Homeದಿಟನಾಗರಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಶ್ರೀಮಂತೆ ಎಂಬುದು ಸುಳ್ಳು ಸುದ್ದಿ

- Advertisement -
- Advertisement -

ಬ್ರಿಟನ್ ರಾಣಿಗಿಂತ ಸೋನಿಯಾ ಗಾಂಧಿ ಶ್ರೀಮಂತೆ ಎನ್ನುವ 2013ರ ಹಳೆಯ ಸುಳ್ಳು ಸುದ್ದಿಯೊಂದು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಟೈಮ್ಸ್ ಆಫ್ ಇಂಡಿಯಾ, ಉದಯವಾಣಿ, ವಿಜಯವಾಣಿ, ಹಫಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳು ಪರಿಶೀಲಿಸದೆ ಸುಳ್ಳು ಸುದ್ದಿ ಪ್ರಕಟಿಸಿದ್ದರಿಂದ ಅದು ಇಂದಿಗೂ ಸೋನಿಯಾ ಗಾಂಧಿ ವಿರೋಧಿಗಳಿಂದಾಗಿ ಷೇರ್ ಆಗುತ್ತಲೇ ಇದೆ.

ತೀರಾ ಇತ್ತೀಚಿನವರೆಗೆ ಫೇಸ್‌ಬುಕ್‌ ನಲ್ಲಿ ನಿಲುಮೆ ಎಂಬ ಬಲಪಂಥೀಯರ ಗುಂಪಿನಲ್ಲಿ ಬಸವ ರತ್ಕಲ್ ಎಂಬುವವರು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಆ ಸುಳ್ಳು ವರದಿಯ ಪತ್ರಿಕಾ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸೋನಿಯಾ ಗಾಂಧಿ ಆಸ್ತಿ 12,000 ಕೋಟಿ ಎಂದು ವರದಿಯಾಗಿದೆ. 50ಕ್ಕೂ ಹೆಚ್ಚು ಜನರು ಆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದೇ ಸುಳ್ಳು ಸುದ್ದಿಯನ್ನು ಈ ಹಿಂದೆ ಬಿಜೆಪಿ ಮುಖಂಡರಾದ ಅಶ್ವಿನಿ ಉಪಾಧ್ಯಾಯ, ರೈಲ್ವೆ ಮಂತ್ರಿ ಪಿಯೂಶ್ ಗೊಯಲ್ ಕಚೇರಿ, ನರೇಂದ್ರ ಮೋದಿ ಬೆಂಬಲಿಗರು ಕರ್ನಾಟಕ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು.

ಕರ್ನಾಟಕ ಫೇಕ್ ನ್ಯೂಸ್ ವೆಬ್‌ಸೈಟ್ ಪೋಸ್ಟ್ ಕಾರ್ಡ್ ಕನ್ನಡ ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ/ರಾಜಕಾರಣಿ ಎಂದು ಸುಳ್ಳು ಹರಡಿದ್ದರು.

ವಾಸ್ತವವೇನು?

2021 ರ ʼಪೋರ್ಬ್ಸ್‌ʼ ಸಂಸ್ಥೆ ಬಿಡುಗಡೆ ಮಾಡಿದ ಪ್ರಪಂಚದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ  ಹೆಸರು ಇದೆಯೆ ಎಂದು ಹುಡುಕಿದಾಗ, ಆ ಪಟ್ಟಿಯಲ್ಲಿ ಅವರು ಇಲ್ಲವೆಂದು ತಿಳಿದುಬಂದಿದೆ. ಇಂಡಿಯಾಗೆ ಸಂಬಂಧಿಸಿದಂತೆ ಮುಖೇಶ್ ಅಂಬಾನಿ 10ನೇ ಸ್ಥಾನದಲ್ಲಿ ಇದ್ದಾರೆ. ಬಿಲಿಯನರ್‌ಗಳಿಗೆ ಸಂಬಂಧಿಸಿದ ರಿಯಲ್‌ –ಟೈಮ್‌ ಪಟ್ಟಿಯನ್ನು ಇಲ್ಲಿ ನೋಡಬಹುದು.

2019 ರ ಲೋಕಸಭಾ ಚುನಾವಣೆಯ ಅಫಿಡವಿಡಟ್‌ನಲ್ಲಿ ತನ್ನ ಆಸ್ತಿಗಳ ಬೆಲೆ ಸುಮಾರು 11.82 ಕೋಟಿ ರೂಪಾಯಿಗಳೆಂದು ಸೋನಿಯಾಗಾಂಧಿಯವರು ಘೋಷಿಸಿಕೊಂಡಿದ್ದಾರೆ.

ತಪ್ಪೊಪ್ಪಿಕೊಂಡ ವೆಬ್‌ಸೈಟ್‌ಗಳು

ಟೈಮ್ಸ್ ಆಫ್ ಇಂಡಿಯಾ ಮತ್ತು ಹಫಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳು ಪರಿಶೀಲಿಸದೆ ಸುಳ್ಳು ಸುದ್ದಿ ಪ್ರಕಟಿಸಿದ್ದವು. ಆದರೆ ಜಗತ್ತಿನಲ್ಲಿನ ಸಿರಿವಂತರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಬ್ಬರು ಎಂದು ಹೇಳುತ್ತಾ, ʼಬಿಜೆನೆಸ್‌ ಇನ್ಸೈಡರ್‌ʼ ( ಸೋನಿಯಾ -4ನೇ ಸ್ಥಾನ) ಮತ್ತು ʼಹಾಫಿಂಗ್ಟನ್‌ ಪೋಸ್ಟ್‌ʼನವರು  ಈ ಹಿಂದೆ ಲೇಖನ ಪ್ರಕಟಿಸಿದ್ದರು. ಆದರೆ, ʼಬಿಜೆನೆಸ್‌ ಇನ್ಸೈಡರ್‌ʼನವರು ಸೋನಿಯಾಗೆ  ಸಂಬಂಧಿಸಿದಂತೆ ಡೇಟಾವನ್ನು ನಂಬಲಾರ್ಹ ವೆಬ್ಸೈಟ್‌ನಿಂದ ತೆಗೆದುಕೊಂಡಿಲ್ಲವೆಂದು ವರದಿಯನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದರು. ʼಹಾಫಿಂಗ್ಟನ್‌ ಪೋಸ್ಟ್‌ ನವರು ಸೋನಿಯಾ ಗಾಂಧಿ ಹೆಸರನ್ನು ಪಟ್ಟಿಯಿಂದ ತೆದೆದುಹಾಕಿ, ತಾವು ಸೋನಿಯಾ ಗಾಂಧಿಯವರ ಆಸ್ತಿಗಳ ಬೆಲೆಯನ್ನು ಪರಿಶೀಲಿಸಲು ಆಗುವುದಿಲ್ಲವೆಂದು ವಿವರಣೆ ನೀಡಿದ್ದಾರೆ.

ತದನಂತರ ಟೈಮ್ಸ್ ಆಫ್ ಇಂಡಿಯಾ ಸೇರಿ ಎಲ್ಲರೂ ತಮ್ಮ ಸ್ಟೋರಿಗಳನ್ನು ಡಿಲೀಟ್ ಮಾಡಿದರು. ಆದರೆ ಕನ್ನಡದ ಪತ್ರಿಕೆಗಳು ಪ್ರಿಂಟ್ ಮಾಡಿದ್ದರಿಂದ ಇಂದಿಗೂ ಆ ಪತ್ರಿಕಾ ತುಣುಕುಗಳು ಹರಿದಾಡುತ್ತಲೇ ಇವೆ. ಸೋನಿಯಾ ಗಾಂಧಿಯವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಅವರ ರಾಜಕೀಯ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂಬುದು ಮಾತ್ರ ಸತ್ಯವಾಗಿದೆ.


ಇದನ್ನೂ ಓದಿ; Fact Check: ಸೋನಿಯಾ ಗಾಂಧಿ 4ನೇ ಶ್ರೀಮಂತ ಮಹಿಳಾ ರಾಜಕಾರಣಿ ಅಲ್ಲ. ಆದರೂ ಸುಳ್ಳು ಹರಡಿದ ಪೋಸ್ಟ್‌ ಕಾರ್ಡ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....