Homeಮುಖಪುಟಗುಜರಾತ್ ಹೈಕೋರ್ಟ್ ತೀರ್ಪಿಗೆ ಬ್ರೇಕ್ ಹಾಕಿದ ಸುಪ್ರೀಂ; ತೀಸ್ತಾ ಸೆಟಲ್ವಾಡ್‌ಗೆ ತಾತ್ಕಾಲಿಕ ರಿಲೀಫ್

ಗುಜರಾತ್ ಹೈಕೋರ್ಟ್ ತೀರ್ಪಿಗೆ ಬ್ರೇಕ್ ಹಾಕಿದ ಸುಪ್ರೀಂ; ತೀಸ್ತಾ ಸೆಟಲ್ವಾಡ್‌ಗೆ ತಾತ್ಕಾಲಿಕ ರಿಲೀಫ್

- Advertisement -
- Advertisement -

ನ್ಯಾಯಾಲಯಕ್ಕೆ ಕೂಡಲೇ ಶರಣಾಗುವಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಗುಜರಾತ್ ಹೈಕೋರ್ಟ್ ಶನಿವಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ್ ದತ್ತ ಅವರಿದ್ದ ತ್ರಿಸದಸ್ಯ ಪೀಠವು, ಸಂಜೆ ವಿಭಾಗೀಯ ಪೀಠ ನಡೆಸಿದ್ದ ವಿಚಾರಣೆಯನ್ನು ಅವಲೋಕಿಸಿ ಈ ಆದೇಶ ಪ್ರಕಟಿಸಿದೆ. ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ತೀಸ್ತಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಅಭಯ್‌ ಎಸ್. ಓಕಾ ಮತ್ತು ಮತ್ತು ಪ್ರಶಾಂತ್‌ ಕುಮಾರ್ ಮಿಶ್ರಾ ಅವರು ವಿಸ್ತ್ರತ ಪೀಠಕ್ಕೆ ವರ್ಗಾಯಿಸಿದ್ದರು.

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ 7 ದಿನಗಳ ಮಧ್ಯಂತರ ರಕ್ಷಣೆ ನೀಡಿದೆ. ಈ ಮೂಲಕ ತೀಸ್ತಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ವಿಚಾರಣೆಯ ಸಂದರ್ಭದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ,ಸುಪ್ರೀಂ ಕೋರ್ಟ್ ನಲ್ಲಿ ಗುಜರಾತ್ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಜಾಮೀನು ಅರ್ಜಿ ತಿರಸ್ಕರಿಸಿರುವ ಬಗ್ಗೆ ಪ್ರಶ್ನೆ ಮಾಡಿತು. ಜಾಮೀನು ಪ್ರಶ್ನಿಸಲು ವ್ಯಕ್ತಿಗೆ ಏಳು ದಿನಗಳ ಕಾಲಾವಕಾಶವನ್ನು ನೀಡಬಾರದು, ತುರ್ತಾಗಿ ಶರಣಾಗಬೇಕು ಎಂದಿದ್ದೀರಿ, ಒಬ್ಬ ವ್ಯಕ್ತಿ ಇಷ್ಟು ದಿನ ಹೊರಗೆ ಇದ್ದಾಗ ಮಧ್ಯಂತರ ರಕ್ಷಣೆಯನ್ನು ನೀಡಿದರೆ ಆಕಾಶವು ಕುಸಿಯುತ್ತದೆಯೇ.? ಹೈಕೋರ್ಟ್ ಏನು ಮಾಡುತ್ತಿದೆ? ಅಂತಹ ಅವಸರವೇನು? ಎಂದು ಪೀಠ ಪ್ರಶ್ನಿಸಿತು.

ತಕ್ಷಣವೇ ಶರಣಾಗುವಂತೆ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ತೀಸ್ತಾ ಸೆತಲ್ವಾಡ್ ಮಧ್ಯಂತರ ರಕ್ಷಣೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ಅರ್ಜಿ ಸಲ್ಲಿಕೆ ಹಿನ್ನಲೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ, 7 ದಿನಗಳ ಕಾಲ ಮಧ್ಯಂತರ ರಕ್ಷಣೆ ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ಆಧಾರದಲ್ಲಿ ಅರ್ಜಿದಾರರು ಈಗಾಗಲೇ ಹೊರಗೆ ಇರುವುದರಿಂದ, ಅವರು ಈ ತಕ್ಷಣವೇ ಶರಣಾಗುವಂತೆ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜಾರ್ ದೇಸಾಯಿ ಆದೇಶಿಸಿದ್ದರು. ತೀಸ್ತಾ ಬಗ್ಗೆ ಮೃದು ಧೋರಣೆ ತಾಳಿದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲವೂ ಮೃದುವಾಗಿರುತ್ತದೆ ಎಂಬ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುತ್ತದೆ ಎಂದು ತಮ್ಮ ಆದೇಶವನ್ನು ಸಮರ್ಥಿಸಿಕೊಂಡರು.

ಏನಿದು ಪ್ರಕರಣ?

2002ರ ಗುಜರಾತ್‌ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಾಕ್ಷ್ಯಗಳಾಗಿ ತಯಾರು ಮಾಡಿದ ಆರೋಪ ಮೇಲೆ ತೀಸ್ತಾ, ನಿವೃತ್ತ ಪೊಲೀಸ್‌ ಅಧಿಕಾರಿ ಆರ್.ಬಿ. ಶ್ರೀಕುಮಾರ್ ಸೇರಿದಂತೆ ಇತರರ ವಿರುದ್ಧ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಮುಗಿದಿದ್ದರಿಂದ ಕೋರ್ಟ್‌ಗೆ ಶರಣಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಹಾಗಾಗಿ, ತ್ವರಿತವಾಗಿ ಜಾಮೀನಿನ ವಿಚಾರಣೆ ನಡೆಸುವಂತೆ ತೀಸ್ತಾ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಅವರ ಸೂಚನೆ ಮೇರೆಗೆ ನ್ಯಾಯಾಲಯದ ಕಲಾಪ ಮುಗಿದ ಬಳಿಕ ಸಂಜೆ 6.30ಕ್ಕೆ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿಸ್ತ್ರತ ಪೀಠಕ್ಕೆ ಜಾಮೀನು ಅರ್ಜಿಯನ್ನು ವರ್ಗಾಯಿಸಿತ್ತು. ‘ತೀಸ್ತಾಗೆ ಶರಣಾಗಲು ಹೈಕೋರ್ಟ್‌ ಸ್ವಲ್ಪ ಕಾಲಾವಕಾಶ ನೀಡಬೇಕಿತ್ತು’ ಎಂದು ನ್ಯಾಯಮೂರ್ತಿ ಓಕಾ ಹೇಳಿದರು.

ಸರ್ಕಾರದ ವಾದವೇನು?: ಗುಜರಾತ್‌ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮಡ್ತಾ, ‘ಸರ್ಕಾರದ ವಿರುದ್ಧ ತೀಸ್ತಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷಾಧಾರಗಳನ್ನು ಸೃಷ್ಟಿಸಿದ ಆರೋಪ ಹೊತ್ತಿರುವ ಅವರು ಮಧ್ಯಂತರ ಜಾಮೀನಿಗೂ ಅರ್ಹರಿಲ್ಲ’ ಎಂದು ವಾದಿಸಿದರು.

ಹಿರಿಯ ವಕೀಲ ಚಂದರ್‌ ಉದಯ್ ಸಿಂಗ್ ಮತ್ತು ವಕೀಲರಾದ ಅರ್ಪಣಾ ಭಟ್ ಅವರು, ತೀಸ್ತಾ ಪರ ಹಾಜರಾಗಿದ್ದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ವಿರುದ್ಧ 2022ರ ಜೂನ್ 21ರಂದು ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್‌ ಜಾಮೀನು ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ; ತಕ್ಷಣವೇ ಶರಣಾಗುವಂತೆ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...