Homeಮುಖಪುಟಸರ್ಕಾರವು ಸ್ವತಂತ್ರ ಮಾಧ್ಯಮದಿಂದ ಭಯಭೀತಗೊಂಡಿದೆ: ಡಿಜಿಪಬ್

ಸರ್ಕಾರವು ಸ್ವತಂತ್ರ ಮಾಧ್ಯಮದಿಂದ ಭಯಭೀತಗೊಂಡಿದೆ: ಡಿಜಿಪಬ್

ಸ್ವತಂತ್ರ ಮಾಧ್ಯಮಗಳಿಗೆ ನಿಧಿ ನೀಡುವ ಸಂಸ್ಥೆ ಮೇಲಿನ ಐಟಿ ದಾಳಿಗೆ ಡಿಜಿಟಲ್ ಮಾಧ್ಯಮ ಒಕ್ಕೂಟ ಡಿಜಿಪಬ್‌ ತೀವ್ರ ಆಕ್ರೋಶ

- Advertisement -
- Advertisement -

ಬೆಂಗಳೂರಿನಲ್ಲಿರುವ ಇಂಡಿಪೆಂಡೆಂಟ್ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್, ಸರ್ಕಾರೇತರ ಸಂಸ್ಥೆ ಆಕ್ಸ್‌ಫ್ಯಾಮ್ ಇಂಡಿಯಾ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಥಿಂಕ್ ಟ್ಯಾಂಕ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ‘ಸ್ವತಂತ್ರ ಪತ್ರಿಕೋದ್ಯಮ ಮತ್ತು ಸಂಶೋಧನೆಯ ಮೇಲಿನ ದಾಳಿಯಾಗಿದೆ’ ಎಂದು ಡಿಜಿಟಲ್ ಮಾಧ್ಯಮ ಸಮೂಹವಾದ ‘ಡಿಜಿಪಬ್‌’ ಗುರುವಾರ ಹೇಳಿದೆ.

ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ 11 ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘವಾಗಿದೆ. “ನಮ್ಮ ಸರ್ಕಾರವು ಸ್ವತಂತ್ರ ಮಾಧ್ಯಮದಿಂದ ಎಷ್ಟು ಭಯಭೀತಗೊಂಡಿದೆ ಎಂದು ಈ ದಾಳಿಗಳು ತೋರಿಸುತ್ತವೆ” ಎಂದು ಡಿಜಿಪಬ್‌ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬುಧವಾರ, ಆದಾಯ ತೆರಿಗೆ ಅಧಿಕಾರಿಗಳು ಸೆಂಟರ್ ಫಾರ್ ಪಾಲಿಸಿ ರಿಸರ್ಚ್, ಆಕ್ಸ್‌ಫ್ಯಾಮ್ ಇಂಡಿಯಾ ಮತ್ತು ಇಂಡಿಪೆಂಡೆಂಟ್ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬ ಕುರಿತು ಇಲಾಖೆಯು ಇನ್ನೂ ಹೇಳಿಕೆಯನ್ನು ನೀಡಿಲ್ಲ. ಆದರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, “ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯಿದೆಯ ಮೂಲಕ ಪಡೆದ ಹಣದ ರಸೀದಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ: ಜನಪರ ಜಾಲತಾಣಗಳ ಸಮಾಗಮ: ಓದುಗರಿಗೆ ಆರೋಗ್ಯಕರ ಸುದ್ದಿ ನೀಡುವ ವಿಶ್ವಾಸದಲ್ಲಿ ‘ಡಿಜಿಪಬ್’

ಈ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಈ ಕ್ರಮಗಳ ಹಿಂದಿನ ಕಾರಣಗಳನ್ನು ತಿಳಿಸಲು ಆದಾಯ ತೆರಿಗೆ ಇಲಾಖೆಗೆ ಕರೆ ನೀಡಿರುವುದಾಗಿ ಡಿಜಿಪಬ್ ಗುರುವಾರ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದಾಳಿಗಳು ನಡೆದಿರುವುದು ಇದೇ ಮೊದಲಲ್ಲ ಎಂದು ಡಿಜಿಪಬ್ ನೆನಪಿಸಿಕೊಂಡಿದೆ.

“ಆರೋಪಗಳು ಅಥವಾ ಸಾಕ್ಷ್ಯಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ, ಸಾರ್ವಜನಿಕ ಸೇವಾ ಪತ್ರಿಕೋದ್ಯಮದಲ್ಲಿ ತೊಡಗಿರುವ ಸಂಸ್ಥೆಗಳನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಆದಾಯ ತೆರಿಗೆ ತಂಡಗಳನ್ನು ಬಳಸಲಾಗುತ್ತಿದೆ. ಇದು ಮಾನವ ಸಂಪನ್ಮೂಲಗಳ ಲಜ್ಜೆಗೆಟ್ಟ ಪ್ರಯತ್ನವಾಗಿದೆ” ಎಂದು ಡಿಜಿಪಬ್ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದಿಕ್ಕೆಟ್ಟ ಕಾಲದ ನಿಜದನಿ ನವಮಾಧ್ಯಮ; ಇಂದು ಕಾವಲು ಕಾಯುತ್ತಿರುವ ಮಾಧ್ಯಮಗಳು ಯಾವುವು?

ಡಿಜಿಪಬ್ ಸ್ವತಂತ್ರ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಹಲವಾರು ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬೆಂಬಲಿಸುತ್ತದೆ. ಮಸುಕಾದ ಸುದ್ದಿ ಮಾಧ್ಯಮಗಳ ಈ ಸಂದರ್ಭದಲ್ಲಿ ಈ ರೀತಿಯ ಮಾಧ್ಯಮಗಳು ತೀರಾ ಅಗತ್ಯವಿದೆ ಎಂದು ಡಿಜಿಪಬ್ ಹೇಳಿದೆ.

ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮತ್ತು ಆಕ್ಸ್‌ಫ್ಯಾಮ್ ಒದಗಿಸಿದ ಮಾಹಿತಿಯು ಸಾಮಾಜಿಕ-ಆರ್ಥಿಕ ವಿಷಯಗಳ ಒಳನೋಟವನ್ನು ನೀಡುತ್ತದೆ ಎಂದು ಅದು ಹೇಳಿದೆ. “ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇದೆಲ್ಲವೂ ಮುಖ್ಯವಾಗಿದೆ” ಎಂದು ಡಿಜಿಪಬ್ ಉಲ್ಲೇಖಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...