Homeಮುಖಪುಟ‘ಅಮಿತ್ ಶಾ ಭಾರತದ ದೊಡ್ಡ ಪಪ್ಪು’: ಟಿ-ಶರ್ಟ್ ಹಂಚಿದ ಟಿಎಂಸಿ

‘ಅಮಿತ್ ಶಾ ಭಾರತದ ದೊಡ್ಡ ಪಪ್ಪು’: ಟಿ-ಶರ್ಟ್ ಹಂಚಿದ ಟಿಎಂಸಿ

ಅಮಿತ್ ಶಾ ಅವರೇ ನೀವು ನಿಮ್ಮ ಮಗನಿಗೆ ಮೊದಲು ರಾಷ್ಟ್ರೀಯತೆ ಕಲಿಸಿ ಎಂದು ಪಕ್ಷವೂ ಹೇಳಿದೆ

- Advertisement -
- Advertisement -

ತೃಣಮೂಲ ಕಾಂಗ್ರೆಸ್‌‌‌‌‌‌ ಪಕ್ಷವು ತನ್ನ ಕಾರ್ಯಕರ್ತರಿಗೆ ಗೃಹ ಸಚಿವ ಅಮಿತ್‌ ಶಾ ಅವರ ಮುಖದ ಚಿತ್ರದ ಜೊತೆಗೆ “ಭಾರತದ ದೊಡ್ಡ ಪಪ್ಪು” ಎಂಬ ಶೀರ್ಷಿಕೆಯಿರುವ ಟೀ-ಶರ್ಟ್‌ಗಳನ್ನು ಹಂಚಿದೆ. ಗೃಹ ಸಚಿವರನ್ನು ಪಕ್ಷವು ಯಾಕೆ ಭಾರತದ ದೊಡ್ಡ ಪಪ್ಪು ಎಂದು ಕರೆದಿದೆ ಎಂಬ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ವಿವರಿಸಿದ್ದಾರೆ.

ಜಾನುವಾರು ಕಳ್ಳಸಾಗಣೆ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ದ ತನಿಖೆಗಳನ್ನು ಅಭಿಷೇಕ್‌ ಬ್ಯಾನರ್ಜಿ ಎದುರಿಸುತ್ತಿದ್ದಾರೆ. ಕಳೆದ ವಾರ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರು ಅಮಿತ್ ಶಾ ಅವರನ್ನು ಭಾರತದ ದೊಡ್ಡ ಪಪ್ಪು ಎಂದು ಉಲ್ಲೇಖಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಅವರು ಆರೋಪಕ್ಕೆ ಕಾರಣವೇನು ಎಂಬುದನ್ನು ಹೇಳಿರಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಂದು ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ ಅವರು ಅಮಿತ್‌ ಶಾ ಅವರನ್ನು ತಾನು ಯಾಕೆ ಹಾಗೆ ಕರೆದಿದ್ದೇನೆ ಎಂದು ತನ್ನ ಹೇಳಿಕೆಯ ಬಗ್ಗೆ ಪಟ್ಟಿ ಮಾಡಿದ್ದಾರೆ.

ಇದನ್ನೂ ಓದಿ: ಕಾಳಿ ದೇವಿ ಕುರಿತ ಹೇಳಿಕೆಗೆ ದೂರು: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಹೇಳಿದ್ದೇನು?

“ಅಮಿತ್ ಶಾ ಅವರನ್ನು ನಾನು ದೊಡ್ಡ ಪಪ್ಪು ಎಂದು ಕರೆದಿದ್ದಕ್ಕೆ ಕಾರಣಗಳಿವೆ. ದೆಹಲಿಯ ಅಪರಾಧ ದರವನ್ನು ನೋಡಿ. ಕೋಲ್ಕತ್ತಾದಲ್ಲಿ ಅತಿ ಕಡಿಮೆ ಅಪರಾಧ ಪ್ರಮಾಣವಿದೆ ಎಂದು ನಿಮ್ಮದೇ ಸಂಸ್ಥೆ ಹೇಳಿದೆ. ಆದರೆ ದೆಹಲಿ ಪೊಲೀಸರು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿದೆ” ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

“ಅಮಿತ್ ಶಾ ಅವರೇ ನೀವು ಎಲ್ಲರಿಗೂ ರಾಷ್ಟ್ರೀಯತೆಯನ್ನು ಕಲಿಸುತ್ತೀರಿ. ಆದರೆ ನಿಮ್ಮ ಮಗನಿಗೆ ರಾಷ್ಟ್ರಧ್ವಜ ಹಿಡಿಯುವಲ್ಲಿ ಸಮಸ್ಯೆ ಇದೆ. ರಾಷ್ಟ್ರೀಯತೆಯನ್ನು ಮೊದಲು ಅವನಿಗೆ ಕಲಿಸಿ” ಎಂದು ಅಭಿಷೇಕ್‌ ಬ್ಯಾನರ್ಜಿ ಹೇಳಿದ್ದಾರೆ. ದುಬೈನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಅಮಿತ್ ಶಾ ಅವರ ಪುತ್ರ ಜಯ್ ಶಾ ಭಾರತದ ಧ್ವಜವನ್ನು ನೀಡಿದಾಗ ಅದನ್ನು ನಿರಾಕರಿಸಿದ್ದರು.

ರಾಜಕೀಯ ವಿರೋಧಿಗಳ ಮೇಲೆ ಕೇಂದ್ರೀಯ ಸಂಸ್ಥೆಗಳನ್ನು ಬಳಸುವುದರ ಬಗ್ಗೆ ಅಭಿಷೇಕ್‌‌ ಬ್ಯಾನರ್ಜಿ ಅವರು ಅಮಿತ್‌‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಣಕಾಸಿನ ಅಕ್ರಮಗಳಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರ ವಿರುದ್ಧ ಇವುಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಲೆಗಾರನೊಂದಿಗೆ ಕುಳಿತುಕೊಳ್ಳಲಾರೆ: ಬಿಜೆಪಿ ಸಂಸದನ ಉಪಸ್ಥಿತಿ ವಿರೋಧಿಸಿ ವೇದಿಕೆ ತ್ಯಜಿಸಿದ ಟಿಎಂಸಿ ಸಚಿವ

“ಇಡಿ ಮತ್ತು ಸಿಬಿಐ ಲಂಚ ಪಡೆಯುವವರಿಗೆ ಆಶ್ರಯ ನೀಡುತ್ತವೆ. ಕ್ಯಾಮರಾ ಮುಂಚೆಯೆ ಲಂಚ ಪಡೆದವರನ್ನು ಏಜೆನ್ಸಿಗಳು ಪ್ರಶ್ನಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಆಡಳಿತಾರೂಢ ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ದೀರ್ಘಕಾಲದಿಂದ ಆರೋಪಿಸುತ್ತಿದೆ. ಇತ್ತೀಚೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಹಲವಾರು ತೃಣಮೂಲ ನಾಯಕರನ್ನು ಬಂಧಿಸಲಾಗಿದ್ದು, ಅದರಲ್ಲೂ ಅನೇಕರನ್ನು ಕೇಂದ್ರೀಯ ಏಜೆನ್ಸಿಗಳು ಬಂಧಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...