Homeಕರ್ನಾಟಕಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

- Advertisement -
- Advertisement -

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ ಎಲ್ಲ ಸಾಧ್ಯತೆಗಳಿವೆ. ಕುತಂತ್ರದ ಮೂಲಕ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಬಹುಮತ ಪಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಯಾದರೆ ಕಾಂಗ್ರೆಸ್‌ ಗೆದ್ದಿರುವ ಸುಮಾರು 100 ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪುತ್ತೂರು:

ಕಳೆದ ಒಂದು ದಶಕದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯದ್ದೇ ಮೇಲುಗೈ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಇದೀಗ ಎಸ್‌ಐಆರ್‌ ಜಾರಿಯಾದರೆ ಪುತ್ತೂರು ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲವೂ ಇದೆ. 2023ರ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅತ್ಯಂತ ರೋಚಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಶೋಕ್ ಕುಮಾರ್ ರೈ 66,607 ಮತಗಳನ್ನು ಪಡೆದು ವಿಜೇತರಾದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ 62,458 ಮತಗಳು ಳನ್ನು ಪಡೆದರೆ, ಬಿಜೆಪಿಯ ಆಶಾ ತಿಮ್ಮಪ್ಪ 37,558 ಮತಗಳನ್ನು ಪಡೆದಿದ್ದರು. ಇಲ್ಲಿನ ಗೆಲುವಿನ ಅಂತರ 4,149 ಮತಗಳಾಗಿವೆ.

ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಹಿಂದೂ ಸಂಘಟನೆಯ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದು ಈ ಕ್ಷೇತ್ರದ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. 2,12,845 ಒಟ್ಟು ಮತದಾರರಿದ್ದು, 2011ರ ಜನಗಣತಿಯ ಪ್ರಕಾರ, ಪುತ್ತೂರು ಪಟ್ಟಣದಲ್ಲಿ ಹಿಂದೂಗಳು ಸುಮಾರು ಶೇ.63 ರಷ್ಟಿದ್ದಾರೆ. ಆದರೆ, ಮುಸ್ಲಿಮರು ಶೇ.30 ಮತ್ತು ಕ್ರೈಸ್ತರು ಶೇ.5.8 ರಷ್ಟಿದ್ದಾರೆ. ಅಂದರೆ, ಅಲ್ಪಸಂಖ್ಯಾತರ ಮತಗಳು ಶೇ.35.8ರಷ್ಟಿದೆ. ಬಂಗಾಳದಂತೆ ಇಲ್ಲಿಯೂ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಎಸ್‌ಐಆರ್‌ ಹೆಸರಿನಲ್ಲಿ ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ.

ಬೆಳಗಾವಿ ಉತ್ತರ:

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರವು ಬೆಳಗಾವಿ ನಗರದ ಮೂರು ಕ್ಷೇತ್ರಗಳಲ್ಲೊಂದು. ಮೂರರಲ್ಲಿ ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಪ್ರಸ್ತುತ ಕಾಂಗ್ರೆಸ್‌ನ ಆಸಿಫ್ (ರಾಜು) ಸೇಠ್ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಈ ಹಿಂದೆ ಶಾಸಕರಾಗಿದ್ದ ಫಿರೋಜ್ ಸೇಠ್ ಅವರ ಸಹೋದರ.

2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆಸಿಫ್ ಸೇಠ್ 69,184 ಮತಗಳನ್ನು ಪಡೆದರೆ, ಬಿಜೆಪಿಯ ಡಾ. ರವಿ ಬಿ. ಪಾಟೀಲ್ ಅವರು 64,953 ಮತಗಳನ್ನು ಪಡೆದಿದ್ದರು. ಇವರ ಗೆಲುವಿನ ಅಂತರ 4,231 ಮತಗಳು.

ಈ ಕ್ಷೇತ್ರವು ಬೆಳಗಾವಿ ನಗರದ ಉತ್ತರ ಭಾಗದ ವಾರ್ಡ್‌ಗಳನ್ನು ಒಳಗೊಂಡಿದೆ. 2023ರ ಅಂಕಿಅಂಶಗಳ ಪ್ರಕಾರ, ಈ ಕ್ಷೇತ್ರದಲ್ಲಿ ಸುಮಾರು 2.51 ಲಕ್ಷ ಮತದಾರರಿದ್ದಾರೆ. ಪ್ರಮುಖವಾಗಿ, ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತ ಮತ್ತು ಮರಾಠ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಎಸ್‌ಐಆರ್‌ ಮೂಲಕ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡರೆ ಬಿಜೆಪಿ ಗೆಲ್ಲುವ ಸಾಧ್ಯತೆಗಳಿವೆ.

ವಿರಾಜಪೇಟೆ:

2023ರ ವಿಧಾನಸಭೆ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ.

2023ರ ಚುನಾವಣೆಯಲ್ಲಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ 83,791 ಮತಗಳನ್ನು ಪಡೆದರೆ, ಬಿಜೆಪಿಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು 79,500 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ 4,291 ಮತಗಳಾಗಿವೆ.

ಕ್ಷೇತ್ರದಲ್ಲಿ ಸುಮಾರು 2.25 ಲಕ್ಷ ಮತದಾರರಿದ್ದು, ಈ ಕ್ಷೇತ್ರದಲ್ಲಿ ಕೊಡವ, ಮಲಯಾಳಂ, ಕನ್ನಡ ಮತ್ತು ಅರೆಭಾಷೆ ಮಾತನಾಡುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2011ರ ಜನಗಣತಿಯ ಪ್ರಕಾರ ಈ ಕ್ಷೇತ್ರದಲ್ಲಿ ಹಿಂದೂಗಳು ಸುಮಾರು ಶೇ.81, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಸಮಯದಾಯದ ಶೇ.18.6 ಜನರಿದ್ದಾರೆ. ಇಲ್ಲಿಯೂ ಸಹ ಗೆಲುವಿನ ಅಂತರ ಕಡಿಮೆ ಇದ್ದು, ಎಸ್‌ಐಆರ್‌ ಜಾರಿಯಾದರೆ ಅಲ್ಪಸಂಖ್ಯಾತ ಸಮುದಾಯದ ಮತದಾರರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

ಮಡಿಕೇರಿ:

ಕೊಡಗು ಜಿಲ್ಲೆಯ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ಮಡಿಕೇರಿಯಲ್ಲೂ ಕಾಂಗ್ರೆಸ್‌ ಕಡಿಮೆ ಅಂತರದಲ್ಲಿ ಗೆದ್ದಿದೆ. ಈ ಹಿಂದೆ ಇಲ್ಲಿಯೂ ಸಹ ಬಿಜೆಪಿ ಶಾಸಕರಿದ್ದರು. ಪ್ರಸ್ತುತ ಡಾ. ಮಂತರ್ ಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಈ ಕ್ಷೇತ್ರದ ಶಾಸಕರಾಗಿದ್ದಾರೆ.

2023ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಕಾಂಗ್ರೆಸ್ ಭೇದಿಸುವಲ್ಲಿ ಯಶಸ್ವಿಯಾಯಿತು. ಡಾ. ಮಂತರ್ ಗೌಡ ಅವರು 84,879 ಮತಗಳನ್ನು ಪಡೆದರೆ, ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರು 80,477 ಮತಗಳನ್ನು ಪಡೆದರು. ಇಲ್ಲಿನ ಗೆಲುವಿನ ಅಂತರ 4,402 ಮತಗಳು ಮಾತ್ರ.

ಸುಮಾರು 2.36 ಲಕ್ಷ ಒಟ್ಟು ಮತದಾರರಿರುವ ಈ ಕ್ಷೇತ್ರದಲ್ಲಿ ಗೌಡರು (ಅರೆಭಾಷೆ ಮತ್ತು ಇತರರು), ಕೊಡವರು, ಲಿಂಗಾಯತರು ಮತ್ತು ಪರಿಶಿಷ್ಟ ಜಾತಿಯ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ವಿರಾಜಪೇಟೆಗೆ ಹೋಲಿಸಿದರೆ ಇಲ್ಲಿ ಕೊಡವರಿಗಿಂತ ಗೌಡ ಸಮುದಾಯದ ಮತದಾರರ ಸಂಖ್ಯೆ ಸ್ವಲ್ಪ ಹೆಚ್ಚಿದೆ. ಹಿಂದೂಗಳ ಜನಸಂಖ್ಯೆ ಸುಮಾರು ಶೇ.71 ರಷ್ಟಿದ್ದರೆ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದ ಶೇ.28.11 ಮತದಾರರಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಇವರೇ ನಿರ್ಣಾಯಕ ಮತದಾರರಾಗಿದ್ದಾರೆ. ಎಸ್‌ಐಆರ್‌ ಜಾರಿಯಾದರೆ ಇಲ್ಲಿಯೂ ಸಹ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನಾಗಮಂಗಲ:

ಕಡಿಮೆ ಅಂತರದಲ್ಲಿ ಗೆದ್ದ ಸಚಿವರ ಸಾಲಿನಲ್ಲಿ ಎನ್‌.ಚಲುವರಾಯಸ್ವಾಮಿ ಕೂಡ ಇದ್ದಾರೆ. ಮಂಡ್ಯ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ನಾಗಮಂಗಲ ಹಳೆ ಮೈಸೂರು ಭಾಗದ ಪ್ರಮುಖ ಕ್ಷೇತ್ರ. ಚಲುವರಾಯಸ್ವಾಮಿ ಪ್ರಸ್ತುತ ಕರ್ನಾಟಕ ಸರ್ಕಾರದ ಕೃಷಿ ಸಚಿವರಾಗಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

2023ರ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಎನ್. ಚಲುವರಾಯಸ್ವಾಮಿ 90,634 ಮತಗಳನ್ನು ಪಡೆದರು. ಜೆಡಿಎಸ್‌ನ ಸುರೇಶ್ ಗೌಡ 86,220 ಮತಗಳನ್ನು ಪಡೆದರು. ಇಲ್ಲಿನ ಗೆಲುವಿನ ಅಂತರ 4,414 ಮತಗಳು ಮಾತ್ರ. ಬಿಜೆಪಿ ಅಭ್ಯರ್ಥಿಯಾಗಿದ್ದ ಸುಧಾ ಶಿವರಾಮೇಗೌಡ ಅವರು 7,769 ಮತಗಳು ಪಡೆದರೂ, ಎಸ್‌ಐಆರ್‌ ಜಾರಿಯಾದರೆ ಎನ್‌ಡಿಎ ಭಾಗವಾಗಿರುವ ಜೆಡಿಎಸ್‌ಗೆ ಅನುಕೂಲವಾಗಲಿದೆ.

2023ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ 4,414 ಮತಗಳ ಅಂತರದಿಂದ ಗೆದ್ದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಸುರೇಶ್‌ಗೌಡ ಅವರು 47,667 ಮತಗಳ ಅಂತರದಲ್ಲಿ ಗೆದ್ದಿದ್ದರು.

ಅಫಜಲಪುರ:

ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರವು ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಕ್ಷೇತ್ರಗಳಲ್ಲೊಂದಾಗಿದೆ. ಕಾಂಗ್ರೆಸ್‌ನ ಎಂ. ವೈ. ಪಾಟೀಲ್ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ತೀವ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಪಾಟೀಲ್ 56,313 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ನಿತಿನ್ ವಿ. ಗುತ್ತೇದಾರ್ 51,719 ಮತಗಳನ್ನು ಪಡೆದರು. ಬಿಜೆಪಿಯ ಮಾಲೀಕಯ್ಯ ವಿ. ಗುತ್ತೇದಾರ್ 31,394 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಇಲ್ಲಿನ ಗೆಲುವಿನ ಅಂತರ ಸುಮಾರು 4,594 ಮತಗಳು ಮಾತ್ರ.

ಈ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತದಾರರು (ಸುಮಾರು ಶೇ.14), ಕುರುಬರು (ಶೇ.12) ಮತ್ತು ಲಿಂಗಾಯತರು (ಪಂಚಮಸಾಲಿ ಶೇ.12) ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸಂಖ್ಯೆ ಸಮುಮಾರು ಶೇ.13 ರಷ್ಟಿದ್ದಾರೆ.

ದೇವನಹಳ್ಳಿ:

ಕಡಿಮೆ ಮತಗಳ ಅಂತರದಲ್ಲಿ ಗೆದ್ದಿರುವ ಸಚಿವರ ಸಾಲಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಪ್ರತಿನಿಧಿಸುವ ದೇವನಹಳ್ಳಿ ಕ್ಷೇತ್ರವೂ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಕೆ. ಎಚ್. ಮುನಿಯಪ್ಪ 73,058 ಮತಗಳನ್ನು ಪಡೆದರೆ, ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ 68,427 ಮತಗಳನ್ನು ಪಡೆದರು. ಬಿಜೆಪಿ ಇಲ್ಲಿ ಮೂರನೇ ಸ್ಥಾನ ಪಡೆಯಿತು; ಪಿಳ್ಳ ಮುನಿಶಾಮಪ್ಪ ಅವರು 34,404 ಮತಗಳನ್ನು ಪಡೆದರು. ಇಲ್ಲಿನ ಗೆಲುವಿನ ಅಂತರ 4,631 ಮತಗಳು ಮಾತ್ರ.

ಬಂಗಾರಪೇಟೆ:

ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರವು ಸಹ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ (2013, 2018, 2023) ಆಯ್ಕೆಯಾಗಿದ್ದಾರೆ.

2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ನಡೆದಿತ್ತು. ಎಸ್.ಎನ್. ನಾರಾಯಣಸ್ವಾಮಿ 77,292 ಮತಗಳನ್ನು ಪಡೆದರು. ಜೆಡಿಎಸ್‌ನ ಎಂ. ಮಲ್ಲೇಶ್ ಬಾಬು 72,581 ಮತಗಳನ್ನು ಪಡೆದರು. ಬಿಜೆಪಿಯ ಎಂ. ನಾರಾಯಣಸ್ವಾಮಿ 8,972 ಮತಗಳನ್ನು ಪಡೆದುಕೊಂಡಿದ್ದು, ನಾರಾಯಣಸ್ವಾಮಿ ಅವರ ಗೆಲುವಿನ ಅಂತರ 4,711 ಮತಗಳು ಮಾತ್ರ.

ಹೊಸಕೋಟೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್‌ ಕಡಿಮೆ ಅಂತರದಲ್ಲಿ ಗೆದ್ದಿದೆ. ಹೊಸಕೋಟೆ ನಗರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ಜೊತೆಗೆ, ಕೈಗಾರಿಕಾ ಪ್ರದೇಶವಾಗಿರುವುದರಿಂದ ವಲಸಿಗರೂ ಇಲ್ಲಿ ಮತದಾರರಾಗಿದ್ದಾರೆ. ಪ್ರಸ್ತುತ ಶರತ್ ಕುಮಾರ್ ಬಚ್ಚೇಗೌಡ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಅವರು, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.

2023ರ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಮತ್ತೊಮ್ಮೆ ಭಾರೀ ಜಿದ್ದಾಜಿದ್ದಿ ನಡೆದಿತ್ತು. ಶರತ್ 1,07,220 ಮತಗಳನ್ನು ಪಡೆದರೆ, ಬಿಜೆಪಿಯ ಎಂ.ಟಿ.ಬಿ. ನಾಗರಾಜ್ 1,02,145 ಮತಗಳನ್ನು ಪಡೆದರು. ಇವರ ಗೆಲುವಿನ ಅಂತರ 5,075 ಮತಗಳು ಮಾತ್ರ.

ಬಾಗಲಕೋಟೆ:

ಬಾಗಲಕೋಟೆ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬ, ಮುಸ್ಲಿಂ ಮತ್ತು ದಲಿತ ಸಮುದಾಯದ ಮತದಾರರು ಸಹ ಫಲಿತಾಂಶದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದಾರೆ. ಅಹಿಂದ ಮತಗಳು ಕಾಂಗ್ರೆಸ್‌ ಪರವಾಗಿದ್ದು, ಎಸ್‌ಐಆರ್‌ ಇಲ್ಲಿಯೂ ಸಹ ಪ್ರಭಾವ ಬೀರಬಹುದು.

2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಎಚ್.ವೈ. ಮೇಟಿ ಅವರು 79,336 ಮತಗಳನ್ನು ಪಡೆದು ವಿಜೇತರಾಗಿದ್ದರು. ಬಿಜೆಪಿಯ ವೀರಣ್ಣ ಚರಂತಿಮಠ 73,458 ಮತಗಳನ್ನು ಪಡೆದಿದ್ದರು. ಅವರ ಗೆಲುವಿನ ಅಂತರ 5,878 ಮತಗಳು ಮಾತ್ರ.

ಅನಾರೋಗ್ಯದಿಂದ ಎಚ್‌.ವೈ. ಮೇಟಿ ನಿಧನರಾದ ಬಳಿಕ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಉಮೇಶ್‌ ಮೇಟಿ ಗೆದ್ದಿದ್ದಾರೆ. ಉಮೇಶ್ ಮೇಟಿ ಅವರು 22,332 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮೇಟಿ 98,919 ಮತ ಪಡೆದರೆ, ವೀರಣ್ಣ ಚರಂತಿಮಠ 76,587 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಮತ್ತು 2026ರ ಉಪ ಚುನಾವಣೆಯನ್ನು ಗಮನಿಸಿದರೆ, ಎಸ್‌ಐಆರ್‌ ಕಾರಣದಿಂದಾಗಿ ಈ ಕ್ಷೇತ್ರದಲ್ಲೂ ಫಲಿತಾಂಶ ಏರುಪೇರಾಗಬಹುದು ಎಂದು ಅಂದಾಜಿಸಬಹುದು.

ಚಿಕ್ಕಮಗಳೂರು:

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಹಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಡಿ. ತಮ್ಮಯ್ಯ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2023ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಸಿ.ಟಿ. ರವಿ ಮತ್ತು ಅವರ ಆಪ್ತರಾಗಿದ್ದ ಎಚ್.ಡಿ. ತಮ್ಮಯ್ಯ ಅವರ ನಡುವೆ ನೇರ ಹಣಾಹಣಿ ನಡೆದಿತ್ತು. ಎಚ್.ಡಿ. ತಮ್ಮಯ್ಯ 85,054 ಮತಗಳನ್ನು ಪಡೆದರೆ, ಬಿಜೆಪಿಯ ಸಿ.ಟಿ. ರವಿ 79,128 ಮತಗಳನ್ನು ಪಡೆದಿದ್ದರು. ಇವರ ಗೆಲುವಿನ ಅಂತರ 5,926 ಆಗಿದೆ.

2,30,738 ಲಕ್ಷ ಒಟ್ಟು ಮತದಾರರಿದ್ದು, ಅಂದಾಜು 30,000 ಮುಸ್ಲಿಂ ಮತದಾರರಿದ್ದಾರೆ. ಕ್ಷೇತ್ರವನ್ನು ಮತ್ತೆ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುಲು ಬಿಜೆಪಿ ಹವಣಿಸುತ್ತಿದೆ. ಎಸ್‌ಐಆರ್‌ ಜಾರಿಯಾದರೆ ಅಹಿಂದ ಮತಗಳ ಮೇಲೆ ಪರಿಣಾಮ ಬೀರಿ, ಅದರಿಂದ ಬಿಜೆಪಿಗೆ ಲಾಭವಾಗಬಹುದು.

ಶಾಂತಿನಗರ:

ಎಸ್‌ಐಆರ್‌ ಜಾರಿಯಾದರೆ ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ನೇರ ಪರಿಣಾಮ ಎದುರಿಸುತ್ತದೆ. ಇದು ನಗರದ ಅತ್ಯಂತ ವೈವಿಧ್ಯಮಯ ಕ್ಷೇತ್ರಗಳಲ್ಲಿ ಒಂದಾಗಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯ ಜನರು ಇಲ್ಲಿದ್ದಾರೆ. ತಮಿಳು ವಲಸಿಗರು, ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದ ಮತದಾರರೇ ಹೆಚ್ಚಿದ್ದಾರೆ.

ಪ್ರಸ್ತುತ ಎನ್. ಎ. ಹ್ಯಾರಿಸ್ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸತತ ನಾಲ್ಕನೇ ಬಾರಿಗೆ (2008, 2013, 2018 ಮತ್ತು 2023) ಶಾಸಕರಾಗಿ ಆಯ್ಕೆಯಾಗಿದ್ದಾರೆ. 2023ರ ಚುನಾವಣೆಯಲ್ಲಿ ಇವರೂ ಸಹ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ನ ಎನ್. ಎ. ಹ್ಯಾರಿಸ್ 61,030 ಮತಗಳನ್ನು ಪಡೆದರೆ, ಬಿಜೆಪಿಯ ಶಿವಕುಮಾರ್ ಅವರು 53,905 ಮತಗಳನ್ನು ಪಡೆದರು. ಇವರ ಗೆಲುವಿನ ಅಂತರ 7,125 ಮತಗಳು ಮಾತ್ರ.

ಗಾಂಧಿನಗರದಂತೆ ಇಲ್ಲಿಯೂ ಸಹ ಹೆಚ್ಚಿನ ಸ್ಲಂಗಳಿದ್ದು, ಎಸ್‌ಐಆರ್‌ ಜಾರಿಯಾದರೆ ಇಲ್ಲಿನ ಶ್ರಮಿಕ ಅನಕ್ಷಸ್ತರು ಮತ್ತು ಅಲ್ಪಸಂಖ್ಯಾತರು ಮತದಾನದಿಂದ ವಂಚಿತರಾಗಲಿದ್ದಾರೆ. ಸುಮಾರು 2.32 ಲಕ್ಷ ಒಟ್ಟು ಮತದಾರರಲ್ಲಿ, ಮುಸ್ಲಿಂ, ಕ್ರೈಸ್ತ ಮತ್ತು ತಮಿಳು ಭಾಷಿಕ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಈ ಮತದಾರರು ಚುನಾವಣಾ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರುತ್ತಾರೆ.

ವಿಜಯನಗರ (ಬೆಂಗಳೂರು):

ಬೆಂಗಳೂರು ನಗರದ ಪಶ್ಚಿಮ ಭಾಗದಲ್ಲಿರುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್‌ನ ಹಿರಿಯ ನಾಯಕ ಎಂ. ಕೃಷ್ಣಪ್ಪ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಸ್ಲಂ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರು ಹಲವು ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಬೆಂಬಲಿಸುತ್ತಿದ್ದಾರೆ.

ಪ್ರಸ್ತುತ ಎಂ. ಕೃಷ್ಣಪ್ಪ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಎಂ. ಕೃಷ್ಣಪ್ಪ 80,157 ಮತಗಳನ್ನು ಪಡೆದರೆ, ಬಿಜೆಪಿಯ ಎಚ್. ರವೀಂದ್ರ ಅವರು 72,833 ಮತಗಳನ್ನು ಪಡೆದರು. ಇವರ ಗೆಲುವಿನ ಅಂತರ 7,324 ಮತಗಳು ಮಾತ್ರ. ಎಸ್‌ಐಆರ್‌ ಜಾರಿಯಾದರೆ, ಸ್ಲಂ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರು ದಾಖಲೆ ಒದಗಿಸಲು ಕಷ್ಟಪಡಬೇಕಾಗುತ್ತದೆ. ಇದರ ನೇರ ಪರಿಣಾಮ ಕಾಂಗ್ರೆಸ್‌ ಮೇಲೆ ಬೀರುವ ಸಾಧ್ಯತೆ ಇದೆ.

ಚಾಮರಾಜನಗರ:

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹ ಹಿರಿಯ ಕಾಂಗ್ರೆಸ್‌ ನಾಯಕ ಸಿ. ಪುಟ್ಟರಂಗಶೆಟ್ಟಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಸತತ ನಾಲ್ಕನೇ ಬಾರಿಗೆ (2008, 2013, 2018 ಮತ್ತು 2023) ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ 2023ರಲ್ಲಿ ಇವರ ಗೆಲುವಿನ ಮಾರ್ಜಿನ್‌ ಕಡಿಮೆಯಾಗಿದೆ.

2023ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಮತ್ತು ಪುಟ್ಟರಂಗಶೆಟ್ಟಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಪುಟ್ಟರಂಗಶೆಟ್ಟಿ 83,858 ಮತಗಳನ್ನು ಪಡೆದರೆ, ವಿ. ಸೋಮಣ್ಣ 76,325 ಮತಗಳನ್ನು ಪಡೆದರು. ಅವರ ಗೆಲುವಿನ ಅಂತರ 7,533 ಮತಗಳು ಮಾತ್ರ. 2018ರಲ್ಲಿ ಪುಟ್ಟರಂಗಶೆಟ್ಟಿ ಅವರು 4,913 ಮತಗಳ ಅಂತರದಿಂದ ಗೆದ್ದಿದ್ದರು. 2023ರಲ್ಲಿ ಕೊಂಚ ಸುಧಾರಿಸಿಕೊಂತೆ ಕಂಡುಬಂದರೂ, ಎಸ್‌ಐಆರ್‌ ಜಾರಿಯಾದರೆ ಗೆಲುವು ಕಷ್ಟವಾಗಬಹುದು.

ಮುದ್ದೇಬಿಹಾಳ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದಲ್ಲೂ ಕಾಂಗ್ರೆಸ್‌ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದೆ. ಎಸ್. ನಾಡಗೌಡ (ಅಪ್ಪಾಜಿ) ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಎಸ್. ನಾಡಗೌಡ ಮತ್ತು ಬಿಜೆಪಿಯ ಎ.ಎಸ್. ಪಾಟೀಲ್ ನಡಹಳ್ಳಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ನಾಡಗೌಡ ಅವರು 79,483 ಮತಗಳನ್ನು ಪಡೆದರೆ, ಎ.ಎಸ್. ಪಾಟೀಲ್ ನಡಹಳ್ಳಿ 71,846 ಮತಗಳನ್ನು ಪಡೆದರು. ಇವರ ಗೆಲುವಿನ ಅಂತರ 7,637 ಮತಗಳು ಮಾತ್ರ.

ಮಾನ್ವಿ:

ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್‌ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಜಿ. ಹಂಪಯ್ಯ ನಾಯಕ ಶಾಸಕರಾಗಿ 2023ರಲ್ಲಿ ಗೆದ್ದಿದ್ದಾರೆ. ಇವರು ಈ ಹಿಂದೆ 2008 ಮತ್ತು 2013ರಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಹಂಪಯ್ಯ ನಾಯಕ 66,922 ಮತಗಳನ್ನು ಪಡೆದರೆ, ಬಿಜೆಪಿಯ ಎ. ಭಗವಂತರಾಯ ಅವರು 59,203 ಮತಗಳನ್ನು ತಮ್ಮದಾಗಿಸಿಕೊಂಡರು. ಇವರ ಗೆಲುವಿನ ಅಂತರ 7,719 ಮತಗಳು.

ಸಿಂಧಗಿ:

ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಭಾವವಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಪಕ್ಷದ ಅಶೋಕ್ ಮಲ್ಲಪ್ಪ ಮನಗೂಳಿ ಅವರು ಸದ್ಯ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಅಶೋಕ್ ಮನಗೂಳಿ ಅವರು ಬಿಜೆಪಿಯ ರಮೇಶ್ ಭೂಸನೂರ್ ಅವರ ವಿರುದ್ಧ 7,808 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

2,27,114 ಒಟ್ಟು ಮತದಾರರಿದ್ದು, ಗಾಣಿಗ ಸಮುದಾಯದ ಸುಮಾರು 42,000. ಕುರುಬ ಸಮುದಾಯದ ಸುಮಾರು 34,500, ಪಂಚಮಸಾಲಿ ಲಿಂಗಾಯತ ಸಮುದಾಯದ ಸುಮಾರು 29,000 ಮತ್ತು ಗಂಗಾಮತಸ್ಥ ಸಮುದಾಯದ ಸುಮಾರು 19,000 ಮತದಾರರಿದ್ದಾರೆ. ಶೇ.18 ರಷ್ಟು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪರಿಶಿಷ್ಟ ಜಾತಿ (SC)ಯ ಸುಮಾರು ಶೇ.21 ರಷ್ಟು ಜನಸಂಖ್ಯೆ ಹೊಂದಿದ್ದಾರೆ. ಈ ಕ್ಷೇತ್ರದಲ್ಲೂ ಎಸ್‌ಐಆರ್‌ ಪರಿಣಾಮ ಉಂಟುಮಾಡಬಹುದು.

ಗುಬ್ಬಿ:

ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರ ಹಳೆ ಮೈಸೂರು ಭಾಗದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಪಕ್ಷದ ಎಸ್.ಆರ್. ಶ್ರೀನಿವಾಸ್ ಅವರು 2023ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶ್ರೀನಿವಾಸ್ ಅವರು ಬಿಜೆಪಿಯ ಎಸ್‌.ಡಿ. ದಿಲೀಪ್ ಕುಮಾರ್ ಅವರ ವಿರುದ್ಧ 8,541 ಮತಗಳ ಕಡಿಮೆ ಅಂತರದಿಂದ ಜಯಗಳಿಸಿದ್ದಾರೆ.

ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರ ಮಲೆನಾಡು ಭಾಗದ ಪ್ರಮುಖ ಕ್ಷೇತ್ರವಾಗಿದ್ದು, ಹಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದೆ.

ಭೀಮಣ್ಣ ನಾಯ್ಕ ಅವರು, ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ 8,712 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಭೀಮಣ್ಣ ಅವರು 76,887 ಮತಗಳನ್ನು ಪಡೆದರೆ, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 68,175, ಜೆಡಿಎಸ್‌ನ ಉಪೇಂದ್ರ ಪೈ 9,138 ಮತಗಳನ್ನು ಪಡೆದರು.

2,00,755 ಒಟ್ಟು ಮತದಾರರಿದ್ದು, 2023ರಲ್ಲಿ ಶೇ. 79.97 ರಷ್ಟು ದಾಖಲೆ ಮತದಾನವಾಗಿತ್ತು. ಶಿರಸಿ ನಗರ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆಯು ಶೇ. 24.18 ರಷ್ಟಿದೆ ಎಂದು 2011ರ ಜನಗಣತಿ ತಿಳಿಸುತ್ತದೆ. ಪರಿಶಿಷ್ಟ ಜಾತಿಯ ಸುಮಾರು ಶೇ. 8.19 ರಷ್ಟು ಮತದಾರರಿದ್ದಾರೆ.

ಕಾಗವಾಡ:

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪ್ರಮುಖ ಕ್ಷೇತ್ರ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಇಲ್ಲಿಯೂ ಸಹ ಅಲ್ಪ ಮತಗಳ ಅಂತರದಲ್ಲಿ ಗೆದ್ದಿದೆ. ಕಾಂಗ್ರೆಸ್ ಪಕ್ಷದ ಭರಮಗೌಡ ಅಲಗೌಡ ಕಾಗೆ (ರಾಜು ಕಾಗೆ) ಶಾಸಕರಾಗಿದ್ದಾರೆ. ಬಿಜೆಪಿಯ ಶ್ರೀಮಂತ ಬಾಳಾಸಾಹೇಬ ಪಾಟೀಲ ಅವರ ವಿರುದ್ಧ 8,827 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಿಟಿಎಂ ಲೇಔಟ್

ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿರುವ ಸಚಿವರ ಸಾಲಿನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಕೂಡ ಒಬ್ಬರು. ಕ್ಷೇತ್ರದಲ್ಲಿ ಹೆಚ್ಚಿನ ಸ್ಲಂ ಪ್ರದೇಶಗಳಿದ್ದು, ಅತ್ಯಂತ ಹೆಚ್ಚು ವಲಸಿಗರನ್ನು ಹೊಂದಿದೆ. ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶವಾದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ರಾಜಕೀಯದಲ್ಲಿ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು 2023ರ ಚುನಾವಣೆಯಲ್ಲಿ ಬಿಜೆಪಿಯ ಕೆ.ಆರ್. ಶ್ರೀಧರ ರೆಡ್ಡಿ ಅವರ ವಿರುದ್ಧ 9,222 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸುಮಾರು 2,74,383 ಮತದಾರರಿದ್ದು, ಶೇ. 80ರಷ್ಟು ಹಿಂದೂಗಳು, ಶೇ. 15ರಷ್ಟು ಮುಸ್ಲಿಮರು ಮತ್ತು ಶೇ. 4ರಷ್ಟು ಕ್ರಿಶ್ಚಿಯನ್ ಮತದಾರರಿದ್ದಾರೆ. ಈ ಕ್ಷೇತ್ರವು ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಜಯನಗರ, ಕೋರಮಂಗಲ ಮತ್ತು ಮಡಿವಾಳದಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದ್ದು, ಎಸ್‌ಐಆರ್‌ ಜಾರಿಯಾದರೆ ಅತ್ಯಂತ ಹೆಚ್ಚಿನ ಮತದಾರರು ಪರಿಶೀಲನೆಗೆ ಒಳಪಡುವುದರಲ್ಲಿ ಅನುಮಾನವಿಲ್ಲ.

ಬಾದಾಮಿ:

ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರ ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಮಹತ್ವದ ಕ್ಷೇತ್ರವಾಗಿದೆ. ಕಾಂಗ್ರೆಸ್‌ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿರುವ ಕ್ಷೇತ್ರಗಳಲ್ಲಿ ಇದೂ ಕೂಡ ಒಂದು. 2018ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಸಹ ಅಲ್ಪಮತಗಳ ಅಂತರದಿಂದ ಗೆದ್ದಿದ್ದರು.

2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ. ಬಿ. ಚಿಮ್ಮನಕಟ್ಟಿ ಅವರು ಬಿಜೆಪಿಯ ಶಾಂತಗೌಡ ಪಾಟೀಲ ಅವರ ವಿರುದ್ಧ 9,725 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಚಿಮ್ಮನಕಟ್ಟಿ 65,845, ಶಾಂತಗೌಡ ತೀರ್ಥಗೌಡ ಪಾಟೀಲ 56,120, ಹನುಮಂತ ಮವಿನಮರದ 41,572 ಮತಗಳನ್ನು ಪಡೆದಿದ್ದರು. ಸುಮಾರು 2,20,420 ಮತದಾರರಿರುವ ಕ್ಷೇತ್ರದಲ್ಲಿ ಕುರುಬ ಸಮುದಾಯದ 65,000, ಲಿಂಗಾಯತ ಸಮುದಾಐದ ಸುಮಾರು 50,000 ಮತದಾರರಿದ್ದಾರೆ. ಬಾದಾಮಿ ನಗರ ವ್ಯಾಪ್ತಿಯಲ್ಲಿ ಹಿಂದೂಗಳು ಶೇ. 76.92 ಮತ್ತು ಮುಸ್ಲಿಮರು ಶೇ. 20.65 ರಷ್ಟಿದ್ದಾರೆ.

2018ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಂದ ಸ್ಪರ್ಧಿಸಿ ಬಿಜೆಪಿಯ ಬಿ. ಶ್ರೀರಾಮುಲು ಅವರ ವಿರುದ್ಧ ಅಲ್ಪ ಮತಗಳ ಅಂತರದಿಂದ (1,696 ಮತಗಳು) ಗೆಲುವು ಸಾಧಿಸಿದ್ದರು.

ರಾಣೆಬೆನ್ನೂರು:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಉತ್ತರ ಕರ್ನಾಟಕದ ರಾಜಕೀಯವಾಗಿ ಅತೀ ಹೆಚ್ಚು ಕುತೂಹಲ ಕೆರಳಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಕಾಶ್ ಕೋಳಿವಾಡ ಅವರು ಬಿಜೆಪಿಯ ಅರುಣ್‌ಕುಮಾರ್ ಗುತ್ತೂರು ಅವರ ವಿರುದ್ಧ 9,800 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.

ಕಾಂಗ್ರೆಸ್ ಪ್ರಕಾಶ್ ಕೋಳಿವಾಡ 71,830, ಬಿಜೆಪಿಯ ಅರುಣ್‌ಕುಮಾರ್ ಗುತ್ತೂರು 62,030, ಎನ್‌ಸಿಪಿಯ ಆರ್. ಶಂಕರ್ 37,559 ಮತಗಳನ್ನು ಪಡೆದರು. ಸರಿಸುಮಾರು 2,37,234 ಒಟ್ಟು ಮತದಾರರಿದ್ದು, 2023ರ ಚುನಾವಣೆಯಲ್ಲಿ ಅಂದಾಜು ಶೇ. 80.4 ರಷ್ಟು ಮತದಾನ ದಾಖಲಾಗಿತ್ತು. ಕ್ಷೇತ್ರದಲ್ಲಿ ಸರಿಸುಮಾರು ಶೇ. 71.21 ರಷ್ಟು ಹಿಂದೂಗಳು ಮತ್ತು ಶೇ. 26.93 ರಷ್ಟು ಮುಸ್ಲಿಮರು ಇದ್ದಾರೆ.

ಮೇಲೆ ನಾವು ಪಟ್ಟಿ ಮಾಡಿರುವ ಅಷ್ಟೂ ಕ್ಷೇತ್ರಗಳು 10 ಸಾವಿರದ ಒಳಗಿನ ಮತಗಳ ಅಂತರದಲ್ಲಿ ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರಗಳಾಗಿವೆ. ಇದೀಗ 10 ಸಾವಿರದಿಂದ 30 ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್‌ ಕ್ಷೇತ್ರಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

  1. ಜೇವರ್ಗಿ ವಿಧಾನಸಭಾ ಕ್ಷೇತ್ರ – ಅಜಯಯ್ ಸಿಂಗ್ ಅವರ ಗೆಲುವಿನ ಅಂತರ 10278 ಮತಗಳು
  2. ಇಂಡಿ ವಿಧಾನಸಭಾ ಕ್ಷೇತ್ರ – ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಅವರ ಗೆಲುವಿನ ಅಂತರ 10329 ಮತಗಳು
  3. ಅಳಂದ ವಿಧಾನಸಭಾ ಕ್ಷೇತ್ರ – ಬಿ.ಆರ್. ಪಾಟೀಲ್ ಅವರ ಗೆಲುವಿನ ಅಂತರ 10348 ಮತಗಳು
  4. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ – ಪ್ರದೀಪ್ ಈಶ್ವರ್ ಅವರ ಗೆಲುವಿನ ಅಂತರ 10642 ಮತಗಳು
  5. ರಾಮನಗರ ವಿಧಾನಸಭಾ ಕ್ಷೇತ್ರ – ಇಕ್ಭಾಲ್ ಹುಸೇನ್ ಅವರ ಗೆಲುವಿನ ಅಂತರ 10715 ಮತಗಳು
  6. ಬೀದರ್ ವಿಧಾನಸಭಾ ಕ್ಷೇತ್ರ – ರಹೀಂ ಖಾನ್ ಅವರ ಗೆಲುವಿನ ಅಂತರ 10780 ಮತಗಳು
  7. ಪಾವಗಡ ವಿಧಾನಸಭಾ ಕ್ಷೇತ್ರ – ಎಚ್‌ವಿ ವೆಂಕಟೇಶ್ ಅವರ ಗೆಲುವಿನ ಅಂತರ 10881 ಮತಗಳು
  8. ಬೀಳಗಿ ವಿಧಾನಸಭಾ ಕ್ಷೇತ್ರ – ಜೆಟಿ ಪಾಟೀಲ್ ಅವರ ಗೆಲುವಿನ ಅಂತರ 11129 ಮತಗಳು
  9. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ – ರಮೇಶ್‌ ಬಂಡಿಸಿದ್ದೇಗೌಡ ಅವರ ಗೆಲುವಿನ ಅಂತರ 11137 ಮತಗಳು
  10. ರಾಮದುರ್ಗ ವಿಧಾನಸಭಾ ಕ್ಷೇತ್ರ – ಅಶೋಕ್ ಪಟ್ಟಣ ಅವರ ಗೆಲುವಿನ ಅಂತರ 11730 ಮತಗಳು
  11. ಮಾಗಡಿ ವಿಧಾನಸಭಾ ಕ್ಷೇತ್ರ – ಎಚ್‌ಸಿ ಬಾಲಕೃಷ್ಣ ಅವರ ಗೆಲುವಿನ ಅಂತರ 11839 ಮತಗಳು
  12. ಹಾವೇರಿ ವಿಧಾನಸಭಾ ಕ್ಷೇತ್ರ – ರುದ್ರಪ್ಪ ಲಮಾಣಿ ಅವರ ಗೆಲುವಿನ ಅಂತರ 11915 ಮತಗಳು
  13. ಕಡೂರು ವಿಧಾನಸಭಾ ಕ್ಷೇತ್ರ – ಆನಂದ್ ಕೆಎಸ್‌ ಅವರ ಗೆಲುವಿನ ಅಂತರ 12007 ಮತಗಳು
  14. ತರೀಕೆರೆ ವಿಧಾನಸಭಾ ಕ್ಷೇತ್ರ – ಜಿ.ಎಚ್‌. ಶ್ರೀನಿವಾಸ ಅವರ ಗೆಲುವಿನ ಅಂತರ 12131 ಮತಗಳು
  15. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ – ಪ್ರಿಯಾಕೃಷ್ಣ ಅವರ ಗೆಲುವಿನ ಅಂತರ 12516 ಮತಗಳು
  16. ಮಸ್ಕಿ ವಿಧಾನಸಭಾ ಕ್ಷೇತ್ರ – ಬಸವನಗೌಡ ತುರವಿಹಾಳ್ ಅವರ ಗೆಲುವಿನ ಅಂತರ 13053 ಮತಗಳು
  17. ಚಿತ್ತಾಪುರ ವಿಧಾನಸಭಾ ಕ್ಷೇತ್ರ – ಪ್ರಿಯಾಂಕ್ ಖರ್ಗೆ ಅವರ ಗೆಲುವಿನ ಅಂತರ 13640 ಮತಗಳು
  18. ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ – ಬಸವನಗೌಡ ದದ್ದಲ್ ಅವರ ಗೆಲುವಿನ ಅಂತರ 13857 ಮತಗಳು
  19. ಕೊರಟಗೆರೆ ವಿಧಾನಸಭಾ ಕ್ಷೇತ್ರ – ಡಾ.ಜಿ. ಪರಮೇಶ್ವರ ಅವರ ಗೆಲುವಿನ ಅಂತರ 14347 ಮತಗಳು
  20. ಕಲಘಟಕಿ ವಿಧಾನಸಭಾ ಕ್ಷೇತ್ರ – ಸಂತೋಷ್ ಲಾಡ್ ಅವರ ಗೆಲುವಿನ ಅಂತರ 14357 ಮತಗಳು
  21. ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ – ವಿಶ್ವಾಸ್ ವಸಂತ್ ವೈದ್ಯ ಅವರ ಗೆಲುವಿನ ಅಂತರ 14695 ಮತಗಳು
  22. ಹಿರೇಕೆರೂರು ವಿಧಾನಸಭಾ ಕ್ಷೇತ್ರ – ಯು.ಬಿ. ಬಣಕಾರ್ ಅವರ ಗೆಲುವಿನ ಅಂತರ 15020 ಮತಗಳು
  23. ಗದಗ್ ವಿಧಾನಸಭಾ ಕ್ಷೇತ್ರ – ಎಚ್‌.ಕೆ. ಪಾಟೀಲ್ ಅವರ ಗೆಲುವಿನ ಅಂತರ 15130 ಮತಗಳು
  24. ಬಬಲೇಶ್ವರ ವಿಧಾನಸಭಾ ಕ್ಷೇತ್ರ – ಎಂ.ಬಿ. ಪಾಟೀಲ್ ಗೆಲುವಿನ ಅಂತರ 15216 ಮತಗಳು
  25. ಸಾಗರ ವಿಧಾನಸಭಾ ಕ್ಷೇತ್ರ – ಗೋಪಾಲಕೃಷ್ಣ ಬೇಳೂರು ಅವರ ಗೆಲುವಿನ ಅಂತರ 16022 ಮತಗಳು
  26. ಚನ್ನಗಿರಿ ವಿಧಾನಸಭಾ ಕ್ಷೇತ್ರ – ಬಸವರಾಜು ವಿ. ಶಿವಗಂಗಾ ಅವರ ಗೆಲುವಿನ ಅಂತರ 16435 ಮತಗಳು
  27. ಚಳ್ಳಕೆರೆ ವಿಧಾನಸಭಾ ಕ್ಷೇತ್ರ – ಟಿ.ರಘುಮೂರ್ತಿ ಅವರ ಗೆಲುವಿನ ಅಂತರ 16450 ಮತಗಳು
  28. ಯಲಬುರ್ಗಾ ವಿಧಾನಸಭಾ ಕ್ಷೇತ್ರ – ಬಸವರಾಜ ರಾಯರೆಡ್ಡಿ ಅವರ ಗೆಲುವಿನ ಅಂತರ 17181 ಮತಗಳು
  29. ಮುಧೋಳ್ ವಿಧಾನಸಭಾ ಕ್ಷೇತ್ರ – ಆರ್‌ಬಿ ತಿಮ್ಮಾಪುರ ಅವರ ಗೆಲುವಿನ ಅಂತರ 17335 ಮತಗಳು
  30. ಹೊನ್ನಾಳಿ ವಿಧಾನಸಭಾ ಕ್ಷೇತ್ರ – ಸಂತಾನಗೌಡ ಬಿಜಿ ಅವರ ಗೆಲುವಿನ ಅಂತರ 17560 ಮತಗಳು
  31. ತಿಪಟೂರು ವಿಧಾನಸಭಾ ಕ್ಷೇತ್ರ – ಕೆ.ಷಡಾಕ್ಷರಿ ಅವರ ಗೆಲುವಿನ ಅಂತರ 17652 ಮತಗಳು
  32. ಧಾರವಾಡ ವಿಧಾನಸಭಾ ಕ್ಷೇತ್ರ – ವಿನಯ್ ಕುಲಕರ್ಣಿ ಅವರ ಗೆಲುವಿನ ಅಂತರ 18037 ಮತಗಳು
  33. ಟಿ.ನರಸೀಪುರ ವಿಧಾನಸಭಾ ಕ್ಷೇತ್ರ – ಡಾ.ಎಚ್‌.ಸಿ. ಮಹದೇವಪ್ಪ ಅವರ ಗೆಲುವಿನ ಅಂತರ 15619 ಮತಗಳು
  34. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ – ಎಸ್‌.ಎನ್. ಸುಬ್ಬಾರೆಡ್ಡಿ ಅವರ ಗೆಲುವಿನ ಅಂತರ 19179 ಮತಗಳು
  35. ಪರಿಯಾಪಟ್ಟಣ ವಿಧಾನಸಭಾ ಕ್ಷೇತ್ರ – ಕೆ.ವೆಂಕಟೇಶ್‌ ಅವರ ಅವರ ಗೆಲುವಿನ ಅಂತರ 19675 ಮತಗಳು
  36. ಅರಸೀಕೆರೆ ವಿಧಾನಸಭಾ ಕ್ಷೇತ್ರ – ಕೆ.ಎಂ. ಶಿವಲಿಂಗೇಗೌಡ ಅವರ ಗೆಲುವಿನ ಅಂತರ 20117 ಮತಗಳು
  37. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ – ಅಲ್ಲಮಪ್ರಭು ಪಾಟೀಲ್ ಅವರ ಗೆಲುವಿನ ಅಂತರ 21048 ಮತಗಳು
  38. ಸಿಂಧನೂರು ವಿಧಾನಸಭಾ ಕ್ಷೇತ್ರ – ಹಂಪನಗೌಡ ಬಾದರ್ಲಿ ಅವರ ಗೆಲುವಿನ ಅಂತರ 21942 ಮತಗಳು
  39. ಹಾನಗಲ್ ವಿಧಾನಸಭಾ ಕ್ಷೇತ್ರ – ಶ್ರೀನಿವಾಸ್ ಮಾನೆ ಅವರ ಗೆಲುವಿನ ಅಂತರ 21945 ಮತಗಳು
  40. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ – ಎನ್‌.ವೈ. ಗೋಪಾಲಕೃಷ್ಣ ಅವರ ಗೆಲುವಿನ ಅಂತರ 22149 ಮತಗಳು
  41. ನವಲಗುಂದ ವಿಧಾನಸಭಾ ಕ್ಷೇತ್ರ – ಕೋನರೆಡ್ಡಿ ಅವರ ಗೆಲುವಿನ ಅಂತರ 22199 ಮತಗಳು
  42. ಉಳ್ಳಾಲ ವಿಧಾನಸಭಾ ಕ್ಷೇತ್ರ – ಯು.ಟಿ. ಖಾದರ್ ಅವರ ಗೆಲುವಿನ ಅಂತರ 22790 ಮತಗಳು
  43. ಶಿವಾಜಿನಗರ ವಿಧಾನಸಭಾ ಕ್ಷೇತ್ರ – ರಿಜ್ವಾನ್ ಅರ್ಷದ್ ಅವರ ಗೆಲುವಿನ ಅಂತರ 23194 ಮತಗಳು
  44. ಬ್ಯಾಡಗಿ ವಿಧಾನಸಭಾ ಕ್ಷೇತ್ರ – ಬಸವರಾಜ ಶಿವಣ್ಣನವರ ಗೆಲುವಿನ ಅಂತರ 23841 ಮತಗಳು
  45. ಕಂಪ್ಲಿ ವಿಧಾನಸಭಾ ಕ್ಷೇತ್ರ – ಜೆ.ಎನ್‌. ಗಣೇಶ್ ಅವರ ಗೆಲುವಿನ ಅಂತರ 24091 ಮತಗಳು
  46. ಮದ್ದೂರು ವಿಧಾನಸಭಾ ಕ್ಷೇತ್ರ – ಉದಯ್ ಕೆಎಂ ಅವರ ಗೆಲುವಿನ ಅಂತರ 24113 ಮತಗಳು
  47. ದಾವಣೆಗೆರೆ ಉತ್ತರ ವಿಧಾನಸಭಾ ಕ್ಷೇತ್ರ – ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಗೆಲುವಿನ ಅಂತರ 24472 ಮತಗಳು
  48. ರೋಣ ವಿಧಾನಸಭಾ ಕ್ಷೇತ್ರ – ಜಿ.ಎಸ್‌. ಪಾಟೀಲ್ ಅವರ ಗೆಲುವಿನ ಅಂತರ 24688 ಮತಗಳು
  49. ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ – ಶಿವಾನಂದ ಪಾಟೀಲ್ ಅವರ ಗೆಲುವಿನ ಅಂತರ 24863 ಮತಗಳು
  50. ಸುರಪುರ ವಿಧಾನಸಭಾ ಕ್ಷೇತ್ರ – ರಾಜಾ ವೆಂಕಟಪ್ಪ ನಾಯಕ ಅವರ ಗೆಲುವಿನ ಅಂತರ 25223 ಮತಗಳು
  51. ಕುಡಚಿ ವಿಧಾನಸಭಾ ಕ್ಷೇತ್ರ – ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್ ಅವರ ಗೆಲುವಿನ ಅಂತರ 25243 ಮತಗಳು
  52. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ – ರವಿಶಂಕರ್ ಡಿ ಅವರ ಗೆಲುವಿನ ಅಂತರ 25639 ಮತಗಳು
  53. ಶಹಾಪುರ ವಿಧಾನಸಭಾ ಕ್ಷೇತ್ರ – ಶರಣಬಸಪ್ಪ ದರ್ಶನಾಪುರ ಅವರ ಗೆಲುವಿನ ಅಂತರ 26027 ಮತಗಳು
  54. ಕುಣಿಗಲ್ ವಿಧಾನಸಭಾ ಕ್ಷೇತ್ರ – ಡಾ.ಎಚ್‌.ಡಿ. ರಂಗನಾಥ್ ಅವರ ಗೆಲುವಿನ ಅಂತರ 26573 ಮತಗಳು
  55. ಬಾಲ್ಕಿ ವಿಧಾನಸಭಾ ಕ್ಷೇತ್ರ – ಈಶ್ವರ್ ಖಂಡ್ರೆ ಅವರ ಗೆಲುವಿನ ಅಂತರ 27706 ಮತಗಳು
  56. ದಾವಣೆಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ – ಶಾಮನೂರು ಶಿವಶಂಕರಪ್ಪ ಅವರ ಗೆಲುವಿನ ಅಂತರ 27888 ಮತಗಳು
  57. ಚಿಂತಾಮಣಿ ವಿಧಾನಸಭಾ ಕ್ಷೇತ್ರ – ಎಂ.ಸಿ. ಸುಧಾಕರ್ ಅವರ ಗೆಲುವಿನ ಅಂತರ 29052 ಮತಗಳು
  58. ಸಿರಾ ವಿಧಾನಸಭಾ ಕ್ಷೇತ್ರ – ಟಿಬಿ ಜಯಚಂದ್ರ ಅವರ ಗೆಲುವಿನ ಅಂತರ 29250 ಮತಗಳು
  59. ಬಳ್ಳಾರಿ ವಿಧಾನಸಭಾ ಕ್ಷೇತ್ರ – ಬಿ.ನಾಗೇಂದ್ರ ಅವರ ಗೆಲುವಿನ ಅಂತರ 29300 ಮತಗಳು
  60. ಹುನಗುಂದ ವಿಧಾನಸಭಾ ಕ್ಷೇತ್ರ – ವಿಜಯಾನಂದ ಕಾಶಪ್ಪನವರ್ ಅವರ ಗೆಲುವಿನ ಅಂತರ 30007 ಮತಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...