Homeಮುಖಪುಟಉತ್ತರ ಪ್ರದೇಶ: ಕೇಂದ್ರ ಸಚಿವರ ಮನೆಯಲ್ಲಿ ಶವ ಪತ್ತೆ; ಸಚಿವರ ಮಗನ ಬಂದೂಕಿನಿಂದಲೇ ಗುಂಡಿನ ದಾಳಿ

ಉತ್ತರ ಪ್ರದೇಶ: ಕೇಂದ್ರ ಸಚಿವರ ಮನೆಯಲ್ಲಿ ಶವ ಪತ್ತೆ; ಸಚಿವರ ಮಗನ ಬಂದೂಕಿನಿಂದಲೇ ಗುಂಡಿನ ದಾಳಿ

- Advertisement -
- Advertisement -

ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ 30 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ. ಗುಂಡೇಟಿನಿಂದ ಈ ವ್ಯಕ್ತಿ ಮೃತಪಟ್ಟಿದ್ದು, ಗುಂಡಿನ ದಾಳಿಗೆ ಬಳಸಿದ ಪಿಸ್ತೂಲ್ ಸಚಿವರ ಪುತ್ರ ವಿಕಾಸ್ ಕಿಶೋರ್ ಅವರದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪಶ್ಚಿಮ ಲಕ್ನೋದ ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್, ”ಮೃತರನ್ನು ವಿನಯ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಇವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಈ ಘಟನೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ” ಎಂದು ಅವರು ತಿಳಿಸಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಿಸಿಪಿ, ”ವಿನಯ್ ಶ್ರೀವಾಸ್ತವ್ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ವಿಕಾಸ್ ಕಿಶೋರ್ ಅವರಿಗೆ ಸೇರಿದ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

”ವಿಧಿವಿಜ್ಞಾನ ತಂಡ ಆಗಮಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ” ಎಂದು ತಿಳಿಸಿದರು.

ಮೃತರ ಸಹೋದರ ಮಾತನಾಡಿದ್ದು, ”ಇದು ಆತ್ಮಹತ್ಯೆಯಲ್ಲ ಕೊಲೆ ನಡೆದಿದೆ. ವಿನಯ್ ಅವರ ಶರ್ಟ್ ಹರಿದಿದ್ದು, ಸ್ಥಳದಲ್ಲಿದ್ದ ಜನರ ನಡುವೆ ಜಗಳವಾಗಿದೆ” ಎಂದು ಹೇಳಿದ್ದಾರೆ.

”ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ನಿವಾಸದಲ್ಲಿ ನನ್ನ ಸಹೋದರ ವಿನಯ್ ಶ್ರೀವಾಸ್ತವ್ ಅವರನ್ನು ಹತ್ಯೆ ಮಾಡಲಾಗಿದೆ. ನನ್ನ ಸಹೋದರ ಮತ್ತು ಸಚಿವರ ಮಗ ವಿಕಾಸ್ ಕಿಶೋರ್ ಇಬ್ಬರೂ ಸ್ನೇಹಿತರಾಗಿದ್ದರು. ಈ ಘಟನೆ ನಡೆದಾಗ ಮೂವರು ಇದ್ದರು ಆದರೆ ವಿಕಾಸ್ ಈಗ ಎಲ್ಲಿ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ. ಪೊಲೀಸರು ಅವರ ಪರವಾನಗಿ ಪಡೆದ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ” ಎಂದು ಮೃತನ ಸಹೋದರ ಹೇಳಿದರು.

ಈ ಬಗ್ಗೆ ಪೊಲೀಸರು ಮಾತನಾಡಿದ್ದು, ”ಪ್ರಕರಣದ ತನಿಖೆ ನಡೆಸುತ್ತಿದ್ದೇವೆ, ಇದರಲ್ಲಿ ಭಾಗಿಯಾಗಿರುವವರನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಕೌಶಲ್ ಕಿಶೋರ್ ಅವರು, ”ಈ ಘಟನೆ ನಡೆದ ಸಮಯದಲ್ಲಿ ನನ್ನ ಮಗ ಮನೆಯಲ್ಲಿ ಇರಲಿಲ್ಲ” ಎಂದು ಕೌಶಲ್ ಕಿಶೋರ್ ಹೇಳಿದ್ದಾರೆ.

”ಈ ವಿಷಯ ತಿಳಿದ ವಿಕಾಸ್ ತುಂಬಾ ದುಃಖಿತನಾಗಿದ್ದ, ಮೃತ ವಿನಯ್ ನನ್ನ ಮಗನಿಗೆ ತುಂಬಾ ಒಳ್ಳೆಯ ಸ್ನೇಹಿತ” ಎಂದು ತಿಳಿಸಿದ್ದಾರೆ.

”ಅದು ತನ್ನ ಮಗ ವಿಕಾಸ್‌ನ ಪಿಸ್ತೂಲ್‌, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ, ಅಪರಾಧಿಗಳನ್ನು ಬಿಡುವುದಿಲ್ಲ” ಎಂದು ಸಂಸದರು ಹೇಳಿದ್ದಾರೆ.

ಇದನ್ನೂ ಓದಿ: 5 ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಕರೆದ ಕೇಂದ್ರ ಸರಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...