Homeಮುಖಪುಟಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ಶಾಸಕರ ಮೇಲೆ ಪೊಲೀಸರಿಂದ ತೀವ್ರ ಹಲ್ಲೆ ಆರೋಪ

ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ಶಾಸಕರ ಮೇಲೆ ಪೊಲೀಸರಿಂದ ತೀವ್ರ ಹಲ್ಲೆ ಆರೋಪ

ಪ್ರತಿಪಕ್ಷದ ಶಾಸಕರನ್ನು ಬಿಹಾರ ವಿಧಾನಸಭೆಯಲ್ಲಿ ಪೊಲೀಸರು ಎಳೆದೊಯ್ದರು, ಹಲ್ಲೆ ನಡೆಸಿದರು... ಕೆಲವು ಶಾಸಕರ ತಲೆಗೆ, ಕೈ ಕಾಲಿಗೆ ಗಾಯಗಳಾದವು... ಹಲವರನ್ನು ಸ್ಟ್ರೆಚರ್ ಮೇಲೆ ಒಯ್ಯಬೇಕಾಗಿತ್ತು..

- Advertisement -
- Advertisement -

ಮಂಗಳವಾರ ಬಿಹಾರ ರಾಜ್ಯ ಪೊಲೀಸ್ ಪಡೆಗೆ ಹೆಚ್ಚಿನ ಅಧಿಕಾರವನ್ನು ನೀಡುವ ಮಸೂದೆಯ ಮೇಲೆ ಚರ್ಚೆ ನಡೆಯುವ ವೇಳೆ ನಿರಾಯುಧ ಶಾಸಕರನ್ನು ಸದನದೊಳಗೆ ಥಳಿಸಲಾಯಿತು ಮತ್ತು ಪೊಲೀಸರು ಮತ್ತು ಸ್ಥಳೀಯ ಗೂಂಡಾಗಳಿಂದ ಹಲ್ಲೆ ನಡೆಸಲಾಗಿತು’ ಎಂದು ಬಿಹಾರದ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಸರ್ಕಾರ ಪೊಲೀಸರನ್ನು ಸದನಕ್ಕೆ ಪ್ರವೇಶಿಸಲು ಅವಕಾಶ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೇಜಸ್ವಿ ಯಾದವ್ ತಮ್ಮ ಟ್ವಿಟರ್‌ನಲ್ಲಿ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಶಾಸಕರೊಬ್ಬರನ್ನು ವಿಧಾನಸಭೆಯಿಂದ ಸ್ಟ್ರೆಚರ್‌ನಲ್ಲಿ ಸಾಗಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ನನ್ನ ಕ್ರಾಂತಿಕಾರಿ ಸಹ ಶಾಸಕ, ಬಡ ಕುಟುಂಬಕ್ಕೆ ಸೇರಿದ ಸತೀಶ್ ದಾಸ್, ನಿತೀಶ್ ಕುಮಾರ್ ಅವರ ಗೂಂಡಾಗಿರಿಗೆ ಬಲಿಪಶುವಾಗಿದ್ದಾರೆ. ಅವರ ತಲೆಗೆ ಪೆಟ್ಟು ಬಿದ್ದಿದೆ. ಈ ಚಿತ್ರ ಇದಕ್ಕೆ ಪುರಾವೆಯಾಗಿದೆ” ಎಂದು ಆರ್‌ಜೆಡಿ ನಾಯಕ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಂಥೀಯರನ್ನು ಒಳಗೊಂಡ ಪ್ರತಿಪಕ್ಷಗಳ ಮಹಾ ಮೈತ್ರಿಯ ಸದಸ್ಯರು, 2021 ರ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ಈ ಘರ್ಷಣೆ ಭುಗಿಲೆದ್ದಿತು. ವಿಧಾನಸಭೆಯನ್ನು ಮಂಗಳವಾರ ಐದು ಬಾರಿ ಮುಂದೂಡಲಾಯಿತು.

“ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ನೀಡುವ ಡ್ರಾಕೋನಿಯನ್ ಕಾಯ್ದೆಯಿದು. ಇದು ನಿತೀಶ್ ಅವರ ಸರ್ವಾಧಿಕಾರಿ ರಾಜಕಾರಣದ ನಿಜವಾದ ಅಸ್ತ್ರವಾಗಿ ಕಾರ್ಯನಿರ್ವಹಿಸಬಲ್ಲದು. ಪೊಲೀಸರನ್ನು ಬಳಸಿಕೊಂಡು ಶಾಸಕರನ್ನು ಅಸೆಂಬ್ಲಿಯಿಂದ ಹೊರಹಾಕುವ ಮೂಲಕ ಪೊಲೀಸ್ ರಕ್ಷಣೆಯಲ್ಲಿ ಇದನ್ನು ಅಂಗೀಕರಿಸಲಾಗಿದೆ” ಎಂದು ಯಾದವ್ ಆರೋಪಿಸಿ ಅವ್ಯವಸ್ಥೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಅಸೆಂಬ್ಲಿ ಸ್ಪೀಕರ್ ತನ್ನ ಕೊಠಡಿಯಿಂದ ಹೊರಬರದಂತೆ ವಿಪಕ್ಷ ಶಾಸಕರು ತಡೆದರು. ಮಹಿಳಾ ಶಾಸಕರನ್ನು ಸಹ ಮಹಿಳಾ ಭದ್ರತಾ ಸಿಬ್ಬಂದಿ ವಿಧಾನಸಭೆ ಕಟ್ಟಡದಿಂದ ಎಳೆದೊಯ್ದರು.
ತೇಜಸ್ವಿ ಯಾದವ್ ಅವರ ತಾಯಿ ರಾಬ್ರಿ ದೇವಿ ಮಹಿಳಾ ಶಾಸಕರನ್ನು ಮಹಿಳಾ ಭದ್ರತಾ ಸಿಬ್ಬಂದಿ ಹೊತ್ತೊಯ್ಯುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. “ನೀವು ಇಂದು ಹೊರಡಿಸಿದ ಈ ಕಿಡಿಗಳು, ನಿಮ್ಮ ಕರಾಳ ಆಡಳಿತವನ್ನು ನಾಳೆ ಬೂದಿಯಾಗಿ ಸುಡುತ್ತವೆ. ಬಿಹಾರ ಲೆಕ್ಕಾಚಾರ ಮಾಡುತ್ತದೆ ಮತ್ತು ಅದೂ ಶೀಘ್ರದಲ್ಲೇ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹಲವಾರು ಹಕ್ಕೊತ್ತಾಯಗಳ ಜೊತೆಗೆ ಈ ಮಸೂದೆ ವಿರುದ್ಧ ಮೆರವಣಿಗೆಯಲ್ಲಿ ಭಾಗವಹಿಸುವಾಗ ತೇಜಸ್ವಿ ಯಾದವ್ ಅವರನ್ನು ಕೂಡ ಅಲ್ಪಕಾಲ ವಶಕ್ಕೆ ಪಡೆಯಲಾಗಿತ್ತು.


ಇದನ್ನೂ ಓದಿ: ‘ಪ್ರಜಾಪ್ರಭುತ್ವ ನಾಶ ಮಾಡುವ ಮಸೂದೆ’: ದೆಹಲಿ ಮಸೂದೆ ವಿರುದ್ಧ ಖರ್ಗೆ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...