Homeಮುಖಪುಟದೀರ್ಘಾವಧಿ ಬ್ರಿಟನ್‌ ಆಳಿದ ರಾಣಿ 2ನೇ ಎಲಿಜಬೆತ್ ನಿಧನ

ದೀರ್ಘಾವಧಿ ಬ್ರಿಟನ್‌ ಆಳಿದ ರಾಣಿ 2ನೇ ಎಲಿಜಬೆತ್ ನಿಧನ

- Advertisement -
- Advertisement -

ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ 2ನೇ ಎಲಿಜಬೆತ್ (96) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಬಂಕಿಂಗ್‌ಹ್ಯಾಮ್‌ ಅರಮನೆ ನಿಧನದ ವಾರ್ತೆಯನ್ನು ತಿಳಿಸಿದೆ.

ಬ್ರಿಟನ್‌ನಲ್ಲಿ 10 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆಯು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕ್ವೀನ್‌ 2ನೇ ಎಜಿಜಬೆತ್‌ಗೆ ನಾಲ್ವರು ಮಕ್ಕಳಿದ್ದು, ಹಿರಿಯ ಮಗ ವೇಲ್ಸ್‌ನ ರಾಜಕುಮಾರ, 73 ವರ್ಷದ ಚಾರ್ಲ್ಸ್‌ ಅವರು ತಕ್ಷಣದಿಂದಲೇ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಗುರುವಾರ ಸಂಜೆ ರಾಣಿಯ ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇದ್ದರು. ರಾಣಿಯ ಮಕ್ಕಳಾದ ಚಾರ್ಲ್ಸ್‌, ರಾಜಕುಮಾರಿ 72 ವರ್ಷದ ಆ್ಯನೆ, ರಾಜಕುಮಾರರಾದ 62 ವರ್ಷದ ಆಂಡ್ರ್ಯೂ ಮತ್ತು 58 ವರ್ಷದ ಎಡ್ವರ್ಡ್‌ ಅವರು ಬಾಲ್‌ಮೊರಲ್‌ನಲ್ಲಿರುವ ರಾಣಿಯ ಎಸ್ಟೇಟ್‌ಗೆ ಧಾವಿಸಿದ್ದರು. ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರನ್ನು ನೇಮಕಮಾಡಿದ್ದರು.

1952ರಲ್ಲಿ ಸಿಂಹಾಸನವನ್ನು ಏರಿದ ಎಲಿಜಬೆತ್ ರಾಜಕೀಯ ಕ್ರಾಂತಿಯ ಸಮಯದಲ್ಲಿ ಯುಕೆಯನ್ನು ಮುನ್ನಡೆಸಿದರು. 1837ರಿಂದ 1901ರವರೆಗೆ ಆಳಿದ ರಾಣಿ ವಿಕ್ಟೋರಿಯಾ ಅವರ ದಾಖಲೆಯನ್ನು ಎಲಿಜಬೆತ್‌ ಮುರಿದಿದ್ದರು. ಯುಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರಾಗಿ 2015ರಲ್ಲಿ ಗುರುತಿಸಿಕೊಂಡರು.

ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ

“ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲುಳಿಯಲಿದ್ದಾರೆ. ಅವರು ತಮ್ಮ ದೇಶದ ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯಿಂದ ಇದ್ದರು. ಅವರ ಕುಟುಂಬದ ಮತ್ತು ಬ್ರಿಟನ್‌ ಜನರ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಅವರ ಜತೆ ನಾವಿದ್ದೇವೆ” ಎಂದು ಮೋದಿ ತಿಳಿಸಿದ್ದಾರೆ.

“2015 ಮತ್ತು 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿ 2ನೇ ಎಲಿಜಬೆತ್ ಜತೆ ಮಾತುಕತೆ ನಡೆಸಿರುವುದು ಸ್ಮರಣೀಯವಾಗಿದೆ. ಅವರ ಸ್ವಾಗತ ಮತ್ತು ದಯಾಪರತೆಯನ್ನು ಎಂದಿಗೂ ಮರೆಯಲಾರೆ. ಮಹಾತ್ಮ ಗಾಂಧಿಯವರು ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ಸಭೆಯೊಂದರ ವೇಳೆ ಅವರು ನನಗೆ ತೋರಿಸಿದ್ದರು” ಎಂದು ಅವರು ಸ್ಮರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...