HomeUncategorizedಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

- Advertisement -
- Advertisement -

ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಆಪಾದನೆಗಳು ಇರಲಿಲ್ಲ. ಇದು ರಾಜಕೀಯ ಷಡ್ಯಂತ್ರ” ಎಂದಿದ್ದಾರೆ.

ಏಪ್ರಿಲ್ 28ನೇ ತಾರೀಖು ನನ್ನ ಮೇಲೆ ದೂರು ನೀಡಿದ್ದಾರೆ. ಆದರೆ, ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಅಪಹರಣ ಕೇಸ್ ಹಾಕಿದ್ದಾರೆ. ಮೇ 2ನೇ ತಾರೀಖಿನ ಪ್ರಕರಣದಲ್ಲೂ ಯಾವುದೇ ಪುರಾವೆ ಇಲ್ಲ. ಪೂರ್ತಿ ವಿಷಯವನ್ನು ನಾನು ಹೇಳ್ತೀನಿ, ಇದು ರಾಜಕೀಯ ಷಡ್ಯಂತ್ರ. ಇದನ್ನು ಎದುರಿಸುವ ಶಕ್ತಿ ನನಗಿದೆ” ಎಂದು ರೇವಣ್ಣ ಹೇಳಿದ್ದಾರೆ.

ರೇವಣ್ಣ ಮಾಧ್ಯಮಗಳಿಗೆ ಹೆಚ್ಚು ಹೇಳಿಕೆ ನೀಡಲು ಅವಕಾಶ ನೀಡದ ಎಸ್‌ಐಟಿ ಅಧಿಕಾರಿಗಳು ಅವರನ್ನು ವೈದ್ಯಕೀಯ ತಪಾಸಣೆ ಬೌರಿಂಗ್ ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ ಮೈಸೂರಿನ ಕೆಆರ್ ನಗರ ಮೂಲದ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಮಗ ರಾಜು ಎಂಬಾತ ಕೆಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಈ ಬೆನ್ನಲ್ಲೇ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ.

ಇದನ್ನೂ ಓದಿ : ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read