Homeಮುಖಪುಟಪೂಂಚ್ ದಾಳಿ ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್: ಚರಂಜಿತ್ ಸಿಂಗ್ ಚನ್ನಿ

ಪೂಂಚ್ ದಾಳಿ ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್: ಚರಂಜಿತ್ ಸಿಂಗ್ ಚನ್ನಿ

- Advertisement -
- Advertisement -

ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ಉಗ್ರರ ದಾಳಿಯು ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್‌ ಎಂದು ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇವೆಲ್ಲ ಬಿಜೆಪಿಯ ಚುನಾವಣಾ ಗಿಮಿಕ್‌, ಅಲ್ಲದೆ ಭಯೋತ್ಪಾದಕ ದಾಳಿಯಲ್ಲ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿಯು ಜನರ ಜೀವ ಮತ್ತು ದೇಹಗಳೊಂದಿಗೆ ಆಟವಾಡುತ್ತಿದೆ” ಎಂದು ಆರೋಪಿಸಿದ್ದಾರೆ.

“ಚುನಾವಣೆ ಗೆಲ್ಲಲು ಬಿಜೆಪಿಯು ಇಂತಹ ಘಟನೆಗಳನ್ನು ರೂಪಿಸುತ್ತಿದ್ದು, ಈ ದಾಳಿಗಳು ಪೂರ್ವ ನಿರ್ಧರಿತವಾಗಿವೆ ಹಾಗೂ ಬಿಜೆಪಿಯ ಚುನಾವಣಾ ಭವಿಷ್ಯವನ್ನು ಉತ್ತೇಜಿಸಲು ನಡೆಸಲಾಗಿದೆ. ಚುನಾವಣೆಗಳು ಬಂದಾಗಲೆಲ್ಲ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೂ ಇಂತಹುದೇ ದಾಳಿ ನಡೆದಿತ್ತು” ಎಂದು ಚನ್ನಿ ಹೇಳಿದ್ದಾರೆ.

ಶನಿವಾರ (ಮೇ 4) ಸಂಜೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರು ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಒಬ್ಬರು ಐಎಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಪೂಂಚ್ ಜಿಲ್ಲೆಯ ಸುರನಕೋಟೆಯ ಸನಾಯಿ ಗ್ರಾಮದಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥದ ಪುಟಗಳನ್ನು ಹರಿದು ಹಾಕಿದ ಆರೋಪ; ಯುವಕನನ್ನು ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read