ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ‘ವಿದೇಶಿ ಟಿ-ಶರ್ಟ್’ ಧರಿಸಿ ದೇಶವನ್ನು ಒಂದುಗೂಡಿಸುವ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ರಾಜಸ್ಥಾನದ ಜೋಧ್‌ಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ತನ್ನ ಸರ್ಕಾರಗಳನ್ನು ಹೊಂದಿದೆ. 2023 ರ ವಿಧಾನಸಭಾ ಚುನಾವಣೆಯ ನಂತರ ಅವರಿಗೆ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. “ಛತ್ತೀಸ್‌ಘಡ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಕಾಂಗ್ರೆಸ್‌ಗೆ ಏನೂ ಉಳಿಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2024 ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ 150 ದಿನಗಳ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿದೆ. ಇದರಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 3,570 ಕಿಮೀ ಉದ್ದದ ದಾರಿನ್ನು ಪಾದಯಾತ್ರೆಗೆ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ‘ಅಮಿತ್ ಶಾ ಭಾರತದ ದೊಡ್ಡ ಪಪ್ಪು’: ಟಿ-ಶರ್ಟ್ ಹಂಚಿದ ಟಿಎಂಸಿ
ತಮ್ಮ ಭಾಷಣದ ವೇಳೆ ಪಾದಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್ ಅನ್ನು ಉಲ್ಲೇಖಿಸಿದ ಅಮಿತ್ ಶಾ,“ಈಗ ಈ ರಾಹುಲ್ ಬಾಬಾ…ಭಾರತವನ್ನು ಒಗ್ಗೂಡಿಸಲು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ ಆದರೆ ಅವರು ಧರಿಸಿದ್ದು ವಿದೇಶಿ ಟಿ-ಶರ್ಟ್” ಎಂದು ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಧರಿಸಿದ್ದ ಟಿ-ಶರ್ಟ್‌ನ ಬೆಲೆ 41 ಸಾವಿರ ಎಂದು ಬಿಜೆಪಿ ಪ್ರತಿಪಾದಿಸಿದೆ.
“ಅವರು ಒಮ್ಮೆ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಭಾರತವು ಒಂದು ದೇಶವಲ್ಲ ಎಂದು ಹೇಳುತ್ತಾರೆ. ಹಲವಾರು ಧೀರ ಹೃದಯಗಳು ತ್ಯಾಗ ಬಲಿದಾನ ಮಾಡಿದ ದೇಶವಿದು. ರಾಹುಲ್ ಬಾಬಾ ಭಾರತವನ್ನು ಒಗ್ಗೂಡಿಸಲು ಪ್ರಯತ್ನಿಸುವ ಮೊದಲು ದೇಶದ ಇತಿಹಾಸವನ್ನು ಓದಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ.
ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧವೂ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, “2018 ರಲ್ಲಿ ನೀವು ರಾಹುಲ್ ಗಾಂಧಿಯವರೊಂದಿಗೆ ಸೇರಿ ನೀಡಿದ ಭರವಸೆಗನ್ನು ನೆನಪಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಯುವಕರಿಗೆ 3,500 ರೂ.ಗಳ ನಿರುದ್ಯೋಗ ಭತ್ಯೆ ಏನಾಯಿತು? 20 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಏನಾಯಿತು? ಕಾಂಗ್ರೆಸ್ ಪೊಳ್ಳು ಭರವಸೆಗಳನ್ನು ನೀಡಬಲ್ಲದೆ ಹೊರತು, ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ
ಬಿಜೆಪಿಯ ರಾಷ್ಟ್ರೀಯ ಒಬಿಸಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅಮಿತ್ ಶಾ ರಾಜಸ್ಥಾನದ ಜೋಧಪುರಕ್ಕೆ ಭೇಟಿ ನೀಡಿದ್ದರು.



2 koti udoga Elli still 2023
ಮೋದಿಯವರ ಲಕ್ಷಾಂತರ ರೂಪಾಯಿ ಮೌಲ್ಯದ ಸೂಟ್ ಬೂಟ್ ಬಗ್ಗೆ ಏನನ್ನೋಣ???
Amit Shah. Kalla.Sulla.
ಮೋದಿ ಹತ್ತು ಲಕ್ಷ ರೂ.ಬೆಲೆಯ ಸೂಟ್ ದರಿಸಿದಾಗ ಅಮಿತ್ ಶಾ ಕಣ್ಣು ಕುರುಡಾಗಿತ್ತಾ?
ಹೌದ ಗುಂಡು ಬಾಬಾ. ನಿಮ್ಮ ಚೌಕಿದಾರ ಹಾಕುವ ಬಟ್ಟೆ ಬೆಲೆ ಗೊತ್ತಾ ನಿಂಗೆ?? ಅವನು ಸೈನ್ ಮಾಡುವ ಪೆನ್ನಿನ ಬೆಲೆ ಗೊತ್ತಾ ನಿಂಗೆ? ಅದು ಬಿಡು ಗುಂಡು ಬಾಬಾ ನಿಮ್ಮ ಪಕ್ಷ 2014ರ ಲೋಕ ಸಭಾ ಚುನಾವಣೆ ಅಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಯೋಗ್ಯತೆ ನಿಮಗೆ ಇಲ್ಲ. ಎಲ್ಲಿ ಹೋದವು ವರ್ಷಕ್ಕೆ 2ಕೋಟಿ ಉದ್ಯೋಗ? ಎಲ್ಲಿ 40 ರೂಪಾಯಿಯ ಪೆಟ್ರೋಲ್? ಎಲ್ಲಿ ಒಂದು ರೂಪಾಯಿಗೆ ಒಂದು ಡಾಲರ್? ಎಲ್ಲಿ ಅಚ್ಚೆ ದಿನ? ಒಂದು ತಿಳಿದು ಗುಂಡು ಬಾಬಾ ನಿಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ ಇಂದು ಅತಿವೃಷ್ಟಿ ಯಿಂದ ರಾಜ್ಯದ ಸುಮಾರು ಅರ್ಧಕ್ಕೂ ಹೆಚ್ಚಿನ ಭಾಗ ಜಲವೃತ್ತ ಗೊಂಡು ಬೆಲೆ ನಾಶ, ಮನೆಗಳು ಬಿದ್ದು, ಅನ್ನ ಆಹಾರ ಇಲ್ಲದೆ ಸಂಕಷ್ಟದಲ್ಲಿ ಇದ್ದಾರೆ. ಆದರೆ ನಿಮ್ಮ ಡಬ್ಬಲ್ ಇಂಜಿನ್ ಸರ್ಕಾರ ಇದರ ಪರಿವೆ ಇಲ್ಲದೆ ಏನೋ ಸಾಧಿಸಿರುವ ಹಾಗೆ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಮೇಲಿನ ಯಾವುದಕ್ಕೂ ಸ್ಪಂದನೆ ನೀಡದ ನಿಮ್ಮ ಪಕ್ಷ ಸಾರ್ವಜನಿಕರಿಂದ ಪಡೆದ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡುವುದು ಎಷ್ಟು ಯೋಗ್ಯ? ನಿಮ್ಮ ಪಕ್ಷಕ್ಕೆ ಜನತೆಯ ಅಭಿವೃದ್ದಿ ಮುಖ್ಯ ಅಲ್ಲ. ನಿಮ್ಮವರ ನಿಮ್ಮ ಪಕ್ಷದ ಅಭಿವೃದ್ದಿ ಅಷ್ಟೇ ಮುಖ್ಯ. ನಿಮ್ಮ ಆಡಳಿತ ವ್ಯವಸ್ಥೆ ನೋಡಿದರೆ ಒಂದು ಪುರಾತನ ಗಾದೆ ಮಾತು ನೆನಪಿಗೆ ಬರುತ್ತೆ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅಂತ ಅದಕ್ಕೆ ಅನ್ವರ್ಥಕ ವಾಗಿ ನಿಮ್ಮ ಪಕ್ಷ ನಡೆದುಕೊಳ್ಳುತ್ತಿದ್ದಾರೆ
Amith shah a great buffoon has he forgotten the 2cr job , 15 lakh,dollars =rupees,petrol 30 rs ,gas above this PM changes his dress 3 times a day costing around lakhs , imported mushroom etc 🤣