Homeಕರ್ನಾಟಕಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

- Advertisement -
- Advertisement -

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ. ಬೀದಿ ಹೋರಾಟಗಳ ಮೂಲಕವೇ ಅಧಿಕಾರದ ಗದ್ದುಗೆಯನ್ನು ಏರಿದ ಬಿ.ಎಸ್.ವೈ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು ಅನ್ನುವುದನ್ನು ಯಾರು ಅಲ್ಲಗಳಿಯುವಂತಿಲ್ಲ. 

ಯಡಿಯೂರಪ್ಪನವರ ರಾಜಕೀಯ ಜೀವನ ಆರಂಭವಾಗಿದ್ದು ಶಿಕಾರಿಪುರದ ಪುರಸಭೆಯಿಂದ. ಅಂದು ಜನಸಂಘದ ಸಣ್ಣ ಕಾರ್ಯಕರ್ತನಾಗಿ, ಸೈಕಲ್ ತುಳಿಯುತ್ತಾ ಹಳ್ಳಿ ಹಳ್ಳಿಗಳಲ್ಲಿ ಪಕ್ಷ ಕಟ್ಟಿದ ಇತಿಹಾಸ ಅವರದ್ದು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ ಬಿಜೆಪಿಗೆ ಇದ್ದಿದ್ದು ಕೇವಲ ಬೆರಳೆಣಿಕೆಯಷ್ಟು ಸೀಟುಗಳು. ಅಂದಿನಿಂದ ಇಂದಿನವರೆಗೆ ಅವರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. 

ರೈತ ನಾಯಕನಾಗಿ ಗುರುತಿಸಿಕೊಂಡಿದ್ದ ಯಡಿಯೂರಪ್ಪ ಬರಗಾಲ ಬಿದ್ದಾಗ ಹಳ್ಳಿಗಳತ್ತ ಪಾದಯಾತ್ರೆ ನಡೆಸಿದ್ದು, ರೈತರ ಸಾಲ ಮನ್ನಾಕ್ಕಾಗಿ ಹೋರಾಡಿದ್ದು ಎಲ್ಲವುಗಳು ಅವರ ವರ್ಚಸ್ಸನ್ನು ಹೆಚ್ಚಿಸಿತು. ವಿರೋಧ ಪಕ್ಷದಲ್ಲಿದ್ದಾಗಲೂ ಸೈಕಲ್ ಯಾತ್ರೆ, ಪಾದಯಾತ್ರೆಗಳ ಮೂಲಕ ಇಡೀ ರಾಜ್ಯವನ್ನು ಸುತ್ತಿದ ಅವರು, ಬಿಜೆಪಿಯನ್ನು ಜನಸಾಮಾನ್ಯರ ಮನೆಗೆ ತಲುಪಿಸಿದರು. 

ಮುಖ್ಯವಾಗಿ ರಾಜ್ಯದ ರಾಜಕೀಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಸಮುದಾಯವೆಂದೇ ಹೇಳಲಾಗುವ ಲಿಂಗಾಯತ ಸಮುದಾಯದ ಪ್ರಮುಖ ನಾಯಕನಾಗಿ ಹೊರಹೊಮ್ಮಿದ ಬಿಎಸ್ ವೈ, ವೀರೇಂದ್ರ ಪಾಟೀಲರ ಕಾಲದ ನಂತರ ಆ ಸಮುದಾಯಕ್ಕೆ ಒಬ್ಬ ಬಲಿಷ್ಠ ರಾಜಕೀಯ ನಾಯಕತ್ವದ ಕೊರತೆಯನ್ನು ತುಂಬಿದ್ದರು ಅನ್ನಬಹುದು. 

ಅಧಿಕಾರಾವಧಿಯಲ್ಲಿ ಅವರು ಸಮುದಾಯದ ಮಠಮಾನ್ಯಗಳೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧ, ಬಸವಣ್ಣನವರ ತತ್ವಗಳ ಬಗ್ಗೆ ಅವರಿಗಿದ್ದ ಗೌರವ ಮತ್ತು ಲಿಂಗಾಯತ ಹಿತರಕ್ಷಣೆಗಾಗಿ ಅವರು ಎದುರಿಸಿದ ಸವಾಲುಗಳು ಅವರನ್ನು ಆ ಸಮುದಾಯದ ‘ಮಾಸ್ ಲೀಡರ್’ ಸ್ಥಾನದಲ್ಲಿ ಕೂರಿಸಿದವು. 

2008ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಲಿಂಗಾಯತ ಸಮುದಾಯವು ಯಡಿಯೂರಪ್ಪನವರ ಹಿಂದೆ ಬಂಡೆಯಂತೆ ನಿಂತಿದ್ದೇ ಕಾರಣ ಅನ್ನಲಾಗುತ್ತದೆ. ಈಗ ಇದೆಲ್ಲವನ್ನು ನೆನೆಯುತ್ತಿರುವ ಕಾರಣ ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷಗಳು ತುಂಬಿವೆ ಅನ್ನುವುದು. ಇದೇ ಸಮಯವನ್ನು ಮತ್ತೊಮ್ಮೆ ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಯಡಿಯೂರಪ್ಪ ಅವರನ್ನು ಈಗ ಮತ್ತೊಮ್ಮೆ ಮುನ್ನೆಲೆಗೆ ತರುವ ತಂತ್ರ ರೂಪಿಸಿದೆ. ಇದಕ್ಕೆ ಸಾಕ್ಷಿಯಾಗಿ ಮೇ 9, 2026ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವಿದೆ. ಈ ಕಾರ್ಯಕ್ರಮವು ಬಿಜೆಪಿ ಪಕ್ಷದ ಅಧಿಕೃತ ಆಯೋಜನೆಯಾಗಿದೆ. 

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಈ ಬೃಹತ್ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸುವ ಸಾಧ್ಯತೆ ಇದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಬಳಿ ಬೃಹತ್ ವೇದಿಕೆಯಲ್ಲಿ ನಡೆಯುವ ಈ ಉತ್ಸವದಲ್ಲಿ 5 ಲಕ್ಷದಿಂದ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದಾದ್ಯಂತ ಬಿಜೆಪಿ ಘಟಕಗಳು ಕಾರ್ಯಕರ್ತರನ್ನು ಸಂಘಟಿಸುತ್ತಿವೆ. ಯಡಿಯೂರಪ್ಪ ಅವರನ್ನು ಒಮ್ಮೆ ಪಕ್ಷದೊಳಗೆ ವಿರೋಧಿಸಿ, ಕೇಸುಗಳ ಮೂಲಕ ಮೂಲೆಗುಂಪು ಮಾಡಿ, ಅಧಿಕಾರದಿಂದ ದೂರವಿಟ್ಟಿದ್ದ ಬಿಜೆಪಿ ಈಗ ಅದೇ ಯಡಿಯೂರಪ್ಪರತ್ತ ಮುಖ ಮಾಡುತ್ತಿರುವುದು ಗಮನಾರ್ಹ. 

ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೂ, ಲಿಂಗಾಯತ ಸಮುದಾಯದಲ್ಲಿ ಬಲವಾದ ನಾಯಕರಾಗಿದ್ದ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಯಿತು. ಅವರ ವರ್ಚಸ್ಸನ್ನು ಒಳಗಿನವರೇ ಹಾಳುಗೆಡುವಿದರು ಎಂಬ ಬೇಸರ ಲಿಂಗಾಯತ ಸಮುದಾಯದಲ್ಲಿದೆ. ಇದರಿಂದಾಗಿ ಬೃಹತ್ ಸಮುದಾಯದ ಮಾಸ್ ಲೀಡರ್‌ನ ಕೊರತೆ ಬಿಜೆಪಿಗೆ ತುಂಬಾ ಕಾಡುತ್ತಿದೆ. ಯಡಿಯೂರಪ್ಪ ಅವರ ನಂತರ ಕರ್ನಾಟಕದಲ್ಲಿ ಬಿಜೆಪಿಯನ್ನು ಚುನಾವಣೆಯಲ್ಲಿ ನಡೆಸಿಕೊಂಡು ಹೋಗುವಷ್ಟು ಜನಪ್ರಿಯ ನಾಯಕರು ಪಕ್ಷದಲ್ಲಿ ಇಲ್ಲ ಎಂಬ ಚರ್ಚೆ ತೀವ್ರವಾಗಿದೆ. ಆದರೆ ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದಲ್ಲಿ ಗಟ್ಟಿಯಾಗಿ ನೆಲೆಗೊಂಡಿದೆ. 

ಶಾಮನೂರು ಶಿವಶಂಕರಪ್ಪ ಕುಟುಂಬ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್ ಮುಂತಾದ ನಾಯಕರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದರಿಂದಾಗಿ ಲಿಂಗಾಯತ ಮತ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯಡಿಯೂರಪ್ಪ ಅವರನ್ನು ಮತ್ತೆ “ಲಿಂಗಾಯತರ ನಾಯಕ” ಎಂದು ಬಿಂಬಿಸಿ, ಸಮುದಾಯದ ಭಾವನೆಗಳನ್ನು ಕೇಂದ್ರೀಕರಿಸುವ ತಂತ್ರ ರೂಪಿಸುತ್ತಿದೆ. ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿಯ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ. ಆದರೆ ಅದೇ ಪಕ್ಷದೊಳಗಿನ ಒತ್ತಡಗಳು, ಆಂತರಿಕ ವಿರೋಧಗಳು ಅವರನ್ನು ಒಮ್ಮೆ ದುರ್ಬಲಗೊಳಿಸಿದ್ದವು. ಈಗ ಅದೇ ಪಕ್ಷವು ಅವರ ಜನಪ್ರಿಯತೆಯನ್ನು ಬಳಸಿಕೊಂಡು ಲಿಂಗಾಯತ ಸಮುದಾಯದ ವೋಟುಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ. 

ಚಿತ್ರದುರ್ಗದ ಅಭಿಮಾನೋತ್ಸವವು ಕೇವಲ ಸನ್ಮಾನ ಸಮಾರಂಭವಲ್ಲ, ಬದಲಿಗೆ ಲಿಂಗಾಯತ ಮತಬ್ಯಾಂಕ್‌ನ್ನು ಮತ್ತೆ ಗಟ್ಟಿಗೊಳಿಸುವ ರಾಜಕೀಯ ಕಾರ್ಯತಂತ್ರವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಒಂದೆಡೆ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದೆಡೆ ಪ್ರಜ್ಞಾವಂತ ನಾಗರಿಕರಲ್ಲಿ, ರಾಜಕೀಯ ವಿಶ್ಲೇಷಕರಲ್ಲಿ ಒಂದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ. ಅದೇನೆಂದರೇ ನಿಜವಾಗಲೂ ಯಡಿಯೂರಪ್ಪ ಅವರು ಇನ್ನೂ ಲಿಂಗಾಯತ ಸಮುದಾಯದ ನಿಜವಾದ ಮಾಸ್ ಲೀಡರ್ ಆಗಿ ಉಳಿದಿದ್ದಾರೆಯೇ? ಎಂಬುದು. ಕರ್ನಾಟಕದ ರಾಜಕೀಯದಲ್ಲಿ ಜಾತಿ ರಾಜಕಾರಣ ಯಾವಾಗಲೂ ಭಾವನೆಗಳ ಮೇಲೆಯೇ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ಪ್ರಭಾವಶಾಲಿ ಮತಬ್ಯಾಂಕ್‌ಗಳಲ್ಲಿ ಒಂದು. ಒಬ್ಬ ನಾಯಕನನ್ನು “ನಮ್ಮವರು” ಎಂದು ಗುರುತಿಸಿ, ಆತನ ಸುತ್ತ ಭಾವನಾತ್ಮಕ ಏಕತೆಯನ್ನು ಸೃಷ್ಟಿಸುವುದು ಇಲ್ಲಿ ಸಾಮಾನ್ಯ. ಬಿಜೆಪಿ ಈಗ ಅದೇ ತಂತ್ರವನ್ನು ಅನುಸರಿಸುತ್ತಿದೆ.

ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಗೌರವಿಸುವ ಮುಸುಕಿನಲ್ಲಿ ಸಮುದಾಯದ ವೋಟುಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆದರೆ ಇದೆಲ್ಲದರ ನಡುವೆ ಯಡಿಯೂರಪ್ಪ ಅವರ ಅಧಿಕಾರಾವಧಿಯ ಇತಿಹಾಸವನ್ನು ನೆನಪಿಸಿದಾಗ ಚಿತ್ರ ಸಂಪೂರ್ಣವಾಗಿ ಬದಲಾಗುತ್ತದೆ. ಯಾಕೆಂದರೆ ಯಡಿಯೂರಪ್ಪ ಮೇಲೆ ಬಂದ ಯಾವ ಆರೋಪಗಳು ವಿರೋಧ ಪಕ್ಷಗಳಿಂದ ಮಾತ್ರ ಬಂದವಲ್ಲ, ಯಾವ ಪ್ರಕರಣವೂ ಯಡಿಯೂರಪ್ಪನವರ ತಪ್ಪೇ ಇಲ್ಲದೆ ದಾಖಲಾದವಲ್ಲ. ಅವರ ಅಧಿಕಾರಾವಧಿಯಲ್ಲಿ ಅವರೇ ಮಾಡಿದ ಕೃತ್ಯಗಳು. ಸತತ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಭ್ರಷ್ಟಾಚಾರ ಆರೋಪಗಳು ಮತ್ತೆ ಚರ್ಚೆಯಾಗುತ್ತಿವೆ. 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 8-12 ದಿನಗಳಲ್ಲಿ, 2008ರ ಜೂನ್ 10ರಂದು ಹಾವೇರಿಯಲ್ಲಿ ರಸಗೊಬ್ಬರ ಮತ್ತು ಬೀಜ ಕೊರತೆಯ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದರು. ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಎಂಬ ಇಬ್ಬರು ರೈತರು ಸಾವನ್ನಪ್ಪಿದರು. ರೈತರ ರಕ್ತದ ಮೇಲೆ ಅಧಿಕಾರದ ಸೀಮೆ ಆರಂಭವಾಯಿತು ಎಂಬ ಟೀಕೆ ಅಂದಿನಿಂದಲೂ ಅವರನ್ನು ಬೆನ್ನಟ್ಟುತ್ತಿದೆ. 

ಅಧಿಕಾರದ ಗರಿಮೆಯಲ್ಲಿದ್ದಾಗಲೇ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಭಾರೀ ಮಟ್ಟದಲ್ಲಿ ಕೇಳಿಬಂದವು. ಬೆಂಗಳೂರು ಸುತ್ತಮುತ್ತಲಿನ ಸರ್ಕಾರಿ ಭೂಮಿಗಳನ್ನು ಡಿನೋಟಿಫೈ ಮಾಡಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ತೀವ್ರವಾದವು. 2011ರಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ವರದಿಯು ಅವರನ್ನು ತಪ್ಪಿತಸ್ಥರು ಎಂದು ಸಾಭೀತು ಪಡಿಸಿತು. ಇದರಿಂದಾಗಿ ಜುಲೈ 2011ರಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಆದರೆ ಇದು ಅಲ್ಲಿಗೆ ನಿಲ್ಲಲಿಲ್ಲ. ಅಕ್ಟೋಬರ್ 2011ರಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರನ್ನು ಬಂಧಿಸಿದರು. ಕರ್ನಾಟಕದ ಇತಿಹಾಸದಲ್ಲಿ ಅಧಿಕಾರದಲ್ಲಿರುವಾಗ ಅಥವಾ ಮುಖ್ಯಮಂತ್ರಿ/ಮಾಜಿ ಮುಖ್ಯಮಂತ್ರಿಯಾಗಿ ಜೈಲು ಸೇರಿದ ಮೊದಲ ವ್ಯಕ್ತಿ ಎಂಬ ಕುಖ್ಯಾತಿ ಯಡಿಯೂರಪ್ಪ ಅವರ ಹೆಗಲಿಗಿದೆ. ಇದು ರಾಜ್ಯದ ಸಾರ್ವಜನಿಕ ಜೀವನದಲ್ಲಿ ಇದು ಅತ್ಯಂತ ಅಪಮಾನಕರ ಘಟನೆಯಾಗಿತ್ತು. 

ಒಂದು ಕಡೆ ಜನಪ್ರಿಯ ನಾಯಕನಾಗಿ ಎದ್ದು ನಿಂತವರು, ಇನ್ನೊಂದು ಕಡೆ ಭ್ರಷ್ಟಾಚಾರದ ಆರೋಪಗಳೊಂದಿಗೆ ಜೈಲಿನ ಕಬ್ಬಿಣದ ಸರಳುಗಳ ಹಿಂದೆ ಕುಳಿತಿದ್ದ ದೃಶ್ಯವು ಅವರ ರಾಜಕೀಯಕ್ಕೆ ದೊಡ್ಡ ಆಘಾತವನ್ನು ನೀಡಿತು. ಇದಕ್ಕೂ ಮುಂಚೆ 2009-2011ರ ಅವಧಿಯಲ್ಲಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಸ್ಕ್ಯಾಮ್‌ನಲ್ಲಿ ಅವರ ಕುಟುಂಬಕ್ಕೆ ಸಂಬಂಧಿಸಿದ ಆರೋಪಗಳು ಕೇಳಿಬಂದಿದ್ದವು. ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಕುಟುಂಬದ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ಲಾಭ ತಲುಪಿದೆ ಎಂದು ಉಲ್ಲೇಖವಾಗಿತ್ತು. ನಂತರದ ವರ್ಷಗಳಲ್ಲಿ ಹಲವು ಕೇಸ್‌ಗಳು ನ್ಯಾಯಾಲಯಗಳಲ್ಲಿ ಡಿಸ್‌ಮಿಸ್ ಆದರೂ, ಆ ಅವಧಿಯಲ್ಲಿ ಅವರ ಮೇಲೆ ಬಂದ ಭ್ರಷ್ಟಾಚಾರದ ಕಳಂಕವು ಸಂಪೂರ್ಣವಾಗಿ ಮಾಯಲಿಲ್ಲ. ಕರ್ನಾಟಕದಲ್ಲಿ ಜಾತಿ ರಾಜಕಾರಣ ಹೀಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಯಡಿಯೂರಪ್ಪ ಪ್ರಕರಣಗಳು ನಿದರ್ಶನಗಳಾಗಿಯೇ ಉಳಿದಿವೆ. ಇಲ್ಲಿ ಒಂದು ಸಮುದಾಯದ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಹೇಗೆ ಬಳಸಲಾಗುತ್ತದೆ ಎಂಬುದನ್ನೂ ಕಾಣಬಹುದು. 

ಮುಖ್ಯವಾಗಿ ಯಡಿಯೂರಪ್ಪ ಅವರ ಜೀವಿತಾವಧಿಯ ಅತ್ಯಂತ ಗಂಭೀರ ಆರೋಪ 2024ರಲ್ಲಿ ಅವರ ಮೇಲೆ ದಾಖಲಾದ ಪೋಕ್ಸೋ ಪ್ರಕರಣ. 17 ವರ್ಷದ ಅಪ್ರಾಪ್ತ ಬಾಲಕಿ ಮತ್ತು ಅವಳ ತಾಯಿ ಸಹಾಯ ಕೋರಿ ಯಡಿಯೂರಪ್ಪ ಅವರ ಮನೆಗೆ ಹೋದಾಗ ನಡೆದ ಘಟನೆಯಿಂದಾಗಿ ಅವರ ಮೇಲೆ POCSO ಪ್ರಕರಣವಾಗಿ ದಾಖಲಾಯಿತು. ತನ್ನ ಮೊಮ್ಮಗಳ ವಯಸ್ಸಿನ ಹುಡುಗಿಯ ಜೊತೆ ಲೈಂಗಿಕ ದೌರ್ಜನ್ಯ ಎಸಗಿದ ಯಡಿಯೂರಪ್ಪ ಅವರ ವ್ಯಕ್ತಿತ್ವ ರಾಜ್ಯದ ಮುಂದೆ ಬಯಲಾಗಿತ್ತು. ಈ ಸಂಬಂಧ ಸದಾಶಿವನಗರ ಪೊಲೀಸ್ ಸ್ಟೇಷನ್‌ನಲ್ಲಿ ಮಾರ್ಚ್ 14, 2024ರಂದು FIR ದಾಖಲಾಗಿದ್ದು, ತನಿಖೆಯ ನಂತರ CID ಚಾರ್ಜ್‌ಶೀಟ್ ಸಲ್ಲಿಸಿದೆ. ತನಿಖೆಯ ಮೇಲೆ ಬಾಲಕಿಯ ಎದೆಯ ಭಾಗವನ್ನು ಮುಟ್ಟಿದ್ದಾಗಿ ಯಡಿಯೂರಪ್ಪ ಒಪ್ಪಿಕೊಂಡಿದ್ದು, ಅಪರಾಧವೂ ಸಾಭೀತಾಗಿದೆ. ಆದರೆ ವಯಸ್ಸಿನ ಕಾರಣಕ್ಕೆ ಕಾಂಗ್ರೆಸ್ ಸರ್ಕಾರವೇ ಅವರನ್ನು ಇಂಥ ಸೂಕ್ಷ್ಮ ವಿಚಾರದಲ್ಲಿ ರಕ್ಷಿಸಿದ್ದು ಸಹ ದೊಡ್ಡ ಸುದ್ದಿಯಾಗಿದೆ. ಇದೆಲ್ಲದರ ನಡುವೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಬಾಲಕಿಯ ತಾಯಿ 2024ರ ಮೇನಲ್ಲಿ ನಿಗೂಢ ಸಾವನ್ನಪ್ಪಿದ್ದು, ಇದು ಇಂದಿಗೂ ಅನುಮಾನಾಸ್ಪದವಾಗಿ ಉಳಿದಿದೆ.

ನಾಡಿನ ಜನಪರ ಪತ್ರಕರ್ತರು ಮತ್ತು ಹಿರಿಯ ವಕೀಲ ಎಸ್. ಬಾಲನ್ ಅವರು ಈ ಪ್ರಕರಣವನ್ನು ಇನ್ನೂ ತೀವ್ರವಾಗಿ ಹಿಂಬಾಲಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 9ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವದ ನಂತರ, ಅಂದರೆ ಅಭಿಮಾನೋತ್ಸವಕ್ಕೆ ಸರಿಯಾಗಿ 11 ದಿನಗಳ ನಂತರ, ಮೇ 20, 2026ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ತಡೆಯಾಜ್ಞೆ ತೆರವು ಅರ್ಜಿಯ ವಿಚಾರಣೆ ನಡೆಯಲಿದೆ. ಇಷ್ಟೆಲ್ಲಾ ಕಾರಣಗಳಿಂದಾಗಿ ಜಾತಿ ಭಾವನೆಗಳನ್ನು ಬಳಸಿ ರಾಜಕೀಯ ಲಾಭ ಪಡೆಯುವ ಕರ್ನಾಟಕದ ರಾಜಕಾರಣದಲ್ಲಿ, ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಈಗ ತೀವ್ರವಾಗಿ ಎದ್ದು ನಿಲ್ಲುತ್ತಿದೆ. 

ಇಷ್ಟೆಲ್ಲಾ ಆದಾಗಲೂ ಲಿಂಗಾಯತ ಸಮುದಾಯವು ಯಡಿಯೂರಪ್ಪ ಅವರನ್ನು ಇನ್ನೂ ತನ್ನ ನಾಯಕನಾಗಿ ನೋಡುತ್ತಿದೆಯೇ, ಅಥವಾ ಅಧಿಕಾರದಲ್ಲಿದ್ದಾಗಲೇ ಎದುರಿಸಿದ ಆರೋಪಗಳ ಸರಣಿ ಮತ್ತು ಜೈಲು ವಾಸದ ಘಟನೆಯು ಅವರ ಜನಪ್ರಿಯತೆಯನ್ನು ಕುಂದಿಸಿದೆಯೇ ಎಂಬುದನ್ನು ಮೇ 9ರ ಚಿತ್ರದುರ್ಗ ಅಭಿಮಾನೋತ್ಸವದ ಪ್ರತಿಕ್ರಿಯೆ ನಿರ್ಧರಿಸುತ್ತೆ. ಬಿಜೆಪಿ ಲಿಂಗಾಯತ ಮತಬ್ಯಾಂಕ್‌ನ್ನು ಗಟ್ಟಿಗೊಳಿಸಲು ಯಡಿಯೂರಪ್ಪರನ್ನು ಬಳಸುತ್ತಿದೆಯೇ, ಅಥವಾ ಸಮುದಾಯ ನಿಜವಾಗಿಯೂ ಅವರನ್ನು ಮತ್ತೆ ಪೂರ್ಣ ಹೃದಯದಿಂದ ಸ್ವೀಕರಿಸುತ್ತದೆಯೇ ಎಂಬುದು ಈಗಿನ ರಾಜಕೀಯದ ಅತ್ಯಂತ ಮುಖ್ಯ ಪ್ರಶ್ನೆಯಾಗಿ ಉಳಿದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...