮ ವಿರುದ್ಧ ‘ಪ್ರೀತಿ’ ಪತ್ರಿಕೋದ್ಯಮ ಬೆಳೆಯುತ್ತಿದೆ. ‘ವಾರ್ತಾಭಾರತಿ’, ‘ಈದಿನ.ಕಾಂ’, ‘ಪೀಪಲ್‌.ಕಾಂ’, ‘ಕನ್ನಡಒನ್‌.ಕಾಂ’, ‘ಪ್ರಜಾವಾಣಿ’, ‘ಹಿಂದೂ’ ಮೊದಲಾದ ಮಾಧ್ಯಮಗಳು ಚಳವಳಿಯನ್ನು ಮುಂದುವರಿಸಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಅಕ್ಕಮಹಾದೇವಿ ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಸಬೀಹ ಭೂಮಿಗೌಡ ಮಾತನಾಡಿ, “ಗೌರಿಯನ್ನು ಕೊಂದ ಶಕ್ತಿಗಳು ಮತ್ತಷ್ಟು ಬೆಳೆಯುತ್ತಿವೆ. ಕ್ರೌರ್ಯವನ್ನು ಮತ್ತಷ್ಟು ಹರಡುತ್ತಿವೆ. ಆದರೆ ಗೌರಿ ನಮ್ಮನ್ನು ಎಚ್ಚರಿಸುತ್ತಿದ್ದಾಳೆ. ನಾವು ಮಾಡುತ್ತಿರುತವ ಕೆಲಸ ಸಾಲುತ್ತಿಲ್ಲ ಎನ್ನುತ್ತಿಲ್ಲ” ಎಂದು ಎಚ್ಚರಿಸಿದರು.

ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಗೌರಿ ಇಂಗ್ಲಿಷ್‌ ಪತ್ರಿಕೋದ್ಯಮದಿಂದ ಕನ್ನಡಕ್ಕೆ ಬಂದವರು. ಕನ್ನಡ ಭಾಷೆ ಮೇಲೆ ಸಾಹಿತ್ಯಾತ್ಮಕ ಪ್ರಭುತ್ವ ಸಾಧಿಸಲಿಲ್ಲ. ಅವರ ಬರಹದಲ್ಲಿ ಸಾಹಿತ್ಯಿಕ ಶಬ್ದಗಳಿರಲಿಲ್ಲ. ಆದರೂ ಏಕೆ ಗೌರಿಯವರ ಬರಹ ಅವರನ್ನು ಚುಚ್ಚಿತು? ಕೇವಲ ಹತ್ತು ವರ್ಷಗಳಲ್ಲಿ ಅವರನ್ನು ಕೊಲ್ಲುವಂತೆ ಪ್ರೇರೇಪಿಸಿತು? ಏಕೆಂದರೆ ಅವರ ಬರಹದಲ್ಲಿ ನೈಜತೆ ಇತ್ತು. ಜನರ ಬಗ್ಗೆ ನಿಜವಾದ ಕಾಳಜಿ ಇತ್ತು” ಎಂದು ಹೇಳಿದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ

ಮನುಸ್ಮೃತಿ ಹಾಗೂ ಒಡೆದು ಆಳುವ ಮನಸ್ಥಿತಿಗಳಿಗೆ ಗೌರಿಯ ಕಾಳಜಿಗಳು ಆತಂಕ ತಂದಿದ್ದವು. ಗೌರಿಯನ್ನು ಕೊಂದರೆ ಮೇಲುಗೈ ಸಾಧಿಸಬಹುದು ಎಂದು ಭಾವಿಸಿದರು. ಆದರೆ ಗೌರಿ ಹತ್ಯೆಯ ಬಳಿಕ ಜನರು ಒಂದಾಗಿ ನಿಂತರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಸೃಷ್ಟಿಯಾಯಿತು. ಆ ನಂತರದಲ್ಲಿ ಈ ಕೊಲೆಗಡುಕರು ಹತ್ಯೆಗೆ ಕೈ ಹಾಕಿಲ್ಲ. ಆದರೆ ಬೇರೆ ಆಯಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಸತ್ಯಕ್ಕೆ ಕನ್ನಡಿ ಹಿಡಿದವರನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ತೀಸ್ತಾ ಸೆಟಲ್ವಾಡ್‌ ಹಾಗೂ ಮೊಹಮ್ಮದ್‌ ಜುಬೇರ್‌ ಪ್ರಕರಣ ಇತ್ತೀಚಿನ ಉದಾಹರಣೆಗಳಾಗಿವೆ. ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದನ್ನು ನೋಡಿದ್ದೇವೆ. ಈ ಬೆಳವಣಿಗೆಗಳ ಹಿಂದಿನ ಮನಸ್ಥಿತಿಗಳನ್ನು ಒಡೆದು ಓಡಿಸಬೇಕಾಗಿದೆ ಎಂದು ಆಶಿಸಿದರು.

ಮಾಜಿ ಐಎಎಸ್ ಅಧಿಕಾರಿಯಾದ ಸಸಿಕಾಂತ್ ಸೆಂಥಿಲ್‌ ಮಾತನಾಡಿ, “ಗೌರಿಯ ಕೆಲಸವನ್ನು ಮುಂದುವರಿಸಲು ನಾವೆಲ್ಲ ಜೊತೆಗಿರುತ್ತೇವೆ. ಇದು ವ್ಯಕ್ತಿಗಳ ಜೊತೆಗಿನ ಸಮಸ್ಯೆಯಲ್ಲ, ಮನಸ್ಥಿತಿಗಳ ಜೊತೆಗಿನ ಹೋರಾಟ” ಎಂದರು.

ಗೌರಿಯವರ ತಾಯಿ ಇಂದಿರಾ ಲಂಕೇಶ್‌, ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್, ಗೌರಿ ಸ್ಮಾರಕ ಟ್ರಸ್ಟ್ ಸದಸ್ಯರಾದ ಪ್ರೊ.ವಿ.ಎಸ್ ಶ್ರೀಧರ್, ದೀಪು, ಕೆ.ಎಲ್ ಅಶೋಕ್, ಬಹುಭಾಷ ನಟ ಪ್ರಕಾಶ್ ರಾಜ್,  ಸಾಮಾಜಿಕ ಹೋರಾಟಗಾರ್ತಿಯರಾದ ಅಕ್ಕೈ ಪದ್ಮಶಾಲಿ, ದು.ಸರಸ್ವತಿ, ಚಿಂತಕ ಶಿವಸುಂದರ್, ಸಿನಿಮಾ ನಿರ್ದೇಶಕ ಸಂಜಯ್ ಕಾಕ್, ಪ್ರೊ.ನಗರಿ ಬಾಬಯ್ಯ, ಇರ್ಷಾದ್ ಅಹಮದ್ ದೇಶಾಯಿ, ಕಲೀಂಉಲ್ಲಾ, ಮಲ್ಲಿಗೆ ಸಿರಿಮನೆ, ಡಿ.ಎನ್.ಗುರುಪ್ರಸಾದ್ ಸೇರಿದಂತೆ ಇತರರು ನಮನ ಸಲ್ಲಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...