Homeಮುಖಪುಟತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

- Advertisement -
- Advertisement -

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ “ದ್ವಿಪಕ್ಷೀಯ” ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಪ್ರವೇಶದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿದೆ. 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷದ ಓಟ್ ಶೇರ್ ಸುಮಾರು 35% (ನಿಖರವಾಗಿ 34.92%) ಮತಗಳನ್ನು ಗಳಿಸಿದೆ.

ಟಿವಿಕೆ ಪಕ್ಷವು ಮತಗಳ ಪ್ರಮಾಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯ ಎರಡೂ ಪಕ್ಷವನ್ನು ಹಿಂದಿಕ್ಕಿದೆ

ಪಕ್ಷ / ಮೈತ್ರಿಕೂಟಗೆದ್ದ ಸ್ಥಾನಗಳುಓಟ್ ಪರ್ಸಂಟೇಜ್ (ಅಂದಾಜು)
TVK (ತಮಿಳಗ ವೆಟ್ರಿ ಕಳಗಂ)10834.92%
DMK+ (ಡಿಎಂಕೆ ಮೈತ್ರಿ)7331.39%
AIADMK+ (ಎಐಎಡಿಎಂಕೆ ಮೈತ್ರಿ)5327.22%
ಇತರರು (NTK, BJP, ಇತ್ಯಾದಿ)0ಉಳಿದ 6-7%

ಕೇವಲ ಎರಡು ವರ್ಷಗಳ ಹಿಂದೆ ಒಂದು ರಾಜಕೀಯ ಪಕ್ಷಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯವೊಂದರ ಅಧಿಕಾರ ಹಿಡಿಯುವುದು ಮಾತಿನಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಸಲೀಸು ಅಲ್ಲ. ಆದರೆ ತಮಿಳುನಾಡಿನಲ್ಲಿ ಅಂತಹದೊಂದು ಅಚ್ಚರಿ ಫಲಿತಾಂಶ ಹೊರಬಿದಿದ್ದು 2026ರ ವಿಧಾನಸಭಾ ಚುನಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಪರ್ಧಿಸಿದ್ದ 234 ಸ್ಥಾನಗಳ ಪೈಕಿ 108 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವತ್ತ ಹೆಜ್ಜೆ ಇಟ್ಟಿದೆ.

ಈ ಚುನಾವಣೆ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ಹೊಸ ಇತಿಹಾಸ ಬರೆದ 60 ‘ನೂತನ’ ಶಾಸಕರು!

ಈ ಚುನಾವಣೆಯ ಅತ್ಯಂತ ಸ್ವಾರಸ್ಯಕರ ಸಂಗತಿಯೆಂದರೆ, ಟಿವಿಕೆಯಿಂದ ಗೆದ್ದ 108 ಶಾಸಕರಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಸಂಪೂರ್ಣವಾಗಿ ಹೊಸ ಮುಖಗಳು. ಇವರು ಈ ಹಿಂದೆ ಯಾವುದೇ ಪಕ್ಷದಿಂದ ಚುನಾವಣೆಗೆ ನಿಂತು ಗೆಲುವು ಅಥವಾ ಸೋಲು ಕಂಡವರಲ್ಲ. ಎಂಬುದು ವಿಶೇಷ.

ಒಟ್ಟು ಸ್ಪರ್ಧಿಸಿದ ಸ್ಥಾನಗಳು: 234.

ಗೆದ್ದ ಸ್ಥಾನಗಳು: 108.

ಬಹುಮತಕ್ಕೆ ಕೊರತೆ: 10 ಸ್ಥಾನಗಳು (ಬಹುಮತದ ಗಡಿ 118)

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ಭಾರತೀಯ ರಾಜಕಾರಣದ ಇತಿಹಾಸದಲ್ಲೇ ಒಂದು ಸಂಚಲನ ಮೂಡಿಸಿದೆ. ಮೊದಲ ಬಾರಿ ಕಣಕ್ಕಿಳಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಎಲ್ಲರ ಹುಬ್ಬೇರಿಸಿದೆ. ಈ ಪಟ್ಟಿಯಲ್ಲಿರುವ ಬಹುತೇಕರು ರಾಜಕೀಯಕ್ಕೆ ತೀರಾ ಹೊಸಬರು ಅಥವಾ ಈ ಹಿಂದೆ ಯಾವುದೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳದವರು. ಅದರ ಕೆಲವು ವಿಶೇಷ ಜಲಕ್‌ಗಳು ಕೆಳಗಿನಂತಿವೆ.

ಕ್ರ.ಸಂಕ್ಷೇತ್ರಚುನಾಯಿತ ಶಾಸಕರು (TVK)ಸಾಮಾಜಿಕ / ಜಾತಿ ಹಿನ್ನೆಲೆ
1ಪೆರಂಬೂರ್ಸಿ. ಜೋಸೆಫ್ ವಿಜಯ್ (ವಿಜಯ್)ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ)
2ತಿರುಚಿರಾಪಳ್ಳಿ ಈಸ್ಟ್ಸಿ. ಜೋಸೆಫ್ ವಿಜಯ್ (ವಿಜಯ್)ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ)
3ವಿಲ್ಲಿವಾಕ್ಕಂಆದವ್ ಅರ್ಜುನಎಂಬಿಸಿ (ಅತಿ ಹಿಂದುಳಿದ ವರ್ಗ)
4ಕೌಂಡಂಪಾಳಯಂಕನಿಮೊಳಿ ಸಂತೋಷ್ಕೌಂಡರ್ (ಒಬಿಸಿ)
5ತಿರುವಳ್ಳಿಕೇಣಿಎಂ. ಆರ್. ಪಲ್ಲವಿಪರಿಶಿಷ್ಟ ಜಾತಿ (SC)
6ರಾಯಪುರಂಕೆ. ವಿ. ವಿಜಯ್ ದಾಮುಎಂಬಿಸಿ (ಮೀನುಗಾರ ಸಮುದಾಯ)
7ತಿರುವಳ್ಳೂರುಡಾ. ಟಿ. ಅರುಣ್‌ಕುಮಾರ್ಹಿಂದುಳಿದ ವರ್ಗ (BC)
8ಈರೋಡ್ ಈಸ್ಟ್ಎಂ. ವಿಜಯ್ ಬಾಲಾಜಿಹಿಂದುಳಿದ ವರ್ಗ (BC)
9ಮಧುರೈ ನಾರ್ತ್ಎ. ಕಲ್ಲನೈಹಿಂದುಳಿದ ವರ್ಗ (BC)
10ಮಧುರೈ ಸೆಂಟ್ರಲ್ಮಧರ್ ಬಧುರುದ್ದೀನ್ಅಲ್ಪಸಂಖ್ಯಾತ (ಮುಸ್ಲಿಂ)
11ತಿರುಪತ್ತೂರುಸೀನಿವಾಸ ಸೇತುಪತಿ ಆರ್.ತೇವರ್ / ಮುಕ್ಕುಲತೋರ್ (OBC)
12ಶೋಲಿಂಗನಲ್ಲೂರುಇ.ಸಿ.ಆರ್. ಪಿ. ಶರವಣನ್ಹಿಂದುಳಿದ ವರ್ಗ (BC)
13ಸೇಲಂ ನಾರ್ತ್ಕೆ. ಶಿವಕುಮಾರ್ಹಿಂದುಳಿದ ವರ್ಗ (BC)
14ಪಲ್ಲವರಂಜೆ. ಕಾಮಾಚಿಹಿಂದುಳಿದ ವರ್ಗ (BC)
15ವೇಲೂರುಎಂ. ಎಂ. ವಿನೋದ್ ಕಣ್ಣನ್ಎಂಬಿಸಿ (ಅತಿ ಹಿಂದುಳಿದ ವರ್ಗ)
16ಮಧವರಂಎಂ. ಎಲ್. ವಿಜಯ್ ಪ್ರಭುಹಿಂದುಳಿದ ವರ್ಗ (BC)
17ಅಣ್ಣಾ ನಗರವಿ. ಕೆ. ರಾಮಕುಮಾರ್ಹಿಂದುಳಿದ ವರ್ಗ (BC)
18ಮೈಲಾಪುರಂವೆಂಕಟರಮಣನ್ ಪಿ.ಬ್ರಾಹ್ಮಣ (ಸಾಮಾನ್ಯ ವರ್ಗ)
19ಶ್ರೀವೈಕುಂಠಂಶರವಣನ್ ಜಿ.ತೇವರ್ / ಮುಕ್ಕುಲತೋರ್ (OBC)
20ತಂಜಾವೂರುಆರ್. ವಿಜಯಶರವಣನ್ಹಿಂದುಳಿದ ವರ್ಗ (BC)
21ಶಿವಗಂಗಾಕುಳಂದೈ ರಾಣಿ ಎ.ಪರಿಶಿಷ್ಟ ಜಾತಿ (SC)
22ಈರೋಡ್ ವೆಸ್ಟ್ಅನಂತ್ ಮೋಹನ್ ಕೆ.ಕೆ.ಕೌಂಡರ್ (OBC)
23ಕಡಲೂರುಬಿ. ರಾಜಕುಮಾರ್ಎಂಬಿಸಿ (ವನ್ನಿಯರ್)
24ಕುಂಭಕೋಣಂವಿನೋದ್ಹಿಂದುಳಿದ ವರ್ಗ (BC)
25ಅಂಬತ್ತೂರುಬಾಲಮುರುಗನ್ ಜಿ.ಹಿಂದುಳಿದ ವರ್ಗ (BC)
26ಮಧುರವಾಯಲ್ರೇವಂತ್ ಚರಣ್ಹಿಂದುಳಿದ ವರ್ಗ (BC)
27ಆವಡಿಆರ್. ರಮೇಶ್ ಕುಮಾರ್ಹಿಂದುಳಿದ ವರ್ಗ (BC)
28ಪೂನಮಲ್ಲಿಪ್ರಕಾಶಂ ಆರ್.ಪರಿಶಿಷ್ಟ ಜಾತಿ (SC)
29ಗುಮ್ಮಿಡಿಪೂಂಡಿಎಸ್. ವಿಜಯಕುಮಾರ್ಎಂಬಿಸಿ (ವನ್ನಿಯರ್)
30ಪೊನ್ನೇರಿರವಿ ಎಂ. ಎಸ್.ಪರಿಶಿಷ್ಟ ಜಾತಿ (SC)
31ಸೈದಾಪೇಟೆಅರುಳ್ ಪ್ರಕಾಶಂ ಎಂ.ಹಿಂದುಳಿದ ವರ್ಗ (BC)
32ಟಿ. ನಗರಆನಂದ್ ಎನ್.ಹಿಂದುಳಿದ ವರ್ಗ (BC)
33ವೇಲಚೇರಿಕುಮಾರ್ ಆರ್.ಹಿಂದುಳಿದ ವರ್ಗ (BC)
34ಆಲಂದೂರುಎಂ. ಹರೀಶ್ಹಿಂದುಳಿದ ವರ್ಗ (BC)
35ತಾಂಬರಂಡಿ. ಶರತ್ ಕುಮಾರ್ಹಿಂದುಳಿದ ವರ್ಗ (BC)
36ಶ್ರೀಪೆರಂಬದೂರುತೇನರಸು ಕೆ.ಪರಿಶಿಷ್ಟ ಜಾತಿ (SC)
37ಕಾಂಚೀಪುರಂಆರ್. ವಿ. ರಂಜಿತ್ ಕುಮಾರ್ಸೇಂಗುಂತರ್ ಮೊದಲಿಯಾರ್ (BC)
38ಅರಕ್ಕೋಣಂವಿ. ಗಾಂಧಿರಾಜ್ಪರಿಶಿಷ್ಟ ಜಾತಿ (SC)
39ಶೋಲಿಂಗೂರುಜಿ. ಕಪಿಲ್ಹಿಂದುಳಿದ ವರ್ಗ (BC)
40ರಾಣಿಪೇಟೆತಾಹಿರಾಅಲ್ಪಸಂಖ್ಯಾತ (ಮುಸ್ಲಿಂ)
41ಕೃಷ್ಣಗಿರಿಮುಕುಂದನ್ ಪಿ.ಹಿಂದುಳಿದ ವರ್ಗ (BC)
42ಪೆನ್ನಾಗರಂಗಜೇಂದ್ರನ್ ಎಸ್.ಎಂಬಿಸಿ (ವನ್ನಿಯರ್)
43ಸೇಲಂ ಸೌತ್ವಿಜಯ್ ತಮಿಳನ್ ಪಾರ್ಥಿಬನ್ ಎ.ಹಿಂದುಳಿದ ವರ್ಗ (BC)
44ನಾಮಕ್ಕಲ್ದಿಲೀಪ್ ಸಿ. ಎಸ್.ಹಿಂದುಳಿದ ವರ್ಗ (BC)
45ತಿರುಚೆಂಗೋಡುಅರುಣ್‌ರಾಜ್ ಕೆ. ಜಿ.ಕೌಂಡರ್ (OBC)
46ಭವಾನಿಸಾಗರವಿ. ಪಿ. ತಮಿಳ್ ಸೆಲ್ವಿಪರಿಶಿಷ್ಟ ಜಾತಿ (SC)
47ತಿರುಪ್ಪೂರು ನಾರ್ತ್ವಿ. ಸತ್ಯಭಾಮಾಕೌಂಡರ್ (OBC)
48ಕೊಯಮತ್ತೂರು ನಾರ್ತ್ವಿ. ಸಂಪತ್ ಕುಮಾರ್ಹಿಂದುಳಿದ ವರ್ಗ (BC)
49ಸಿಂಗನಲ್ಲೂರುಕೆ. ಎಸ್. ಶ್ರೀಗಿರಿ ಪ್ರಸಾದ್ಹಿಂದುಳಿದ ವರ್ಗ (BC)
50ಕಿಣತುಕ್ಕಡವುವಿಘ್ನೇಶ್ ಕೆ.ಕೌಂಡರ್ (OBC)
51ಮಣಪ್ಪಾರೈಆರ್. ಕದಿರವನ್ಹಿಂದುಳಿದ ವರ್ಗ (BC)
52ಮುಸಿರಿಎಂ. ವಿಘ್ನೇಶ್ಹಿಂದುಳಿದ ವರ್ಗ (BC)
53ಕಾರೈಕುಡಿಡಾ. ಪ್ರಭು ಟಿ. ಕೆ.ಹಿಂದುಳಿದ ವರ್ಗ (BC)
54ಮಧುರೈ ಸೌತ್ಎಂ. ಎಂ. ಗೋಪಿಸನ್ಸೌರಾಷ್ಟ್ರ (ಭಾಷಾ ಅಲ್ಪಸಂಖ್ಯಾತ)
55ಮಧುರೈ ವೆಸ್ಟ್ತಂಗಪಾಂಡಿ ಎಸ್. ಆರ್.ಹಿಂದುಳಿದ ವರ್ಗ (BC)
56ಪೆರಿಯಕುಲಂಶಬರಿ ಅಯ್ಯಂಗಾರನ್ ಜಿ.ಪರಿಶಿಷ್ಟ ಜಾತಿ (SC)
57ಶಿವಕಾಶಿಕೀರ್ತನಾ ಎಸ್.ಹಿಂದುಳಿದ ವರ್ಗ (BC)
58ವಿರುದುನಗರಸೆಲ್ವಂ ಪಿ.ಪರಿಶಿಷ್ಟ ಜಾತಿ (ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು)
59ತೂತುಕುಡಿಶ್ರೀನಾಥ್ನಾಡಾರ್ (BC)
60ರಾಧಾಪುರಂಡಾ. ಸತೀಶ್ ಕ್ರಿಸ್ಟೋಫರ್ನಾಡಾರ್ (BC)

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಟಿವಿಕೆ (TVK) ಪಕ್ಷದ ನಾಯಕ ಜೋಸೆಫ್ ವಿಜಯ್ ಅವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಒಂದು ಪೆರಂಬೂರ್ (Perambur) ಮತ್ತೊಂದು ತಿರುಚಿರಾಪಳ್ಳಿ ಪೂರ್ವ ಈ ಎರಡೂ ಕ್ಷೇತ್ರಗಳಲ್ಲಿ ವಿಜಯ್ ದೊಡ್ಡ ಅಂತರದ ಗೆಲುವು ಸಾಧಿಸಿದ್ದಾರೆ.

ಒಂದು ಮತದ ಅಂತರದಲ್ಲಿ ಗೆದ್ದ TVK ಶಾಸಕ

ಶಿವಗಂಗಾ ಜಿಲ್ಲೆಯ ತಿರುಪತ್ತೂರು (Tirupattur) ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಸೀನಿವಾಸ ಸೇತುಪತಿ ಆರ್. ಅವರು ಕೇವಲ ಒಂದು ಮತದ ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.ಸೀನಿವಾಸ ಸೇತುಪತಿ ಅವರು 83,375 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಡಿಎಂಕೆ (DMK) ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು 83,374 ಮತಗಳನ್ನು ಪಡೆದರು.

ಮತ ಎಣಿಕೆಯ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಸೇತುಪತಿ ಅವರು, ಅಂಚೆ ಮತಗಳ (Postal Ballots) ಎಣಿಕೆಯ ನಂತರ ಕೇವಲ ಒಂದು ಮತದ ಮುನ್ನಡೆ ಸಾಧಿಸಿದರು. ಇಷ್ಟು ಕಡಿಮೆ ಅಂತರವಿದ್ದ ಕಾರಣ, ಚುನಾವಣಾ ಆಯೋಗದ ನಿಯಮದಂತೆ ತಿರಸ್ಕೃತಗೊಂಡಿದ್ದ ಅಂಚೆ ಮತಗಳನ್ನು ಮರುಪರಿಶೀಲನೆ ನಡೆಸಲಾಯಿತು. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದೆ ಸೇತುಪತಿ ಅವರೇ ವಿಜಯಶಾಲಿ ಎಂದು ಘೋಷಿಸಲಾಯಿತು.

ವಿದ್ಯಾವಂತರ ದಂಡು
ಈ 60 ಹೊಸ ಶಾಸಕರಲ್ಲಿ ಸುಮಾರು 15 ಮಂದಿ ವೈದ್ಯರು, 12 ಮಂದಿ ಇಂಜಿನಿಯರ್‌ಗಳು ಮತ್ತು 10 ಮಂದಿ ಕಾನೂನು ಪದವೀಧರರು ಸೇರಿದ್ದಾರೆ. ಉದಾಹರಣೆಗೆ, ಡಾ. ಅನ್ಬುಮಣಿ (ತಿರುಚಿರಾಪಳ್ಳಿ ಉತ್ತರ) ಮತ್ತು ಇಂಜಿನಿಯರ್ ಆಗಿದ್ದ ಆರ್. ಕವಿತಾ (ಕೋಯಿಮತ್ತೂರು ಉತ್ತರ) ಮೊದಲ ಪ್ರಯತ್ನದಲ್ಲೇ ಘಟಾನುಘಟಿಗಳನ್ನು ಸೋಲಿಸಿದ್ದಾರೆ.

ಗೆದ್ದ 60 ಹೊಸಬರಲ್ಲಿ 12 ಮಂದಿ ಮಹಿಳೆಯರಿದ್ದು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಎಸ್. ಪ್ರಿಯದರ್ಶಿನಿ (ಮಧುರೈ ದಕ್ಷಿಣ) ಅಂತಹವರು ಸಾಮಾನ್ಯ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನವರು 25 ರಿಂದ 40 ವರ್ಷ ವಯೋಮಾನದವರಾಗಿದ್ದು, ದ್ರಾವಿಡ ಪಕ್ಷಗಳ ಹಿರಿಯ ನಾಯಕರನ್ನು ಮನೆಗೆ ಕಳುಹಿಸಿದ್ದಾರೆ.

ವಿಜಯ್ ಕೇವಲ ಸಿನಿಮಾ ಅಭಿಮಾನಿಗಳಿಗೆ ಟಿಕೆಟ್ ನೀಡದೆ, ವೈದ್ಯರು, ವಕೀಲರು ಮತ್ತು ಸಮಾಜ ಸೇವಕರಿಗೆ ಆದ್ಯತೆ ನೀಡಿದರು. ಇದು “ಪಕ್ಷವು ಕೇವಲ ಸ್ಟಾರ್ ಪವರ್ ಮೇಲೆ ನಿಂತಿಲ್ಲ, ಬದಲಿಗೆ ಸಮರ್ಥ ವ್ಯಕ್ತಿಗಳ ಮೇಲೆ ನಿಂತಿದೆ” ಎಂಬ ಸಂದೇಶ ರವಾನಿಸಿತು.

ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು ಪಕ್ಷದ ಸಂಸ್ಥಾಪಕ ವಿಜಯ್ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅದರಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರು ಸಂಖ್ಯೆ 107 ಆಗುತ್ತದೆ. ಒಬ್ಬರನ್ನು ಸ್ಪೀಕರ್ ಎಂದು ಪರಿಗಣಿಸಿದರೆ 106 ಕ್ಕೆ ಒಂದು ನಿಲ್ಲುತ್ತದೆ ಹಾಗಾಗಿ ಸರ್ಕಾರ ರಚಿನಲು ಇನ್ನು 12 ಶಾಸಕರ ಬೆಂಬಲ ಬೇಕಾಗುತ್ತದೆ. 118 ಸ್ಥಾನಗಳ ಮ್ಯಾಜಿಕ್ ನಂಬರ್‌ಗೆ ಕೇವಲ 12 ಸ್ಥಾನಗಳ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚದುರಂಗದಾಟ ಕುತೂಹಲಕಾರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...