Homeಮುಖಪುಟಕೊಲೆಗಾರನೊಂದಿಗೆ ಕುಳಿತುಕೊಳ್ಳಲಾರೆ: ಬಿಜೆಪಿ ಸಂಸದನ ಉಪಸ್ಥಿತಿ ವಿರೋಧಿಸಿ ವೇದಿಕೆ ತ್ಯಜಿಸಿದ ಟಿಎಂಸಿ ಸಚಿವ

ಕೊಲೆಗಾರನೊಂದಿಗೆ ಕುಳಿತುಕೊಳ್ಳಲಾರೆ: ಬಿಜೆಪಿ ಸಂಸದನ ಉಪಸ್ಥಿತಿ ವಿರೋಧಿಸಿ ವೇದಿಕೆ ತ್ಯಜಿಸಿದ ಟಿಎಂಸಿ ಸಚಿವ

- Advertisement -
- Advertisement -

ಮಹಾತ್ಮ ಗಾಂಧಿಯವರ ಪುಣ್ಯತಿಥಿ ಸಮಾರಂಭದಲ್ಲಿ ಬಿಜೆಪಿ ಸಂಸದರೊಬ್ಬರು ಭಾಗಿಯಾಗಿದ್ದಕ್ಕೆ ’ವೃತ್ತಿಪರ ಕೊಲೆಗಾರ’ನೊಂದಿಗೆ ವೇದಿಕೆ ಹಂಚಿಕೊಳ್ಳಲಾರೆ ಎಂದು ತೃಣಮೂಲ ಕಾಂಗ್ರೆಸ್ ಸಚಿವರೊಬ್ಬರು ವೇದಿಕೆ ತ್ಯಜಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಭಾನುವಾರ ಬಾರಕ್‌ಪೋರ್ ಪ್ರದೇಶದಲ್ಲಿ ಮಹಾತ್ಮ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್, ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿ ವೇದಿಕೆಯಿಂದ ಏಕಾಏಕಿ ನಿರ್ಗಮಿಸಿದ್ದಾರೆ.

ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಖರ್‌ ಅವರ ಪಕ್ಕದಲ್ಲಿ ಕುಳಿತಿದ್ದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರು ಬಾರಕ್‌ಪೋರ್ ಸಂಸದ ವೇದಿಕೆಗೆ ಬರುತ್ತಿದ್ದಂತೆ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಏಕೆ ಎಂದು ಪ್ರಶ್ನಿಸಿದ ರಾಜ್ಯಪಾಲರಿಗೆ, “ನಿಮ್ಮ ಪಕ್ಕದಲ್ಲಿ ವೃತ್ತಿಪರ ಕೊಲೆಗಾರ ಕುಳಿತಿದ್ದಾನೆ. ಇದರ ವಿರುದ್ಧದ ಪ್ರತಿಭಟನೆಯಾಗಿ ನಾನು ವೇದಿಕೆಯಿಂದ ಕೆಳಗಿಳಿಯುತ್ತಿದ್ದೇನೆ. ನಾನು ಪ್ರೇಕ್ಷಕರೊಂದಿಗೆ ಕುಳಿತು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ: ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಬಿಜೆಪಿ ಶಾಸಕನ ಮಗನಿಗೆ ಗ್ರಾಮಸ್ಥರಿಂದ ಥಳಿತ

ಶನಿವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್ ಮುಖಂಡ ಗೋಪಾಲ್ ಮಜುಂದಾರ್ ಅವರನ್ನು ಬಾರಕ್‌ಪೋರ್‌ನಲ್ಲಿ ಹತ್ಯೆಗೈಯಲಾಗಿದೆ. ಈ ಹತ್ಯೆಯ ಮಾಸ್ಟರ್ ಮೈಂಡ್ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಎಂದು ಆಡಳಿತ ಪಕ್ಷ ಟಿಎಂಸಿ ಆರೋಪಿಸಿದೆ.

ಆದರೆ, ಬಿಜೆಪಿ ಸಂಸದರು ಟಿಎಂಸಿಯೊಳಗಿನ ಆಂತರಿಕ ಕಲಹವೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಮೃತ ಗೋಪಾಲ್ ಮಜುಂದಾರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿಜೋಯ್ ಮುಖೋಪಾಧ್ಯಯ ಅವರನ್ನು ಇಂದು (ಜ.30) ಬೆಳಿಗ್ಗೆ ಬಂಧಿಸಲಾಗಿದೆ.

ತೃಣಮೂಲ ಕಾಂಗ್ರೆಸ್ ಮುಖಂಡ ಗೋಪಾಲ್ ಮಜುಂದಾರ್, ಮನೆಗೆ ಹಿಂದಿರುಗುವಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಜೊತೆಗೆ ಹಲವು ಬಾರಿ ಅವರನ್ನು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಶಿಷ್ಟಾಚಾರದ ಪ್ರಕಾರ ನಾನು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದೆ. ಆದರೆ, ಕೊಲೆಯ ಮಾಸ್ಟರ್‌ಮೈಂಡ್‌ನೊಂದಿಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ, ಅವರ ವಿರುದ್ಧ ನಾವು ದೂರು ದಾಖಲಿಸಿದ್ದೇವೆ. ಅವರ ವಿರುದ್ಧ ತನಿಖೆ ಬಾಕಿ ಇದೆ” ಎಂದು ಅರಣ್ಯ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಹೇಳಿದ್ದಾರೆ.


ಇದನ್ನೂ ಓದಿ: ಕೈತಪ್ಪಿದ ಟಿಕೆಟ್‌: ಬಿಜೆಪಿಗೆ ರಾಜೀನಾಮೆ ನೀಡುವತ್ತ ಉತ್ತರಾಖಂಡದ ಹಲವು ಶಾಸಕರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...